ರಾಜಕೀಯ ನೇಪಥ್ಯಕ್ಕೆ ಸರಿದ “ಮಂಡ್ಯ ಗಾಂಧಿ

Team Udayavani, Apr 19, 2018, 6:30 AM IST

Former-Speaker-Krishna,.jpg

ಕೆ.ಆರ್‌.ಪೇಟೆ: “ಮಂಡ್ಯ ಗಾಂಧಿ’ ಎಂದೇ ಹೆಸರುವಾಸಿಯಾಗಿದ್ದ ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಆರ್‌.ಪೇಟೆ ಕೃಷ್ಣ ಅವರು ರಾಜಕೀಯ ನೇಪಥ್ಯಕ್ಕೆ ಸರಿಯುವ ನಿರ್ಧಾರ ಕೈಗೊಂಡಿದ್ದಾರೆ.

ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರಾಜಕೀಯ ನಿವೃತ್ತಿಯನ್ನು ಅಧಿಕೃತವಾಗಿ ಘೋಷಣೆ ಮಾಡಿದ ಕೃಷ್ಣ ಅವರು, ಈ ಬಾರಿಯ ಚುನಾವಣೆಯಲ್ಲಿ ನಾನು ಯಾವುದೇ ಪಕ್ಷವನ್ನು ಸೇರುವುದಿಲ್ಲ. ಯಾರನ್ನೂ ಬೆಂಬಲಿಸುವುದಿಲ್ಲ. ಇರುವವರಲ್ಲಿ ಯೋಗ್ಯರಿಗೆ ಮತ ನೀಡಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸಿ ಎಂದು ಮತದಾರರಲ್ಲಿ ಮನವಿ ಮಾಡಿದರು.

ನನಗೆ ವಯಸ್ಸಾಗಿದೆ. ಇಂದಿನ ಚುನಾವಣೆಗಳು ದಿಕ್ಕುತಪ್ಪಿವೆ. ವ್ಯವಸ್ಥೆ ಯನ್ನು ಹಾಳು ಮಾಡುತ್ತಿರುವ ಚುನಾವಣಾ ಜಾತ್ರೆಗಳಾಗಿವೆ. ಮುಂದೆ ಅಸ್ತಿತ್ವಕ್ಕೆ ಬರುವ ಸರ್ಕಾರಗಳು ಪಾನ ನಿಷೇಧ ಜಾರಿ ಮಾಡಿ ಜನಸಾಮಾನ್ಯರು ನೆಮ್ಮದಿಯ ಜೀವನ ನಡೆಸಲು ಅನುವು ಮಾಡಿಕೊಡಬೇಕು. ಇದು ನನ್ನ ಒತ್ತಾಯವಾಗಿದೆ ಎಂದು ಹೇಳಿದರು.

ಇಂದಿನ ರಾಜಕೀಯ ನನಗೆ ಒಗ್ಗುವುದಿಲ್ಲ. ಜೊತೆಗೆ ನನ್ನ ಆರೋಗ್ಯವೂ ಸರಿಯಿಲ್ಲ. ಅದಕ್ಕಾಗಿ ನಿವೃತ್ತಿ ಹೊಂದುತ್ತಿದ್ದೇನೆ. ನನ್ನ ಬೆಂಬಲಿಗರಿಗೆ ಎಲ್ಲಿ ಸೂಕ್ತ ಎನಿಸುವುದೋ ಅಲ್ಲಿ ತಮ್ಮ ರಾಜಕಾರಣ ಮುಂದುವರೆಸಿಕೊಂಡು ಹೋಗಬಹುದು ಎಂದಷ್ಟೇ ನುಡಿದರು.

ರಾಜಕೀಯ ನಿವೃತ್ತಿ ಸಮಯದಲ್ಲಿ ನಾನು ಯಾರನ್ನೂ ದೂರುವುದಿಲ್ಲ. ದೇವೇಗೌಡರು ಮಗನನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಇಳಿ ವಯಸ್ಸಿನಲ್ಲೂ ಓಡಾಡುತ್ತಿದ್ದಾರೆ. ರಾಜಕೀಯದಲ್ಲಿದ್ದಾಗ ಜೆಡಿಎಸ್‌ ನನ್ನನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ. ಕಳೆದ ಚುನಾವಣೆಯ ನಂತರ ಕಾಂಗ್ರೆಸ್‌ ಪಕ್ಷ ಸೇರಿದ್ದೆ. ಒಂದು ವರ್ಷದಿಂದ ಸಕ್ರಿಯ ರಾಜಕಾರಣದಿಂದ ದೂರವೇ ಉಳಿದಿದ್ದಾಗಿ ತಿಳಿಸಿದ ಅವರು,ಮುಂದಿನ ದಿನಗಳಲ್ಲಿ ನನ್ನ ಹೆಸರು ಹಾಗೂ ಭಾವಚಿತ್ರವನ್ನು ಯಾವ ರಾಜಕೀಯ ಪಕ್ಷಗಳೂ ಬಳಸಬಾರದು ಎಂದು ಮನವಿ ಮಾಡಿದರು.

ರಾಜಕೀಯ ಹೆಜ್ಜೆಗಳು
ಕೆ.ಆರ್‌.ಪೇಟೆ ತಾಲೂಕು ಸಂತೇಬಾಚಹಳ್ಳಿ ಹೋಬಳಿಯ ಕೊತ್ತಮಾರನಹಳ್ಳಿ ಕೃಷ್ಣ ಅವರು 1983ರ ಚುನಾವಣೆಯಲ್ಲಿ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದರು. ತಾಲೂಕು ಅಭಿವೃದ್ಧಿ ಮಂಡಳಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಕೃಷ್ಣ ಅವರ ವಿರುದ್ಧ ತಾಲೂಕು ಬೋರ್ಡ್‌ ಅಧ್ಯಕ್ಷ ಬಳ್ಳೇಕೆರೆ ಎಂ.ಪುಟ್ಟಸ್ವಾಮಿಗೌಡ ಕಾಂಗ್ರೆಸ್‌ ಪಕ್ಷದಿಂದ ಕಣಕ್ಕಿಳಿದು ಗೆಲುವು ಸಾಧಿಸಿದರು.

1985ರಲ್ಲಿ ಎದುರಾದ ಮಧ್ಯಂತರ ಚುನಾವಣೆಯಲ್ಲಿ ಅದೇ ಪುಟ್ಟಸ್ವಾಮಿ ಗೌಡರ ವಿರುದಟಛಿ ಸ್ಪರ್ಧಿಸಿ 43,817 ಮತಗಳ ಅಂತರದಿಂದ ದಿಗ್ವಿಜಯ ಸಾಧಿಸುವ ಮೂಲಕ ಕೃಷ್ಣ ಅವರು ಚುನಾವಣಾ ಸೇಡು ತೀರಿಸಿಕೊಂಡರು.1989ರ ಚುನಾವಣೆಯಲ್ಲಿ ಸೋಲನುಭವಿಸಿದ ಕೃಷ್ಣ ಅವರು ಮತ್ತೆ1994ರಲ್ಲಿ ಜನತಾ ಪರಿವಾರದಿಂದ ಕಣಕ್ಕಿಳಿದು ಗೆಲುವಿನ ನಗೆ ಬೀರಿದರು.

2004ರಲ್ಲಿ ಮತ್ತೂಮ್ಮೆ ವಿಧಾನಸಭೆಗೆ ಆಯ್ಕೆಯಾಗುವ ಕೃಷ್ಣ ಅವರು, 2008ರ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕೃಷ್ಣ ಅವರು ಸ್ಪೀಕರ್‌ ಆಗಿ ಕಾರ್ಯನಿರ್ವಹಿಸಿದ್ದರು. 2013ರ ಚುನಾವಣೆಯಲ್ಲಿ ಜೆಡಿಎಸ್‌ ಟಿಕೆಟ್‌ ಸಿಗಲಿಲ್ಲವೆಂಬ ಕಾರಣಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ 37 ಸಾವಿರಕ್ಕೂ ಹೆಚ್ಚು ಮತ ಗಳಿಸಿದ್ದರು. ನಂತರದ ಬೆಳವಣಿಗೆಯಲ್ಲಿ ಕಾಂಗ್ರೆಸ್‌ ಸೇರಿ ಸಕ್ರಿಯವಾಗಿ ರಾಜಕಾರಣದಿಂದ ದೂರವೇ ಉಳಿದಿದ್ದರು.

Ad

ಟಾಪ್ ನ್ಯೂಸ್

ಮಂಗಳೂರು ಕಾನೂನು ಸುವ್ಯವಸ್ಥೆ ಡಿಸಿಪಿ ಸೇರಿದಂತೆ 34 ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಮಂಗಳೂರು ಕಾನೂನು ಸುವ್ಯವಸ್ಥೆ ಡಿಸಿಪಿ ಸೇರಿದಂತೆ 34 ಐಪಿಎಸ್ ಅಧಿಕಾರಿಗಳ ವರ್ಗಾವಣೆ

Koppala: 40 ದಿನದಲ್ಲಿ ಹುಲಿಗೆಮ್ಮ ದೇವಿಗೆ 1.17 ಕೋಟಿ ಆದಾಯ

Koppala: 40 ದಿನದಲ್ಲಿ ಹುಲಿಗೆಮ್ಮ ದೇವಿಗೆ 1.17 ಕೋಟಿ ಆದಾಯ

Sarojadevi-1

ಬೆಳ್ಳಿಪರದೆಯ ಬೆರಗು ಕರುನಾಡಿನ ಮಹಿಳಾ ಸೂಪರ್‌ಸ್ಟಾರ್‌ ಬಿ.ಸರೋಜಾ ದೇವಿ

Horoscope: ಈ ರಾಶಿಯವರಿಗೆ ಎಲ್ಲ ರೀತಿಯಲ್ಲೂ ಅನುಕೂಲದ ದಿನ

Horoscope: ಈ ರಾಶಿಯವರಿಗೆ ಎಲ್ಲ ರೀತಿಯಲ್ಲೂ ಅನುಕೂಲದ ದಿನ

Rain: ನಿರಂತರ ಮಳೆ; ಬಂಟ್ವಾಳ, ಉಳ್ಳಾಲ ತಾಲೂಕಿನ ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಣೆ

Rain: ನಿರಂತರ ಮಳೆ; ಬಂಟ್ವಾಳ, ಉಳ್ಳಾಲ ತಾಲೂಕಿನ ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಣೆ

Mumbai: ದೇಶದ ಮೊದಲ ಟೆಸ್ಲಾ ಕಾರು ಮಳಿಗೆ ಇಂದು ಲೋಕಾರ್ಪಣೆ

Mumbai: ದೇಶದ ಮೊದಲ ಟೆಸ್ಲಾ ಕಾರು ಮಳಿಗೆ ಇಂದು ಲೋಕಾರ್ಪಣೆ

Ramalinga-reddy

ಹೊಸ ಬಸ್‌ಗಳಲ್ಲಿ ಧ್ವನಿ ಸ್ಪಂದನ ಉಪಕರಣ ಅಳವಡಿಕೆ: ಸಚಿವ ರಾಮಲಿಂಗಾ ರೆಡ್ಡಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Land Acquisition: ಭೂಸ್ವಾಧೀನ ಹೋರಾಟದಲ್ಲಿ ಕಾಣದ ಕೈಗಳ ಕೈವಾಡ

Land Acquisition: ಭೂಸ್ವಾಧೀನ ಹೋರಾಟದಲ್ಲಿ ಕಾಣದ ಕೈಗಳ ಕೈವಾಡ

BBMP: ಸೊರಗಿದ ಬೀದಿ ನಾಯಿಗಷ್ಟೇ ಆಹಾರ: ಬಿಬಿಎಂಪಿ

BBMP: ಸೊರಗಿದ ಬೀದಿ ನಾಯಿಗಷ್ಟೇ ಆಹಾರ: ಬಿಬಿಎಂಪಿ

6

Crime: ಮದ್ಯದ ಅಮಲಿನಲ್ಲಿ ಸ್ನೇಹಿತನಿಗೆ ಬಾಟಲಿಯಿಂದ ಇರಿದು ಹಲ್ಲೆ

Bengaluru: ವಕೀಲ ಎಂದು ಹೇಳಿ ಪೊಲೀಸರಿಗೆ ಧಮ್ಕಿ: ಬಂಧನ

Bengaluru: ವಕೀಲ ಎಂದು ಹೇಳಿ ಪೊಲೀಸರಿಗೆ ಧಮ್ಕಿ: ಬಂಧನ

4

ಮಕ್ಕಳ ಬಿಸಿಯೂಟಕ್ಕೆ 12, ನಾಯಿಗೆ 20 ವೆಚ್ಚ: ಶಾಸಕ

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

ಮಂಗಳೂರು ಕಾನೂನು ಸುವ್ಯವಸ್ಥೆ ಡಿಸಿಪಿ ಸೇರಿದಂತೆ 34 ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಮಂಗಳೂರು ಕಾನೂನು ಸುವ್ಯವಸ್ಥೆ ಡಿಸಿಪಿ ಸೇರಿದಂತೆ 34 ಐಪಿಎಸ್ ಅಧಿಕಾರಿಗಳ ವರ್ಗಾವಣೆ

Koppala: 40 ದಿನದಲ್ಲಿ ಹುಲಿಗೆಮ್ಮ ದೇವಿಗೆ 1.17 ಕೋಟಿ ಆದಾಯ

Koppala: 40 ದಿನದಲ್ಲಿ ಹುಲಿಗೆಮ್ಮ ದೇವಿಗೆ 1.17 ಕೋಟಿ ಆದಾಯ

Sarojadevi-1

ಬೆಳ್ಳಿಪರದೆಯ ಬೆರಗು ಕರುನಾಡಿನ ಮಹಿಳಾ ಸೂಪರ್‌ಸ್ಟಾರ್‌ ಬಿ.ಸರೋಜಾ ದೇವಿ

wild-Animal

Editorial: ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸಲು ಕ್ರಮ ಅತ್ಯಗತ್ಯ

Horoscope: ಈ ರಾಶಿಯವರಿಗೆ ಎಲ್ಲ ರೀತಿಯಲ್ಲೂ ಅನುಕೂಲದ ದಿನ

Horoscope: ಈ ರಾಶಿಯವರಿಗೆ ಎಲ್ಲ ರೀತಿಯಲ್ಲೂ ಅನುಕೂಲದ ದಿನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.