ಸರ್ಕಾರಿ ನೌಕರಿ ಕೊಡಿಸುವುದಾಗಿ ವಂಚನೆ: ಸೆರೆ


Team Udayavani, Nov 28, 2021, 12:52 PM IST

ಸರ್ಕಾರಿ ನೌಕರಿ ಕೊಡಿಸುವುದಾಗಿ ವಂಚನೆ: ಸೆರೆ

ಬೆಂಗಳೂರು: ಕೇಂದ್ರ ಸರ್ಕಾರದ ಸರ್ವೆ ಇಲಾಖೆಯಲ್ಲಿ ಹಿರಿಯ ಹುದ್ದೆಯಲ್ಲಿದ್ದೇನೆ ಎಂದು ನಂಬಿಸಿ ಉದ್ಯೋಕಾಂಕ್ಷಿಗಳಿಗೆ ಕೋಟ್ಯಂತರ ರೂ. ರೂ. ಪಡೆದು ವಂಚಿಸುತ್ತಿದ್ದ ಉಡುಪಿಯ ಕುಂದಾಪುರ ಮೂಲದ ಆರೋಪಿ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಜೆ.ಪಿ.ನಗರ ನಿವಾಸಿ ರಾಘವ ಅಲಿಯಾಸ್‌ ರಾಘವೇಂದ್ರ (39) ಬಂಧಿತ. ಆರೋಪಿಯಿಂದ ಒಂದು ಕಾರು, ದ್ವಿಚಕ್ರ ವಾಹನ, ಮೊಬೈಲ್‌, ಟ್ಯಾಬ್, ಲ್ಯಾಪ್‌ಟಾಪ್‌ಗ್ಳು, ಚೆಕ್‌ಗಳು, ಬಾಂಡ್‌ ಪೇಪರ್‌ ಗಳು, ಆತ ಖರೀದಿಸಿದ್ದ ಆಸ್ತಿಯ ದಾಖಲಾತಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು. ಈತನ ವಿಚಾರಣೆ ಸಂದರ್ಭದಲ್ಲಿ ಆರೋಪಿ ವಿರುದ್ಧ ಜೆ.ಪಿ.ನಗರ, ಯಶವಂತಪುರ, ಬನವಾಸಿ ಪೊಲೀಸ್‌ ಠಾಣೆ ಹಾಗೂ ಇತರೆ ಜಿಲ್ಲೆಗಳಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಸಿಸಿಬಿ ಪೊಲೀಸರು ಹೇಳಿದರು.

ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಬಸ್ರೂರು ಮೂಲದ ರಾಘವ 10 ವರ್ಷಗಳ ಹಿಂದೆ ಕುಂದಾ ಪುರದಲ್ಲಿ ಖಾಸಗಿ ಸರ್ವೆಯಲ್ಲಿ ಕೆಲಸ ಮಾಡುತ್ತಿದ್ದ. ಐದಾರು ವರ್ಷಗಳಹಿಂದೆ ಬೆಂಗಳೂರಿನ ಜೆ.ಪಿ.ನಗರಕ್ಕೆ ಬಂದು ಸ್ವಂತವಾಗಿ ರಾಘವೇಂದ್ರ ಎಂಟರ್‌ಪ್ರೈಸಸ್‌ ಎಂಬ ಕಚೇರಿ ತೆರೆದು ಖಾಸಗಿಯಾಗಿ ಸರ್ವೆ ಕೆಲಸ ಮಾಡಿಕೊಂಡಿದ್ದ. ಈ ವೇಳೆ ಹೆಚ್ಚಿನ ಹಣಗಳಿಸುವ ಉದ್ದೇಶದಿಂದ ಸರ್ಕಾರಿ ಅಧಿಕಾರಿ ಸೋಗಿನಲ್ಲಿ ಉದ್ಯೋಕಾಂಕ್ಷಿಗಳಿಂದ ಲಕ್ಷಾಂತರ ರೂ. ಹಣ ಪಡೆದು ಬಾಂಡ್‌ ಪೇಪರ್‌ ಮತ್ತು ಖಾಲಿ ಚೆಕ್‌ಗಳಿಗೆ ಸಹಿ ಹಾಕಿಸಿಕೊಳ್ಳುತ್ತಿದ್ದ. ಒಂದು ವೇಳೆ ಹಣ ವಾಪಸ್‌ ಕೇಳಿದರೆ, ಪ್ರಾಣ ಬೆದರಿಕೆ, ಚೆಕ್‌ ಬೌನ್ಸ್‌ ಪ್ರಕರಣ ದಾಖಲಿಸುವು ದಾಗಿ ಹೆದರಿಸುತ್ತಿದ್ದ ಎಂದು ಪೊಲೀಸರು ಹೇಳಿದರು.

ನಕಲಿ ಡೆಪ್ಯೂಟಿ ಕಮಿಷನರ್‌, ಬೋರ್ಡ್‌!: ತನ್ನ ಕಾರಿನಲ್ಲಿ ಭಾರತ ಸರ್ಕಾರ ಎಂದು ಬೋರ್ಡ್‌ ಹಾಕಿಕೊಂಡಿದ್ದು, ತಾನೊಬ್ಬ ಕೇಂದ್ರ ಸರ್ಕಾರದ ಸರ್ವೆ ಇಲಾಖೆಯ ಡೆಪ್ಯೂಟಿ ಕಮಿಷನರ್‌ ಎಂದು ನಕಲಿ ಗುರುತಿನ ಚೀಟಿ ಮಾಡಿಕೊಂಡಿದ್ದ. ತನ್ನ ಕಚೇರಿಗೆ ಬರುವ ಸಾರ್ವಜನಿಕರಿಗೆ ತಾನೊಬ್ಬ ಕೇಂದ್ರ, ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳ ಪರಿಚಯವಿದೆ. ಸರ್ವೆ ಹಾಗೂ ಇತರೆ ಇಲಾಖೆಯಲ್ಲಿ ಕೆಲಸ ಕೊಡಿಸುತ್ತೇನೆ ಎಂದು ನಂಬಿಸಿ ತಲಾ 8-10 ಲಕ್ಷ ರೂ. ಪಡೆ ಯುತ್ತಿದ್ದ. ತಿಂಗಳುಗಳು ಕಳೆದರೂ ಹಣವನ್ನು ಕೊಡು ತ್ತಿರಲಿಲ್ಲ. ಕೆಲಸ ಕೂಡ ಕೊಡಿಸುತ್ತಿರಲಿಲ್ಲ. ಹೀಗಾಗಿ ವಂಚನೆಗೊಳಗಾದ ವ್ಯಕ್ತಿಯೊಬ್ಬರು ಬನಶಂಕರಿ ಠಾಣೆಗೆ ದೂರು ನೀಡಿದ್ದರು. ಹೆಚ್ಚಿನ ತನಿಖೆಗಾಗಿ ಸಿಸಿಬಿ ಪ್ರಕರಣ ವರ್ಗಾಯಿಸಲಾಗಿತ್ತು. ಸಿಸಿಬಿ ಎಸಿಪಿ ಧರ್ಮೇಂದ್ರ ಕುಮಾರ್‌ ನೇತೃತ್ವದ ತಂಡ ಸುಮಾರು 1 ತಿಂಗಳ ಕಾಲ ಆತನ ಚಟುವಟಿಕೆಗಳ ಮೇಲೆ ನಿಗಾವಹಿಸಿ, ಉದ್ಯೋಕಾಂಕ್ಷಿ ಸೋಗಿನಲ್ಲಿ ಆರೋಪಿಯನ್ನು ಭೇಟಿಯಾಗಿ ಬಂಧಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಟ್ರುಕಾಲರ್‌ನಲ್ಲೂ ನಕಲಿ ಕಮಿಷನರ್‌! : ಆರೋಪಿ ಬೆಂಗಳೂರು, ಬಾಗಲಕೋಟೆ, ದಾವಣಗೆರೆ ಮೂಲದ ಮೂವರು ಯುವತಿಯರನ್ನು ಮದುವೆಯಾಗಿರುವುದು ವಿಚಾರಣೆಯಲ್ಲಿ ತಿಳಿದು ಬಂದಿದೆ.ಈತನ ಬಂಧನದ ಬಳಿಕ ಮೂವರಿಗೂ ವಿಚಾರ ಗಮನ ಬಂದಿದೆ. ಮೂವರಿಗೂ ತಾನೊಬ್ಬ ಸರ್ಕಾರಿ ಉದ್ಯೋಗಿ ಎಂದೇ ಪರಿಚಯಿಸಿಕೊಂಡು ವಂಚಿಸಿದ್ದಾನೆ. ಈ ಮಧ್ಯೆ ಟ್ರೂಕಾಲರ್‌ನಲ್ಲಿಯೂ ಈತನ ಮೊಬೈಲ್‌ ನಂಬರ್‌ ಡಯಲ್‌ ಮಾಡಿದರೆ, ರೆವಿನ್ಯೂ ಕಮಿಷನರ್‌, ಡೆಪ್ಯೂಟಿ ಕಮಿಷನರ್‌ ಎಂದು ಬರುತ್ತದೆ. ಈ ರೀತಿಯೇ ಬರಬೇಕೆಂದು ಆರೋಪಿ ಟ್ರೂಕಾಲರ್‌ನಲ್ಲಿ ಮಾಡಿಸಿಕೊಂಡಿದ್ದಾನೆ ಎಂಬುದು ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.

ಟಾಪ್ ನ್ಯೂಸ್

Terror 2

26/11 ದಾಳಿಕೋರರಿಗೆ ತರಬೇತಿ ನೀಡಿದ್ದ ಅಬ್ದುಲ್ ಸಾಲಾಮ್ ಭುಟ್ಟಾವಿ ಮೃತ್ಯು

1-wewqe

WFI chief ವಿರುದ್ಧ ಸಾಕ್ಷ್ಯಾಧಾರಗಳ ಕೊರತೆಯ ವರದಿಗಳು ಸುಳ್ಳು

rahul gandhi

US ನಲ್ಲಿ ರಾಹುಲ್ ಗಾಂಧಿ ವಿರುದ್ಧ ಖಾಲಿಸ್ತಾನ್ ಬೆಂಬಲಿಗರ ಆಕ್ರೋಶ; ಭಾಷಣಕ್ಕೆ ಅಡ್ಡಿ

ರಾಹುಲ್‌ ಬೋಸ್‌ ಮತ್ತೆ ಕನ್ನಡದತ್ತ..

Actor Rahul Bose:ರಾಹುಲ್‌ ಬೋಸ್‌ ಮತ್ತೆ ಕನ್ನಡದತ್ತ..

TDY-10

83ರ ದಿಗ್ಗಜ ನಟನ 29ರ ಪ್ರೇಯಸಿ ಗರ್ಭಿಣಿ: 4ನೇ ಬಾರಿ ತಂದೆಯಾಗಲಿದ್ದಾರೆ Al Pacino

1-sdsad

Guarantee; ಮಂತ್ರಿ ಪರಿಷತ್ ಸಭೆ: ಸಿದ್ದರಾಮಯ್ಯ ಅವರಿಗೆ ಪರಮಾಧಿಕಾರ

ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ನಟಿ ರಚಿತಾ ರಾಮ್ ಭೇಟಿ: ಚಿತ್ರಗಳ ಯಶಸ್ಸಿಗೆ ಪ್ರಾರ್ಥನೆ

ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ನಟಿ ರಚಿತಾ ರಾಮ್ ಭೇಟಿ: ಚಿತ್ರಗಳ ಯಶಸ್ಸಿಗೆ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಳ?

ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಳ?

ಪ್ರಿಯಕರನ ಮೇಲೆ ಬಿಸಿ ನೀರು ಎರಚಿದ ನರ್ಸ್‌! 

ಪ್ರಿಯಕರನ ಮೇಲೆ ಬಿಸಿ ನೀರು ಎರಚಿದ ನರ್ಸ್‌! 

ಸಚಿವರಿಗೆ ವರ್ಗಾವಣೆ ಅಧಿಕಾರ: ಶೇ. 6ರಷ್ಟು ಸರಕಾರಿ ನೌಕರರ ವರ್ಗಕ್ಕೆ ಆದೇಶ

ಸಚಿವರಿಗೆ ವರ್ಗಾವಣೆ ಅಧಿಕಾರ: ಶೇ. 6ರಷ್ಟು ಸರಕಾರಿ ನೌಕರರ ವರ್ಗಕ್ಕೆ ಆದೇಶ

ನಾಳೆಯೇ ಗ್ಯಾರಂಟಿ? ಜಾರಿಗಾಗಿ ಸಂಪುಟ ಸಹೋದ್ಯೋಗಿಗಳ ಜತೆ ಇಂದು ಸಿಎಂ ನಿರ್ಣಾಯಕ ಸಭೆ

ನಾಳೆಯೇ ಗ್ಯಾರಂಟಿ? ಜಾರಿಗಾಗಿ ಸಂಪುಟ ಸಹೋದ್ಯೋಗಿಗಳ ಜತೆ ಇಂದು ಸಿಎಂ ನಿರ್ಣಾಯಕ ಸಭೆ

ಸರಕಾರಿ ನೌಕರರ ತುಟ್ಟಿಭತ್ತೆ ಶೇ. 4 ಹೆಚ್ಚಳ

ಸರಕಾರಿ ನೌಕರರ ತುಟ್ಟಿಭತ್ತೆ ಶೇ. 4 ಹೆಚ್ಚಳ

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ

Terror 2

26/11 ದಾಳಿಕೋರರಿಗೆ ತರಬೇತಿ ನೀಡಿದ್ದ ಅಬ್ದುಲ್ ಸಾಲಾಮ್ ಭುಟ್ಟಾವಿ ಮೃತ್ಯು

1-wewqe

WFI chief ವಿರುದ್ಧ ಸಾಕ್ಷ್ಯಾಧಾರಗಳ ಕೊರತೆಯ ವರದಿಗಳು ಸುಳ್ಳು

ಅಧಿಕಾರಿಗಳಿಂದ ಮತ ಎಣಿಕೆಯಲ್ಲಿ ಪಕ್ಷಪಾತ ಆರೋಪ

ಅಧಿಕಾರಿಗಳಿಂದ ಮತ ಎಣಿಕೆಯಲ್ಲಿ ಪಕ್ಷಪಾತ ಆರೋಪ

rahul gandhi

US ನಲ್ಲಿ ರಾಹುಲ್ ಗಾಂಧಿ ವಿರುದ್ಧ ಖಾಲಿಸ್ತಾನ್ ಬೆಂಬಲಿಗರ ಆಕ್ರೋಶ; ಭಾಷಣಕ್ಕೆ ಅಡ್ಡಿ

ಮೂರು ತಿಂಗಳಿಂದ ಅಂಗನವಾಡಿ ಮಕ್ಕಳಿಗಿಲ್ಲ ಹಾಲು

ಮೂರು ತಿಂಗಳಿಂದ ಅಂಗನವಾಡಿ ಮಕ್ಕಳಿಗಿಲ್ಲ ಹಾಲು