ವಿದ್ಯುತ್ ಕಡಿತದ ಬೆದರಿಕೆವೊಡ್ಡಿ ಗ್ರಾಹಕನಿಗೆ 50 ಸಾವಿರ ರೂ. ವಂಚನೆ
Team Udayavani, Dec 2, 2022, 12:05 PM IST
ಬೆಂಗಳೂರು: ಬೆಸ್ಕಾಂ ಸಿಬ್ಬಂದಿ ಸೋಗಿನಲ್ಲಿ ವ್ಯಕ್ತಿಯೊಬ್ಬರಿಗೆ ಕರೆ ಮಾಡಿದ ಸೈಬರ್ ಕಳ್ಳರು, ವಿದ್ಯುತ್ ಬಿಲ್ ಪಾವತಿಸುವ ನೆಪದಲ್ಲಿ ಆ್ಯಪ್‌ವೊಂದರನ್ನು ಡೌನ್‌ಲೋಡ್ ಮಾಡಿಸಿ 50 ಸಾವಿರ ರೂ. ವಂಚಿಸಿದ್ದಾರೆ.
ಜಯನಗರದ ನಿವಾಸಿ ಸತೀಶ್ ಕುಮಾರ್ (61) ವಂಚನೆಗೊಳಗಾದವರು. ನ.28ರಂದು ಅಪರಿಚಿತ ನಂಬರ್‌ನಿಂದ ಬೆಸ್ಕಾಂ ಸಿಬ್ಬಂದಿ ಸೋಗಿನಲ್ಲಿ ಸತೀಶ್ ಮೊಬೈಲ್‌ಗೆ ಸಂದೇಶವೊಂದು ಬಂದಿತ್ತು. ನಿಮ್ಮ ಮನೆಯ ಬೆಸ್ಕಾಂ ವಿದ್ಯುತ್ ಬಿಲ್ ಬಾಕಿ ಇದೆ. ಅದನ್ನು ಪಾವತಿಸದಿದ್ದರೆ ನಿಮ್ಮ ಮನೆಯ ವಿದ್ಯುತ್ ಸಂಪರ್ಕ ತೆಗೆದು ಹಾಕಲಾಗುವುದು ಎಂದು ಸಂದೇಶದಲ್ಲಿ ಉಲ್ಲೇಖೀಸಲಾಗಿತ್ತು.
ಇದನ್ನು ನಂಬಿದ ಸತೀಶ್ ಸಂದೇಶ ಬಂದಿದ್ದ ನಂಬರ್‌ಗೆ ಕರೆ ಮಾಡಿ ವಿಚಾರಿಸಿದಾಗ, ಅಪರಿ ಚಿತರು ಆ್ಯಪ್‌ವೊಂದನ್ನು ಡೌನ್‌ಲೋಡ್ ಮಾಡಿಕೊಳ್ಳುವಂತೆ ಸೂಚಿಸಿದ್ದರು. ಅವರು ಸೂಚಿಸಿದ ಆ್ಯಪ್ ಅನ್ನು ಸತೀಶ್ ಡೌನ್‌ಲೋಡ್ ಮಾಡುತ್ತಿದ್ದಂತೆ ಅಪರಿಚಿತರು ಇವರ ಮೊಬೈಲ್‌ನಲ್ಲಿರುವ ಬ್ಯಾಂಕ್‌ಗೆ ಸಂಬಂಧಿಸಿದ ಮಾಹಿತಿ ತಿಳಿದುಕೊಂಡಿದ್ದರು.
ಇದಾದ ಬಳಿಕ ಸತೀಶ್ ಬ್ಯಾಂಕ್ ಖಾತೆಯಿಂದ ಹಂತ-ಹಂತವಾಗಿ 50 ಸಾವಿರ ರೂ. ಕಡಿತಗೊಂಡಿದೆ. ಸತೀಶ್ ಈ ಬಗ್ಗೆ ಪರಿಶೀಲಿಸಿದಾಗ ಇದು ಸೈಬರ್ ಕಳ್ಳರ ಕೈ ಚಳಕ ಎಂಬುದು ಗೊತ್ತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸೇಡಂ: ತೆಲಂಗಾಣ ಮೂಲದ ಕಾರಿನಲ್ಲಿ ದಾಖಲೆ ಇಲ್ಲದ 35 ಲಕ್ಷ ಹಣ ಪತ್ತೆ
ಧಾರ್ಮಿಕ ಭಾವನೆಗಳಿಗೆ ಧಕ್ಕೆ: ನಟಿ ತಾಪ್ಸಿ ಪನ್ನು ವಿರುದ್ಧ ದೂರು ದಾಖಲು
ಹತ್ತು ದಿನಗಳಿಂದ ತಲೆಮರೆಸಿಕೊಂಡಿದ್ದ ಅಮೃತ್‌ಪಾಲ್ ಸಿಂಗ್ ಶರಣಾಗಲು ಯೋಜಿಸಿದ್ದಾನಾ ?
ಸಬ್‌ರಿಜಿಸ್ಟ್ರಾರ್ ಕಚೇರಿಗಳು ಇನ್ನು ಸ್ಮಾರ್ಟ್
ರಾಜಕೀಯದಲ್ಲಿ ಧರ್ಮ ಬಳಸುವುದನ್ನು ನಿಲ್ಲಿಸಿದಾಗ ದ್ವೇಷ ಭಾಷಣಗಳು ದೂರ:ಸುಪ್ರೀಂ