ಚಲಿಸುತ್ತಿದ್ದ ರೈಲಿನಿಂದ ಗಾಂಜಾ ಎಸೆಯುತ್ತಿದ್ರು

Team Udayavani, Mar 5, 2023, 11:13 AM IST

tdy-1ಚಲಿಸುತ್ತಿದ್ದ ರೈಲಿನಿಂದ ಗಾಂಜಾ ಎಸೆಯುತ್ತಿದ್ರು

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಕುಖ್ಯಾತ ಪೆಡ್ಲರ್‌ ದೇವರಜೀವನಹಳ್ಳಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದು, ಬರೊಬ್ಬರಿ 2.47 ಕೋಟಿ ರೂ. ಮೌಲ್ಯದ 4 ಕ್ವಿಂಟಲ್‌ ಗಾಂಜಾ ಜಪ್ತಿ ಮಾಡಲಾಗಿದೆ.

ಡಿಜೆ ಹಳ್ಳಿಯ ನಿವಾಸಿ ಅಬ್ದುಲ್‌ ರೆಹೆಮಾನ್‌ ಅಲಿಯಾಸ್‌ ಅಜ್ಜು ಬಂಧಿತ. 2.47 ಕೋಟಿ ರೂ. ಮೌಲ್ಯದ 413.580 ಕೆ.ಜಿ. ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಫೆ.15ರಂದು ಡಿಜೆಹಳ್ಳಿ ಟ್ಯಾನರಿ ರಸ್ತೆಯ ಈದ್ಗಾ ಮೈದಾನದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ ನವಾಜ್‌ ನನ್ನು ಬಂಧಿಸಿ 3 ಲಕ್ಷ ರೂ. ಮೌಲ್ಯದ 3.50 ಕೆ.ಜಿ. ಗಾಂಜಾ ಜಪ್ತಿ ಮಾಡಲಾಗಿತ್ತು. ಈತನ ವಿಚಾರಣೆ ವೇಳೆ ಆಂಧ್ರದ ಕುಖ್ಯಾತ ಪೆಡ್ಲರ್‌ಗಳಾದ ಫೈರೋಜ್‌ ಖಾನ್‌ ಹಾಗೂ ಪ್ರಸಾದ್‌ನಿಂದ ಗಾಂಜಾ ಖರೀದಿಸಿ ಬೆಂಗಳೂರಿಗೆ ತಂದು ಮಾರಾಟ ಮಾಡುತ್ತಿರುವ ಸಂಗತಿ ಬೆಳಕಿಗೆ ಬಂದಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಡಿಜೆಹಳ್ಳಿ ಠಾಣೆ ಪೊಲೀಸರು ಫೈರೋಜ್‌ ಖಾನ್‌ ಹಾಗೂ ಪ್ರಸಾದ್‌ಗಾಗಿ ಹುಡುಕಾಟ ನಡೆಸುತ್ತಿದ್ದರು. ಫೆ.27ರಂದು ಇಬ್ಬರೂ ಆಂಧ್ರದಿಂದ ಬೆಂಗಳೂರಿಗೆ ಬಂದು ಹೆಚ್ಚಿನ ಪ್ರಮಾಣದಲ್ಲಿ ಸ್ಥಳೀಯ ಪೆಡ್ಲರ್‌ ಗಳಿಗೆ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿರುವ ಬಗ್ಗೆ ಸುಳಿವು ಸಿಕ್ಕಿತ್ತು. ಡಿಜೆ ಹಳ್ಳಿ ಬಳಿ ಪೊಲೀಸರು ದಾಳಿ ಮಾಡಿದಾಗ ಈ ಇಬ್ಬರು ಆರೋಪಿಗಳೂ ಓಡಿಹೋಗಿ ಪರಾರಿಯಾಗಿದ್ದರು. ಆದರೆ, ಇವರ ಜತೆಗಿದ್ದ ಕುಖ್ಯಾತ ಗಾಂಜಾ ಪೆಡ್ಲರ್‌ ಅಬ್ದುಲ್‌ ರೆಹೆಮಾನ್‌ ಸಿಕ್ಕಿಬಿದ್ದಿದ್ದ.

ಗಾಂಜಾ ಕಂಡು ಪೊಲೀಸರಿಗೆ ಅಚ್ಚರಿ: ಅಬ್ದುಲ್‌ ರೆಹಮಾನ್‌ನನ್ನು ತೀವ್ರ ವಿಚಾರಣೆಗೆ ಒಳಪಡಿಸಿ ದಾಗ ಡಿಜೆಹಳ್ಳಿಯ ಬಾಡಿಗೆ ಮನೆಯೊಂದರ ಆವರಣದಲ್ಲಿ ಗಾಂಜಾ ಶೇಖರಿಸಿಟ್ಟಿರುವ ಬಗ್ಗೆ ಮಾಹಿತಿ ಕೊಟ್ಟಿದ್ದ. ಆತ ಕೊಟ್ಟ ಮಾಹಿತಿ ಆಧರಿಸಿ ಆತ ಹೇಳಿದ ಪ್ರದೇಶಕ್ಕೆ ಪೊಲೀಸರು ತೆರಳಿದಾಗ ಬರೊಬ್ಬರಿ 2.47 ಕೋಟಿ ರೂ. ಮೌಲ್ಯದ 4 ಕ್ವಿಂಟಲ್‌ ಗಾಂಜಾ ಶೇಖರಿಸಿಟ್ಟಿರುವುದು ಕಂಡು ಪೊಲೀಸರೇ ಅಚ್ಚರಿಗೊಂಡಿದ್ದರು. ಅಬ್ದುಲ್‌ ರೆಹಮಾನ್‌ ಗಾಂಜಾ ಮಾರಾಟ ಪ್ರಕರಣಗಳಲ್ಲಿ ಹಲವು ಬಾರಿ ಜೈಲು ಸೇರಿದ್ದು, 2017ರಲ್ಲಿ ಆತನನ್ನು ಬಂಧಿಸಲು ಹೋಗಿದ್ದ ಪೊಲೀಸರ ಮೇಲೂ ಹಲ್ಲೆ ನಡೆಸಿದ್ದ. ಕೆಲ ವರ್ಷಗಳಿಂದ ಈತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.

ಆರೋಪಿಗಳು ಡ್ರಗ್ಸ್‌ ಮಾರಾಟ ಮಾಡಲು ವ್ಯವಸ್ಥಿತ ಜಾಲ ಹೆಣೆದಿದ್ದು, ಕಾಲೇಜು ವಿದ್ಯಾರ್ಥಿಗಳು, ಐಟಿ-ಬಿಟಿ ಉದ್ಯೋಗಿಗಳು, ಸ್ಥಳೀಯ ಯುವಕರೇ ಇವರ ಗಿರಾಕಿಗಳಾಗಿದ್ದರು.

ಗಾಂಜಾ ಪೂರೈಕೆಗೆ ಹೊಸ ತಂತ್ರ: ರೋಪಿಗಳು ಪೊಲೀಸರ ಕಣ್ಣಿಗೆ ಬೀಳದೆ ಗಾಂಜಾ ಪೂರೈಕೆ ಮಾಡಲು ಹೊಸ ತಂತ್ರ ರೂಪಿಸಿದ್ದರು. ಪರಾರಿಯಾಗಿರುವ ಪೆಡ್ಲರ್‌ ಗಳಾಗ ಫೈರೋಜ್‌ ಖಾನ್‌ಹಾಗೂ ಪ್ರಸಾದ್‌ ಆಂಧ್ರಪ್ರದೇಶದ ವೈಜಾಕ್‌ನಲ್ಲಿ ಕೆ.ಜಿಗೆ 25 ಸಾವಿರ ರೂ. ಕೊಟ್ಟು 15-20 ಕೆಜಿ ಗಾಂಜಾ ಖರೀದಿಸುತ್ತಿದ್ದರು. ಬಳಿಕ ರೈಲಿನಲ್ಲಿ ಆಂಧ್ರದಿಂದ ಬೆಂಗಳೂರಿಗೆ ತರುತ್ತಿದ್ದರು. ರೈಲು ಬೆಂಗಳೂರು ತಲುಪುವುದಕ್ಕೂ ಒಂದು ಗಂಟೆ ಮೊದಲು ಅಬ್ದುಲ್‌ ರೆಹಮಾನ್‌ಗೆ ಕರೆ ಮಾಡಿ ಸಿಗ್ನಲ್‌ ಕೊಡುತ್ತಿದ್ದರು. ಅಬ್ದುಲ್‌ ರೆಹಮಾನ್‌ ಡಿಜೆ ಹಳ್ಳಿ ವ್ಯಾಪ್ತಿಯ ರೈಲ್ವೆ ಹಳಿ ಬಳಿ ನಿಂತಿಕೊಂಡು ಇವರ ಸಂಪರ್ಕದಲ್ಲಿರುತ್ತಿದ್ದ. ಆತ ನಿಂತಿರುವ ಪ್ರದೇಶಕ್ಕೆ ರೈಲು ಬಂದಾಗ ಫೈರೋಜ್‌ ಖಾನ್‌ ಹಾಗೂ ಪ್ರಸಾದ್‌ ಚಲಿಸುತ್ತಿರುವ ರೈಲಿನಿಂದಲೇ ಗಾಂಜಾ ತುಂಬಿದ್ದ ಗೋಣಿ ಚೀಲವನ್ನು ಅಬ್ದುಲ್‌ ರೆಹಮಾನ್‌ ಬಳಿ ಎಸೆಯುತ್ತಿದ್ದರು.

ಈ ಗೋಣಿಚೀಲದಲ್ಲಿ ತುಂಬಿದ್ದ ಗಾಂಜಾವನ್ನು ಅಬ್ದುಲ್‌ ರೆಹಮಾನ್‌ ದ್ವಿಚಕ್ರವಾಹನದಲ್ಲಿಟ್ಟು ಡಿಜೆ ಹಳ್ಳಿಯ ಬಾಡಿಗೆ ಮನೆಗೆ ತಂದು ಶೇಖರಿಸಿಡುತ್ತಿದ್ದ. ಇದೇ ಮಾದರಿಯಲ್ಲಿ ಆರೋಪಿಗಳು ಹಂತ-ಹಂತವಾಗಿ ಶೇಖರಿಸಿಟ್ಟಿದ್ದ ಗಾಂಜಾದ ಪ್ರಮಾಣವು 4 ಕ್ವಿಂಟಲ್‌ ದಾಟಿತ್ತು. ಬಳಿಕ ಇವುಗಳನ್ನು ಸಣ್ಣ ಪ್ಯಾಕ್‌ಗಳಲ್ಲಿ ತುಂಬಿ ಕೆ.ಜಿಗೆ 50 ಸಾವಿರ ರೂ.ನಂತೆ ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಇನ್ನು ರೈಲು ನಿಲ್ದಾಣಕ್ಕೆ ಗಾಂಜಾ ತಂದರೆ ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿ ಬೀಳಬಹುದು ಎಂಬ ಮುಂಜಾಗ್ರತೆಯಿಂದ ಈ ರೀತಿಯಾಗಿ ಗಾಂಜಾ ಪೂರೈಸುತ್ತಿರುವುದಾಗಿ ಆರೋಪಿ ಅಬ್ದುಲ್‌ ರೆಹೆಮಾನ್‌ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಟಾಪ್ ನ್ಯೂಸ್

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

17

Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಕೆಂಡದಂಥ ಬಿಸಿಲಿಗೆ ಬಳಲಿದ ಬೆಂಗಳೂರಿಗರು

Bengaluru: ಕೆಂಡದಂಥ ಬಿಸಿಲಿಗೆ ಬಳಲಿದ ಬೆಂಗಳೂರಿಗರು

Crime: ವಿಚ್ಛೇದನ ಪಡೆಯಲು ಬಯಸಿದ್ದ ಹೆಂಡತಿಯ ಕೊಂದ ಪತಿ ಬಂಧನ

Crime: ವಿಚ್ಛೇದನ ಪಡೆಯಲು ಬಯಸಿದ್ದ ಹೆಂಡತಿಯ ಕೊಂದ ಪತಿ ಬಂಧನ

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

17

Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.