ಹಿಂದುಳಿದ ವರ್ಗಕ್ಕೆ ಸಿಎಂ ಸ್ಥಾನ ನೀಡಿ : ಹಿರಿಯ ಹೋರಾಟಗಾರ ಹೆಚ್.ನರಸಿಂಹಪ್ಪ ಒತ್ತಾಯ


Team Udayavani, Jul 23, 2021, 4:59 PM IST

ppppujyyy

ಬೆಂಗಳೂರು : ಸಿಎಂ ಬದಲಾವಣೆ ಸುಳಿವು ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು ಹಿಂದುಳಿದ ಜಾತಿಯವರಿಗೆ ಸಿಎಂ ಸ್ಥಾನ ನೀಡುವಂತೆ  ಒತ್ತಾಯ ಕೇಳಿ ಬಂದಿದೆ.

ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಹಿಂದುಳಿದ ಜಾತಿಗಳ ಮುಖಂಡ ಹಾಗೂ ಹಿರಿಯ ಹೋರಾಟಗಾರ ಹೆಚ್.ನರಸಿಂಹಪ್ಪ,  ಹಿಂದುಳಿದ ವರ್ಗದ ನಾಯಕರಿಗೆ ಸಿಎಂ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು.

ಇಂದು ರಾಜ್ಯದ 102 ಹಿಂದುಳಿದ ವರ್ಗಗಳ ಪೈಕಿ ಕೆಲವರು ಬಂದಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನೊಂದಷ್ಟು ಜನ ಬರ್ತಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರ್ಕಾರ ಇದೆ. ನಾವು ಏನು ಮಾಡ್ತೇವೆ ನಮ್ಮ ಕಾರ್ಯ ಏನು ಎಂಬ ಅಜೆಂಡಾದ ಮೇಲೆ ಪ್ರಧಾನಿಯವರ ಪಕ್ಷ ಮಹತ್ವ ನಿರ್ಣಯ ತೆಗೆದುಕೊಂಡಿತ್ತು. ಕೇಂದ್ರದಲ್ಲಿ ಸದ್ಯ 72 ಜನರಲ್ಲಿ 27 ಜನರಿಗೆ ಹಿಂದುಳಿದ ವರ್ಗದವರಿಗೆ ಪ್ರಾಧಾನ್ಯತೆ ಕೊಟ್ಟಿದ್ದಾರೆ. ಇದುವರೆಗೂ ಹಿಂದುಳಿದ ವರ್ಗ ಅಂದ್ರೆ ವೋಟ್ ಬ್ಯಾಂಕ್ ಆಗಿತ್ತು . ಆದ್ರೆ ಅದೀಗ ಬದಲಾಗಿದೆ. ಅತ್ಯಂತ ಸಾಮಾನ್ಯ ವರ್ಗಗಳ ಜನರು ಕೂಡಾ ಕೇಂದ್ರದಲ್ಲಿ ಮಂತ್ರಿಗಳಾಗಿದ್ದಾರೆ.ಆದರೆ ಇದು ನಮ್ಮ ರಾಜ್ಯದಲ್ಲಿ ಇದು ಇಲ್ಲ. ನಮ್ಮ ರಾಜ್ಯದ ಮಂತ್ರಿಮಂಡಲ ಕೆಲವೇ ವರ್ಗಗಳಿಗೆ ಮೀಸಲಾಗಿದೆ. ಇದು ಎಲ್ಲಾ ವರ್ಗಗಳಿಗೆ ಸೇರಬೇಕು ಎಂದರು.

ಬಿಜೆಪಿ ಕೇವಲ ಒಂದೇ ಒಂದು ಜಾತಿಯನ್ನು ನಂಬಿಕೊಂಡು ಹೋದ್ರೆ 30-40 ಸೀಟ್ ಬರಬಹುದು . ಎಲ್ಲಾ ವರ್ಗಗಳು ಒಟ್ಟಿಗೆ ಇಲ್ಲ ಅಂದ್ರೆ ಸರ್ಕಾರ ರಚನೆ ಸಾಧ್ಯವಿಲ್ಲ. ಬಿಜೆಪಿ ಕರ್ನಾಟಕದಲ್ಲಿ ಎರಡು ವರ್ಷ ಸರ್ಕಾರ ಮಾಡಿದೆ. ಮುಂದೆ ಏನಾಗಲಿದೆ ಗೊತ್ತಿಲ್ಲ . ಪವರ್ ಶೇರಿಂಗ್ ತುಂಬಾನೆ ಮುಖ್ಯವಾದುದು. ಇದ್ರಲ್ಲಿ ಎಲ್ಲಾ ವರ್ಗಗಗಳಿಗೆ ಸಮಾನ ಸ್ಥಾನ ಬೇಕು. ಒಂದು ವರ್ಗದಿಂದ ಇಬ್ಬರು, ಇನ್ನೊಬ್ಬರಿಂದ ಇಬ್ಬರ ಹೆಸರು ಕೇಳಿ ಬರ್ತಿದೆ. ಆದ್ರೆ ಹಿಂದುಳಿದ ವರ್ಗದಿಂದ ಯಾವುದೇ ಹೆಸರು ಬರ್ತಿಲ್ಲ ಎಂದರು.

ಕೇಂದ್ರ ಸರ್ಕಾರಕ್ಕೆ ನಾವು ಮನವಿ ಕೊಡ್ತೇವೆ. ರಾಜ್ಯಪಾಲರು ಕೂಡಾ ಹಿಂದುಳಿದ ವರ್ಗದವರು. ಅವರಿಗೂ ಕೂಡಾ ನಾವು ಕೇಳುತ್ತೇವೆ, ಅಡ್ವೈಸರಿ ಕೌನ್ಸಿಲ್ ಮಾಡಬೇಕು. ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದಂತೆ ಕಮಿಟಿಯಲ್ಲಿ ಚರ್ಚೆಯಾಗಬೇಕು ಎಂದರು.

ಇನ್ನು ಸಿಎಂ ಮನೆಗೆ ಸ್ವಾಮೀಜಿಗಳ ಭೇಟಿ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಸ್ವಾಮೀಜಿಗಳಿಗೆ ಮಠಗಳಲ್ಲಿ ಮಾಡಲು ಬಹಳಷ್ಟು ಕೆಲಸ ಇದೆ. ಅದನ್ನು ಬಿಟ್ಟು ಮಂತ್ರಿಗಳ ರೀತಿಯಲ್ಲಿ ಕೆಲಸ ಮಾಡುವುದು ಸರಿಯಿಲ್ಲ. ಸ್ವಾಮೀಜಿಗಳಂದ್ರೆ ಶೃಂಗೇರಿ ಸ್ವಾಮೀಜಿಗಳ ರೀತಿ ಇರಬೇಕು. ಸುತ್ತೂರು ಸ್ವಾಮೀಜಿಗಳು ಕೂಡ ಬಂದಿರಲಿಲ್ಲ. ಮಠ ಹಾಗೂ ಭಕ್ತರ ನಡುವೆ ಒಡನಾಟ ಇರಬೇಕು. ಅದನ್ನು ಬಿಟ್ಟು ಬಿಸಿನೆಸ್ ಮಾಡುವುದಕ್ಕೆ ಸ್ವಾಮೀಜಿಗಳು ಮುಂದಾಗಬಾರದು ಎಂದರು.

ಇನ್ನು ಈಶ್ವರಪ್ಪ ಇದ್ದಾರೆ, ಪೂರ್ಣಿಮಾ ಅವರು ಇದ್ದಾರೆ, ಕೋಟಾ ಶ್ರೀನಿವಾಸ ಪೂಜಾರಿ ಇದ್ದಾರೆ, ಸುನೀಲ್ ರವರು ಇದ್ದಾರೆ. ಈ ನಾಲ್ಕು ಜನರಲ್ಲಿ ಯಾರನ್ನಾದರೂ ಸಿಎಂ ಮಾಡ್ಲಿ ಎಂದು ಕ್ಷತ್ರಿಯ ಸಮಾಜದ ಮುಂಖಡ ಲಕ್ಷೀಕಾಂತ ರಾಜು ಹೇಳಿದರು.

ಟಾಪ್ ನ್ಯೂಸ್

ಕಾಂಗ್ರೆಸ್‌ 2ನೇ ಪಟ್ಟಿ ಆಯ್ಕೆ ಕಬ್ಬಿಣದ ಕಡಲೆ?

ಕಾಂಗ್ರೆಸ್‌ 2ನೇ ಪಟ್ಟಿ ಆಯ್ಕೆ ಕಬ್ಬಿಣದ ಕಡಲೆ?

1-csdsdadsa

ಸಾಶಾ ಅಗಲುವಿಕೆಯ ಬೆನ್ನಲ್ಲೇ ನಾಲ್ಕು ಮರಿಗಳಿಗೆ ಜನ್ಮ ನೀಡಿದ ನಮೀಬಿಯಾದಿಂದ ತಂದ ಚೀತಾ

ಪತಿ ಜೈಲು ಸೇರಿದ ಬಳಿಕ ಪತ್ನಿಯಿಂದ ಗಾಂಜಾ ದಂಧೆ!

ಪತಿ ಜೈಲು ಸೇರಿದ ಬಳಿಕ ಪತ್ನಿಯಿಂದ ಗಾಂಜಾ ದಂಧೆ!

1-fsdd-sadas

ಗೋವಾ ವಿಧಾನಸಭೆಯಲ್ಲಿ ಮಹಾದಾಯಿ ವಿಷಯದ ಕುರಿತು ಭಾರಿ ಚರ್ಚೆ

tdy-10

29 ವರ್ಷಗಳಿಂದ ಪೊಲೀಸ್‌ ಕಸ್ಟಡಿಯಲ್ಲಿದ್ದ ಆಂಜನೇಯ ವಿಗ್ರಹ ಬಿಡುಗಡೆ: ಅದ್ಧೂರಿ ಮೆರವಣಿಗೆ

ಹೈಕೋರ್ಟ್ ತಡೆ; NCP ಸಂಸದ ಫೈಜಲ್ ಅನರ್ಹತೆ ರದ್ದುಪಡಿಸಿದ ಲೋಕಸಭೆ ಸೆಕ್ರೆಟರಿಯೇಟ್

ಹೈಕೋರ್ಟ್ ತಡೆ; NCP ಸಂಸದ ಫೈಜಲ್ ಅನರ್ಹತೆ ರದ್ದುಪಡಿಸಿದ ಲೋಕಸಭೆ ಸೆಕ್ರೆಟರಿಯೇಟ್

tdy-9

ಸುಳ್ಯ ಕ್ಷೇತ್ರದಲ್ಲಿ ಕೃಷ್ಣಪ್ಪ ಅವರಿಗೆ ʼಕೈʼ ಟಿಕೆಟ್‌ ನೀಡಿದಕ್ಕೆ ಕಾರ್ಯಕರ್ತರ ವಿರೋಧ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಂಗ್ರೆಸ್‌ 2ನೇ ಪಟ್ಟಿ ಆಯ್ಕೆ ಕಬ್ಬಿಣದ ಕಡಲೆ?

ಕಾಂಗ್ರೆಸ್‌ 2ನೇ ಪಟ್ಟಿ ಆಯ್ಕೆ ಕಬ್ಬಿಣದ ಕಡಲೆ?

tdy-9

ಸುಳ್ಯ ಕ್ಷೇತ್ರದಲ್ಲಿ ಕೃಷ್ಣಪ್ಪ ಅವರಿಗೆ ʼಕೈʼ ಟಿಕೆಟ್‌ ನೀಡಿದಕ್ಕೆ ಕಾರ್ಯಕರ್ತರ ವಿರೋಧ

TDY-7

ನೀತಿ ಸಂಹಿತೆ ಹಿನ್ನೆಲೆ: ಸರ್ಕಾರಿ ಬಿಟ್ಟು ಖಾಸಗಿ ಕಾರಿನಲ್ಲಿ ಪ್ರಯಾಣಿಸಿದ ಸಿದ್ದರಾಮಯ್ಯ

TDY-6

ಜೆಡಿಎಸ್ ಬಿಜೆಪಿ ಕಳೆದ ಬಾರಿಯಂತೆ ಈ ಬಾರಿಯೂ ಮ್ಯಾಚ್ ಫಿಕ್ಸಿಂಗ್ ಮಾಡುತ್ತದೆ: ಸಿದ್ದರಾಮಯ್ಯ

Karnataka Poll 2023; ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿ; ನೀತಿ ಸಂಹಿತೆ ಜಾರಿ

Karnataka Poll 2023;ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆ; ನೀತಿ ಸಂಹಿತೆ ಜಾರಿ

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

ಕಾಂಗ್ರೆಸ್‌ 2ನೇ ಪಟ್ಟಿ ಆಯ್ಕೆ ಕಬ್ಬಿಣದ ಕಡಲೆ?

ಕಾಂಗ್ರೆಸ್‌ 2ನೇ ಪಟ್ಟಿ ಆಯ್ಕೆ ಕಬ್ಬಿಣದ ಕಡಲೆ?

ರೈತರು ಪೂರೈಸುವ ಹಾಲಿಗೆ 3 ರೂ. ಹೆಚ್ಚಳ?

ರೈತರು ಪೂರೈಸುವ ಹಾಲಿಗೆ 3 ರೂ. ಹೆಚ್ಚಳ?

1-csdsdadsa

ಸಾಶಾ ಅಗಲುವಿಕೆಯ ಬೆನ್ನಲ್ಲೇ ನಾಲ್ಕು ಮರಿಗಳಿಗೆ ಜನ್ಮ ನೀಡಿದ ನಮೀಬಿಯಾದಿಂದ ತಂದ ಚೀತಾ

ಪತಿ ಜೈಲು ಸೇರಿದ ಬಳಿಕ ಪತ್ನಿಯಿಂದ ಗಾಂಜಾ ದಂಧೆ!

ಪತಿ ಜೈಲು ಸೇರಿದ ಬಳಿಕ ಪತ್ನಿಯಿಂದ ಗಾಂಜಾ ದಂಧೆ!

1-fsdd-sadas

ಗೋವಾ ವಿಧಾನಸಭೆಯಲ್ಲಿ ಮಹಾದಾಯಿ ವಿಷಯದ ಕುರಿತು ಭಾರಿ ಚರ್ಚೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.