ಅಲೋಕ್‌ ಕುಮಾರ್‌ಗೆ ಹೈಕೋರ್ಟ್‌ ನೋಟಿಸ್‌

Team Udayavani, May 3, 2019, 11:21 AM IST

blore-7

ಬೆಂಗಳೂರು: ‘ರೌಡಿ ಪರೇಡ್‌ ಹೆಸರಲ್ಲಿ ಸಿಸಿಬಿ ಕಚೇರಿಗೆ ಕರೆಸಿ ಮೂರು ದಿನಗಳ ಕಾಲ ಅಕ್ರಮ ಬಂಧನದಲ್ಲಿ ರಿಸಿಕೊಂಡು ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಲಾಗಿದೆ,’ ಎಂದು ಆರೋಪಿಸಿ ರೌಡಿ ಶೀಟರ್‌ ಸುನೀಲ್ ಕುಮಾರ್‌ ಅಲಿಯಾಸ್‌ ಸೈಲೆಂಟ್ ಸುನೀಲ್ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಸಿಸಿಬಿ ಹೆಚ್ಚುವರಿ ಪೊಲೀಸ್‌ ಆಯುಕ್ತ ಅಲೋಕ್‌ ಕುಮಾರ್‌ಗೆ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ.

ಈ ಕುರಿತಂತೆ ಸುನೀಲ್ ಕುಮಾರ್‌ ಸಲ್ಲಿಸಿದ ರಿಟ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ ಏಕಸದಸ್ಯ ನ್ಯಾಯಪೀಠ, ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಗೃಹ ಇಲಾಖೆ ಹಾಗೂ ಸಿಸಿಬಿ ಹೆಚ್ಚುವರಿ ಪೊಲೀಸ್‌ ಆಯುಕ್ತ ಆಲೋಕ್‌ ಕುಮಾರ್‌ ಅವರಿಗೆ ತುರ್ತು ನೋಟಿಸ್‌ ಜಾರಿಗೊಳಿಸಿತು. ಅಲ್ಲದೇ ಅರ್ಜಿದಾರರಿಗೆ ಅನಗತ್ಯ ಕಿರುಕುಳ ನೀಡದಂತೆ ಮಧ್ಯಂತರ ಆದೇಶ ನೀಡಿ ವಿಚಾರಣೆಯನ್ನು ಮುಂದೂಡಿತು.

‘ರೌಡಿ ಪರೇಡ್‌’ ಹೆಸರಲ್ಲಿ ನನ್ನ ಮೇಲೆ ನಡೆದ ದೌರ್ಜ ನ್ಯದ ವಿರುದ್ಧ ಹೈಕೋರ್ಟ್‌ ಮೊರೆ ಹೋಗಿದ್ದರಿಂದ ಸಿಸಿಬಿ ಹೆಚ್ಚುವರಿ ಪೊಲೀಸ್‌ ಆಯುಕ್ತ ಆಲೋಕ್‌ ಅವರು ನನ್ನ ಮೇಲೆ ಮತ್ತಷ್ಟು ದೌರ್ಜನ್ಯ ನಡೆಸಬ ಹುದು. ಅಲ್ಲದೇ ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಬಹುದು. ಈಗಾಗಲೇ ತುಮಕೂರಿನ ಮಾಜಿ ಮೇಯರ್‌ ಕೊಲೆ ಪ್ರಕರಣದಲ್ಲಿ ಸಿಲುಕಿಸುವ ಬಗ್ಗೆ ಸಿಸಿಬಿಯವರು ಬೆದರಿಕೆ ಹಾಕಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಪ್ರಕರಣವೇನು?: ಏಪ್ರಿಲ್ 10ರಂದು ಸುನೀಲ್ ಕುಮಾರ್‌ ಪತ್ನಿಯ ಮೊಬೈಲ್ಗೆ ಕರೆ ಮಾಡಿದ್ದ ಸಿಸಿಬಿ ಅಧಿಕಾರಿಗಳು, ಮೇ 12ರಂದು ನಡೆಯುವ ರೌಡಿ ಪರೇಡ್‌ಗೆ ಹಾಜರಾಗಬೇಕು ಎಂದು ಸೂಚಿಸಿದ್ದರು. ಅದರಂತೆ ಏ.12ರಂದು ಸುನೀಲ್ ಸಿಸಿಬಿ ಕಚೇರಿಗೆ ಹೋಗಿದ್ದ. ರೌಡಿ ಪರೇಡ್‌ ವೇಳೆ ಆಲೋಕ್‌ ಕುಮಾರ್‌ ಸುನೀಲ್ ಬಳಿ ಬಂದು ಏರು ಧ್ವನಿಯಲ್ಲಿ ಮಾತನಾಡಿದ್ದರು. ರಾತ್ರಿ 10.30ರ ತನಕ ಸಿಸಿಬಿ ಕಚೇರಿಯಲ್ಲಿ ಕೂರಿಸಿಕೊಂಡು ಮರು ದಿನ (ಏ.13) ಬರುವಂತೆ ಸೂಚಿಸಿದರು.

ಅದರಂತೆ ಏ.13, 14 ಮತ್ತು 15ರಂದು ಸುನೀಲ್ ಕುಮಾರ್‌ ಸತತವಾಗಿ ಸಿಸಿಬಿ ಕಚೇರಿಗೆ ಹೋದ. ಆದರೆ, ಅಲೋಕ್‌ ಭೇಟಿ ಆಗಿಲ್ಲ. ಕೊನೇ ದಿನ ಇಬ್ಬರು ಸಿಸಿಬಿ ಅಧಿಕಾರಿಗಳು ಸುನೀಲ್ ಕುಮಾರ್‌ಗೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ನೀನು ಜೈಲಿಗೆ ಹೋದರೆ, ವಾಪಸ್‌ ಬರುವುದಿಲ್ಲ ಎಂದಿದ್ದರು ಎನ್ನಲಾಗಿದೆ. ಇದರ ವಿರುದ್ಧ ಸುನೀಲ್ ಹೈಕೋರ್ಟ್‌ ಮೆಟ್ಟಿಲೇರಿದ್ದಾನೆ.

Ad

ಟಾಪ್ ನ್ಯೂಸ್

ಮಾಯನ್‌ ಮೊದಲ ದೊರೆ ಸಮಾಧಿ ಬೆಲೀಜ್‌ನಲ್ಲಿ ಪತ್ತೆ!

ಮಾಯನ್‌ ಮೊದಲ ದೊರೆ ಸಮಾಧಿ ಬೆಲೀಜ್‌ನಲ್ಲಿ ಪತ್ತೆ!

“ಒಂದು ದೇಶ ಒಂದು ಚುನಾವಣೆಗಾಗಿ ಆಯೋಗಕ್ಕೆ ಪೂರ್ಣ ಅಧಿಕಾರ ಬೇಡ’

“ಒಂದು ದೇಶ ಒಂದು ಚುನಾವಣೆಗಾಗಿ ಆಯೋಗಕ್ಕೆ ಪೂರ್ಣ ಅಧಿಕಾರ ಬೇಡ’

Mumbai: ಜು.15ಕ್ಕೆ ದೇಶದ ಮೊದಲ ಟೆಸ್ಲಾ ಕಾರ್‌ ಶೋರೂಂ ಶುರು

Mumbai: ಜು.15ಕ್ಕೆ ದೇಶದ ಮೊದಲ ಟೆಸ್ಲಾ ಕಾರ್‌ ಶೋರೂಂ ಶುರು

Hyderabad: ಕ್ರಿಕೆಟ್‌ ಚೆಂಡುಗಳ ಖರೀದಿಗೆ 1 ಕೋಟಿ ರೂ. ಗುಳುಂ!

Hyderabad: ಕ್ರಿಕೆಟ್‌ ಚೆಂಡುಗಳ ಖರೀದಿಗೆ 1 ಕೋಟಿ ರೂ. ಗುಳುಂ!

ವೈಮಾನಿಕ ಗುರಿ ಮೇಲೆ ವಾಯು ದಾಳಿ ನಡೆಸುವ “ಅಸ್ತ್ರ’ ಕ್ಷಿಪಣಿ ಪರೀಕ್ಷೆ

ವೈಮಾನಿಕ ಗುರಿ ಮೇಲೆ ವಾಯು ದಾಳಿ ನಡೆಸುವ “ಅಸ್ತ್ರ’ ಕ್ಷಿಪಣಿ ಪರೀಕ್ಷೆ

75 ವರ್ಷಗಳು ತುಂಬುತ್ತಿದ್ದಂತೆ ನಿವೃತ್ತರಾಗಬೇಕು: ಮೋಹನ್‌ ಭಾಗವತ್‌

75 ವರ್ಷಗಳು ತುಂಬುತ್ತಿದ್ದಂತೆ ನಿವೃತ್ತರಾಗಬೇಕು: ಮೋಹನ್‌ ಭಾಗವತ್‌

ಅಂತರಿಕ್ಷದಲ್ಲಿ ಕ್ಯಾರೆಟ್‌ ಹಲ್ವಾ ಸವಿದ ಶುಭಾಂಶು ಶುಕ್ಲಾ

ಅಂತರಿಕ್ಷದಲ್ಲಿ ಕ್ಯಾರೆಟ್‌ ಹಲ್ವಾ ಸವಿದ ಶುಭಾಂಶು ಶುಕ್ಲಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-bng

Bengaluru: ವಂದೇ ಭಾರತ್‌ ರೈಲಿನಲ್ಲಿ ಕಳ್ಳತನ: ಆರೋಪಿ ಸೆರೆ, 49 ಮೊಬೈಲ್‌ ಜಪ್ತಿ

9-police

Bengaluru: ಪೊಲೀಸರ ಎಡವಟ್ಟು: ಗ್ಯಾಂಗ್‌ ಸ್ಟರ್‌ ಬಿಷ್ಣೋಯ್‌ ಸಹಚರರು ಪರಾರಿ!

8-fruad

Bengaluru: 2 ಫ್ಲ್ಯಾಟ್‌ ಸೇಲ್‌ ನೆಪದಲ್ಲಿ ಸಿಸ್ಟರ್‌ ಗೆ ಭಾರೀ ವಂಚನೆ!

7-bng

Bengaluru: ಪ್ರಸಿದ್ದ ಗಾಳಿ ಆಂಜನೇಯ ಸ್ವಾಮಿ ದೇವಾಲಯ ಸರ್ಕಾರದ ವಶಕ್ಕೆ

4-bng

Bengaluru: ಮಹಿಳೆಯರ ಫೋಟೋ, ವಿಡಿಯೋ ಜಾಲತಾಣದಲ್ಲಿ ಹಾಕುತ್ತಿದ್ದವನ ಸೆರೆ

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

ಮಾಯನ್‌ ಮೊದಲ ದೊರೆ ಸಮಾಧಿ ಬೆಲೀಜ್‌ನಲ್ಲಿ ಪತ್ತೆ!

ಮಾಯನ್‌ ಮೊದಲ ದೊರೆ ಸಮಾಧಿ ಬೆಲೀಜ್‌ನಲ್ಲಿ ಪತ್ತೆ!

“ಒಂದು ದೇಶ ಒಂದು ಚುನಾವಣೆಗಾಗಿ ಆಯೋಗಕ್ಕೆ ಪೂರ್ಣ ಅಧಿಕಾರ ಬೇಡ’

“ಒಂದು ದೇಶ ಒಂದು ಚುನಾವಣೆಗಾಗಿ ಆಯೋಗಕ್ಕೆ ಪೂರ್ಣ ಅಧಿಕಾರ ಬೇಡ’

Mumbai: ಜು.15ಕ್ಕೆ ದೇಶದ ಮೊದಲ ಟೆಸ್ಲಾ ಕಾರ್‌ ಶೋರೂಂ ಶುರು

Mumbai: ಜು.15ಕ್ಕೆ ದೇಶದ ಮೊದಲ ಟೆಸ್ಲಾ ಕಾರ್‌ ಶೋರೂಂ ಶುರು

Hyderabad: ಕ್ರಿಕೆಟ್‌ ಚೆಂಡುಗಳ ಖರೀದಿಗೆ 1 ಕೋಟಿ ರೂ. ಗುಳುಂ!

Hyderabad: ಕ್ರಿಕೆಟ್‌ ಚೆಂಡುಗಳ ಖರೀದಿಗೆ 1 ಕೋಟಿ ರೂ. ಗುಳುಂ!

ವೈಮಾನಿಕ ಗುರಿ ಮೇಲೆ ವಾಯು ದಾಳಿ ನಡೆಸುವ “ಅಸ್ತ್ರ’ ಕ್ಷಿಪಣಿ ಪರೀಕ್ಷೆ

ವೈಮಾನಿಕ ಗುರಿ ಮೇಲೆ ವಾಯು ದಾಳಿ ನಡೆಸುವ “ಅಸ್ತ್ರ’ ಕ್ಷಿಪಣಿ ಪರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.