
ನೈಸ್‌ರೋಡ್ ಜಂಕ್ಷನ್‌ನಲ್ಲಿ Hit and Run: ಮುಖ್ಯ ಪೇದೆ ಬಲಿ
Team Udayavani, Mar 17, 2018, 2:34 PM IST

ಬೆಂಗಳೂರು: ನಗರದ ನೈಸ್‌ರೋಡ್ ಜಂಕ್ಷನ್ ನ ಹೊಸಕೇರೆ ಹಳ್ಳಿ ಯಲ್ಲಿ ಶನಿವಾರ ಮಧ್ಯಾಹ್ನ ಲಾರಿಯೊಂದು ಹರಿದು ಮುಖ್ಯಪೇದೆ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಯಮಸ್ವರೂಪಿ ಲಾರಿ ಏಕಾಏಕಿ ಬಂದು ಕರ್ತವ್ಯದಲ್ಲಿದ್ದ ಬ್ಯಾಟರಾಯನ ಪುರ ಠಾಣೆಯ ಹೆಡ್‌ಕಾನ್ಸ್‌ಟೇಬಲ್ ರವಿಶಂಕರ್ ಅವರಿಗೆ ಢಿಕ್ಕಿಯಾಗಿದೆ. ಪರಿಣಾಮವಾಗಿ ರವಿ ಶಂಕರ್ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಪೊಲೀಸ್ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪರಾರಿಯಾದ ಲಾರಿಯ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.
ಟಾಪ್ ನ್ಯೂಸ್
