ರಾಜಧಾನಿ ಬೆಂಗಳೂರು ಸಿಟಿ ಹಿಟ್‌ ಆ್ಯಂಡ್‌ ರನ್‌ ಹಾಟ್‌ಸ್ಪಾಟ್‌!


Team Udayavani, Jan 30, 2023, 1:20 PM IST

ರಾಜಧಾನಿ ಬೆಂಗಳೂರು ಸಿಟಿ ಹಿಟ್‌ ಆ್ಯಂಡ್‌ ರನ್‌ ಹಾಟ್‌ಸ್ಪಾಟ್‌!

ಬೆಂಗಳೂರು: ಐಟಿ-ಬಿಟಿ ಹಬ್‌, ಉದ್ಯಾನ ನಗರಿ, ಸಿಲಿಕಾನ್‌ ಸಿಟಿ ಎಂಬ ಹೆಗ್ಗಳಿಕೆ ಗಳಿಸಿರುವ ರಾಜಧಾನಿಯಲ್ಲಿ ಕಳೆದ 4 ವರ್ಷಗಳಲ್ಲಿ 4,235 ಹಿಟ್‌ ಆ್ಯಂಡ್‌ ರನ್‌ ರಸ್ತೆ ಅಪಘಾತಗಳು ಸಂಭವಿಸಿವೆ. ಈ ಮೂಲಕ ಬೆಂಗಳೂರು ಹಿಟ್‌ ಆ್ಯಂಡ್‌ ರನ್‌ “ಹಾಟ್‌ಸ್ಪಾಟ್‌’ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.

ವಾಹನ ಅಪಘಾತ ಮಾಡಿ ನಿಲ್ಲಿಸದೇ ಹೋಗಿರುವ ದೇಶದ ಪ್ರಮುಖ ನಗರಗಳಲ್ಲಿ ಬೆಂಗಳೂರು ಪ್ರಮುಖ ಸ್ಥಾನ ಪಡೆದುಕೊಂಡಿದೆ. ಹೀಗಾಗಿ ಕಳೆದ 4 ವರ್ಷಗಳಲ್ಲಿ 854 ಮಾರಣಾಂತಿಕ ಹಾಗೂ 3,381 ಮಾರಣಾಂತಿಕವಲ್ಲದ ಹಿಟ್‌ ಆ್ಯಂಡ್‌ ರನ್‌ ಪ್ರಕರಣಗಳು ವರದಿಯಾಗಿವೆ. 2022ರಲ್ಲಿ ಕೆ.ಆರ್‌.ಪುರ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಅತೀ ಹೆಚ್ಚು 96 ಹಿಟ್‌ ಆ್ಯಂಡ್‌ ರನ್‌ ಪ್ರಕರಣ ದಾಖಲಾದರೆ, ಉಳಿದಂತೆ ವಿಜಯನಗರ-45, ಮಲ್ಲೇಶ್ವರ-47, ಪೀಣ್ಯ-47, ಕೆ.ಎಸ್‌.ಲೇಔಟ್‌-42, ಚಿಕ್ಕಜಾಲ- 42, ಯಲಹಂಕ-37, ಬಾಣಸವಾಡಿ-38, ಎಲೆಕ್ಟ್ರಾನಿಕ್‌ ಸಿಟಿ-33, ಜಯನಗರ-38 ನಂತರದ ಸ್ಥಾನಗಳಲ್ಲಿವೆ.

ರಸ್ತೆ ಅಪಘಾತ ಸಂಭವಿಸಲು ಪ್ರಮುಖ ಕಾರಣ: ಬೆಂಗಳೂರಿನಲ್ಲಿ 4 ವರ್ಷಗಳಲ್ಲಿ ಸಂಭವಿ ಸಿದ ಹಿಟ್‌ ಆ್ಯಂಡ್‌ ರನ್‌ ಪ್ರಕರಣಗಳ ಪೈಕಿ ಶೇ.60 ಘಟನೆಗಳು ಅತಿ ವೇಗದ ಚಾಲನೆಯಿಂದ ಉಂಟಾಗಿವೆ. ಕೆ.ಆರ್‌ಪುರ, ಚಿಕ್ಕಜಾಲ, ಪೀಣ್ಯ, ಯಲಹಂಕ, ಎಲೆಕ್ಟ್ರಾನಿಕ್‌ ಸಿಟಿ ಪ್ರದೇಶಗಳಲ್ಲಿ ವರದಿಯಾಗಿರುವ ಶೇ.70 ಪ್ರಕರಣದಲ್ಲಿ ವೇಗದ ಚಾಲನೆಯೇ ಹಿಟ್‌ ಆ್ಯಂಡ್‌ ರನ್‌ ಅಪಘಾತಗಳಿಗೆ ಪ್ರಮುಖ ಕಾರಣ ಎಂಬುದು ಪತ್ತೆಯಾಗಿದೆ. ವಿಮಾನ ನಿಲ್ದಾಣ ರಸ್ತೆ, ಹಳೆ ಮದ್ರಾಸ್‌ ರಸ್ತೆ, ಹೊಸೂರು ರಸ್ತೆ, ಮೈಸೂರು ರಸ್ತೆ, ನೈಸ್‌ ರಸ್ತೆಗಳಲ್ಲಿ ಅತಿ ವೇಗ, ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿ ಅಪಘಾತಗಳು ಸಂಭವಿಸಿವೆ. ವಿಜಯನಗರ, ಮಲ್ಲೇಶ್ವರ, ಬಾಣಸವಾಡಿ ಪ್ರದೇಶಗಳಲ್ಲಿ ಸಂಭವಿಸಿದ ಹಿಟ್‌ ಆ್ಯಂಡ್‌ ರನ್‌ಗೆ ಸಂಬಂಧಿತ ಬಹುತೇಕ ಅಪಘಾತಗಳಲ್ಲಿ ಮದ್ಯಪಾನ ಮಾಡಿ ವಾಹನ ಚಾಲನೆ, ಮೊಬೈಲ್‌ನಲ್ಲಿ ಮಾತನಾಡಿಕೊಂಡು ಚಾಲನೆ, ರಸ್ತೆ ನಿಯಮ ಪಾಲಿಸದಿರುವುದು ಪ್ರಮುಖ ಕಾರಣವಾಗಿದೆ. ಈ ಮಾದರಿಯ ಬಹುತೇಕ ಅಪಘಾತಗಳು ತಡರಾತ್ರಿ ಹಾಗೂ ಮುಂಜಾನೆ ಅವಧಿಗಳಲ್ಲೇ ಸಂಭವಿಸಿವೆ ನಡೆದಿವೆ ಎನ್ನುತ್ತಾರೆ ಪೊಲೀಸರು.

ಹಿಟ್‌ ಆ್ಯಂಡ್‌ ರನ್‌ ಏಕೆ ?: ಯಾವುದೋ ಅಪರಿಚಿತ ವಾಹನ, ಪಾದಚಾರಿ, ಪ್ರಾಣಿಗಳು, ಡಿವೈಡರ್‌ಗಳಿಗೆ ಗುದ್ದಿ, ರಸ್ತೆ ಅಪಘಾತ ಸಂಭವಿಸಿದ ಬಳಿಕ ವಾಹನ ನಿಲುಗಡೆ ಮಾಡದೇ ಪರಾರಿಯಾಗುವುದನ್ನು ಹಿಟ್‌ ಆ್ಯಂಡ್‌ ರನ್‌ ಎನ್ನಲಾಗುತ್ತದೆ. ಪರಾರಿಯಾಗುವ ವಾಹನ ಚಾಲಕರಿಗೆ ತಮ್ಮದೇ ತಪ್ಪಿನಿಂದ ಅಪಘಾತ ಸಂಭವಿಸಿದೆ ಎಂಬುದು ಗೊತ್ತಿದ್ದರೂ, ಪೊಲೀಸರಿಗೆ ಸಿಕ್ಕಿ ಬಿದ್ದು ಜೈಲು ಸೇರಬಾರದು ಎಂಬ ಕಾರಣಕ್ಕೆ ಪರಾರಿಯಾಗುತ್ತಾರೆ. ಅಪಘಾಗತಕ್ಕೊಳಗಾದ ವಾಹನ ಮಾಲೀಕರು ಹಲ್ಲೆ ನಡೆಸುವುದು, ವಾಹನ ರಿಪೇರಿಗಾಗಿ ದುಂಬಾಲು ಬೀಳುವುದು, ಕೋರ್ಟ್‌ ಅಲೆದಾಟ, ಗಾಯಾಳುಗಳಿಗೆ ಚಿಕಿತ್ಸೆ ಖರ್ಚು ವೆಚ್ಚಗಳನ್ನು ಭರಿಸಬೇಕಾಗುತ್ತದೆ ಎಂಬ ಕಾರಣಕ್ಕೂ ಪರಾರಿಯಾಗುವವರಿದ್ದಾರೆ ಎಂದು ಟ್ರಾಫಿಕ್‌ ಪೊಲೀಸರು ತಿಳಿಸುತ್ತಾರೆ.

ಪರಾರಿಯಾಗದಿರಿ :

  • ರಸ್ತೆ ಅಪಘಾತವಾದರೆ ಪರಾರಿಯಾಗುವ ಬದಲು ಗಾಯಾಳುಗಳ ಜೀವ ಉಳಿಸಿ
  • ಹತ್ತಿರದ ಆಸ್ಪತ್ರೆಗೆ ಸೇರಿಸಲು ಸಹಾಯ ಮಾಡಿ.
  • ಪೊಲೀಸರಿಗೆ ಅಪಘಾತದ ಬಗ್ಗೆ ಮಾಹಿತಿ ನೀಡಿ.
  • ಹಿಟ್‌ ಆ್ಯಂಡ್‌ ರನ್‌ ಐಪಿಸಿ ಸೆಕ್ಷನ್‌ 304ಎ ಜಾಮೀನು ರಹಿತ ಅಪರಾಧವಾಗಿದ್ದು, ವ್ಯಕ್ತಿಯನ್ನು ಜೀವಾವಧಿ ಶಿಕ್ಷೆಗೆ ಗುರಿಪಡಿಸಲು ಅವಕಾಶವಿದೆ.

ಪ್ರಮುಖ ಹಿಟ್‌ ಆ್ಯಂಡ್‌ ರನ್‌ ಪ್ರಕರಣಗಳು :

  • ಜ.20ರಂದು ರಾಜಾಜಿನಗರದದಲ್ಲಿ ಬೈಕ್‌ ಸವಾರನಿಗೆ ಗುದ್ದಿ ಫಾರ್ಚೂನರ್‌ ಕಾರು ಪರಾರಿ. ಕಾರು ಗುದ್ದಿದ ರಭಸಕ್ಕೆ ಹಾರಿಬಿದ್ದ ಬೈಕ್‌ ಸವಾರ. ತಡೆಯಲು ಪ್ರಯತ್ನಿಸಿದ ಸಾರ್ವಜನಿಕರ ಮೇಲೂ ಕಾರು ಹತ್ತಿಸಲು ಪ್ರಯತ್ನಿಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ.
  • ಜ.17 ಮಾಗಡಿ ರಸ್ತೆ ಟೋಲ್‌ ಗೇಟ್‌ ಬಳಿ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದ ದ್ವಿಚಕ್ರ ವಾಹನ ಸವಾರ. ಕಾರು ಚಾಲಕ ಕಾರಿನಿಂದ ಇಳಿದು ಪ್ರಶ್ನಿಸುತ್ತಿದ್ದಾಗಲೇ ತಪ್ಪಿಸಲು ಯತ್ನಿಸಿದ್ದ. ಆಗ ವೃದ್ಧ ಕಾರು ಚಾಲಕ ಬೈಕ್‌ ನ ಹಿಂಬದಿ ಗಟ್ಟಿಯಾಗಿ ಹಿಡಿದರೂ ಎಳೆದೊಯ್ದಿದ್ದ.
  • ಜ.7ರಂದು ಕೆ.ಆರ್‌.ಪುರದ ಆರ್‌ಟಿಒ ಕಚೇರಿ ಮುಂಭಾಗದಲ್ಲಿ ಅತಿವೇಗದಲ್ಲಿ ಬಂದ ಕಾರೊಂದು ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು. ಕಾರು ಚಾಲಕ ಪರಾರಿಯಾಗಲು ಯತ್ನಿಸಿದ್ದ.
  • 2022 ಡಿ.13 ಆನೇಕಲ್‌ನಲ್ಲಿ ನಡೆದಿದ್ದ ಹಿಟ್‌ ಅಂಡ್‌ ರನ್‌ ಪ್ರಕರಣದಲ್ಲಿ ಮೂವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಈಚರ್‌ ವಾಹನ ಸಮೇತ ಚಾಲಕ ಪರಾರಿ.
  • ಜ.24 ಎಚ್‌ಎಸ್‌ಆರ್‌ ಲೇಔಟ್‌ನ ದೊಡ್ಡಕನ್ನಲ್ಲಿ ಬಳಿ ಪಾದಚಾರಿ ಟೆಕಿಯೊಬ್ಬ ನಡೆದುಕೊಂಡು ಹೋಗುತ್ತಿದ್ದಾಗ ವೇಗವಾಗಿ ಬಂದ ಅಪರಿಚಿತ ವಾಹನ ಇವರಿಗೆ ಡಿಕ್ಕಿ ಹೊಡೆದು ಪರಾರಿ. ಟೆಕಿ ಸ್ಥಳದಲ್ಲೇ ಸಾವು.

ಬಹುತೇಕ ಹಿಟ್‌ ಆ್ಯಂಡ್‌ ರನ್‌ ಪ್ರಕರಣಗಳಲ್ಲಿ ತಂತ್ರಜ್ಞಾನದ ಸಹಾಯದಿಂದ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ. ಪ್ರತಿಯೊಬ್ಬರೂ ಸಂಚಾರ ನಿಯಮಗಳನ್ನು ಪಾಲಿಸಿದರೆ ರಸ್ತೆ ಅಪಘಾತ ನಿಯಂತ್ರಿಸಬಹುದು. –ಕುಲದೀಪ್‌ ಕುಮಾರ್‌ ಆರ್‌. ಜೈನ್‌, ಪಶ್ಚಿಮ ಸಂಚಾರ ವಿಭಾಗದ ಡಿಸಿಪಿ.

-ಅವಿನಾಶ್‌ ಮೂಡಂಬಿಕಾನ

ಟಾಪ್ ನ್ಯೂಸ್

Google Services Down!; ಜಿ ಮೇಲ್, ಯೂಟ್ಯೂಬ್, ಗೂಗಲ್ ಡ್ರೈವ್ ಸೇವೆಯಲ್ಲಿ ವ್ಯತ್ಯಯ

Google Services Down!; ಜಿ ಮೇಲ್, ಯೂಟ್ಯೂಬ್, ಗೂಗಲ್ ಡ್ರೈವ್ ಸೇವೆಯಲ್ಲಿ ವ್ಯತ್ಯಯ

punjab-kings

ಐಪಿಎಲ್ ಆರಂಭಕ್ಕೆ ಮೊದಲೇ ಪಂಜಾಬ್ ಕಿಂಗ್ಸ್ ಗೆ ಆಘಾತ; ಸ್ಟಾರ್ ಕ್ರಿಕೆಟರ್ ಔಟ್

ಕೊನೆ ಉಸಿರಿರುವವರೆಗೂ ಬಿಜೆಪಿ ಬಿಡಲ್ಲ: ಮಾಲೀಕಯ್ಯ ಗುತ್ತೇದಾರ

ಕೊನೆಯ ಉಸಿರಿರುವರೆಗೂ ಬಿಜೆಪಿ ಬಿಡಲ್ಲ: ಮಾಲೀಕಯ್ಯ ಗುತ್ತೇದಾರ

ʼಕಾಂತಾರ-2ʼ ಬಗ್ಗೆ ಬಿಗ್ ಅಪ್ಡೇಟ್‌ ಕೊಟ್ಟು ʼಬೇವು ಬೆಲ್ಲʼದ ರುಚಿಯನ್ನು ಹೆಚ್ಚಿಸಿದ ಹೊಂಬಾಳೆ

ʼಕಾಂತಾರ-2ʼ ಬಗ್ಗೆ ಬಿಗ್ ಅಪ್ಡೇಟ್‌ ಕೊಟ್ಟು ʼಬೇವು ಬೆಲ್ಲʼದ ರುಚಿಯನ್ನು ಹೆಚ್ಚಿಸಿದ ಹೊಂಬಾಳೆ

ಸೋನು ನಿಗಮ್‌ ತಂದೆ ಮನೆಯಲ್ಲಿ 72 ಲಕ್ಷ ರೂ. ಕಳ್ಳತನ: ಮಾಜಿ ಚಾಲಕನ ವಿರುದ್ಧ FIR

ಸೋನು ನಿಗಮ್‌ ತಂದೆ ಮನೆಯಲ್ಲಿ 72 ಲಕ್ಷ ರೂ. ಕಳ್ಳತನ: ಮಾಜಿ ಚಾಲಕನ ವಿರುದ್ಧ FIR

Vachanananda Swamiji spoke about getting reservation to Panchmasali community

ನಾಳೆ ರಾಜ್ಯ ಸರಕಾರದಿಂದ ಪಂಚಮಸಾಲಿ ಸಮುದಾಯಕ್ಕೆ ಕೊಡುಗೆ: ವಚನಾನಂದ ಸ್ವಾಮೀಜಿ ವಿಶ್ವಾಸ

ನುಗ್ಗೆ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಉತ್ತಮ…

ನುಗ್ಗೆ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಉತ್ತಮ…



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sadsd-asd

ಬೆಂಗಳೂರು: ಮೊದಲ ಪತ್ನಿ ಕೊಂದು 2ನೇ ಪತಿಯ ಮಗು ಹತ್ಯೆಗೂ ಯತ್ನ!

arrested

ವ್ಯಾಪಾರಿಯ 80 ಲಕ್ಷ ರೂ. ದರೋಡೆ: 8 ಮಂದಿ ಬಂಧನ

rape

ಬೆಂಗಳೂರು: ದೂರು ನೀಡಲು ಬಂದ ಯುವತಿಗೆ ಲೈಂಗಿಕ ಕ್ರಿಯೆಗೆ ಇನ್‌ಸ್ಪೆಕ್ಟರ್‌ ಒತ್ತಾಯ !

ಅನಧಿಕೃತ ನಿರ್ಮಾಣ ಕ್ರಮಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ ಹಿಂದೇಟು

ಅನಧಿಕೃತ ನಿರ್ಮಾಣ ಕ್ರಮಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ ಹಿಂದೇಟು

tdy-7

ಮಹಿಳೆ ಜತೆ ಅಸಭ್ಯ ನಡೆ: ರೈಲ್ವೆ ಟಿಟಿಇ ಬಂಧನ

MUST WATCH

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

udayavani youtube

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮಠದಲ್ಲಿ ಬೈಬಲ್ ಕೃತಿ, ಮೊಹರಂ ಪಂಜಾ

ಹೊಸ ಸೇರ್ಪಡೆ

Google Services Down!; ಜಿ ಮೇಲ್, ಯೂಟ್ಯೂಬ್, ಗೂಗಲ್ ಡ್ರೈವ್ ಸೇವೆಯಲ್ಲಿ ವ್ಯತ್ಯಯ

Google Services Down!; ಜಿ ಮೇಲ್, ಯೂಟ್ಯೂಬ್, ಗೂಗಲ್ ಡ್ರೈವ್ ಸೇವೆಯಲ್ಲಿ ವ್ಯತ್ಯಯ

punjab-kings

ಐಪಿಎಲ್ ಆರಂಭಕ್ಕೆ ಮೊದಲೇ ಪಂಜಾಬ್ ಕಿಂಗ್ಸ್ ಗೆ ಆಘಾತ; ಸ್ಟಾರ್ ಕ್ರಿಕೆಟರ್ ಔಟ್

1-adsadsad

ಬನವಾಸಿ ನೂತನ ಮಹಾಸ್ಯಂದನ ರಥೋತ್ಸವ ಮುಂದಕ್ಕೆ; ಕಾರಣವೇನು?

1-a-wewq3

ಚಿಕ್ಕಮಗಳೂರು: ಸರಕಾರಿ ಬಸ್ ಢಿಕ್ಕಿಯಾಗಿ ಸ್ಕೂಟರ್ ಸವಾರರಿಬ್ಬರ ಮೃತ್ಯು

ಕೊನೆ ಉಸಿರಿರುವವರೆಗೂ ಬಿಜೆಪಿ ಬಿಡಲ್ಲ: ಮಾಲೀಕಯ್ಯ ಗುತ್ತೇದಾರ

ಕೊನೆಯ ಉಸಿರಿರುವರೆಗೂ ಬಿಜೆಪಿ ಬಿಡಲ್ಲ: ಮಾಲೀಕಯ್ಯ ಗುತ್ತೇದಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.