
ಐಎಂಎ: ನಾಟಿ ವೈದ್ಯನ ಬಂಧನ
Team Udayavani, Aug 21, 2019, 3:03 AM IST

ಬೆಂಗಳೂರು: ಐಎಂಎ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ ಜತೆ ಹಣಕಾಸು ವ್ಯವಹಾರ ಹೊಂದಿದ್ದ ನಾಟಿ ವೈದ್ಯನೊಬ್ಬನನ್ನು ವಿಶೇಷ ತನಿಖಾ ತಂಡ(ಎಸ್‌ಐಟಿ) ಬಂಧಿಸಿದೆ. ಫ್ರೆಜರ್‌ಟೌನ್ ನಿವಾಸಿ ಖಮರುಲ್ಲಾ ಜಮಾಲ್(47) ಬಂಧಿತ. ಆರೋಪಿ ವಾಮಾಚಾರ ಮಾಡುತ್ತಿದ್ದು, ನಾಟಿ ವೈದ್ಯನಾಗಿದ್ದು, ಮನ್ಸೂರ್ ಖಾನ್‌ನ ಅತ್ಮೀಯ ಸ್ನೇಹಿತನಾಗಿದ್ದಾನೆ.
ಸಂಸ್ಥೆಗೆ ಲಕ್ಷಾಂತರ ಸಾರ್ವಜನಿಕರು ಹೂಡಿಕೆ ಮಾಡಿದ್ದ ಹಣವನ್ನು ಮನ್ಸೂರ್ ಖಾನ್ ಖಮರುಲ್ಲಾಗೆ ಕೊಡುತ್ತಿದ್ದ. ಈ ಹಣದಿಂದ ಆರೋಪಿ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನಲ್ಲಿ ಒಂದೂವರೆ ಎಕರೆ ಜಮೀನು ಖರೀದಿಸಿ, ಅದರಲ್ಲಿ ಸಿಮೆಂಟ್ ಬ್ಲಾಕ್‌ಗಳನ್ನು ತಯಾರು ಮಾಡುವ ಕಾರ್ಖಾನೆ ನಡೆಸುತ್ತಿದ್ದಾನೆ.
ಈ ಕಾರ್ಖಾನೆ ಆವರಣದಲ್ಲಿ ನೆಲಮಾಳಿಗೆಯಲ್ಲಿ ನಾಲ್ಕೈದು ರಹಸ್ಯವಾದ ಕೊಠಡಿಗಳ(ಬಂಕರ್‌ಗಳು)ನ್ನು ನಿರ್ಮಿಸಿಕೊಂಡಿದ್ದು, ಮನ್ಸೂರ್ ಖಾನ್ ತನ್ನ ಬಳಿ ಸಂಗ್ರಹವಾಗುತ್ತಿದ್ದ ಕೋಟಿ ಕೋಟಿ ಹಣವನ್ನು ಆರೋಪಿ ಈ ಕೊಠಡಿಗಳಲ್ಲಿ ರಹಸ್ಯವಾಗಿ ಇಡುತ್ತಿದ್ದ. ಈ ಕೊಠಡಿಗಳಿಗೆ ಪ್ರವೇಶ ನಿಷೇಧಿಸಿದ್ದು, ಅದನ್ನು ಕಾಯಲು ಗನ್‌ಮ್ಯಾನ್‌ಗಳನ್ನು ನೇಮಕ ಮಾಡುತ್ತಿದ್ದ ಎಂಬುದು ತನಿಖೆಯಿಂದ ತಿಳಿದು ಬಂದಿದೆ. ಆ ಸ್ಥಳವನ್ನು ಪತ್ತೆ ಹಚ್ಚಲಾಗಿದೆ ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Belthangady: ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ್ತಿ ಹೃದಯಾಘಾತದಿಂದ ನಿಧನ

Road mishap: ಕಾರು – ಟ್ರ್ಯಾಕ್ಟರ್ ಟ್ರಾಲಿ ಅಪಘಾತ; ಸಚಿವರ ತಲೆಗೆ ತೀವ್ರಗಾಯ

ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೊರಟಿದ್ದ ಶತಾಬ್ದಿ ರೈಲು ಮೂರೂವರೆ ಗಂಟೆ ತಡ

ಸಚಿವರಿಗೆ ವರ್ಗಾವಣೆ ಅಧಿಕಾರ: ಶೇ. 6ರಷ್ಟು ಸರಕಾರಿ ನೌಕರರ ವರ್ಗಕ್ಕೆ ಆದೇಶ

ರಾತ್ರೋ ರಾತ್ರಿ ಲಕ್ಷ್ಮಣ ಸವದಿ ನಿವಾಸಕ್ಕೆ ಡಿಸಿಎಂ ಡಿಕೆಶಿ ಭೇಟಿ