ಮೊಹಮ್ಮದ್ ನಲಪಾಡ್ ನ್ಯಾಯಾಂಗ ಬಂಧನ ವಿಸ್ತರಣೆ
Team Udayavani, Apr 18, 2018, 7:00 AM IST
ಬೆಂಗಳೂರು:ಉದ್ಯಮಿ ಲೋಕನಾಥ್ ಪುತ್ರ ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್‌ಗೆ ವಿಧಿಸಿದ್ದ ನ್ಯಾಯಾಂಗ ಬಂಧನ ಅವಧಿ ಎಸಿಎಂಎಂ ನ್ಯಾಯಾಲಯ ಏ. 28ರವರೆಗೆ ವಿಸ್ತರಿಸಿದೆ.
ಮೊಹಮ್ಮದ್ ನಲಪಾಡ್ ಮತ್ತಿತರ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಮಂಗಳವಾರ ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ಎಸಿಎಂಎಂ ನ್ಯಾಯಾಲಯ ಏ.28ರ ವರೆಗೆ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿ ಆದೇಶಿಸಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಏ.30ರೊಳಗಾಗಿ ದೋಷಾರೋಪಪಟ್ಟಿ ಸಲ್ಲಿಸಲು ಸಿದ್ದತೆ ನಡೆಸಿದ್ದಾರೆ. ಮೊಹಮ್ಮದ್ ನಲಪಾಡ್ ಮತ್ತಿತರ ಆರೋಪಿಗಳು ಕಾಲು ತಗುಲಿದ ವಿಚಾರಕ್ಕೆ ಫೆ. 18ರಂದು ವಿದ್ವತ್ ಮೇಲೆ ಜಗಳ ತೆಗೆದು ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿಎಂ ದಾವೋಸ್ ಆರ್ಥಿಕ ಶೃಂಗಸಭೆ ಭೇಟಿ ಯಶಸ್ವಿ; 52 ಸಾವಿರ ಕೋ. ರೂ.ಬಂಡವಾಳ ಹೂಡಿಕೆಗೆ ಒಪ್ಪಂದ
ತಪ್ಪುಗಳನ್ನು ಸರಿಪಡಿಸಲು ಪರ್ಯಾಯ ಕಾರ್ಯಕ್ರಮ
ಹಾಲು ಉತ್ಪಾದನೆಯಲ್ಲಿ ಕೆಎಂಎಫ್ ಹೊಸ ಮೈಲುಗಲ್ಲು; 91.07 ಲಕ್ಷ ಕೆ.ಜಿ. ಹಾಲು ಶೇಖರಣೆ
ರಾಜ್ಯದಲ್ಲಿ ಕಾಂಗ್ರೆಸ್ “ಚಿಂತನ ಶಿಬಿರ’: ಕೆಪಿಸಿಸಿ ಸಮಿತಿ ರಚನೆ
ಶಿರಸಿಯ ರಂಗಭೂಮಿ ಕಲಾವಿದೆ ಶೀತಲ್ ಶ್ರೀಪಾದ ಭಟ್ ಅವರಿಗೆ ಕೆನಡಾದ ಲಿಟರರಿ ಅವಾರ್ಡ್