ಸರ್ಕಾರಕ್ಕೆ ಶಾಕ್‌ ನೀಡಿದ ಕೆಇಆರ್‌ಸಿ


Team Udayavani, Jun 4, 2023, 1:28 PM IST

ಸರ್ಕಾರಕ್ಕೆ ಶಾಕ್‌ ನೀಡಿದ ಕೆಇಆರ್‌ಸಿ

ಬೆಂಗಳೂರು: ಸಾಮಾನ್ಯವಾಗಿ ಪ್ರತಿ ಬಾರಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ)ವು ಜನರಿಗೆ ಶಾಕ್‌ ಕೊಡುತ್ತಿತ್ತು. ಆದರೆ, ಇದೇ ಮೊದಲ ಬಾರಿಗೆ ಸರ್ಕಾರಕ್ಕೇ “ಶಾಕ್‌’ ನೀಡಿದೆ!

ಇಂಧನ ಮತ್ತು ವಿದ್ಯುತ್‌ ಖರೀದಿ ಹೊಂದಾಣಿಕೆ ವೆಚ್ಚದ ರೂಪದಲ್ಲಿ ಪ್ರತಿ ಯೂನಿಟ್‌ಗೆ ಕನಿಷ್ಠ 33ರಿಂದ ಗರಿಷ್ಠ 51 ಪೈಸೆ ಹೆಚ್ಚಳ ಮಾಡ ಲಾಗಿದೆ. ಇದರಿಂದ ಒಟ್ಟಾರೆ ಗೃಹ ಬಳಕೆಗೆ ಅನುಮೋದನೆ ನೀಡಲಾದ 14,090 ಮಿಲಿ ಯನ್‌ ಯೂನಿಟ್‌ ವಿದ್ಯುತ್‌ಗೆ ಲೆಕ್ಕ ಹಾಕಿದಾಗ, ವಾರ್ಷಿಕ ಸುಮಾರು 500 ಕೋಟಿ ರೂ. ಹೊರೆ ಬೀಳಲಿದೆ. ಮಾಸಿಕ 200 ಯೂನಿಟ್‌ ವರೆಗೆ ಉಚಿತ ವಿದ್ಯುತ್‌ ನೀಡುವುದಾಗಿ ಘೋಷಿಸಿದ ಸರ್ಕಾರವೇ ಈ ಹೊರೆ ಭರಿ ಸುವುದು ಅನಿವಾರ್ಯ ಆಗಿದೆ.

ಗೃಹಬಳಕೆಗೆ ವಾರ್ಷಿಕ ಅನುಮೋದಿತ ವಿದ್ಯುತ್‌ 14,089 ಮಿಲಿಯನ್‌ ಯೂನಿಟ್‌ ಮಾಸಿಕವಾಗಿ ಲೆಕ್ಕಹಾಕಿದರೆ, 1,174 ಮಿಲಿಯನ್‌ ಯೂನಿಟ್‌ ಆಗುತ್ತದೆ. ಇದನ್ನು ಈಗ ಬೆಸ್ಕಾಂ ವ್ಯಾಪ್ತಿಯಲ್ಲಾದ ಪರಿಷ್ಕರಣೆಗೆ (ಪ್ರತಿ ಯೂನಿಟ್‌ಗೆ 51 ಪೈಸೆ ಹೆಚ್ಚಳ) ತಾಳೆ ಹಾಕಿದಾಗ, 500 ಕೋಟಿ ರೂ. ಆಗುತ್ತದೆ. ಇದರ ಜತೆಗೆ ತೆರಿಗೆ 45 ಕೋಟಿ ರೂ. ಆಗುತ್ತದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಸರ್ಕಾರವೇ ಹೇಳುವಂತೆ ಗೃಹಬಳಕೆದಾರರಲ್ಲಿ ಶೇ. 90ರಷ್ಟು ಜನ ಉಚಿತ ವಿದ್ಯುತ್‌ ಯೋಜನೆ ಅಡಿ ಒಳಪಡುತ್ತಾರೆ. ಹಾಗಾಗಿ, ಬಹುತೇಕ ಈ ಮೊತ್ತವನ್ನು ಸ್ವತಃ ಸರ್ಕಾರ ಭರಿಸಬೇಕಾಗುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಅಲ್ಪಾವಧಿಯಲ್ಲೇ 1.71 ರೂ. ಏರಿಕೆ ದಾಖಲೆ!: ವಿಶೇಷವೆಂದರೆ ಇದು ಅಲ್ಪಾವಧಿಯಲ್ಲಾದ ದಾಖಲೆ ಪ್ರಮಾಣದ ವಿದ್ಯುತ್‌ ದರ ಏರಿಕೆ ಎನ್ನಲಾಗಿದೆ. ಈಚೆಗಷ್ಟೇ ಅಂದರೆ ಮೇ 12ರಂದು ಪ್ರತಿ ಯೂನಿಟ್‌ಗೆ ಸರಾಸರಿ 70 ಪೈಸೆ ಹೆಚ್ಚಳ ಮಾಡಿ ಏಪ್ರಿಲ್‌ 1ರಿಂದ ಪೂರ್ವಾನ್ವಯ ಆಗುವಂತೆ ಕೆಇಆರ್‌ಸಿ ಆದೇಶ ಹೊರಡಿಸಿತ್ತು. ಈಗ ಕೇವಲ 20 ದಿನಗಳ ಅಂತರದಲ್ಲಿ ಮತ್ತೆ ಜುಲೈ- ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌- ಡಿಸೆಂಬರ್‌ಗೆ ಅನ್ವಯ ಆಗುವಂತೆ ಮತ್ತೆ ಕನಿಷ್ಠ 33 ಪೈಸೆಯಿಂದ ಗರಿಷ್ಠ 51 ಪೈಸೆಯಷ್ಟು ಹೆಚ್ಚಳ ಮಾಡಿದೆ.

ಮುಂದಿನ ಎರಡೂ ತ್ತೈಮಾಸಿಕಗಳ ಬೆಸ್ಕಾಂನಲ್ಲಿ ಮಾಡಿದ ಪರಿಷ್ಕರಣೆ ಪ್ರಕಾರವೇ 1.01 ರೂ. ಪ್ರತಿ ಯೂನಿಟ್‌ಗೆ ಹೆಚ್ಚಳ ಆಗುತ್ತದೆ. ಇದರೊಂದಿಗೆ ಒಟ್ಟಾರೆ 1.71 ರೂ. ಪ್ರತಿ ಯೂನಿಟ್‌ಗೆ ಏರಿಕೆಯಾದಂತಾಗುತ್ತದೆ. ಇನ್ನು ಈ ಹಿಂದೆ ಹೊರಡಿಸಿದ ಆದೇಶದ ಪ್ರಕಾರ 0-100 ಯೂನಿಟ್‌ವರೆಗೆ ಗೃಹ ಬಳಕೆದಾರರಿಗೆ 4.75 ರೂ. ಇದ್ದು, 100 ಯೂನಿಟ್‌ ಮೀರಿದರೆ ಒಟ್ಟಾರೆ ಬಳಕೆಯ ಪ್ರತಿ ಯೂನಿಟ್‌ಗೆ 7 ರೂ. ಆಗುತ್ತದೆ. ಇದು ಕೂಡ ಪರೋಕ್ಷವಾಗಿ ಸರ್ಕಾರಕ್ಕೆ ಹೊರೆಯೇ ಆಗುತ್ತದೆ. ಇದೇ ಕಾರಣಕ್ಕೆ ಕಳೆದ ಒಂದು ವರ್ಷದ ಸರಾಸರಿ ಮಾಡಿ, ಹೆಚ್ಚುವರಿ ಶೇ. 10ರಷ್ಟು ಬಳಕೆಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಾಣದ ಸಮನ್ವಯ: ಕೆಇಆರ್‌ಸಿ ಮೇ 12ರಂದು ವಿದ್ಯುತ್‌ ಪರಿಷ್ಕರಣೆಗೆ ಸಂಬಂಧಿಸಿದಂತೆ ಆದೇಶಹೊರಡಿಸಿದಾಗ ಸರ್ಕಾರ ಅಸ್ತಿತ್ವದಲ್ಲಿ ಇರಲಿಲ್ಲ. ಶುಕ್ರವಾರ (ಜೂನ್‌ 2) ಸರ್ಕಾರವು ಸಂಪುಟ ಸಭೆಯಲ್ಲಿ ಉಚಿತ ವಿದ್ಯುತ್‌ ಯೋಜನೆ ಘೋಷಿಸುವ ಸ್ಪಷ್ಟ ಸೂಚನೆಗಳಿದ್ದವು. ಅದೇ ದಿನ ಆಯೋಗವು ಇಂಧನ ಮತ್ತು ವಿದ್ಯುತ್‌ ಖರೀದಿ
ಹೊಂದಾಣಿಕೆಗೆ ಅನುಕೂಲ ಆಗುವಂತೆ ಮತ್ತೆ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ. ಇದು ಸರ್ಕಾರ ಮತ್ತು ಕೆಇಆರ್‌ಸಿ ನಡುವೆ ಸಮನ್ವಯದ ಕೊರತೆಯನ್ನು ಸೂಚಿಸುತ್ತದೆ.

-ವಿಜಯಕುಮಾರ ಚಂದರಗಿ

ಟಾಪ್ ನ್ಯೂಸ್

2-fusion-dog

UV Fusion: ನಂಬಿಕೆಗಿಂತ ದೊಡ್ಡದು ಬೇರೇನಿಲ್ಲ

1-Tuesday

Daily Horoscope: ಸಜ್ಜನರ ಸೋಗುಹಾಕಿದ ವಂಚಕರ ಬಗ್ಗೆ ಎಚ್ಚರ, ಉದ್ಯೋಗಸ್ಥರಿಗೆ ಕೈತುಂಬಾ ಕೆಲಸ

Govt-b

KSRTC Bus: ಬಾಗಿಲಿದ್ದರೂ ಮುಚ್ಚುವವರಿಲ್ಲ! ಪ್ರಾಣಕ್ಕೆ ಎರವಾಗುತ್ತಿದೆ ಅಜಾಗರೂಕತೆ

Mullugudde ಕೊರಗಜ್ಜ ಪಾವಡ; ನಾಪತ್ತೆ ಯುವಕ ಅಜ್ಜನ ಸನ್ನಿಧಾನದಲ್ಲಿ ಪ್ರಾಥ೯ನೆ

Mullugudde ಕೊರಗಜ್ಜನ ಪವಾಡ; ನಾಪತ್ತೆ ಯುವಕ ಅಜ್ಜನ ಸನ್ನಿಧಾನದಲ್ಲಿ ಪ್ರಾರ್ಥನೆ

ಹಿಂದೂ ಸಂಘಟನೆಗಳ ಆಕ್ಷೇಪ; ಗೊಂದಲವಿಲ್ಲ: ಸಂಘ

Mangaluru ಹಿಂದೂ ಸಂಘಟನೆಗಳ ಆಕ್ಷೇಪ; ಗೊಂದಲವಿಲ್ಲ: ಸಂಘ

Robbery case: ಕೇರಳದಲ್ಲಿ ಓರ್ವನ ಬಂಧನ?

Robbery case: ಕೇರಳದಲ್ಲಿ ಓರ್ವನ ಬಂಧನ?

Ullal ರೈಲಿಗೆ ತಲೆ ಕೊಟ್ಟು ಅವಿವಾಹಿತ ಆತ್ಮಹತ್ಯೆ

Ullal ರೈಲಿಗೆ ತಲೆ ಕೊಟ್ಟು ಅವಿವಾಹಿತ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sept.26 Bengaluru Bandh: ಏನೇನಿದೆ? ಏನು ಇರುವುದಿಲ್ಲ?

Sept.26 Bengaluru Bandh: ಏನೇನಿದೆ? ಏನು ಇರುವುದಿಲ್ಲ?

Bengaluru bandh; Curfew till tuesday midnight say City Police Commissioner B Dayananda

Bengaluru bandh; ಬಲವಂತದ ಬಂದ್, ರ‍್ಯಾಲಿ ಮಾಡುವಂತಿಲ್ಲ ಎಂದ ಆಯುಕ್ತರು

ಸರ್ಕಾರಕ್ಕೆ ಒಳ್ಳೆ ಹೆಸರು ತನ್ನಿ,‌ಇಲ್ಲ ಬೇರೆ ಜಾಗ ನೋಡಿಕೊಳ್ಳಿ: ಡಿಕೆ ಶಿವಕುಮಾರ್ ಎಚ್ಚರಿಕೆ

ಸರ್ಕಾರಕ್ಕೆ ಒಳ್ಳೆ ಹೆಸರು ತನ್ನಿ,‌ಇಲ್ಲ ಬೇರೆ ಜಾಗ ನೋಡಿಕೊಳ್ಳಿ: ಡಿಕೆ ಶಿವಕುಮಾರ್ ಎಚ್ಚರಿಕೆ

Collection of fines: ಆಟೋ ಚಾಲಕರಿಂದ 3.36 ಲಕ್ಷ ದಂಡ ವಸೂಲಿ

Collection of fines: ಆಟೋ ಚಾಲಕರಿಂದ 3.36 ಲಕ್ಷ ದಂಡ ವಸೂಲಿ

Bangalore: ಶ್ವಾನದ ಜತೆ ಅಸಹಜ ಲೈಂಗಿಕ ಕ್ರಿಯೆ; ಸೆರೆ

Bangalore: ಶ್ವಾನದ ಜತೆ ಅಸಹಜ ಲೈಂಗಿಕ ಕ್ರಿಯೆ; ಸೆರೆ

MUST WATCH

udayavani youtube

ಕಾಪುವಿಗೆ ಬಂದವರು ಈ ಹೋಟೆಲ್ ಗೊಮ್ಮೆ ಮಿಸ್ ಮಾಡದೆ ಭೇಟಿ ನೀಡಿ

udayavani youtube

Asian Games: ಸೀರೆ,ಕುರ್ತಾದಲ್ಲಿ ಮಿಂಚಿದ ಭಾರತದ ಕ್ರೀಡಾಳುಗಳು

udayavani youtube

ಮೈಸೂರಿನ ಕೃಷ್ಣಧಾಮಕ್ಕೆ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಭೇಟಿ

udayavani youtube

ಓಡಿಸ್ಸಾದ ಮರಳಿನಲ್ಲಿ ಅರಳಿದ ಸ್ಟೀಲ್ ಗಣಪ

udayavani youtube

ಯಾಕಾಗಿ ಗಣೇಶ ಹಲವು ಕೈಗಳನ್ನು ಹೊಂದಿದ್ದಾನೆ ?

ಹೊಸ ಸೇರ್ಪಡೆ

2-fusion-dog

UV Fusion: ನಂಬಿಕೆಗಿಂತ ದೊಡ್ಡದು ಬೇರೇನಿಲ್ಲ

1-Tuesday

Daily Horoscope: ಸಜ್ಜನರ ಸೋಗುಹಾಕಿದ ವಂಚಕರ ಬಗ್ಗೆ ಎಚ್ಚರ, ಉದ್ಯೋಗಸ್ಥರಿಗೆ ಕೈತುಂಬಾ ಕೆಲಸ

Govt-b

KSRTC Bus: ಬಾಗಿಲಿದ್ದರೂ ಮುಚ್ಚುವವರಿಲ್ಲ! ಪ್ರಾಣಕ್ಕೆ ಎರವಾಗುತ್ತಿದೆ ಅಜಾಗರೂಕತೆ

Mullugudde ಕೊರಗಜ್ಜ ಪಾವಡ; ನಾಪತ್ತೆ ಯುವಕ ಅಜ್ಜನ ಸನ್ನಿಧಾನದಲ್ಲಿ ಪ್ರಾಥ೯ನೆ

Mullugudde ಕೊರಗಜ್ಜನ ಪವಾಡ; ನಾಪತ್ತೆ ಯುವಕ ಅಜ್ಜನ ಸನ್ನಿಧಾನದಲ್ಲಿ ಪ್ರಾರ್ಥನೆ

ಹಿಂದೂ ಸಂಘಟನೆಗಳ ಆಕ್ಷೇಪ; ಗೊಂದಲವಿಲ್ಲ: ಸಂಘ

Mangaluru ಹಿಂದೂ ಸಂಘಟನೆಗಳ ಆಕ್ಷೇಪ; ಗೊಂದಲವಿಲ್ಲ: ಸಂಘ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.