
ಮಕ್ಕಳ ಸುರಕ್ಷತೆಗೆ ಆದ್ಯತೆ: ಸಿಎಂ
Team Udayavani, Jul 15, 2018, 6:15 AM IST

ಬೆಂಗಳೂರು: ನೊಬೆಲ್ ಪ್ರಶಸ್ತಿ ಪುರಸ್ಕೃತ “ಬಚ್‌ಪನ್ ಬಚಾವೊ’ ಆಂದೋಲನದ ರೂವಾರಿ ಕೈಲಾಶ್ ಸತ್ಯಾರ್ಥಿ ಅವರು ಶನಿವಾರ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಮಕ್ಕಳ ಹಕ್ಕುಗಳ ರಕ್ಷಣೆ ಸಂಬಂಧ ಚರ್ಚಿಸಿದರು.
ಭೇಟಿಯ ಆನಂತರ ಮಾತನಾಡಿದ ಕುಮಾರಸ್ವಾಮಿ, ಮಕ್ಕಳ ಮೇಲಿನ ದೌರ್ಜನ್ಯ ಅತ್ಯಂತ ಸೂಕ್ಷ್ಮ ವಿಷಯ ವಾಗಿದ್ದು, ರಾಜ್ಯ ಸರಕಾರ ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಿದೆ ಎಂದು ಹೇಳಿದರು.
ಕೈಲಾಶ್ ಸತ್ಯಾರ್ಥಿ ಮಾತನಾಡಿ, ಮಕ್ಕಳ ಹಕ್ಕುಗಳು, ಸುರಕ್ಷತೆ ಕುರಿತು ನೀತಿ ರೂಪಿಸುವ ಮೂಲಕ ರಾಜಕೀಯಕ್ಕೆ ಒಂದು ಮಾನವೀಯ ಮುಖ ನೀಡಲು ಸಾಧ್ಯ.ಮಕ್ಕಳ ಸುರಕ್ಷತೆ ವಿಷಯದಲ್ಲಿ ಕರ್ನಾಟಕ ಸರಕಾರದೊಂದಿಗೆ ಕೈ ಜೋಡಿಸಲು ತಾವು ಸಿದ್ಧ ಎಂದು ತಿಳಿಸಿದರು.
ಕಿರಣ್ ಮಜುಂದಾರ್ ಷಾ ಭೇಟಿ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಹಾಗೂ ಬಿ-ಪ್ಯಾಕ್ ಸ್ವಯಂ ಸೇವಾ ಸಂಸ್ಥೆ ಪದಾಧಿಕಾರಿಗಳೊಂದಿಗೆ ಬೆಂಗಳೂರು ನಗರ ಅಭಿವೃದ್ಧಿ ಕುರಿತಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಚರ್ಚೆ ನಡೆಸಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Guarantee; ಮಂತ್ರಿ ಪರಿಷತ್ ಸಭೆ: ಸಿದ್ದರಾಮಯ್ಯ ಅವರಿಗೆ ಪರಮಾಧಿಕಾರ

ರಾಗಿ ಬೆಳೆಗಾರರ ಸಮಸ್ಯೆ ತಕ್ಷಣ ಬಗೆಹರಿಸಲು ಸಿಎಂ ಸಿದ್ದರಾಮಯ್ಯ ಸೂಚನೆ

Lokayukta: ಆದಾಯಕ್ಕೂ ಮೀರಿ ಆಸ್ತಿ; ಶಿವಮೊಗ್ಗ, ಹನೂರು ಸೇರಿ ವಿವಿಧೆಡೆ ಲೋಕಾಯುಕ್ತ ದಾಳಿ

KRIDL ಇಂಜಿನೀಯರ್ ಮನೆ ಮೇಲೆ ದಾಳಿ ಲೋಕಾಯುಕ್ತ ದಾಳಿ

ಸಚಿವರಿಗೆ ವರ್ಗಾವಣೆ ಅಧಿಕಾರ: ಶೇ. 6ರಷ್ಟು ಸರಕಾರಿ ನೌಕರರ ವರ್ಗಕ್ಕೆ ಆದೇಶ