ಕೆವೈಸಿ ಅಪ್‌ಡೇಟ್ ನೆಪದಲ್ಲಿ ನೌಕರನಿಗೆ 10 ಲಕ್ಷ ರೂ. ವಂಚನೆ
Team Udayavani, Nov 15, 2022, 11:42 AM IST
ಬೆಂಗಳೂರು: ಕೆವೈಸಿ ಅಪ್‌ಡೇಟ್ ಮಾಡಬೇಕು ಎಂದು ಖಾಸಗಿ ಕಂಪನಿ ಉದ್ಯೋ ಗಿಯ ಕ್ರೆಡಿಟ್ ಕಾರ್ಡ್ ಮಾಹಿತಿ ಪಡೆದ ಅಪರಿಚಿತರು 9.99 ಲಕ್ಷ ರೂ. ವಂಚಿಸಿದ್ದಾರೆ.
ದೊಡ್ಡಕಮ್ಮನಹಳ್ಳಿಯ ನಿವಾಸಿ ನಿತಿನ್ ಸಿಂಗ್ (45) ಹಣ ಕಳೆದುಕೊಂಡವರು. ನ.10ರಂದು ಅಪರಿಚಿತರಿಂದ ನಿತಿನ್ ಸಿಂಗ್ ಮೊಬೈಲ್ ಗೆ ಕೆವೈಸಿ ಅಪ್‌ಡೇಟ್ ಮಾಡಬೇಕು ಎಂದು ಸಂದೇಶ ಬಂದಿತ್ತು. ಆ ಸಂದೇಶದಲ್ಲಿದ್ದ ಲಿಂಕ್‌ಗೆ ಕ್ಲಿಕ್ ಮಾಡಿದ ನಿತಿನ್ ಸಿಂಗ್ ತಮ್ಮ ಕ್ರೆಡಿಟ್ ಕಾರ್ಡ್ ಮಾಹಿತಿ ನಮೂದಿಸಿದ್ದರು.
ಇದಾದ ಕೆಲ ಹೊತ್ತಿನಲ್ಲೇ ಕ್ರೆಡಿಟ್ ಕಾರ್ಡ್‌ನಿಂದ 9.99 ಲಕ್ಷ ರೂ. ಕಡಿತಗೊಂಡಿತ್ತು. ನಂತರ ಈ ಬಗ್ಗೆ ಪರಿಶೀಲಿಸಿದಾಗ ಇದು ಸೈಬರ್ ಕಳ್ಳರ ಕೈ ಚಳಕ ಎಂಬುದು ಗೊತ್ತಾಗಿದೆ.