
ವಿದ್ಯಾರ್ಥಿಗಳಿಗೆ ಜೀವನದಲ್ಲಿ ಗುರಿ ಇರಲಿ
Team Udayavani, Aug 19, 2018, 11:59 AM IST

ಯಲಹಂಕ: ನಿರಂತರ ಅಭ್ಯಾಸ, ಶ್ರದ್ದಾಸಕ್ತಿಯಿಂದ ಮಾತ್ರ ವಿದ್ಯಾರ್ಥಿಗಳು ಗುರಿ ಮುಟ್ಟಲು ಸಾಧ್ಯ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ಹೇಳಿದರು. ಇಲ್ಲಿಗೆ ಸಮೀಪದ ಇಟಕಲ್‌ಪುರದ ಪ್ರಸಿಡೆಸ್ಸಿ ವಿಶ್ವವಿದ್ಯಾಲಯಲ್ಲಿ ಪ್ರಥಮ ವರ್ಷದ ಬಿ.ಇ ಮತ್ತು ಲಾ ತರಗತಿಗಳನ್ನು ಉದ್ಘಾಟಿಸಿ ಮಾತನಾಡಿದರು.
ಹಿಂದೆ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಕಲಿಕೆಗೆ ಮೂಲ ಭೂತ ಸೌಕರ್ಯಗಳಿರಲ್ಲಿ. ಈಗ ಎಲ್ಲಾ ಸೌಲಭ್ಯದಲ್ಲಿ ತಮ್ಮ ಪ್ರದೇಶ ಪರಿಮಿತಿಯಲ್ಲೇ ದೊರೆಯುತ್ತಿದ್ದು ಕಲಿಯುವವನಿಗೆ ಎಲ್ಲಾ ಅಗತ್ಯ ಸೌಲಭ್ಯಗಳೂ ಸಿಗುತ್ತಿವೆ.ಜೊತೆಗೆ ಇಂಟರ್‌ನೆಟ್‌ಗಳಲ್ಲಿ ಮಾಹಿತಿಯೂ ದೊರಕುತ್ತಿದ್ದು ಇಂತಹುಗಳನ್ನು ಸದುಪಯೋಗಪಡೆದುಕೊಂಡು ವಿದ್ಯಾರ್ಥಿಗಳು ಗುರಿ ಇಟ್ಟುಕೊಂಡು ಮುನ್ನೆಡೆದಲ್ಲಿ ಸತøಜೆಗಳಾಗಿ ಹೊರಹೊಮ್ಮಲು ಸಾಧ್ಯ ಎಂದರು.
ಪ್ರಸಿಡೆನ್ಸಿ ಕಾಲೇಜಿನ ಕಲಾಪತಿ ನಿಸಾರ್ ಅಹಮದ್ ಮಾತನಾಡಿ ವಿದ್ಯಾರ್ಥಿಗಳು ನಕರಾತ್ಮಕ ಧೋರಣೆಗಳನ್ನು ಬಿಟ್ಟು ಜೀವನದಲ್ಲಿ ಯಶಸ್ಸು ಸಾಧಿಸಲು ಗುರಿ ಇರಬೇಕು ಯಶಸ್ಸೆಂಬ ಮೌಲ್ಯಯುತ ಜೀವನ ನಿಮ್ಮ ಆಸ್ತಿಯಾಗಬೇಕು.ನಮ್ಮ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಶೆ„ಕ್ಷಣಿಕ ಪ್ರಗತಿಗೆ ಪೂರಕವಾದ ಸೌಲಭ್ಯಗಳಿದ್ದು ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗಿದೆ.ವಿದ್ಯೆ ಕೇವಲ ಉದ್ಯೋಗಕ್ಕಾಗಿ ಮಾತ್ರ ಸೀಮಿತ ಆಗಬಾರದು. ಜೀವನ ಕಲೆಯನ್ನು ರೂಢಿಸಿಕೊಳ್ಳಲು ವಿದ್ಯೆ ಸಹಕಾರಿಯಾಗಬೇಕೆಂದರು.
ಟಾಪ್ ನ್ಯೂಸ್
