
ತಬ್ಬಿಕೊಳ್ಳುವ ನೆಪದಲ್ಲಿ ವ್ಯಕ್ತಿಯ ಚಿನ್ನದ ಸರ ಕದ್ದ ತೃತೀಯ ಲಿಂಗಿ
Team Udayavani, Jan 15, 2023, 1:08 PM IST

ಬೆಂಗಳೂರು: ತೃತೀಯ ಲಿಂಗಿಯೊಬ್ಬರು ತಬ್ಬಿಕೊಳ್ಳುವ ನೆಪದಲ್ಲಿ ಕ್ಯಾಬ್‌ಗ ಕಾಯುತ್ತಿದ್ದ ವ್ಯಕ್ತಿಯ ಚಿನ್ನದ ಸರ ದೋಚಿರುವ ಘಟನೆ ಎಂ.ಜಿ.ರಸ್ತೆಯಲ್ಲಿ ನಡೆದಿದೆ.
ತಮಿಳುನಾಡಿನ ಚೆನ್ನೈ ಮೂಲದ 34 ವರ್ಷದ ವ್ಯಕ್ತಿ ಸರ ಕಳೆದುಕೊಂಡವರು.
ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿ ಜ.8ಕ್ಕೆ ಬೆಂಗ ಳೂರಿಗೆ ಬಂದು ಎಂ.ಜಿ. ರಸ್ತೆಯಲ್ಲಿ ಬೆಳಗಿನ ಜಾವ 3 ಗಂಟೆಯಲ್ಲಿ ಸ್ನೇಹಿತನ ಜತೆಗೆ ಕ್ಯಾಬ್‌ಗ ಕಾಯುತ್ತಿ ದ್ದರು. ಆಗ ಅಲ್ಲಿಗೆ ಬಂದ ತೃತೀಯ ಲಿಂಗಿ, ದೂರು ದಾರನೊಂದಿಗೆ ಅಸಭ್ಯ ವಾಗಿ ವರ್ತಿಸಲು ಮುಂದಾಗಿದ್ದಾರೆ. ಅದಕ್ಕೆ ದೂರು ದಾರ ಒಪ್ಪದಿದ್ದಾಗ ಮೂರ್ನಾಲ್ಕು ಬಾರಿ ತಬ್ಬಿಕೊಂಡು ಕತ್ತಿನ ಲ್ಲಿದ್ದ 1.64 ಲಕ್ಷ ರೂ. ಮೌಲ್ಯದ 32 ಗ್ರಾಂ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದಾರೆ.
ಕೆಲ ಹೊತ್ತಿನ ಬಳಿಕ ಕುತ್ತಿಗೆ ಬಳಿ ಕೈ ಹಾಕಿದಾಗ ಸರ ಕಸಿದು ಕಳುವಾ ಗಿರುವುದು ಗೊತ್ತಾಗಿದೆ. ನಂತರ ಸ್ನೇಹಿ ತನ ಜತೆ ಅಕ್ಕಪಕ್ಕದ ರಸ್ತೆ ಯಲ್ಲಿ ಹುಡು ಕಾಟ ನಡೆಸಿ, ಪತ್ತೆಯಾಗ ದಿದ್ದಾಗ ಕೊನೆಗೆ ಕಬ್ಬನ್ ಪಾರ್ಕ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಯ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.
ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು
