ಹೊರಮಾವು ಕೆರೆ ಉಳಿಸಲು ಹಲವು ಕಾರ್ಯಕ್ರಮ

Team Udayavani, Aug 4, 2019, 3:06 AM IST

horamavu

ಬೆಂಗಳೂರು: ಗಿಡ ನೆಟ್ಟು ಪೋಷಿಸುವುದು ಸರ್ಕಾರದ ಕೆಲಸ ಮಾತ್ರವಲ್ಲ, ಅದರಲ್ಲಿ ಸಾರ್ವಜನಿಕರ ಪಾತ್ರವೂ ಹೆಚ್ಚಿದೆ ಎಂದು ತಿಳಿಸಲು ಕೆ.ಆರ್‌.ಪುರ ವಿಧಾನಸಭಾ ಕ್ಷೇತ್ರ ಅಸೋಸಿಯೇಷನ್‌ ವೆಲ್‌ಫೇರ್‌ ಫೆಡರೇಶನ್‌ ಮುಂದಾಗಿದೆ.

ಹೊರಮಾವು ಕೆರೆ 30 ಎಕರೆ ಪ್ರದೇಶದಲ್ಲಿದ್ದು, ಫೆಡರೇಶನ್‌ನ ಸದಸ್ಯರು ಕಳೆದ 2 ವರ್ಷದಿಂದ ಕೆರೆ ಆವರಣದಲ್ಲಿ 2500ಕ್ಕೂ ಅಧಿಕ ಗಿಡಗಳನ್ನು ನೆಟ್ಟು ಪೋಷಣೆ ಮಾಡುತ್ತಿದ್ದಾರೆ. ಅಲ್ಲದೇ ಸ್ಥಳೀಯ ಜನರನ್ನು ಒಂದೆಡೆ ಸೇರಿಸಿ ಜಾಗೃತಿ ಮೂಡಿಸುವ ಮೂಲಕ ನೆಟ್ಟ ಒಂದೊಂದು ಗಿಡದ ನಿರ್ವಹಣೆ ಜವಾಬ್ದಾರಿ ನೀಡುತ್ತಿದ್ದು, ಪ್ರಸ್ತುತ ಕೆರೆ ಸುತ್ತಲಿನ ಪರಿಸರ ಹಸಿರುಮಯವಾಗುತ್ತಿದೆ.

ವಾಟ್ಸ್‌ಆ್ಯಪ್‌ ಗ್ರೂಪ್‌: ಕೆ.ಆರ್‌.ಪುರ ವಿಧಾನಸಭಾ ಕ್ಷೇತ್ರ ಅಸೋಸಿಯೇಷನ್‌ ವೆಲ್‌ಫೇರ್‌ ಫೆಡರೇಶನ್‌ ಸದಸ್ಯರೆಲ್ಲರೂ ಹೊರಮಾವು ಕೆರೆ ಉಳಿಸಿ ಎಂಬ ಶೀರ್ಷಿಕೆಯಡಿ ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಿದ್ದು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಹೊಂಗೆ, ಮಹಾಗನಿ, ಕಾಡುಬಾದಾಮಿ, ನೆಲ್ಲಿ, ನೇರಳೆ, ಚೆರ್ರಿ, ಬೇವು ಸೇರಿ ವಿವಿಧ ತಳಿಗಳ ಗಿಡಗಳನ್ನು ನೆಟ್ಟಿದ್ದಾರೆ.

ಗಿಡ ನೆಡುವ ಕಾರ್ಯಕ್ರಮ: ಜೂನ್‌, ಜುಲೈ, ಆಗಸ್ಟ್‌, ಸೆಪ್ಟೆಂಬರ್‌ ತಿಂಗಳಲ್ಲಿ ಮಳೆ ಅಧಿಕ ಮಳೆ ಬರುವುದರಿಂದ ವರ್ಷದ 4 ತಿಂಗಳು ಮಾತ್ರ ಗಿಡಗಳನ್ನು ನೆಡಲಾಗುತ್ತಿದೆ. ವರ್ಷಪೂರ್ತಿ ನೆಟ್ಟ ಗಿಡಗಳನ್ನು ಪೋಷಿಸಲಾಗುವುದು. ಮುಖ್ಯವಾಗಿ ಮಕ್ಕಳಲ್ಲಿ ಜಾಗೃತಿ ಮೂಡಿಸಿದರೆ, ಪೋಷಕರಿಗೂ ಜಾಗೃತಿ ಮೂಡುತ್ತದೆ ಎಂಬ ಸದುದ್ದೇಶದಿಂದ ಹೊರಮಾವು ಸುತ್ತಲಿನ ಸರ್ಕಾರಿ ಮತ್ತು ಖಾಸಗಿ ಶಾಲಾ ಮಕ್ಕಳಿಂದ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎನ್ನುತ್ತಾರೆ ಫೆಡರೇಶನ್‌ನ ಅರುಣ್‌ ಮೆನನ್‌.

ಅಂತರ್ಜಲ ಮಟ್ಟ ಹೆಚ್ಚಲಿದೆ: ತಿಂಗಳಿಗೆ ಎರಡು ಬಾರಿ ಹೊರಮಾವು ಕೆರೆ ಬಳಿ ಗಿಡಗಳನ್ನು ನೆಡಲಾಗುತ್ತಿದೆ. ಈ ಕಾರ್ಯಕ್ಕೆ ಪಾಲಿಕೆ ಅಧಿಕಾರಿಗಳು ಕೈ ಜೋಡಿಸಿದ್ದು, ಅರಣ್ಯ ಇಲಾಖೆ ಉಚಿತವಾಗಿ ಗಿಡಗಳನ್ನು ನೀಡಿದೆ. ಸ್ಥಳೀಯರಲ್ಲಿ ಗಿಡ ನೆಡುವ ಬಗ್ಗೆ ಜಾಗೃತಿ ಮೂಡಿಸಲಾಗಿದ್ದು, ಜನರು ಗಿಡಗಳನ್ನು ದತ್ತು ಪಡೆಯುತ್ತಿದ್ದಾರೆ. ಕೆರೆ ಸುತ್ತಲೂ ಓಡಾಡುವವರು ಗಿಡಗಳಿಗೆ ನೀರು ಹಾಕುತ್ತಿದ್ದು, ಇನ್ನು ಎರಡೂ¾ರು ವರ್ಷಗಳಲ್ಲಿ ಗಿಡಗಳು ಎತ್ತರಕ್ಕೆ ಬೆಳೆಯುತ್ತವೆ. ಕೆರೆ ಸುತ್ತಲಿನ ಪ್ರದೇಶ ಹಸಿರುಮಯವಾಗಲಿದ್ದು, ಇದರಿಂದ ಅಂತರ್ಜಲ ಮಟ್ಟ ಹೆಚ್ಚಾಗುವ ನಿರೀಕ್ಷೆ ಹೊಂದಿದ್ದೇವೆ ಎಂದು ಸ್ವಯಂಸೇವಕ ನಾಗೇಶ್ವರ ರಾವ್‌ ತಿಳಿಸಿದರು.

ಕೆರೆ ಸೇರುತ್ತಿದೆ ಒಳಚರಂಡಿ ನೀರು!: ಸುತ್ತಲಿನ ಬಡಾವಣೆಗಳ ಒಳಚರಂಡಿ ನೀರು ಹೊರಮಾವು ಕೆರೆಗೆ ಸೇರುತ್ತಿದ್ದು, ಕೆರೆ ಸೌಂದರ್ಯ ಹಾಳಾಗುತ್ತಿದೆ. ಹಾಗೇ ಕೆರೆಯಲ್ಲಿ ಹೂಳು ತುಂಬಿದ್ದು, ಬೇಲಿಗಳು ಬೆಳೆದಿವೆ. ಪಾಲಿಕೆ ಅಧಿಕಾರಿಗಳು ಆದ್ಯತೆ ಮೇರೆಗೆ ಕೆರೆಯನ್ನು ಪುನಶ್ಚೇತನಗೊಳಿಸಬೇಕೆಂದು ಸ್ಥಳೀಯ ನಾಗರಿಕರು ಆಗ್ರಹಿಸಿದ್ದಾರೆ.

ಟಾಪ್ ನ್ಯೂಸ್

ಪಬ್‌ಜಿ ಸೈಡ್‌ ಎಫೆಕ್ಟ್: ಕುಟುಂಬದ ನಾಲ್ವರನ್ನು ಕೊಂದ ಬಾಲಕ

ಪಬ್‌ಜಿ ಸೈಡ್‌ ಎಫೆಕ್ಟ್: ಕುಟುಂಬದ ನಾಲ್ವರನ್ನು ಕೊಂದ ಬಾಲಕ

ರಾಜ್ಯದಲ್ಲಿಂದು 31,198 ಮಂದಿಗೆ ಸೋಂಕು ದೃಢ: 50 ಸಾವುರಾಜ್ಯದಲ್ಲಿಂದು 31,198 ಮಂದಿಗೆ ಸೋಂಕು ದೃಢ: 50 ಸಾವು

ರಾಜ್ಯದಲ್ಲಿಂದು 31,198 ಮಂದಿಗೆ ಸೋಂಕು ದೃಢ: 50 ಸಾವು

ಪರೀಕ್ಷಾ ಪೇ ಚರ್ಚಾ ನೋಂದಣಿ ಗಡುವು ವಿಸ್ತರಣೆ

ಪರೀಕ್ಷಾ ಪೇ ಚರ್ಚಾ ನೋಂದಣಿ ಗಡುವು ವಿಸ್ತರಣೆ

ಮೆಲಾನಿಯಾ ಟ್ರಂಪ್‌ ಟೋಪಿಗಿಲ್ಲ ಬೆಲೆ

ಮೆಲಾನಿಯಾ ಟ್ರಂಪ್‌ ಟೋಪಿಗಿಲ್ಲ ಬೆಲೆ

ಆಮಿಷಕ್ಕೊಳಗಾಗಿ ಮತದಾನ ಮಾಡಬೇಡಿ: ನ್ಯಾ| ಹೆಗ್ಡೆ

ಆಮಿಷಕ್ಕೊಳಗಾಗಿ ಮತದಾನ ಮಾಡಬೇಡಿ: ನ್ಯಾ| ಹೆಗ್ಡೆ

1-dds

ಸೊರಬ ಪುರಸಭೆ : ಪುನಃ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ

1-ffff

ಸಿ.ಎಂ. ಇಬ್ರಾಹಿಂ ಭೇಟಿಯಾದ ಹೆಚ್ ಡಿಕೆ: ಮಹತ್ವದ ಚರ್ಚೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಕ್ರಮ ದಾಖಲೆ ಸೃಷ್ಟಿಸಿದ ಆರೋಪ:  ಬಾಂಗ್ಲಾ ಮೂಲದ ಮಹಿಳೆ ಬಂಧನ

ಅಕ್ರಮ ದಾಖಲೆ ಸೃಷ್ಟಿಸಿದ ಆರೋಪ: ಬಾಂಗ್ಲಾ ಮೂಲದ ಮಹಿಳೆ ಬಂಧನ

ಬಿಡಿಎ ಅಧಿಕಾರಿಗಳ ಭ್ರಷ್ಟಾಚಾರ: ಇಬ್ಬರು ಬಿಡಿಎ ಸಿಬ್ಬಂದಿ ಸೇರಿ ಆರು ಮಂದಿ ಬಂಧನ

ಬಿಡಿಎ ಅಧಿಕಾರಿಗಳ ಭ್ರಷ್ಟಾಚಾರ: ಇಬ್ಬರು ಬಿಡಿಎ ಸಿಬ್ಬಂದಿ ಸೇರಿ ಆರು ಮಂದಿ ಬಂಧನ

ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್‌ ನೀಡಿ : ಅಧಿಕಾರಿಗಳಿಗೆ ಗೌರವ್‌ ಗುಪ್ತ ತಾಕೀತು

ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್‌ ನೀಡಿ : ಅಧಿಕಾರಿಗಳಿಗೆ ಗೌರವ್‌ ಗುಪ್ತ ತಾಕೀತು

ಚಿನ್ನ ಪಡೆದು ದುಡ್ಡು ಕೊಡುವ ನೆಪದಲ್ಲಿ ವ್ಯಕ್ತಿಯನ್ನೇ ಕೊಂದು ಕೆರೆಗೆ ಎಸೆದರು

ಚಿನ್ನ ಕೊಟ್ಟು ದುಡ್ಡು ಪಡೆಯುವ ನೆಪದಲ್ಲಿ ವ್ಯಕ್ತಿಯನ್ನೇ ಕೊಂದು ಕೆರೆಗೆ ಎಸೆದರು

ರಾಜ್ಯದಲ್ಲಿ ಇಂದು 48,905 ಹೊಸ ಕೋವಿಡ್ ಪ್ರಕರಣಗಳು ಪತ್ತೆ : 39 ಮಂದಿ ಬಲಿ

ರಾಜ್ಯದಲ್ಲಿ ಇಂದು 48,905 ಹೊಸ ಕೋವಿಡ್ ಪ್ರಕರಣಗಳು ಪತ್ತೆ : 39 ಮಂದಿ ಬಲಿ

MUST WATCH

udayavani youtube

ಹುತಾತ್ಮ ಸೈನಿಕ ಮಗನ ಪ್ರತಿಮೆ ನಿರ್ಮಿಸಿದ ತಾಯಿ

udayavani youtube

ಇಲ್ಲಿದೆ ‘ಶುದ್ಧ’ ರಾಸಾಯನಿಕ ಅಕ್ಕಿ !ನೀವು ಕೇಳಿಯೇ ಇರದ 3 ವಿಶೇಷತೆಗಳು

udayavani youtube

400 ಕೋಟಿ ಬೆಲೆಬಾಳುವ 47 ಕೆಜಿ ಹೆರಾಯಿನ್ವಶಪಡಿಸಿಕೊಂಡ BSF

udayavani youtube

ಪ್ರಾಣವನ್ನೇ ಪಣಕ್ಕಿಟ್ಟು ನಾಯಿಯನ್ನು ರಕ್ಷಿಸಿದ ತೆಲಂಗಾಣ ಪೊಲೀಸ್​​ ಅಧಿಕಾರಿ

udayavani youtube

ಬೀದಿ ದೀಪ, ಸಿಬ್ಬಂದಿ ಸಂಬಳದ್ದೇ ಬಿಸಿ ಬಿಸಿ ಚರ್ಚೆ

ಹೊಸ ಸೇರ್ಪಡೆ

ಪಬ್‌ಜಿ ಸೈಡ್‌ ಎಫೆಕ್ಟ್: ಕುಟುಂಬದ ನಾಲ್ವರನ್ನು ಕೊಂದ ಬಾಲಕ

ಪಬ್‌ಜಿ ಸೈಡ್‌ ಎಫೆಕ್ಟ್: ಕುಟುಂಬದ ನಾಲ್ವರನ್ನು ಕೊಂದ ಬಾಲಕ

ರಾಜ್ಯದಲ್ಲಿಂದು 31,198 ಮಂದಿಗೆ ಸೋಂಕು ದೃಢ: 50 ಸಾವುರಾಜ್ಯದಲ್ಲಿಂದು 31,198 ಮಂದಿಗೆ ಸೋಂಕು ದೃಢ: 50 ಸಾವು

ರಾಜ್ಯದಲ್ಲಿಂದು 31,198 ಮಂದಿಗೆ ಸೋಂಕು ದೃಢ: 50 ಸಾವು

ಪರೀಕ್ಷಾ ಪೇ ಚರ್ಚಾ ನೋಂದಣಿ ಗಡುವು ವಿಸ್ತರಣೆ

ಪರೀಕ್ಷಾ ಪೇ ಚರ್ಚಾ ನೋಂದಣಿ ಗಡುವು ವಿಸ್ತರಣೆ

ಮೆಲಾನಿಯಾ ಟ್ರಂಪ್‌ ಟೋಪಿಗಿಲ್ಲ ಬೆಲೆ

ಮೆಲಾನಿಯಾ ಟ್ರಂಪ್‌ ಟೋಪಿಗಿಲ್ಲ ಬೆಲೆ

ಆಮಿಷಕ್ಕೊಳಗಾಗಿ ಮತದಾನ ಮಾಡಬೇಡಿ: ನ್ಯಾ| ಹೆಗ್ಡೆ

ಆಮಿಷಕ್ಕೊಳಗಾಗಿ ಮತದಾನ ಮಾಡಬೇಡಿ: ನ್ಯಾ| ಹೆಗ್ಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.