Mobile Theft Case: ಮೋಜಿಗಾಗಿ ಮೊಬೈಲ್‌ ಅಂಗಡಿಗಳಲ್ಲಿ ಕಳವು

Team Udayavani, Oct 4, 2023, 9:34 AM IST

tdy-5

ಬೆಂಗಳೂರು: ಮೋಜಿನ ಜೀವನಕ್ಕಾಗಿ ಮೊಬೈಲ್‌ ಅಂಗಡಿಯಲ್ಲಿ ಕಳವು ಮಾಡಿದ್ದ ಮೂವರು ವಿದ್ಯಾರ್ಥಿಗಳು ಸಂಜಯನಗರ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಎಚ್‌ಎಸ್‌ಆರ್‌ ಲೇಔಟ್‌ ನಿವಾಸಿಗಳಾದ ಪ್ರಭು(20), ಅಜಯ್‌(19), ಮೌನೇಶ್‌(21) ಬಂಧಿತರು. ಆರೋಪಿಗಳಿಂದ 50 ಲಕ್ಷ ರೂ. ಮೌಲ್ಯದ 29 ಐಫೋನ್‌ ಸೇರಿ ವಿವಿಧ ಕಂಪನಿಗಳ 50 ಮೊಬೈಲ್‌, 202 ಸ್ಮಾರ್ಟ್‌ ವಾಚ್‌, ಹ್ಯಾಂಡಿ ಕ್ಯಾಮೆರಾಗಳು, ಲ್ಯಾಪ್‌ಟಾಪ್‌ಗಳು, ಇತರೆ ಎಲೆಕ್ಟ್ರಾನಿಕ್‌ ವಸ್ತುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಗೂಡ್ಸ್‌ ವಾಹನ, 1 ಬೈಕ್‌, ಕೆಲ ಸಲಕರಣೆಗಳನ್ನು ವಶಕ್ಕೆ ಪಡೆಯಲಾಗಿದೆ.

ಬಂಧಿತರು ಸೆ.28ರಂದು ಠಾಣೆ ವ್ಯಾಪ್ತಿಯ ನ್ಯೂಬಿಇಎಲ್‌ ರಸ್ತೆಯಲ್ಲಿನ ಗ್ಯಾಜೆಟ್‌ ಕ್ಲಬ್‌ ಮೊಬೈಲ್‌ ಅಂಗಡಿಯ ರೋಲಿಂಗ್‌ ಶೆಟರ್‌ ಒಡೆದು ಕಳ್ಳತನ ಮಾಡಿದ್ದರು ಎಂದು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮೂರು ತಿಂಗಳ ಹಿಂದೆಯೇ ಸಂಚು: ಆರೋಪಿಗಳ ಪೈಕಿ ಪ್ರಭು ಬಿಸಿಎ, ಅಜಯ್‌ ಮತ್ತು ಮೌನೇಶ್‌ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದರು. ಪ್ರಭು ಐಷಾರಾಮಿ ಜೀವನಕ್ಕೆ ಸಾಕಷ್ಟು ಹಣ ವ್ಯಯಿಸಿದ್ದಾನೆ. ಮೂರು ತಿಂಗಳ ಹಿಂದೆ ನ್ಯೂಬಿಇಎಲ್‌ ರಸ್ತೆಯಲ್ಲಿರುವ ಗ್ಯಾಜೆಟ್‌ ಕ್ಲಬ್‌ ಮೊಬೈಲ್‌ ಅಂಗಡಿಯಲ್ಲಿ ಒಂದು ಸ್ಮಾರ್ಟ್‌ ವಾಚ್‌ ಖರೀದಿಸಿದ್ದ. ಈ ವೇಳೆ ಅಂಗಡಿಯಲ್ಲಿದ್ದ ವಾಚ್‌ ಗಳು, ಮೊಬೈಲ್‌ಗ‌ಳನ್ನು ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡಿಂಗ್‌ ಮಾಡಿಕೊಂಡಿದ್ದ. ಬಳಿಕ ಸ್ನೇಹಿತರಾದ ಅಜಯ್‌, ಮೌನೇಶ್‌ ಜೊತೆ ಸೆ.28ರಂದು ತಡರಾತ್ರಿ ಅಂಗಡಿ ರೋಲಿಂಗ್‌ ಶೆಟರ್‌ ಮುರಿದು ಎಲ್ಲ ವಸ್ತುಗಳನ್ನು ಚೀಲ, ಸೂಟ್‌ ಕೇಸ್‌ಗಳಲ್ಲಿ ತುಂಬಿಕೊಂಡು ಅಜಯ್‌ ತಂದಿದ್ದ ತಂದೆಯ ಗೂಡ್ಸ್‌ ವಾಹನದಲ್ಲಿ ತುಂಬಿಕೊಂಡು ಹೋಗಿದ್ದರು ಎಂದು ಆಯುಕ್ತ ತಿಳಿಸಿದರು.

ಮಶ್ರೂಮ್‌ ಗೋಡೌನ್‌ಲ್ಲಿತ್ತು ಕಳವು ವಸ್ತುಗಳು: ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ಆರಂಭಿಸಿದ್ದ ಸಂಜಯನಗರ ಠಾಣಾಧಿಕಾರಿ ಭಾಗ್ಯವತಿ ಜೆ.ಬಂಟಿ ನೇತೃತ್ವದ ತಂಡ ಅಂಗಡಿಯಲ್ಲಿದ್ದ ಸಿಸಿ ಕ್ಯಾಮೆರಾ ದೃಶ್ಯಗಳು, ಗೂಡ್ಸ್‌ ಆಟೋ ಸಂಚರಿಸಿದ್ದ ಎಲ್ಲ ಮಾರ್ಗದ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಸಂಗ್ರಹಿಸಿತ್ತು. ಈ ವೇಳೆ ಆರೋಪಿಗಳು ಒಂದೆರಡು ಕಡೆ ಸಿಗ್ನಲ್‌ ಜಂಪ್‌ ಮಾಡಿದ್ದು, ಸಂಚಾರ ನಿರ್ವಹಣೆ ಕೇಂದ್ರದಲ್ಲಿ ಆಟೋ ನಂಬರ್‌ ದಾಖಲಾಗಿತ್ತು. ಅದರ ಆಧಾ ರದ ಮೇಲೆ ಮಾಲೀಕರ ಹೆಸರು ಪತ್ತೆಯಾಗಿತ್ತು. ಬಳಿಕ ಗೂಡ್ಸ್‌ ಆಟೋ ಯಾವೆಲ್ಲ ಮಾರ್ಗದಲ್ಲಿ ಸಂಚರಿಸಿದೆ ಎಂದು ಶೋಧಿಸಿದಾಗ ಎಚ್‌ಎಸ್‌ ಆರ್‌ ಲೇಔಟ್‌ನಲ್ಲಿರುವ ಮಶ್ರೂಮ್‌ ಗೋಡೌನ್‌ ಮುಂಭಾಗ ನಿಂತಿತ್ತು. ಅದು ಆರೋಪಿ ಅಜಯ್‌ ತಂದೆಗೆ ಸೇರಿದ ಗೋಡೌನ್‌ ಎಂಬುದು ಗೊತ್ತಾಗಿದೆ. ಈ ವೇಳೆ ಆಟೋ ಬಳಿ ನಿಂತಿದ್ದ ಅಜಯ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಘಟನೆ ಸಂಪೂರ್ಣ ವಿಚಾರ ಬಾಯಿಬಿಟ್ಟಿದ್ದಾನೆ. ಬಳಿಕ ಗೋಡೌನ್‌ನಲ್ಲಿದ್ದ ಎಲ್ಲ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಸಾಲ ತೀರಿಸಲು ಕಳವು: ಆರೋಪಿಗಳ ಪೈಕಿ ಪ್ರಭುನ ಮೋಜಿನ ಜೀವ ನಕ್ಕೆ ಆತನ ಪೋಷಕರು ಹಣ ಕೊಡುತ್ತಿರಲಿಲ್ಲ. ಹೀಗಾಗಿ ಸ್ನೇಹಿತರ ಬಳಿ ಸಾಲ ಮಾಡಿಕೊಂಡಿ ದ್ದಾನೆ. ಸಾಲ ತೀರಿಸಲು ಮೊಬೈಲ್‌ ಅಂಗಡಿ ಯಲ್ಲಿ ಕಳವು ಮಾಡುತ್ತಿದ್ದ. ಅದಕ್ಕೆ ಅಜಯ್‌, ಮೌನೇಶ್‌ ಸಹಕಾರ ನೀಡಿದ್ದರು. ಮತ್ತೂಂದೆಡೆ ಆರೋಪಿ ಅಜಯ್‌ ಗೂಡ್ಸ್‌ ಆಟೋ ಕೊಂಡೊಯ್ದಿರುವ ವಿಚಾರ ಆತನ ತಂದೆಗೆ ಗೊತ್ತಿಲ್ಲ ಎಂದು ಆಯುಕ್ತರು ಹೇಳಿದರು.

ಪಿಯುಸಿಯಲ್ಲಿ ರ್‍ಯಾಂಕ್‌: ಆರೋಪಿಗಳ ಪೈಕಿ ಅಜಯ್‌ ಕಳೆದ ವರ್ಷ ಪಿಯುನಲ್ಲಿ ಶೇ.98 ಅಂಕ ಪಡೆದು, ಪೋಷಕ ರಿಗೆ ಉತ್ತಮ ಹೆಸರು ತಂದಿದ್ದ. ಆದರೆ, ಸ್ನೇಹಿತ ಪ್ರಭುನ ಆಮಿಷಕ್ಕೆ ಬಲಿ ಆಗಿ ಕೃತ್ಯದಲ್ಲಿ ಭಾಗಿ ಆಗಿದ್ದಾನೆ. ವಿಚಾರಣೆ ವೇಳೆ, ಪ್ರಕರಣ ಇಷ್ಟು ತೀವ್ರತೆ ಪಡೆದುಕೊಳ್ಳುತ್ತದೆ ಎಂಬುದು ಗೊತ್ತಿರ ಲಿಲ್ಲ. ತಪ್ಪಾಗಿದೆ ಎಂದು ಕಣ್ಣಿರು ಹಾಕಿದ್ದಾನೆ.

ಟಾಪ್ ನ್ಯೂಸ್

Chitradurga: ಮಾದಾರ ಚನ್ನಯ್ಯ ಗುರುಪೀಠಕ್ಕೆ ವಟು ಸ್ವೀಕಾರ

Chitradurga: ಮಾದಾರ ಚನ್ನಯ್ಯ ಗುರುಪೀಠಕ್ಕೆ ವಟು ಸ್ವೀಕಾರ

Panambur: ರಿಕ್ಷಾ ಚಾಲಕನ ಮೇಲೆ ಸ್ಥಳೀಯ ರಿಕ್ಷಾ ಚಾಲಕರಿಂದ ಹಲ್ಲೆ… ದೂರು ದಾಖಲು

Panambur: ರಿಕ್ಷಾ ಚಾಲಕನ ಮೇಲೆ ಸ್ಥಳೀಯ ರಿಕ್ಷಾ ಚಾಲಕರಿಂದ ಹಲ್ಲೆ… ದೂರು ದಾಖಲು

5-kalburgi

PM Modi: ಕಲಬುರಗಿಗೆ ಇಂದು ಪ್ರಧಾನಿ ನರೇಂದ್ರ ಮೋದಿ

4-thekkatte

Crime; ಕ್ಯಾಸನಮಕ್ಕಿ: ಮನೆಗೆ ಬೆಂಕಿ ಹೆಚ್ಚಿ ವ್ಯಕ್ತಿ ಪರಾರಿ

3-madikeri-2

Madikeri: ಪ್ರೌಢ ಶಾಲಾ ವಿದ್ಯಾರ್ಥಿನಿಯ ಕೊಲೆ ಪ್ರಕರಣ; ಆರೋಪಿ ಪತ್ತೆಗೆ ತನಿಖೆ ಚುರುಕು

2-aranthodu

Missing Case: ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಸುಳ್ಯದ ಅರಂತೋಡಿನಲ್ಲಿ ಪತ್ತೆ

ಭಾರತಕ್ಕೆ ರಾಜತಾಂತ್ರಿಕ ಗೆಲುವು: ಇಸ್ರೇಲಿ ಹಡಗಿನಿಂದ 5 ಭಾರತೀಯರನ್ನು ಬಿಡುಗಡೆ ಮಾಡಿದ ಇರಾನ್

ಭಾರತಕ್ಕೆ ರಾಜತಾಂತ್ರಿಕ ಗೆಲುವು: ಇಸ್ರೇಲಿ ಹಡಗಿನಿಂದ 5 ಭಾರತೀಯರನ್ನು ಬಿಡುಗಡೆ ಮಾಡಿದ ಇರಾನ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-

Bitcoin: ಪರಾರಿಯಾಗಿದ್ದ ಡಿವೈಎಸಿ ವಿಚಾರಣೆಗೆ ಹಾಜರು

Theft Case: ಅಕ್ಕನ ಮನೆಯಲ್ಲಿ 52 ಲಕ್ಷ, ಚಿನ್ನ ಕದ್ದ ತಂಗಿ

Theft Case: ಅಕ್ಕನ ಮನೆಯಲ್ಲಿ 52 ಲಕ್ಷ, ಚಿನ್ನ ಕದ್ದ ತಂಗಿ

Bengaluru: ಚಿನ್ನಾಭರಣ ಇರಿಸಿದ್ದ ಯುವಕನ ಬ್ಯಾಗ್‌ ಕದ್ದ ಆಟೋ ಡ್ರೈವರ್‌ ಬಂಧನ

Bengaluru: ಚಿನ್ನಾಭರಣ ಇರಿಸಿದ್ದ ಯುವಕನ ಬ್ಯಾಗ್‌ ಕದ್ದ ಆಟೋ ಡ್ರೈವರ್‌ ಬಂಧನ

Crime: ರಸ್ತೆಯಲ್ಲಿ ಅಟ್ಟಾಡಿಸಿ ರಿಯಲ್‌ ಎಸ್ಟೇಟ್‌ ಉದ್ಯಮಿ ಹತ್ಯೆಗೈದ ದುಷ್ಕರ್ಮಿಗಳು ಪರಾರಿ

Crime: ರಸ್ತೆಯಲ್ಲಿ ಅಟ್ಟಾಡಿಸಿ ರಿಯಲ್‌ ಎಸ್ಟೇಟ್‌ ಉದ್ಯಮಿ ಹತ್ಯೆಗೈದ ದುಷ್ಕರ್ಮಿಗಳು ಪರಾರಿ

Arrested: 95 ಲಕ್ಷ ರೂ. ನಕಲಿ ಉತ್ಪನ್ನ ವಶ, ಮೂವರ ಸೆರೆ

Arrested: 95 ಲಕ್ಷ ರೂ. ನಕಲಿ ಉತ್ಪನ್ನ ವಶ, ಮೂವರ ಸೆರೆ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Chitradurga: ಮಾದಾರ ಚನ್ನಯ್ಯ ಗುರುಪೀಠಕ್ಕೆ ವಟು ಸ್ವೀಕಾರ

Chitradurga: ಮಾದಾರ ಚನ್ನಯ್ಯ ಗುರುಪೀಠಕ್ಕೆ ವಟು ಸ್ವೀಕಾರ

Panambur: ರಿಕ್ಷಾ ಚಾಲಕನ ಮೇಲೆ ಸ್ಥಳೀಯ ರಿಕ್ಷಾ ಚಾಲಕರಿಂದ ಹಲ್ಲೆ… ದೂರು ದಾಖಲು

Panambur: ರಿಕ್ಷಾ ಚಾಲಕನ ಮೇಲೆ ಸ್ಥಳೀಯ ರಿಕ್ಷಾ ಚಾಲಕರಿಂದ ಹಲ್ಲೆ… ದೂರು ದಾಖಲು

5-kalburgi

PM Modi: ಕಲಬುರಗಿಗೆ ಇಂದು ಪ್ರಧಾನಿ ನರೇಂದ್ರ ಮೋದಿ

4-thekkatte

Crime; ಕ್ಯಾಸನಮಕ್ಕಿ: ಮನೆಗೆ ಬೆಂಕಿ ಹೆಚ್ಚಿ ವ್ಯಕ್ತಿ ಪರಾರಿ

ಲಾ ಸೇವ್ಯು ಬೇಕರಿ – ಸಂಸ್ಥೆಯಿಂದ ಬೀಡಿನಗುಡ್ಡೆಯಲ್ಲಿ ಮೇ 24-26: “ಆಹಾರ-ವ್ಯಾಪಾರ ಮೇಳ-2024′

ಲಾ ಸೇವ್ಯು ಬೇಕರಿ – ಸಂಸ್ಥೆಯಿಂದ ಬೀಡಿನಗುಡ್ಡೆಯಲ್ಲಿ ಮೇ 24-26: “ಆಹಾರ-ವ್ಯಾಪಾರ ಮೇಳ-2024′

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.