ಮೆಟ್ರೋ: ಗರಿಗೆದರಿದ ರಿಯಲ್‌ ಎಸ್ಟೇಟ್‌

ಕೋವಿಡ್ ಲಾಕ್‌ಡೌನ್‌ ನಿಂದ ಕಳೆದೆರಡು ವರ್ಷಗಳಿಂದ ಮಂಕಾಗಿದ್ದ ಉದ್ಯಮ ಚೇತರಿಕೆಯತ್ತ

Team Udayavani, Sep 3, 2021, 3:15 PM IST

ಮೆಟ್ರೋ: ಗರಿಗೆದರಿದ ರಿಯಲ್‌ ಎಸ್ಟೇಟ್‌

ಬೆಂಗಳೂರು: “ನಮ್ಮ ಮೆಟ್ರೋ’2ನೇ ಹಂತದ ವಿಸ್ತರಿತ ಕೆಂಗೇರಿ ಮಾರ್ಗವು ಕೇವಲ ಹೊರವಲಯವನ್ನು ನಗರದ ಹೃದಯಭಾಗಕ್ಕೆ ಸಂಪರ್ಕ ಕಲ್ಪಿಸುವ “ಸಂಚಾರ ನಾಡಿ’ ಮಾತ್ರವಲ್ಲ; ಆ ಭಾಗದ ಸುತ್ತಲಿನ ರಿಯಲ್‌ ಎಸ್ಟೇಟ್‌ ಉದ್ಯಮ ಗರಿಗೆದರುವಲ್ಲಿಯೂ ಪ್ರಮುಖಪಾತ್ರ ವಹಿಸಲಿದೆ.

ಕೋವಿಡ್ ಹಾವಳಿ ಮತ್ತು ಲಾಕ್‌ಡೌನ್‌ ನಿಂದ ಕಳೆದೆರಡು ವರ್ಷಗಳಿಂದ ಮಂಕಾಗಿದ್ದ ಈ ಉದ್ಯಮಕ್ಕೆ “ನಮ್ಮ ಮೆಟ್ರೋ’ ಉತ್ತೇಜನ
ನೀಡಿದಂತಾಗಿದ್ದು, ನಗರದ ಪಶ್ಚಿಮ ಭಾಗದ ವ್ಯಾಪಾರ-ವಾಣಿಜ್ಯ ಚಟುವಟಿಕೆಗಳು, ದೊಡ್ಡ ಸಮ್ಮೇಳನ ಸಭಾಂಗಣಗಳು, ಮಾಲ್‌ಗ‌ಳು,
ಅಪಾರ್ಟ್‌ಮೆಂಟ್‌ಗಳು ತಲೆಯೆತ್ತಲಿವೆ. ಈಗಾಗಲೇ ಇರುವ ಮಳಿಗೆಗಳು, ವಸತಿ ಸಮುತ್ಛಯಗಳು ಮತ್ತು ನಿವೇಶನಗಳಿಗೆ ಬೇಡಿಕೆ ಬರುವ ನಿರೀಕ್ಷೆ ಇದೆ.

ಈ ಮೊದಲು ನಗರದ ಕೋರ್‌ ಏರಿಯಾದಲ್ಲಿಯೇ ಬೀಡುಬಿಡಲು ಇಚ್ಛಿಸುತ್ತಿದ್ದ ಜನ ಈಗ ಹೊರವಲಯದಲ್ಲಿ ಹರಡಿಕೊಳ್ಳಲಿದ್ದಾರೆ. ಇದರಿಂದ ಕೆಂಗೇರಿ,ಪಟ್ಟಣಗೆರೆ, ಕುಂಬಳಗೋಡು,ಬಿಡದಿ ಸೇರಿದಂತೆ ಮಾರ್ಗದ ಆಸುಪಾಸು ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಭೂಮಿಗೆ ಮತ್ತಷ್ಟು ಬೆಲೆ ಬರಲಿದೆ. ಇದೇ ವೇಳೆ ನಗರದ ಹೃದಯಭಾಗದಲ್ಲಿ ಗಗನಕ್ಕೇರಿರುವ ಮಳಿಗೆಗಳು, ಮನೆಗಳ ಬಾಡಿಗೆ ದರ ತಕ್ಕಮಟ್ಟಿಗೆ ಕಡಿಮೆ ಆಗಲೂ ಬಹುದು. ಕಾರಣವಿಷ್ಟೇ, ಸಾರ್ವಜನಿಕರು ಹೊರವಲಯದತ್ತ ಹೋದರೆ ವ್ಯಾಪಾರ-ವಾಣಿಜ್ಯ ಚಟುವಟಿಕೆಗಳೂ ವಿಸ್ತರಿಸಲಿವೆ.

ಆಗ ಹೃದಯಭಾಗದಲ್ಲೂ ಕೈಗೆಟಕುವ ದರದಲ್ಲಿ ಬಾಡಿಗೆ ಮನೆಗಳು ದೊರೆಯಬಹುದು. ಉದ್ದೇಶಿತ ಮಾರ್ಗಗಳುದ್ದಕ್ಕೂ ವಾಹನಗಳ ದಟ್ಟಣೆ ತಗ್ಗಲಿದೆ.ಇದರಿಂದವಾಯುಮಾಲಿನ್ಯ ಕಡಿಮೆ ಆಗಲಿದೆ. ಮನರಂಜನಾ ತಾಣಗಳು, ಶಾಪಿಂಗ್‌ ಮಾಲ್‌ಗ‌ಳ ಆಯ್ಕೆ ಕೂಡ ಬದಲಾಗಲಿದೆ.

ಈಗಾಗಲೇ ಜನ ಅಲ್ಲೆಲ್ಲಾ ಭೂಮಿ ಖರೀದಿ, ಮನೆ ನಿರ್ಮಾಣದಲ್ಲಿ ತೊಡಗಿದ್ದಾರೆ. ಈ ವಿಸ್ತರಣೆ ಮಾರ್ಗಗಳಿಂದ ನಗರದ ಯಾವುದೇ ಮೂಲೆ ಯಿಂದ ಕೇವಲ ಅರ್ಧ ಗಂಟೆಯಲ್ಲಿ ನಗರದ ಹೃದಯಭಾಗವನ್ನುತಲುಪಬಹುದು. ಹಾಗಾಗಿ, ಸಹಜವಾಗಿಯೇ ಜನ ಮೆಟ್ರೋ ಹಾದು ಹೋಗುವ ಮಾರ್ಗಗಳ ಸುತ್ತಮುತ್ತ ನೆಲೆಸಲುಬಯಸುತ್ತಾರೆ. ಪರಿಣಾಮ ನಗರದ ಹೊರವಲಯಗಳಲ್ಲಿ ಭೂಮಿ ಬೆಲೆ ಶೇ.15ರಿಂದ 20ರಷ್ಟು ಏರಿಕೆ ಆಗಬಹುದು’ ಎಂದು ರಿಯಲ್‌ ಎಸ್ಟೇಟ್‌ ಉದ್ಯಮಿ ರಮೇಶ್‌ ತಿಳಿಸುತ್ತಾರೆ.

ಇದನ್ನೂ ಓದಿ:ಮಕ್ಕಳ ಭವಿಷ್ಯದ ಕುತ್ತಿಗೆ ಕೊಯ್ಯುವಂಥ ಕೆಲಸದಲ್ಲಿ ಭಾಗಿಯಾದ ಪಶ್ಚಾತ್ತಾಪ ಹೊರಬೇಕಾದೀತು!

ಮೆಟ್ರೋ ನಿಲ್ದಾಣಗಳಿಂದ ವ್ಯವಸ್ಥಿತವಾಗಿ ಬಸ್‌ ಸಂಪರ್ಕ ಸೇವೆ ದೊರೆತರೆ, ಆಟೋ, ಟ್ಯಾಕ್ಸಿಗಳಿಗೂ ಹೊಡೆತ ಬೀಳಲಿದೆ. ಆಗ, ಜನ ಉದ್ದೇಶಿತ ಮಾರ್ಗಗಳಲ್ಲಿ ಸಂಪೂರ್ಣವಾಗಿ ಸಾರ್ವಜನಿಕ ಸಾರಿಗೆ ಮೊರೆಹೋಗುತ್ತಾರೆ. ಆಗ ವಾಹನ ದಟ್ಟಣೆ ಕಡಿಮೆ ಆಗಲಿದ್ದು, ಅಪಘಾತಗಳ ಸಂಖ್ಯೆ ತಗ್ಗಿಸಲಿಕ್ಕೂ ಕಾರಣವಾಗಲಿದೆ. ಎಂದು ಸಾರಿಗೆ ತಜ್ಞರು ವಿವರಿಸುತ್ತಾರೆ.

ಶೇ. 20-25ರಷ್ಟು ವೃದ್ಧಿ ನಿರೀಕ್ಷೆ
“ಜಗತ್ತಿನ ಯಾವುದೇ ಭಾಗದಲ್ಲಿ ಮೆಟ್ರೋದಂತಹ ನಗರ ಸಮೂಹ ಸಾರಿಗೆಗಳು ಬಂದಲ್ಲೆಲ್ಲಾ ವಸತಿ, ವಾಣಿಜ್ಯ ಚಟುವಟಿಕೆಗಳು ಗರಿಗೆದರಿರುವುದನ್ನು ಕಾಣಬಹುದು. ಉದಾಹರಣೆಗೆ ನ್ಯೂಯಾರ್ಕ್‌, ಲಂಡನ್‌ನಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮ ಶೇ. 30ರಷ್ಟು ವೃದ್ಧಿ ಯಾಯಿತು. ಸಿಲಿಕಾನ್‌ ಸಿಟಿ ಕೂಡ ಇದಕ್ಕೆ ಹೊರತಾಗಿಲ್ಲ. ಕೆಂಗೇರಿವರೆಗೆ ಮೆಟ್ರೋ ವಿಸ್ತರಣೆ ಆಗಿದ್ದರಿಂದ ಆ ಭಾಗದಲ್ಲಿ ಶೇ.20 ರಿಂದ 25 ರಷ್ಟು ಭೂಮಿ ಬೆಲೆಯಲ್ಲಿ ಏರಿಕೆಕಂಡುಬರಲಿದೆ’ ಎಂದು ಭಾರತೀಯ ರಿಯಲ್‌ ಎಸ್ಟೇಟ್‌ ಅಭಿವೃದ್ಧಿ ಸಂಘಗಳ ಒಕ್ಕೂಟ (ಕ್ರೆಡಾಯ್‌)ಬೆಂಗಳೂರು ಘಟಕದ ಅಧ್ಯಕ್ಷ ಭಾಸ್ಕರ್‌ ಟಿ. ನಾಗೇಂದ್ರಪ್ಪ ಅಭಿಪ್ರಾಯಪಡುತ್ತಾರೆ. ಕೆಂಗೇರಿ ಬಲಭಾಗ, ಆರ್‌.ಆರ್‌. ನಗರದ ಆಲದಮರ ರಸ್ತೆ ಬಳಿ ಹತ್ತಾರು ಕೈಗಾರಿಕೆಗಳಿವೆ. ಅಲ್ಲಿ ನೂರಾರು ಕಾರ್ಮಿಕರು ಕೆಲಸ ಮಾಡುತ್ತಾರೆ. ಅವರೆಲ್ಲರಿಗೂ ಸುರಕ್ಷಿತ ಸಾರಿಗೆ ಸೇವೆ ದೊರೆಯುತ್ತದೆ. ಸಮಯವೂ ಉಳಿತಾಯ ಆಗುತ್ತದೆ. ಅದೇ ರೀತಿ,ಕೈಗಾರಿಕೆಗಳಿಗೆ ಬಂದುಹೋಗುವ ಗ್ರಾಹಕರು, ಮೆಟ್ರೋ ಮಾರ್ಗ ಬಂದಿರುವುದರಿಂದ ಮತ್ತಷ್ಟು ಕೈಗಾರಿಕೆ ಗಳು ಅಲ್ಲಿ ಬರಲು ಅನುಕೂಲ ಆಗಲಿದೆ. ಇದೆಲ್ಲವೂಕೈಗಾರಿಕೆ ಬೆಳವಣಿಗೆಗೆ ಪೂರಕ ಎಂದುಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾಮಹಾಸಂಸ್ಥೆ (ಎಫ್ಕೆಸಿಸಿಐ) ಅಧ್ಯಕ್ಷ ಪೆರಿಕಲ್‌ ಸುಂದರ್‌ ತಿಳಿಸುತ್ತಾರೆ. ಅಲ್ಲದೆ, ಮೆಟ್ರೋ ಕಾರಿಡಾರ್‌ಗಳು ಟ್ರಾನ್ಸಿಟ್‌ ಓರಿಯಂಟೆಡ್‌ ಡೆವಲಪ್‌ಮೆಂಟ್‌ (ಟಿಒಡಿ) ನೀತಿ ಅಡಿ ಬರುವುದರಿಂದ ಆಸುಪಾಸು ಇರುವ ಕಟ್ಟಡಗಳ ಫ್ಲೋರ್‌ ಏರಿಯಾ ರೇಷಿಯೋ ಹೆಚ್ಚಳಕ್ಕೂ ಉತ್ತೇಜನ ಸಿಗಲಿದೆ.

-ವಿಜಯಕುಮಾರ ಚಂದರಗಿ

ಟಾಪ್ ನ್ಯೂಸ್

ನಾನೇ ಪಕ್ಷದ ಪ್ರಣಾಳಿಕೆಯ ಅಧ್ಯಕ್ಷ…. 5 ಗ್ಯಾರಂಟಿಯ ಆರ್ಥಿಕತೆ ಬಗ್ಗೆ ನನಗೆ ಗೊತ್ತು: ಪರಂ

ನಾನೇ ಪಕ್ಷದ ಪ್ರಣಾಳಿಕೆಯ ಅಧ್ಯಕ್ಷ…. 5 ಗ್ಯಾರಂಟಿಯ ಆರ್ಥಿಕತೆ ಬಗ್ಗೆ ನನಗೆ ಗೊತ್ತು: ಪರಂ

ಪಣಜಿ: ಜೂನ್ 1ರಿಂದ ಮೀನುಗಾರಿಕೆಗೆ ನಿಷೇಧ… ದಡ ಸೇರುತ್ತಿವೆ ಬೋಟುಗಳು

ಪಣಜಿ: ಜೂನ್ 1ರಿಂದ ಮೀನುಗಾರಿಕೆ ನಿಷೇಧ… ದಡ ಸೇರುತ್ತಿವೆ ಬೋಟುಗಳು

police crime

UP ಇಬ್ಬರು ಸ್ಮಗ್ಲರ್ ಗಳ ಬಂಧನ; 2.5 ಕೋಟಿ ರೂ. ಡ್ರಗ್ಸ್ ವಶ

IPL 2023 Final: Dhoni won the toss against GT

GTvsCSK ಮೀಸಲು ದಿನದ ಐಪಿಎಲ್ ಫೈನಲ್: ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದ ಧೋನಿ

arrest-25

Kerala ಜೈಲಿನಲ್ಲಿ ಮಟನ್ ಕರಿಗಾಗಿ ಅಪರಾಧಿಯಿಂದ ಜೈಲರ್‌ಗಳಿಗೆ ಥಳಿತ!

ಅಳಿವಿನಂಚಿನಲ್ಲಿರುವ ಗೀಜಗನ ಹಕ್ಕಿ ಗೂಡುಗಳು… 

ಅಳಿವಿನಂಚಿನಲ್ಲಿರುವ ಗೀಜಗದ ಹಕ್ಕಿ ಗೂಡುಗಳು… ಗೀಜಗದ ಹೆಣಿಕೆಗೆ ಸರಿಸಾಟಿ ಯಾರಿಲ್ಲ

ganja

ಆಂಧ್ರದಿಂದ ಮಂಗಳೂರಿಗೆ 23 ಕೆಜಿ ಗಾಂಜಾ ಸಾಗಾಟ ಮಾಡುತ್ತಿದ್ದಾತನ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಒಳ್ಳೆಯ ಕೆಲಸ ಮಾಡಿ ಸರ್ಕಾರಕ್ಕೆ ಹೆಸರು ತನ್ನಿ: BBMP ಅಧಿಕಾರಿಗಳಿಗೆ ಡಿಕೆ ಶಿವಕುಮಾರ್ ಸೂಚನೆ

ಒಳ್ಳೆಯ ಕೆಲಸ ಮಾಡಿ ಸರ್ಕಾರಕ್ಕೆ ಹೆಸರು ತನ್ನಿ: BBMP ಅಧಿಕಾರಿಗಳಿಗೆ ಡಿಕೆ ಶಿವಕುಮಾರ್ ಸೂಚನೆ

ಮಳೆಗಾಲಕ್ಕೆ ಸಜ್ಜಾದ ಸಂಚಾರ ಪೊಲೀಸರು  

ಮಳೆಗಾಲಕ್ಕೆ ಸಜ್ಜಾದ ಸಂಚಾರ ಪೊಲೀಸರು  

ಶಾಲಾ ಶುಲ್ಕಕ್ಕಿಟ್ಟಿದ್ದ ಹಣ ದರೋಡೆ ಮಾಡಿದ್ದವರ ಸೆರೆ  

ಶಾಲಾ ಶುಲ್ಕಕ್ಕಿಟ್ಟಿದ್ದ ಹಣ ದರೋಡೆ ಮಾಡಿದ್ದವರ ಸೆರೆ  

tdy-6

ಮದ್ಯದ ಅಮಲಿನಲ್ಲಿ ಸ್ನೇಹಿತನ ಕೊಲೆ

ಖಾತೆ ಬದಲಿಗೆ ಪಟ್ಟು: ಅಸಮಾಧಾನಿಗಳ ಮನವೊಲಿಕೆ ಕಸರತ್ತು

ಖಾತೆ ಬದಲಿಗೆ ಪಟ್ಟು: ಅಸಮಾಧಾನಿಗಳ ಮನವೊಲಿಕೆ ಕಸರತ್ತು

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ

ನಾನೇ ಪಕ್ಷದ ಪ್ರಣಾಳಿಕೆಯ ಅಧ್ಯಕ್ಷ…. 5 ಗ್ಯಾರಂಟಿಯ ಆರ್ಥಿಕತೆ ಬಗ್ಗೆ ನನಗೆ ಗೊತ್ತು: ಪರಂ

ನಾನೇ ಪಕ್ಷದ ಪ್ರಣಾಳಿಕೆಯ ಅಧ್ಯಕ್ಷ…. 5 ಗ್ಯಾರಂಟಿಯ ಆರ್ಥಿಕತೆ ಬಗ್ಗೆ ನನಗೆ ಗೊತ್ತು: ಪರಂ

Minchu

Shivamogga: ಸಿಡಿಲು ಬಡಿದು ಮಹಿಳೆ ಮೃತ್ಯು

1-sadsd

Koratagere ಟೋಲ್ ತೆರವಿಗೆ ಗಡುವು ನೀಡಿದ ಸಚಿವ ಕೆ.ಎನ್.ರಾಜಣ್ಣ

ಪಣಜಿ: ಜೂನ್ 1ರಿಂದ ಮೀನುಗಾರಿಕೆಗೆ ನಿಷೇಧ… ದಡ ಸೇರುತ್ತಿವೆ ಬೋಟುಗಳು

ಪಣಜಿ: ಜೂನ್ 1ರಿಂದ ಮೀನುಗಾರಿಕೆ ನಿಷೇಧ… ದಡ ಸೇರುತ್ತಿವೆ ಬೋಟುಗಳು

police crime

UP ಇಬ್ಬರು ಸ್ಮಗ್ಲರ್ ಗಳ ಬಂಧನ; 2.5 ಕೋಟಿ ರೂ. ಡ್ರಗ್ಸ್ ವಶ