ನಮ್ಮ ಮೆಟ್ರೋದಲ್ಲೂ ಶೀಘ್ರ ಬರಲಿದೆ ಪಾಸು!


Team Udayavani, Dec 22, 2021, 11:04 AM IST

metro

ಬೆಂಗಳೂರು: ಬಿಎಂಟಿಸಿ ಬಸ್‌ಗಳಲ್ಲಿರುವ ಮಾಸಿಕ ಪಾಸು ಸೇರಿದಂತೆ ವಿವಿಧ ಮಾದರಿಯ ಪಾಸುಗಳ ವ್ಯವಸ್ಥೆ ಶೀಘ್ರ “ನಮ್ಮ ಮೆಟ್ರೋ’ದಲ್ಲೂ ಬರಲಿದೆ! ಪ್ರಯಾಣಿಕರ ಆಕರ್ಷಣೆಗೆ ಹೊಸ ಐಡಿಯಾ ಮಾಡಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌), ಬಿಎಂಟಿಸಿ ಬಸ್‌ಗಳಲ್ಲಿ ನೀಡಲಾಗುವ ಮಾಸಿಕ ಪಾಸು ಮಾದರಿಯಲ್ಲೇ ಟ್ರಿಪ್‌ ಆಧಾರಿತ ರಿಯಾಯ್ತಿ ಕಾರ್ಡ್‌ಗಳನ್ನು ಪರಿಚಯಿಸಲು ಚಿಂತನೆ ನಡೆಸಿದ್ದು, ಅಂದುಕೊಂಡಂತೆ ನಡೆದರೆ ಜನವರಿ ಅಂತ್ಯಕ್ಕೆ ಈ ಸೌಲಭ್ಯ ಪ್ರಯಾಣಿಕರಿಗೆ ಲಭ್ಯವಾಗಲಿದೆ.

ಪ್ರಸ್ತುತ ಒಂದೇ ಪ್ರಕಾರದ ಸ್ಮಾರ್ಟ್‌ಕಾರ್ಡ್‌ ಇದ್ದು, ಅದರ ಬಳಕೆದಾರರಿಗೆ ಪ್ರಯಾಣ ದರದಲ್ಲಿ ಕೇವಲ ಶೇ. 5 ರಿಯಾಯ್ತಿ ನೀಡಲಾಗುತ್ತಿದೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ವಿವಿಧ ಪ್ರಕಾರದ ಟ್ರಿಪ್‌ ಕಾರ್ಡ್‌ಗಳನ್ನು ಪರಿಚಯಿಸಲು ನಿರ್ಧರಿಸಿದೆ. ಉದಾಹರಣೆಗೆ 60 ಟ್ರಿಪ್‌ಗ್ಳ ಅಥವಾ 25 ಟ್ರಿಪ್‌ಗಳುಲ್ಲ ಸ್ಲ್ಯಾಬ್‌ಗಳನ್ನು ನಿಗದಿಪಡಿಸಲಾಗುತ್ತದೆ.

ಈ ಟ್ರಿಪ್‌ ಗಳನ್ನು ಪೂರೈಸಿದರೆ, ಪ್ರಯಾಣ ದರದಲ್ಲಿ ಇಂತಿಷ್ಟು ರಿಯಾಯ್ತಿ ಎಂದು ನಿಗದಿಪಡಿಸಲಾಗುತ್ತದೆ. ಇದು ಪ್ರಯಾಣಿಕರಿಗೆ ಸಾಕಷ್ಟು ಅನುಕೂಲ ಆಗಲಿದೆ. ಈ ಸಂಬಂಧ ಸಿದ್ಧತೆಗಳು ನಡೆದಿದ್ದು, ಬರುವ ಜನವರಿ- ಫೆಬ್ರವರಿಯಲ್ಲಿ ಅಳವಡಿಸುವ ಉದ್ದೇಶ ಇದೆ ಎಂದು ಹೆಸರು ಹೇಳಲಿಚ್ಛಿಸದ ಬಿಎಂಆರ್‌ಸಿಎಲ್‌ ಅಧಿಕಾರಿಯೊಬ್ಬರು ತಿಳಿಸಿದರು. 50 ಟ್ರಿಪ್‌ಗ್ಳ ಕಾರ್ಡ್‌ ಇದ್ದರೆ, ಅದನ್ನು ಬಳಸಿಕೊಂಡು ಒಬ್ಬ ವ್ಯಕ್ತಿ ಒಂದು ತಿಂಗಳು ಮೆಟ್ರೋದಲ್ಲಿ ಸಂಚರಿಸಬಹುದು. ಅದೇ ರೀತಿ, 100 ಟ್ರಿಪ್‌ಗ್ಳ ಕಾರ್ಡ್‌ ಹೊಂದಿದ್ದರೆ ಎರಡು ತಿಂಗಳು ಪ್ರಯಾಣಿಸಬಹುದು.

ಇದನ್ನೂ ಓದಿ; ಡಿಕೆಶಿಗೆ ಮತಾಂತರವಾದ ಹೆಣ್ಣಿನ ಕಷ್ಟ ಗೊತ್ತಿಲ್ಲ: ಈಶ್ವರಪ್ಪ

ಕೆಲವರು ವಾರದಮಟ್ಟಿಗೆ ಕೆಲಸ ನಿಮಿತ್ತ ನಗರಕ್ಕೆ ಆಗಮಿಸುತ್ತಾರೆ. ಹಲವರು ನಗರ ಪ್ರವಾಸಿ ತಾಣಗಳ ವೀಕ್ಷಣೆಗೆ, ಬೇಸಿಗೆ ರಜೆ ಮತ್ತಿತರ ಕಾರಣಗಳಿಗೆ ಜನ ಭೇಟಿ ನೀಡುತ್ತಾರೆ. ಅವರೆಲ್ಲಾ ಕ್ಯೂನಲ್ಲಿ ನಿಂತು ಟೋಕನ್‌ ತೆಗೆದುಕೊಳ್ಳಬೇಕಿಲ್ಲ. 20-25 ಟ್ರಿಪ್‌ಗ್ಳ ಸ್ಮಾರ್ಟ್‌ಕಾರ್ಡ್‌ ಖರೀದಿಸಬಹುದು. ಇದಕ್ಕೆ ನಿರ್ದಿಷ್ಟ ಅವಧಿಯ ವ್ಯಾಲಿಡಿಟಿ ನೀಡಲಾಗಿರುತ್ತದೆ. ಇದೇ ಮಾದರಿ ವಿವಿಧ ಕಾರ್ಡ್‌ ಪರಿಚಯಿಸುವ ಇಂಗಿನ ಮೆಟ್ರೋ ಹೊಂದಿದೆ.

ಗರಿಷ್ಠ ರಿಯಾಯ್ತಿ; ಕೈಗೆಟಕುವ ದರ: “ಟ್ರಿಪ್‌ ಆಧಾರಿತ ಕಾರ್ಡ್‌ಗಳನ್ನು ಪರಿಚಯಿಸುವ ಉದ್ದೇಶ ಇದೆ. ಈ ಕಾರ್ಡ್‌ಗಳು ಬಸ್‌ ಪಾಸಿನ ಮಾದರಿಯಲ್ಲೇ ಇರುತ್ತವೆ. ಆದರೆ, ಟ್ರಿಪ್‌ ಆಧಾರಿತ ಪಾಸುಗಳು ಇವು ಆಗಿರುತ್ತವೆ. 50 ಟ್ರಿಪ್‌ಗ್ಳನ್ನು ನಿಗದಿಪಡಿಸಿ ರಿಯಾಯ್ತಿ ಕಲ್ಪಿಸಿದ ಒಂದು ಕಾರ್ಡ್‌ ಇದ್ದರೆ, ಮತ್ತೂಂದು 25 ಟ್ರಿಪ್‌ಗ್ಳ ಕಾರ್ಡ್‌ ಇರುತ್ತದೆ. ಹೀಗೆ ಬೇರೆ ಬೇರೆ ಪ್ರಕಾ ರದ ಕಾರ್ಡ್‌ಗಳಿರುತ್ತವೆ. ಪ್ರಯಾಣಿಕರು ತಮಗೆ ಅನು ಕೂಲವಾದದ್ದನ್ನು ಪಡೆಯಬಹುದು. ಆಯಾ ಟ್ರಿಪ್‌ಗ್ಳ ಸಂಖ್ಯೆಗೆ ಅನುಗುಣವಾಗಿ ರಿಯಾಯ್ತಿ ಇರಲಿದೆ.

ರಿಯಾಯ್ತಿ ಪ್ರಮಾಣ ಇನ್ನೂ ಅಂತಿಮ ವಾಗಿಲ್ಲ. ಆದರೆ, ಸಾಮಾನ್ಯರಿಗೆ ಅತ್ಯಂತ ಕೈಗೆಟಕುವ ದರದಲ್ಲಂತೂ ಇರಲಿದೆ’ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್‌ ಸ್ಪಷ್ಟಪಡಿಸಿದರು. ಈ ಸಂಬಂಧ ಸಾಫ್ಟ್ವೇರ್‌ಗಳು ಸೇರಿದಂತೆ ವಿವಿಧ ತಾಂತ್ರಿಕ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಇದರ ಸಿದ್ಧತೆಗಳು ನಡೆದಿವೆ. ಈ ಸೌಲಭ್ಯದಿಂದ ಮುಂಬ ರುವ ದಿನಗಳಲ್ಲಿ “ನಮ್ಮ ಮೆಟ್ರೋ’ ಜನರಿಗೆ ಮತ್ತಷ್ಟು ಹತ್ತಿರ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಟ್ರಿಪ್‌ ಆಧಾರಿತ ಪಾಸು ಯಾಕೆ? ಬಸ್‌ನಲ್ಲಿ ನೀಡುವ ಮಾಸಿಕ ಪಾಸುಗಳ ಯಥಾವತ್‌ ಮಾದರಿಯನ್ನು ಮೆಟ್ರೋದಲ್ಲಿ ಅಳವಡಿಸಲು ಆಗದು. ಯಾಕೆಂದರೆ, ಸಾಮಾನ್ಯವಾಗಿ ಬಸ್ಸಿನಲ್ಲಿ ಒಂದು ಪಾಸಿನಲ್ಲಿ ಒಬ್ಬರು ಮಾತ್ರ ಪ್ರಯಾಣಿಸಲು ಸಾಧ್ಯವಿದ್ದು, ಪಾಸು ಹೊಂದಿದ ಪ್ರಯಾಣಿಕರನ್ನು ಖುದ್ದು ನಿರ್ವಾಹಕ ಟಿಕೆಟ್‌ ನೀಡುವ ವೇಳೆ ಪರಿಶೀಲನೆ ನಡೆಸುತ್ತಾನೆ. ಆದರೆ, ಮೆಟ್ರೋದಲ್ಲಿ ಒಂದು ಕಾರ್ಡ್‌ನಲ್ಲಿ ಹಲವು ವ್ಯಕ್ತಿಗಳು ವಿವಿಧ ಅವಧಿಯಲ್ಲಿ ಪ್ರಯಾಣಿಸುತ್ತಾರೆ. ಇಲ್ಲಿ ಮ್ಯಾನ್ಯುವಲ್‌ ಆಗಿ ಪರಿಶೀಲಿಸಲು ಅವಕಾಶವೂ ಇರುವುದಿಲ್ಲ. ಅದು ಸಾಧ್ಯವೂ ಇಲ್ಲ. ಈ ಹಿನ್ನೆಲೆಯಲ್ಲಿ ಟ್ರಿಪ್‌ ಆಧಾರಿತ ಪಾಸುಗಳನ್ನು ಪರಿಚಯಿಸಲಾಗುತ್ತದೆ.

– ವಿಜಯಕುಮಾರ ಚಂದರಗಿ

ಟಾಪ್ ನ್ಯೂಸ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

11-srrest

Bengaluru: ಅತಿಕ್ರಮಿಸಿ ಏರ್‌ಪೋರ್ಟ್‌ನಲ್ಲಿ ವಿಡಿಯೋ: ಯುಟ್ಯೂಬರ್‌ ಬಂಧನ

10-bengaluru’

Bengaluru: ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ವೀಕ್ಷಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್‌ ಸೆರೆ

9-bng

Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ

ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್

ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.