ವೀಲಿಂಗ್‌ ಮಾಡೋರಿಗೆ ನಂ.46 ಹುಚ್ಚು


Team Udayavani, Aug 19, 2018, 11:59 AM IST

wheeling.jpg

ಬೆಂಗಳೂರು: ಖ್ಯಾತ ಬೈಕ್‌ ರೇಸರ್‌ ವ್ಯಾಲೆಂಟಿನೊ ರೊಸ್ಸಿ ಬೈಕ್‌ ನಂಬರ್‌ “46′ ಅನ್ನು ಸ್ಫೂರ್ತಿಯಾಗಿ ಇರಿಸಿಕೊಂಡು ನಗರದ ಯುವಕರು ಬೈಕ್‌ ವೀಲಿಂಗ್‌ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ನಗರದಲ್ಲಿ ಹೆಚ್ಚುತ್ತಿರುವ ಬೈಕ್‌ ವೀಲಿಂಗ್‌ ಬಗ್ಗೆ ಸಾರ್ವಜನಿಕರು ನೀಡಿರುವ ದೂರಿನ a ವಿಶೇಷ ಕಾರ್ಯಾಚರಣೆ ನಡೆಸುತ್ತಿರುವ ನಗರ ಸಂಚಾರ ವಿಭಾಗದ ಪೊಲೀಸರು, ಇದುವರೆಗೂ 161 ಮಂದಿಯನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 160 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. 

ಈ ಪೈಕಿ ಬಹುತೇಕರು ತಮ್ಮ ಬೈಕ್‌ಗೆ ರೊಸ್ಸಿ ಬೈಕ್‌ ನಂಬರ್‌-46 ಬರೆಸಿಕೊಂಡು ವೀಲಿಂಗ್‌ ಮಾಡುತ್ತಿರುವುದು ಪೊಲೀಸರ ವಿಚಾರಣೆ ವೇಳೆ ತಿಳಿದು ಬಂದಿದೆ. ಅಲ್ಲದೆ, ಕೆಲ ಆರೋಪಿಗಳಿಗೆ ಬೈಕ್‌ ವೀಲಿಂಗ್‌ಗೆ ರೊಸ್ಸಿಯೇ ಸ್ಪೂರ್ತಿ. ಆತನ ನಂಬರ್‌- 46 ನಮಗೆ ಅದೃಷ್ಟ ಎಂದು ಹೇಳಿಕೆ ನೀಡಿ ಸಂಚಾರರ ಪೊಲೀಸರಲ್ಲೇ ಅಚ್ಚರಿ ಮೂಡಿಸಿದ್ದಾರೆ.

ವೀಲಿಂಗ್‌ ಮಾಡಲೆಂದೇ ಕೆಲ ಯುವಕರು ತಮ್ಮ ದ್ವಿಚಕ್ರ ವಾಹನಗಳನ್ನು ಸಂಪೂರ್ಣ ಮಾರ್ಪಾಡು ಮಾಡಿಸಿಕೊಂಡು, ಬೈಕ್‌ನ ಎಲ್ಲೆಡೆ 46 ಎಂಬ ನಂಬರ್‌ ಬರೆಸಿಕೊಂಡಿದ್ದಾರೆ. ಕೆಲ ಯುವಕರು ಬೈಕ್‌ನ ನೋಂಂದಣಿಯ ಕೊನೆಯ ಅಥವಾ ಆರಂಭ ಎರಡು ನಂಬರ್‌ಗಳು 46 ಆಗಿವೆ ಎಂದು ಸಂಚಾರ ವಿಭಾಗದ ಪೊಲೀಸರು ಮಾಹಿತಿ ನೀಡಿದ್ದಾರೆ.

ತಾನೇ ಬೈಕ್‌ ಸಿದ್ಧಪಡಿಸಿಕೊಂಡ: ರೊಸ್ಸಿ ಅಭಿಮಾನಿಯಾಗಿರುವ ಹಲಸೂರು ನಿವಾಸಿ ರಾಜು, ವಿಲೀಂಗ್‌ ಮಾಡಲೆಂದೇ ದ್ವಿಚಕ್ರ ವಾಹನ ಸಿದ್ಧಪಡಿಸಿಕೊಂಡಿದ್ದಾನೆ. ಹಲಸೂರಿನಲ್ಲಿ ವೆಲ್ಡಿಂಗ್‌ ಹಾಗೂ ಗ್ಯಾಸ್‌ ಕಟರ್‌ ಕೆಲಸ ಮಾಡುವ ಈತ, ಯುಟ್ಯೂಬ್‌ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ರೊಸ್ಸಿ ಬೈಕ್‌ ರೇಸ್‌ ನೋಡಿ, ಪ್ರೇರಣೆ ಪಡೆದಿದ್ದ. ವೀಲಿಂಗ್‌ಗಾಗಿಯೇ ಹೋಂಡ ಡಿಯೋ ದ್ವಿಚಕ್ರ ವಾಹನವನ್ನು ಸ್ವತಃ ಮಾರ್ಪಾಡು ಮಾಡಿಕೊಂಡಿದ್ದಾನೆ.

ಪೆಟ್ರೋಲ್‌ ಟ್ಯಾಂಕ್‌ ಬದಲಿಗೆ 5 ಕೆ.ಜಿ.ಯ ಗ್ಯಾಸ್‌ ಸಿಲಿಂಡರ್‌, ಹಿಂಭಾಗದಲ್ಲಿ ಒಂದೇ ಶಾಕ್‌ಅಬ್ಸರ್‌, ಆಕ್ಸಲರೇಟರ್‌ ಹಾಗೂ ಕಿಕರ್‌ ಬದಲಿಗೆ ಸ್ಟಾರ್ಟ್‌ ಮಾಡಲು ನೇರವಾಗಿ ವೈರ್‌ಗಳ ಸಂಪರ್ಕ ಮಾಡಿಕೊಂಡಿದ್ದಾನೆ. ಸಾಮಾನ್ಯವಾಗಿ ಡಿಯೋ ದ್ವಿಚಕ್ರ ವಾಹನಕ್ಕೆ ಹ್ಯಾಂಡ್‌ ಬ್ರೇಕ್‌ ಇರುತ್ತದೆ. ಆದರೆ, ಈತನ ಸ್ಕೈಟರ್‌ನಲ್ಲಿ ಪಾದ ಬಳಿ ಬ್ರೇಕ್‌ ಇದೆ. ಒಟ್ಟಾರೆ ಇಡೀ ವಾಹನವನ್ನು ವೀಲಿಂಗ್‌ ಮಾಡಲು ಹಗುರವಾಗಿಸಿಕೊಂಡು ನಡು ರಸ್ತೆಯಲ್ಲಿ ವೀಲಿಂಗ್‌ ಮಾಡಿ, ಇದೀಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.

ಅನಿವಾಸಿ ಭಾರತೀಯ ಬಂಧನ: ಕೊತ್ತನೂರು, ನಾರಾಯಣಪುರ ಭಾಗದಲ್ಲಿ ಬೈಕ್‌ ವೀಲಿಂಗ್‌ ಮಾಡುತ್ತಿದ್ದ ಲಿಂಗರಾಜಪುರದ ಕರಿಯಣ್ಣ ಪಾಳ್ಯ ನಿವಾಸಿ ಆಂಗ್ಲೋ-ಇಂಡಿಯನ್‌ ಆಗಸ್ಟಿನ್‌ (23) ಎಂಬಾತನನ್ನು ಬಾಣಸವಾಡಿ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಆಗಸ್ಟಿನ್‌ ಬೈಕ್‌ ವೀಲಿಂಗ್‌ ಮಾಡಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣ ವಾಟ್ಸ್‌ಆ್ಯಪ್‌ನಲ್ಲಿ ಹರಿಬಿಟ್ಟಿದ್ದ. ಈ ಮಾಹಿತಿ ಆಧಾರದ ಮೇಲೆ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು ನಾರಾಯಣಪುರದಲ್ಲಿ ಬೈಕ್‌ ವೀಲಿಂಗ್‌ ಮಾಡುವಾಗ ಬಂಧಿಸಿದ್ದಾರೆ. ಈತನ ಈ ಕೃತ್ಯಕ್ಕೆ ಆಗಸ್ಟಿನ್‌ ಪೋಷಕರು ಸಹಕಾರ ನೀಡುತ್ತಿದ್ದಾರೆ ಎಂದು ನಗರ ಸಂಚಾರ ಪೊಲೀಸರು ಹೇಳಿದರು.

ಅಲ್ಲದೆ, ಈ ರೀತಿ ಸಾಹಸಮಯ ವೀಲಿಂಗ್‌ ಮಾಡುವುದಕ್ಕೆ ಕೆಲ ದ್ವಿಚಕ್ರ ವಾಹನಗಳ ಬಿಡಿಭಾಗಗಳ ಕಂಪನಿಗಳು ಹಾಗೂ ಹೆಲ್ಮೆಟ್‌ ತಯಾರಿಸುವ ಕಂಪನಿಯೊಂದು ಈತನಿಗೆ ಹಣ ಸಂದಾಯ ಮಾಡುತ್ತಿದೆ ಎಂಬ ಸ್ಫೋಟಕ ಹೇಳಿಕೆ ನೀಡಿದ್ದಾನೆ. ಈ ಹಿನ್ನೆಲೆಯಲ್ಲಿ ಈತನನ್ನು ಮತ್ತೂಮ್ಮೆ ವಿಚಾರಣೆಗೊಳಪಡಿಸಿ, ಸಂಬಂಧಿಸಿದ ಕಂಪನಿಗಳ ವಿರುದ್ಧವೂ ಕ್ರಮಕೈಗೊಳ್ಳಲಾಗುತ್ತದೆ ಎಂದು ಸಂಚಾರ ವಿಭಾಗದ ಪೊಲೀಸರು ತಿಳಿಸಿದ್ದಾರೆ.

ವೀಲಿಂಗ್‌ ಮಾಡೋರ ವಾಟ್ಸ್‌ಆ್ಯಪ್‌ ಗ್ರೂಪ್‌: ನಗರದಲ್ಲಿ ಬೈಕ್‌ ವೀಲಿಂಗ್‌ ಮಾಡುವ ಯುವಕರು ಹತ್ತಾರು ವಾಟ್ಸ್‌ಆ್ಯಪ್‌ ಗ್ರೂಪ್‌ಗ್ಳನ್ನು ಮಾಡಿಕೊಂಡಿದ್ದಾರೆ ಎಂಬ ಮಾಹಿತಿಯನ್ನು ಪೊಲೀಸರು ಸಂಗ್ರಹಿಸಿದ್ದಾರೆ. “ಯಮಹಾ 84 ರೈಡರ್ಸ್‌’, “ಲಯನ್‌ ವೀಲರ್ಸ್‌’, “ಬ್ಯಾಡ್‌ ರೈಡರ್ಸ್‌’, “ಪ್ಲೇ ಬಾಯ್ಸ’, “94 ಯಂಗ್‌ ಟೈಗರ್ಸ್‌’, “46 ರೈಡರ್ಸ್‌’ ಎಂಬುದೂ ಸೇರಿ ಇಂತಹದ್ದೇ ರೇಸ್‌-ರೈಡ್‌ ಹೆಸರಿನ ಹತ್ತಾರು ವಾಟ್ಸ್‌ಆ್ಯಪ್‌ ಗ್ರೂಪ್‌ಗ್ಳನ್ನು ರೈಡರ್‌ಗಳು ಮಾಡಿಕೊಂಡಿದ್ದಾರೆ. ಗ್ರೂಪ್‌ನ ಸದಸ್ಯರು ಯಾರೇ ವೀಲಿಂಗ್‌ ಮಾಡಿದರೂ, ಅದರ ವಿಡಿಯೋ ಗ್ರೂಪ್‌ಗೆ ಹಾಕುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮೈ ಮಾಮ್‌ ಸೇಸ್‌ ನೋ ವೀಲಿಂಗ್‌: ನಡು ರಸ್ತೆಯಲ್ಲೇ ಬೈಕ್‌ ವೀಲಿಂಗ್‌ ಮಾಡುತ್ತಿದ್ದ ಅಬ್ರಾಸ್‌ ಖಾನ್‌ ಎಂಬಾತನನ್ನು ಕೆ.ಜಿ.ಹಳ್ಳಿ ಸಂಚಾರ ಪೊಲೀಸರು ಬಂಧಿಸಿದ್ದಾರೆ. ಈತನಿಂದ ವಶ ಪಡಿಸಿಕೊಂಡಿರುವ ದ್ವಿಚಕ್ರ ವಾಹನದ ಹಿಂಭಾಗದಲ್ಲಿ “ಮೈ ಮಾವ್‌ ಸೇಸ್‌ ನೋ ವೀಲಿಂಗ್‌’ ಎಂದು ಬರೆಸಿಕೊಂಡೇ ವೀಲಿಂಗ್‌ ಮಾಡುತ್ತಿದ್ದ.

ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿರುವ ಅಬ್ರಾಸ್‌ ಖಾನ್‌ ತನ್ನ ದ್ವಿಚಕ್ರ ವಾಹನವನ್ನು ಮಾರ್ಪಾಡು ಮಾಡಿಕೊಂಡು ವೀಲಿಂಗ್‌ ಮಾಡುತ್ತಿದ್ದ. ಈತನ ಸಾಹಸ ದೃಶ್ಯವನ್ನು ಕಂಡ ಈತನ ಸಂಬಂಧಿ ಸದ್ದಾಂ ಎಂಬುವವರು, ನಿಮ್ಮ ತಾಯಿ ವೀಲಿಂಗ್‌ ಮಾಡದ್ದಂತೆ ಎಚ್ಚರಿಕೆ ನೀಡಿದ್ದಾರೆ. ಆದರೂ ಈ ರೀತಿ ಮಾಡುವುದು ಸರಿಯಲ್ಲ ಎಂದು ಸಾಕಷ್ಟು ಬುದ್ಧಿ ಹೇಳಿದ್ದರು. ಹೀಗಾಗಿ ಇತ್ತೀಚೆಗೆ ವೀಲಿಂಗ್‌ ಕಡಿಮೆ ಮಾಡಿದ್ದ. ಈ ವೇಳೆಯೇ ಸಂಚಾರ ಪೊಲೀಸರು ಬಂಧಿಸಿದ್ದಾರೆ.

ಟಾಪ್ ನ್ಯೂಸ್

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Crime: ಪಿಜಿಗೆ ನುಗ್ಗಿ ಯುವತಿಯ ಕತ್ತು ಕೊಯ್ದು ಕೊಲೆಗೈದ

Crime: ಪಿಜಿಗೆ ನುಗ್ಗಿ ಯುವತಿಯ ಕತ್ತು ಕೊಯ್ದು ಕೊಲೆಗೈದ

Bengaluru: ಖೋಖೋ ತೀರ್ಪು ವಿವಾದ: ಫೀಲ್ಡ್‌ನಲ್ಲೇ ಚಾಕು, ಡ್ಯಾಗರ್‌ ಹಿಡಿದು ಹೊಡೆದಾಟ!

Bengaluru: ಖೋಖೋ ತೀರ್ಪು ವಿವಾದ: ಫೀಲ್ಡ್‌ನಲ್ಲೇ ಚಾಕು, ಡ್ಯಾಗರ್‌ ಹಿಡಿದು ಹೊಡೆದಾಟ!

ಸ್ನೇಹಿತನ ಪತ್ನಿಯ ಕ್ಯಾನ್ಸರ್‌ ಚಿಕಿತ್ಸೆಗಾಗಿ ಬೈಕ್‌ ಕಳ್ಳತನಕ್ಕಿಳಿದ ಕುಚುಕು ಗೆಳೆಯ! 

ಸ್ನೇಹಿತನ ಪತ್ನಿಯ ಕ್ಯಾನ್ಸರ್‌ ಚಿಕಿತ್ಸೆಗಾಗಿ ಬೈಕ್‌ ಕಳ್ಳತನಕ್ಕಿಳಿದ ಕುಚುಕು ಗೆಳೆಯ! 

Shivakumar

Bengaluru: ಅಧಿವೇಶನದ ಬಳಿಕ ಕಾವೇರಿ ನೀರಿನ ದರ ಪರಿಷ್ಕರಣೆ: ಡಿ.ಕೆ.ಶಿವಕುಮಾರ್‌

Bengaluru: ಕೋರ್ಟ್‌ನಲ್ಲೇ ವಕೀಲೆಗೆ ಚಾಕು ಇರಿದ ಆರೋಪಿ ಸೆರೆ

Bengaluru: ಕೋರ್ಟ್‌ನಲ್ಲೇ ವಕೀಲೆಗೆ ಚಾಕು ಇರಿದ ಆರೋಪಿ ಸೆರೆ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.