ಲಸಿಕೆ ಪಡೆಯುವವರ ಸಂಖ್ಯೆ ಕುಸಿತ : ಒಮಿಕ್ರಾನ್‌ ಆತಂಕ ಕಡಿಮೆಯೇ ಕಾರಣ


Team Udayavani, Dec 16, 2021, 10:55 AM IST

vaccination

Representative Image used

ಬೆಂಗಳೂರು: ಅತ್ತ ರೂಪಾಂತರಿ ತಳಿ ಒಮಿಕ್ರಾನ್‌ ಆತಂಕ ಕಡಿಮೆಯಾಗುತ್ತಿದ್ದಂತೆ ಇತ್ತ ಲಸಿಕೆ ಪಡೆಯು ವವರ ಸಂಖ್ಯೆ “ಷೇರು ಸೂಚ್ಯಂಕ’ದಂತೆ ಸರ್ರನೇ ಕುಸಿತ ಕಂಡಿದೆ. ಇದು ಪಾಲಿಕೆ ಅಧಿಕಾರಿಗಳಿಗೆ ಮತ್ತೆ ತಲೆನೋವಾಗಿ ಪರಿಣಮಿಸಿದೆ! ಡಿಸೆಂಬರ್‌ 2ರಂದು ನಗರದಲ್ಲಿ ಎರಡು ಒಮಿಕ್ರಾನ್‌ ಪ್ರಕರಣಗಳು ಪತ್ತೆಯಾಗಿದ್ದವು.

ಇದರ ಬೆನ್ನಲ್ಲೇ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜನ ಆತಂಕಗೊಂಡು ಲಸಿಕೆಗಾಗಿ ಮುಗಿಬಿದ್ದರು. ಕೆಲವೆಡೆಯಂತೂ ಸರದಿಯಲ್ಲಿ ನಿಂತು ಪಡೆದರು. ಇದರಿಂದ ನಿತ್ಯ ನಗರದಲ್ಲಿ ಸರಾಸರಿ ಲಸಿಕೆ ಪಡೆಯು ವವರ ಸಂಖ್ಯೆ ಏಕಾಏಕಿ ದುಪ್ಪಟ್ಟಾಗಿತ್ತು.

ಅಂದರೆ 70ರಿಂದ 80 ಸಾವಿರದ ಆಸುಪಾಸು ಇತ್ತು. ಇದೇ ಹುರುಪಿನಲ್ಲಿ ನಿತ್ಯ ಒಂದು ಲಕ್ಷ ಲಸಿಕೆ ನೀಡುವ ಬೃಹತ್‌ ಗುರಿಯನ್ನೂ ಪಾಲಿಕೆ ಅಧಿಕಾರಿಗಳು ಮುಂದಿಟ್ಟು ಕೊಂಡಿದ್ದರು. ಆದರೆ, ಕಳೆದ ಕೆಲ ದಿನಗಳಿಂದ ಹಿಂದಿನ ಸ್ಥಿತಿ ಪುನರಾವರ್ತನೆಯಾಗಿದೆ. ನಗರದಲ್ಲಿ ಡಿ.12ಕ್ಕೆ ಲಸಿಕೆ ಪಡೆದವರ ಸಂಖ್ಯೆಕೇವಲ 25,961 ಇದ್ದರೆ, ಡಿ. 13ರಂದು 46,567 ಆಗಿದೆ. ಡಿ. 14ಕ್ಕೆ 39,954 ಹಾಗೂ ಡಿ. 15 (ಬುಧವಾರ)ಕ್ಕೆ 40 ಸಾವಿರ ಜನರಿಗೆ ಲಸಿಕೆ ನೀಡಲಾಗಿದೆ.

ಅಂದರೆ ಕಳೆದ ನಾಲ್ಕೈದು ದಿನಗಳಿಂದ ಸರಾಸರಿ 38 ಸಾವಿರ ಲಸಿಕೆ ನೀಡಲಾಗುತ್ತಿದ್ದು,ಡಿ. ಮೊದಲ ವಾರಕ್ಕೆಇದನ್ನುಹೋಲಿ ಸಿದರೆ ಶೇ. 40ರಷ್ಟು ಕುಸಿತ ಕಂಡಿದೆ. ಕಳೆದ ಏಳು ದಿನಗಳಲ್ಲಿ (ಡಿ. 7ರಿಂದ 14) 4.25 ಲಕ್ಷ ಲಸಿಕೆ ನೀಡ ಲಾಗಿದ್ದು, ಈ ಪೈಕಿ ಎರಡನೇ ಡೋಸ್‌ ಪಡೆದವರ ಸಂಖ್ಯೆಯೇ3.19 ಲಕ್ಷ ಆಗಿದೆ.

ನೀರಸ ಸ್ಪಂದನೆ; ಡಬಲ್‌ಡೋಸ್‌ಗೆ ಪ್ರೇರಣೆ!: ರಾಜರಾಜೇಶ್ವರಿ ನಗರದಲ್ಲಿ 8-10 ದಿನಗಳ ಹಿಂದಿನ ಅಂಕಿ-ಅಂಶಗಳನ್ನು ನೋಡಿದರೆ, ನಿತ್ಯ ಸರಾಸರಿ 15 ಸಾವಿರ ಲಸಿಕೆ ನೀಡಲಾಗುತ್ತಿತ್ತು. ಆದರೆ, ಈಗ ಲಸಿಕೆ ಪಡೆಯುವವರ ಸಂಖ್ಯೆ ನಾಲ್ಕೈದು ಸಾವಿರ ಆಗಿದೆ. ಇದೇ ಸ್ಥಿತಿ ಇತರೆ ವಲಯಗಳಲ್ಲೂ ಇದೆ. ಮತ್ತೆ ನಿತ್ಯ 80 ಸಾವಿರ ತಲುಪಲು ಇನ್ನಿಲ್ಲದ ಕಸರತ್ತು ನಡೆದಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಇನ್ನಷ್ಟು ಪರಿ ಣಾಮಕಾರಿಯಾಗಿ ಲಸಿಕಾಕರಣಕ್ಕೆ ಚಿಂತನೆ ನಡೆದಿದೆ.

ಜನರ ನೀರಸ ಸ್ಪಂದನೆಯು ಈಗಾಗಲೇ ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಮಾಡಿದಂತೆ ಸಾರ್ವಜನಿಕ ಸಾರಿ ಗೆ ಸೇವೆಯಲ್ಲಿ ಎರಡು ಡೋಸ್‌ ಲಸಿಕೆ ಕಡ್ಡಾಯಕ್ಕೆ ಕಾರಣವಾಗುವ ಸಾಧ್ಯತೆಯೂ ಇದೆ ಎಂದು ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದರು. ಮೂರ್‍ನಾಲ್ಕು ದಿನಗಳಿಂದ ಲಸಿಕೆ ಪಡೆಯುವವರ ಸಂಖ್ಯೆ ನಿತ್ಯ ಸರಾಸರಿ 35ರಿಂದ 40 ಸಾವಿರ ಆಗಿದೆ.

ಮನೆ ಮನೆಗೆ ಲಸಿಕೆ, ವಾರಕ್ಕೊಮ್ಮೆ ಅಭಿಯಾನ, ಮಾಲ್‌ ಗಳು ಮತ್ತು ವಾಣಿಜ್ಯ ಸಂಕೀರ್ಣಗಳಲ್ಲಿ ಎರಡು ಡೋಸ್‌ ಕಡ್ಡಾಯ, ಆರೋಗ್ಯ ಕಾರ್ಯಕರ್ತರಿಗೆ ಟಾ ರ್ಗೆಟ್‌ ಸೇರಿದಂತೆ ಹಲವು ಕ್ರಮಗಳ ನಂತರವೂ ಈ ನೀರಸ ಪ್ರತಿಕ್ರಿಯೆ ಕಂಡುಬರುತ್ತಿದೆ. ಹಾಗೆನೋಡಿದರೆ, ರಾಜ್ಯದಲ್ಲಿ ಗರಿಷ್ಠ ಲಸಿಕಾ ಪ್ರಕ್ರಿಯೆ ಆಗುತ್ತಿರುವುದು ರಾಜಧಾನಿ ಬೆಂಗಳೂರಿನಲ್ಲಿ ಆಗಿದ್ದರೂ, ಇಲ್ಲಿನ ಜನ ಸಂಖ್ಯೆಗೆ ಹೋಲಿಸಿದರೆ ಪ್ರಸ್ತುತ ಪ್ರಗತಿ ತೃಪ್ತಿಕರವಾಗಿಲ್ಲ ಎಂಬ ಅಸಮಾಧಾನ ಉನ್ನತ ಅಧಿಕಾರಿಗಳಿಂದ ವ್ಯಕ್ತವಾಗುತ್ತಿದೆ. ಇದು ಬಿಬಿಎಂಪಿ ನಿದ್ದೆಗೆಡಿಸಿದೆ ಎನ್ನಲಾಗಿದೆ.

ಇದನ್ನೂ ಓದಿ:- ತಂಗಿಯ ಮದುವೆ ಮಾಡಿಸಿ ಅಣ್ಣನ ಕರ್ತವ್ಯ ನಿಭಾಯಿಸಿದ ಯೋಧರು!

“ಕಳೆದ ನಾಲ್ಕು ದಿನಗಳಿಂದ ಲಸಿಕೆ ಪಡೆಯುವವರ ಸಂಖ್ಯೆ ಇಳಿಕೆಯಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸಲಾಗುವುದು. ಈ ಮಧ್ಯೆಕೆಲ ಮಾಲ್‌ಗ‌ಳು, ವಾಣಿಜ್ಯ ಸಂಕೀರ್ಣಗಳಿಗೆ ಭೇಟಿ ನೀಡುವವರಿಗೆ ಎರಡು ಡೋಸ್‌ ಕಡ್ಡಾಯಗೊಳಿ ಸಿದ್ದು, ಉಳಿದೆಡೆ ಅಂದರೆ ಮೆಟ್ರೋ, ಬಿಎಂಟಿಸಿಯಲ್ಲಿ ಅನುಷ್ಠಾನಗೊಳಿಸಿರುವ ಬಗ್ಗೆ ಕೆಲ ವಾಣಿಜ್ಯ ಸಂಕೀರ್ಣಗಳ  ಮಾಲಿಕರು ಅಸಮಾಧಾನ ಹೊರ ಹಾಕಿದ್ದಾರೆ.ಈ ಹಿನ್ನೆಲೆಯಲ್ಲಿ ಚಿಂತನೆ ನಡೆದಿದೆ’ ಎಂದು ಬಿಬಿ ಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ.ಬಾಲಸುಂದರ್‌ ಸ್ಪಷ್ಟಪಡಿಸಿದರು.

ಪಾಲಿಕೆಯನ್ನು ಪೇಚಿಗೆ ಸಿಲುಕಿಸಿದ “ಡಬಲ್‌ ಗೇಮ್‌’!

ಬೆಂಗಳೂರು: ಡಬಲ್‌ ಡೋಸ್‌ಗೆ ಡಬಲ್‌ ನಂಬರ್‌! – ನಗರದಲ್ಲಿ ಆರಂಭದಲ್ಲಿ ಕೆಲವರು ಹೀಗೆ ಎರಡು ಡೋಸ್‌ಗೆ ಎರಡು ಪ್ರತ್ಯೇಕ ಮೊಬೈಲ್‌ ನಂಬರ್‌ ನೀಡಿ, ಲಸಿಕೆ ಪಡೆದಿದ್ದಾರೆ. ಆದರೆ, ಈ ನಂಬರ್‌ಗಳ “ಡಬಲ್‌ ಗೇಮ್‌’ ಬಿಬಿಎಂಪಿಯನ್ನು ಪೇಚಿಗೆ ಸಿಲುಕಿಸಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಇದುವರೆಗೆ ಲಸಿಕೆ ಪಡೆದವರಲ್ಲಿ1.30 ಲಕ್ಷಕ್ಕೂಹೆಚ್ಚು ಜನ ಎರಡೆರಡು ಮೊಬೈಲ್‌ ನಂಬರ್‌ ನೀಡಿ, ಲಸಿಕೆ ಹಾಕಿಸಿ ಕೊಂಡಿದ್ದಾರೆ.

ಈಗಆಎರಡೂ ನಂಬರ್‌ಗೆ ಕರೆ ಮಾಡಿದಾಗ, ಬೇರೆ ನಂಬರ್‌ ಕೊಟ್ಟು ಎರಡೂ ಡೋಸ್‌ ಪಡೆದಿರುವುದಾಗಿ ಹೇಳುತ್ತಿದ್ದಾರೆ. ಆದರೆ, ಇವರನ್ನು ಯಾವ ಪಟ್ಟಿಗೆ ಸೇರಿಸಬೇಕು ಎನ್ನುವುದು ಗೊಂದಲವಾಗಿದೆ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿಡಾ.ಬಾಲಸುಂದರ್‌ತಿಳಿಸಿದರು. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಲಾಗುತ್ತಿದ್ದು, ಯಾವ ಡೋಸ್‌ನ ಪಟ್ಟಿಗೆ ಹೆಸರು ಸೇರ್ಪಡೆ ಮಾಡಬೇಕು ಎಂದು ಸಲಹೆ ಕೇಳಲಾಗಿದೆ.

ಕೇಂದ್ರದಿಂದ ಬರುವ ಸೂಚನೆ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಕೋವಿನ್‌ ಪೋರ್ಟಲ್‌ನಲ್ಲಿ ಲಸಿಕೆ ಪಡೆದಿರುವ ಬಗ್ಗೆ ಪಟ್ಟಿ ಪಡೆದು ವಿಳಾಸವಾರು ಹೊಂದಾಣಿಕೆ ಮಾಡಿ, ಲಸಿಕೆಯಿಂದ ಹೊರಗುಳಿದವರ ಪತ್ತೆ ಮಾಡಲಾಗುತ್ತಿದೆ ಎಂದರು.

“ಈಗಾಗಲೇ ತಾಂತ್ರಿಕ ಸಲಹಾ ಸಮಿತಿಯು ಸಾರ್ವಜನಿಕ ಸ್ಥಳಗಳಲ್ಲಿ ಎರಡುಡೋಸ್‌ಕಡ್ಡಾಯಗೊಳಿಸುವ ಶಿಫಾರಸು ಮಾಡಿದೆ. ಅದರಂತೆ ಪ್ರಸ್ತುತ ಮಾಲ್‌ಗ‌ಳು, ವಾಣಿಜ್ಯ ಸಂಕೀರ್ಣಗಳಲ್ಲಿ ಜಾರಿಗೊಳಿಸಲಾಗಿದೆ. ಪರಿಸ್ಥಿತಿ ನೋಡಿ ಕೊಂಡುಹಂತ-ಹಂತವಾಗಿ ವ್ಯಾಪ್ತಿ ವಿಸ್ತರಿಸಲಾಗುವುದು.” ಡಾ.ತ್ರಿಲೋಕ್‌ಚಂದ್ರ, ವಿಶೇಷ ಆಯುಕ್ತರು (ಆರೋಗ್ಯ ಮತ್ತು ಐಟಿ), ಬಿಬಿಎಂಪಿ

– ವಿಜಯಕುಮಾರ ಚಂದರಗಿ

ಟಾಪ್ ನ್ಯೂಸ್

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

rahul-Gandhi-Car

Defamation case; ಪ್ರಚಾರಕ್ಕಾಗಿ ನನ್ನ ವಿರುದ್ಧ ಮಾನಹಾನಿ ಕೇಸ್‌: ರಾಹುಲ್‌ ಆರೋಪ

1-dubey

Increase of Muslims; ಝಾರ್ಖಂಡ್‌,ಪಶ್ಚಿಮ ಬಂಗಾಲ ಕೇಂದ್ರಾಡಳಿತ ಪ್ರದೇಶವಾಗಿಸಿ: ದುಬೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Crime: ಪಿಜಿಗೆ ನುಗ್ಗಿ ಯುವತಿಯ ಕತ್ತು ಕೊಯ್ದು ಕೊಲೆಗೈದ

Crime: ಪಿಜಿಗೆ ನುಗ್ಗಿ ಯುವತಿಯ ಕತ್ತು ಕೊಯ್ದು ಕೊಲೆಗೈದ

Bengaluru: ಖೋಖೋ ತೀರ್ಪು ವಿವಾದ: ಫೀಲ್ಡ್‌ನಲ್ಲೇ ಚಾಕು, ಡ್ಯಾಗರ್‌ ಹಿಡಿದು ಹೊಡೆದಾಟ!

Bengaluru: ಖೋಖೋ ತೀರ್ಪು ವಿವಾದ: ಫೀಲ್ಡ್‌ನಲ್ಲೇ ಚಾಕು, ಡ್ಯಾಗರ್‌ ಹಿಡಿದು ಹೊಡೆದಾಟ!

ಸ್ನೇಹಿತನ ಪತ್ನಿಯ ಕ್ಯಾನ್ಸರ್‌ ಚಿಕಿತ್ಸೆಗಾಗಿ ಬೈಕ್‌ ಕಳ್ಳತನಕ್ಕಿಳಿದ ಕುಚುಕು ಗೆಳೆಯ! 

ಸ್ನೇಹಿತನ ಪತ್ನಿಯ ಕ್ಯಾನ್ಸರ್‌ ಚಿಕಿತ್ಸೆಗಾಗಿ ಬೈಕ್‌ ಕಳ್ಳತನಕ್ಕಿಳಿದ ಕುಚುಕು ಗೆಳೆಯ! 

Shivakumar

Bengaluru: ಅಧಿವೇಶನದ ಬಳಿಕ ಕಾವೇರಿ ನೀರಿನ ದರ ಪರಿಷ್ಕರಣೆ: ಡಿ.ಕೆ.ಶಿವಕುಮಾರ್‌

Bengaluru: ಕೋರ್ಟ್‌ನಲ್ಲೇ ವಕೀಲೆಗೆ ಚಾಕು ಇರಿದ ಆರೋಪಿ ಸೆರೆ

Bengaluru: ಕೋರ್ಟ್‌ನಲ್ಲೇ ವಕೀಲೆಗೆ ಚಾಕು ಇರಿದ ಆರೋಪಿ ಸೆರೆ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.