ಎರಡನೇ ದಿನ 17 ಸಾವಿರ ಮಂದಿ ಭೇಟಿ
Team Udayavani, Jan 19, 2020, 3:06 AM IST
ಬೆಂಗಳೂರು: ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನವನ್ನು ಶನಿವಾರ 17000 ಜನರು ಕಣ್ತುಂಬಿಕೊಂಡರು.
ಮೈಸೂರಿನ ರಾಮಕೃಷ್ಣ ಮಠದ ಮುಕ್ತಿದಾನಂದ ಸ್ವಾಮೀಜಿ, ನಟಿ ಅರುಂಧತಿ ನಾಗ್ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಶನಿವಾರ ಲಾಲ್‌ಬಾಗ್‌ನ ಗಾಜಿನಮನೆಗೆ ಭೇಟಿ ನೀಡಿ, ಸ್ವಾಮಿ ವಿವೇಕಾನಂದ ಕುರಿತ ಜೀವನ ಚರಿತ್ರೆ ಮತ್ತು ನಡೆದುಬಂದ ಹಾದಿ ಬಗ್ಗೆ ಹಾಕಲಾಗಿದ್ದ ಫಲಕಗಳು, ಹೂದೋಟ, ವಿವೇಕ ಕುಟೀರ, 16 ಅಡಿಯ ವಿವೇಕಾನಂದರ ಪ್ರತಿಮೆ, ಸ್ಮಾರಕ ಮಾದರಿಯನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಕ್ತಿದಾನಂದ ಸ್ವಾಮೀಜಿ, ಫಲಪುಷ್ಪ ಪ್ರದರ್ಶನವನ್ನು ತೋಟಗಾರಿಕೆ ಇಲಾಖೆ ಅಚ್ಚುಕಟ್ಟಾಗಿ ಆಯೋಜಿಸಿದೆ. ಗಾಜಿನಮನೆಯ ಸುತ್ತಲು ಅಳವಡಿ ಸಲಾಗಿರುವ ಫಲಕಗಳಲ್ಲಿ ಸ್ವಾಮಿ ವಿವೇಕಾನಂದರ ತತ್ವಗಳನ್ನು ತಿಳಿಸಲಾಗಿದೆ. ಯುವಜನತೆ ಸೇರಿದಂತೆ ಎಲ್ಲರೂ ಲಾಲ್‌ಬಾಗ್‌ಗೆ ಭೇಟಿ ನೀಡಬೇಕು ಎಂದು ಮನವಿ ಮಾಡಿದರು.
ಭಾನುವಾರ ಹೆಚ್ಚಿನ ಜನರು ಬರುವ ನಿರೀಕ್ಷೆ: ವಾರಾಂತ್ಯ, ರಜಾದಿನವಾಗಿರು ವುದರಿಂದ ಭಾನುವಾರ ಹೆಚ್ಚಿನ ಜನರು ಬರುವ ನಿರೀಕ್ಷೆ ಇದೆ. ಜನರಿಗೆ ಮೂಲ ಸೌಕರ್ಯ ಕಲ್ಪಿಸಲಾಗಿದ್ದು, ಪೊಲೀಸರ ಭದ್ರತೆ ಮತ್ತು ಸಿಸಿ ಟಿವಿ ಕ್ಯಾಮೆರಾ ಕಣ್ಗಾವಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
16 ಅಡಿ ಎತ್ತರದ ಸ್ವಾಮಿ ವಿವೇಕಾನಂದರ ಪ್ರತಿಮೆ ಆಕರ್ಷಣಿಯವಾಗಿದ್ದು, ಗಾಜಿನಮನೆಯಲ್ಲಿ ಅಧ್ಯಾತ್ಮ ಮತ್ತು ಸಂದೇಶಗಳ ಫಲಕಗಳು ರಾರಾಜಿಸುತ್ತಿವೆ. ಬೆಂಗಳೂರು ಸೇರಿ ಸುತ್ತಲ ಊರುಗಳ ಜನ ಭೇಟಿ ನೀಡಿ, ವಿವೇಕಾನಂದರ ಬಗ್ಗೆ ತಿಳಿದುಕೊಳ್ಳಬೇಕು.
-ಅರುಂಧತಿ ನಾಗ್, ನಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕುಣಿಗಲ್ : ನಾಯಿ ಜೀವ ಉಳಿಸಲು ಹೋಗಿ ಪ್ರಾಣ ಕಳೆದುಕೊಂಡ ಬೈಕ್ ಸವಾರ
ನಿವೃತ್ತ ಅಧಿಕಾರಿ ಕೊಲೆಗೈದ ಅಪರಾಧಿಗೆ ಜೀವಾವಧಿ ಶಿಕ್ಷೆ
ಚಾಮರಾಜಪೇಟೆ ಮೈದಾನದಲ್ಲಿ ಗಣೇಶ ಹಬ್ಬ ಆಚರಣೆ : ಸಿಎಂ ಜೊತೆ ಚರ್ಚಿಸಿ ತೀರ್ಮಾನ : ಸಚಿವ ಅಶೋಕ್
ಮದ್ಯಕ್ಕಾಗಿ ಬೈಕ್ ಕಳ್ಳತನ: ಇಬ್ಬರ ಬಂಧನ, ಓರ್ವ ಪರಾರಿ
ಸರ್ಕಾರಿ ಜಾಹೀರಾತಿನಲ್ಲಿ ನೆಹರೂ ಇದ್ದಾರೆ: ಕಾಂಗ್ರೆಸ್ ನಾಯಕರಿಗೆ ಸಿಎಂ ತಿರುಗೇಟು
MUST WATCH
ಹೊಸ ಸೇರ್ಪಡೆ
ಕೋಡಿ ಹೊಸಬೆಂಗ್ರೆಯಲ್ಲಿ ಕಡಲ್ಕೊರೆತ : ಮನೆ, ರಸ್ತೆ ಅಪಾಯದಲ್ಲಿ; ತಾತ್ಕಾಲಿಕ ಪರಿಹಾರ
ಎಪಿಕ್ ಕಾರ್ಡ್ಗೆ ಆಧಾರ್ ನಂಬರ್ ಲಿಂಕ್ : ಪ್ರಕ್ರಿಯೆ ಚುರುಕುಗೊಳಿಸಲು ಡಿಸಿ ಸೂಚನೆ
ಹೆಚ್ಚುತ್ತಿರುವ ಅಪರಾಧ ಪ್ರಕರಣ : ಮತ್ತೆ ವಾಹನಗಳ ಟಿಂಟ್ ಮೇಲೆ ಪೊಲೀಸ್ ಕಣ್ಣು
ಫಾಝಿಲ್ ಹತ್ಯೆ ಪ್ರಕರಣ : ಕೊಲೆ ಆರೋಪಿಗಳಿಗೆ ಆಶ್ರಯ ನೀಡಿದಾತ ಪೊಲೀಸರ ವಶಕ್ಕೆ
ವಿವೋ ವಿ25 ಪ್ರೋ ಫೋನ್ ಬಿಡುಗಡೆ; ಕಲರ್ ಚೇಂಜ್ ಮಾಡಿಕೊಳ್ಳುವ ಫೋನ್