POCSO: ಪೋಕ್ಸೋ ಆರೋಪಿಗೆ ಸಂತ್ರಸ್ತೆ ಜತೆ ಮದುವೆಗೆ ಮಧ್ಯಂತರ ಜಾಮೀನು


Team Udayavani, Jun 19, 2024, 11:48 AM IST

POCSO: ಪೋಕ್ಸೋ ಆರೋಪಿಗೆ ಸಂತ್ರಸ್ತೆ ಜತೆ ಮದುವೆಗೆ ಮಧ್ಯಂತರ ಜಾಮೀನು

ಬೆಂಗಳೂರು: ಪೋಕ್ಸೋ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯೊಬ್ಬನಿಗೆ ಸಂತ್ರಸ್ತೆಯನ್ನು ವರಿಸಲು ಹೈಕೋರ್ಟ್‌ ಷರತ್ತು ಬದ್ಧ ಮಧ್ಯಂತರ ಜಾಮೀನು ನೀಡಿದೆ. ಪೋಕ್ಸೋ ಕಾಯ್ದೆಯಡಿ ತನ್ನ ಮೇಲೆ ಮೈಸೂರಿನ ಫಾಸ್ಟ್‌ಟ್ರ್ಯಾಕ್‌ ಕೋರ್ಟ್‌ನಲ್ಲಿ ನಡೆಯುತ್ತಿರುವ ರದ್ದು ಪಡಿಸಬೇಕು ಎಂದು ಆರೋಪಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸಂತ್ರಸ್ತೆಯನ್ನು ಮದುವೆಯಾ ಗಲು ಜುಲೈ 3ರವರೆಗೆ ಆರೋಪಿಗೆ ಜಾಮೀನು ನೀಡಿದೆ.

ಸಂತ್ರಸ್ತೆಯನ್ನು ಮದುವೆಯಾಗಿ ಜುಲೈ 3ರ ಸಂಜೆ ಹಿಂದಿರುಗಬೇಕು, ಜುಲೈ 4 ರಂದು ವಿವಾಹ ನೋಂದಣಿ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಜಾಮೀನಿನ ಮೇಲೆ ಹೊರಗಿರುವ ಸಂದರ್ಭದಲ್ಲಿ ವಾರಕ್ಕೊಮ್ಮೆ ಸಂಬಂಧಪಟ್ಟ ಪೊಲೀಸ್‌ ಠಾಣೆಗೆ ಹಾಜರಾಗಬೇಕು. ಒಂದು ವೇಳೆ ಜಾಮೀನಿನ ಷರತ್ತು ಮತ್ತು ಉದ್ದೇಶವನ್ನು ಉಲ್ಲಂಘಿಸಿದರೆ ನ್ಯಾಯಾಲಯ ಗಂಭೀರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.

ಆರೋಪಿ ಮತ್ತು ಸಂತ್ರಸ್ತೆ ಪರಸ್ಪರ ಪ್ರೀತಿಸುತ್ತಿದ್ದು, 2023ರಲ್ಲಿ ಸಂತ್ರಸ್ತೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಸಂತ್ರಸ್ತೆಯ ತಾಯಿ ಪೊಲೀಸ್‌ ದೂರು ನೀಡಿದ್ದರು. ಆಗ ಸಂತ್ರಸ್ತೆಗೆ 16 ವರ್ಷ 9 ತಿಂಗಳಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಯ ಮೇಲೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣ ದಾಖಲಾದ ಮರುದಿನದಿಂದಲೇ ಆರೋಪಿ ಬಂಧನದಲ್ಲಿದ್ದಾನೆ. ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಆರೋಪಿ ಮತ್ತು ಸಂತ್ರಸ್ತೆ ಪರಸ್ಪರ ಪ್ರೀತಿಸುತ್ತಿದ್ದರು. ಪರಸ್ಪರ ಲೈಂಗಿಕ ಸಂಪರ್ಕದಿಂದ ಜನಿಸಿದ ಮಗುವಿಗೆ ಈಗ ಒಂದು ವರ್ಷವಾಗಿದೆ. ಹಾಗೆಯೇ ಈಗ ಸಂತ್ರಸ್ತೆಗೆ 18 ವರ್ಷ ತುಂಬಿದೆ. ಅವರಿಬ್ಬರು ಮದುವೆ ಯಾಗಲು ನಿರ್ಧರಿಸಿದ್ದು, ಪೋಷಕರು ಒಪ್ಪಿಕೊಂಡಿ ದ್ದಾರೆ. ಈ ರಾಜೀಸಂಧಾನವನ್ನು ಪರಿಗಣಿಸಿ ಪ್ರಕರಣವನ್ನು ಇತ್ಯರ್ಥಪಡಿಸಬೇಕು ಎಂದು ಆರೋಪಿ ಮತ್ತು ಸಂತೃಸ್ತೆಯ ಪರ ವಕೀಲರು ನ್ಯಾಯಲಯದಲ್ಲಿ ನಿವೇದಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿ ಮತ್ತು ಸಂತ್ರಸ್ತೆ ಮಗು ವಿನ ತಂದೆ- ತಾಯಿ ಎಂಬುದನ್ನು ಡಿಎನ್‌ಎ ಪರೀಕ್ಷೆ ಋಜುವಾತು ಮಾಡಿದೆ.

ಸಣ್ಣ ಮಗುವಿಗೆ ಈ ಹಿಂದೆ ಏನೆಲ್ಲಾ ಘಟಿಸಿದೆ ಎಂಬುದರ ಅರಿವಿಲ್ಲ. ಮಗು ಭವಿಷ್ಯ ದಲ್ಲಿ ಯಾವುದೇ ರೀತಿಯ ಅವಮಾನ ಎದುರಿಸಬಾ ರದು. ತಾಯಿ. ಮಗುವಿನ ಹಿತಾಸಕ್ತಿಯ ರಕ್ಷಣೆ ಆಗಬೇ ಕಿದೆ. ಹಾಗಾಗಿ ಆರೋಪಿಗೆ ಸಂತ್ರಸ್ತೆಯನ್ನು ಮದುವೆ ಯಾಗಲು ಆರೋಪಿಗೆ ಅವಕಾಶ ನೀಡುವುದು ಸೂಕ್ತ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಟಾಪ್ ನ್ಯೂಸ್

Red alert on Monday in Dakshina Kannada, Udupi district

Red Alert; ದ.ಕನ್ನಡ, ಉಡುಪಿ ಜಿಲ್ಲೆಯಲ್ಲಿ ಜು.15 ರಂದು ರೆಡ್‌ ಅಲರ್ಟ್‌

All Time XI ತಂಡ ಪ್ರಕಟಿಸಿದ ಯುವಿ; ವಿಶ್ವಕಪ್ ಗೆದ್ದ ಭಾರತದ ನಾಯಕನಿಗೆ ಸ್ಥಾನವಿಲ್ಲ!

All Time XI ತಂಡ ಪ್ರಕಟಿಸಿದ ಯುವಿ; ವಿಶ್ವಕಪ್ ಗೆದ್ದ ಭಾರತದ ನಾಯಕನಿಗೆ ಸ್ಥಾನವಿಲ್ಲ!

10

ಬದ್ಧರಾಗಿರುವುದೆಂದರೆ ಸುಲಭವಲ್ಲ, ಬುದ್ಧನಾಗಿರುವಷ್ಟೇ ಕಠಿಣ… 

Trekking Stories; ಕುಮಾರಪರ್ವತ ಚಾರಣ ಕೈಗೊಂಡಾಗ….

Trekking Stories; ಕುಮಾರಪರ್ವತ ಚಾರಣ ಕೈಗೊಂಡಾಗ….

9-hearing-screening

Hearing Screening: ಹಿರಿಯ ವಯಸ್ಕರಲ್ಲಿ ಶ್ರವಣ ತಪಾಸಣೆಯ ಅಗತ್ಯ

Jagannath Ratna Bhandara Treasury of Puri opened after 46 years

Ratna Bhandar: 46 ವರ್ಷಗಳ ಬಳಿಕ ತೆರೆದ ಪುರಿಯ ಜಗನ್ನಾಥ ರತ್ನ ಭಂಡಾರ ಖಜಾನೆ

OTT release: ಓಟಿಟಿಗೆ ಬರಲಿದೆ ಪೃಥ್ವಿರಾಜ್‌ ಸುಕುಮಾರನ್‌ ʼಆಡುಜೀವಿತಂʼ; ಎಲ್ಲಿ, ಯಾವಾಗ?

OTT release: ಓಟಿಟಿಗೆ ಬರಲಿದೆ ಪೃಥ್ವಿರಾಜ್‌ ಸುಕುಮಾರನ್‌ ʼಆಡುಜೀವಿತಂʼ; ಎಲ್ಲಿ, ಯಾವಾಗ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2

Dengue Fever: ಡೆಂಘೀ ನಿರ್ಲಕ್ಷ್ಯ ಸಲ್ಲ, ಎಚ್ಚರ ತಪ್ಪಿದ್ರೆ ಅಪಾಯ

Head constable: ಕೇಸ್‌ನಿಂದ ಪಾರು ಮಾಡಲು ಲಂಚ ಪಡೆದ ಹೆಡ್‌ ಕಾನ್‌ಸ್ಟೇಬಲ್‌ ಅಮಾನತು

Head constable: ಕೇಸ್‌ನಿಂದ ಪಾರು ಮಾಡಲು ಲಂಚ ಪಡೆದ ಹೆಡ್‌ ಕಾನ್‌ಸ್ಟೇಬಲ್‌ ಅಮಾನತು

Suside

Cancerಗೆ ಪತಿ ಬಲಿ: ಪತ್ನಿ, ಪುತ್ರ ಆತ್ಮಹತ್ಯೆ; ಕೊಳೆತ ಸ್ಥಿತಿಯಲ್ಲಿ ಪತ್ತೆ

5-bng-crime

Bengaluru: ಅತ್ತೆ ಮನೆಯಲ್ಲೇ ಚಿನ್ನ ಕದ್ದ ಅಳಿಯ!

Valmiki Corporation Case: Ex-Minister Nagendra detained by E.D

Valmiki Corporation Case: ಮಾಜಿ ಸಚಿವ ನಾಗೇಂದ್ರ ಇ.ಡಿ ವಶಕ್ಕೆ

MUST WATCH

udayavani youtube

ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾ*ಳಿ; ಗುಂಡಿನ ದಾಳಿ ಆಗಿದ್ದಾದ್ರು ಹೇಗೆ ?

udayavani youtube

ಕಾಡಾನೆ ದಾಳಿಯಿಂದ ಜಸ್ಟ್ ಮಿಸ್ |ಭಯಾನಕ ಕಾಡಾನೆಯಿಂದ ಜಸ್ಟ್ ಮಿಸ್ ವಿಡಿಯೋ ಸೆರೆ

udayavani youtube

ಅನಂತ್- ರಾಧಿಕಾ ಮದುವೆ ಮಂಟಪದಲ್ಲಿ ಕಾಶಿ ಬನಾರಸ್ ಘಾಟ್ ಗಳ ಮರುಸೃಷ್ಟಿ

udayavani youtube

ತೆಂಕನಿಡಿಯೂರು ಗ್ರಾಮ ಪಂಚಾಯತ್ ನಲ್ಲಿ ಸದಸ್ಯರ ಜಟಾಪ

udayavani youtube

ಮಾತು ನಿಲ್ಲಿಸಿದ ಅಪರ್ಣಾ | ಗೆಳತಿಯರೊಂದಿಗೆ ಕಳೆದ ಭಾವನಾತ್ಮಕ ಕ್ಷಣಗಳು

ಹೊಸ ಸೇರ್ಪಡೆ

Red alert on Monday in Dakshina Kannada, Udupi district

Red Alert; ದ.ಕನ್ನಡ, ಉಡುಪಿ ಜಿಲ್ಲೆಯಲ್ಲಿ ಜು.15 ರಂದು ರೆಡ್‌ ಅಲರ್ಟ್‌

All Time XI ತಂಡ ಪ್ರಕಟಿಸಿದ ಯುವಿ; ವಿಶ್ವಕಪ್ ಗೆದ್ದ ಭಾರತದ ನಾಯಕನಿಗೆ ಸ್ಥಾನವಿಲ್ಲ!

All Time XI ತಂಡ ಪ್ರಕಟಿಸಿದ ಯುವಿ; ವಿಶ್ವಕಪ್ ಗೆದ್ದ ಭಾರತದ ನಾಯಕನಿಗೆ ಸ್ಥಾನವಿಲ್ಲ!

10-cow

ರಸ್ತೆಯಲ್ಲಿ ಓಡಾಡುತ್ತಿದ್ದ ಬಿಡಾಡಿ ದನಗಳನ್ನು ಹಿಡಿದು ಗೋಶಾಲೆಗೆ ಸೇರಿಸಿದ ಪೊಲೀಸರು

Davanagere; Indefinite struggle demanding fulfillment of 19 demands of Gram Panchayat employees

CITU; ಗ್ರಾ.ಪಂ ನೌಕರರ 19 ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಹೋರಾಟ

10

ಬದ್ಧರಾಗಿರುವುದೆಂದರೆ ಸುಲಭವಲ್ಲ, ಬುದ್ಧನಾಗಿರುವಷ್ಟೇ ಕಠಿಣ… 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.