ಜ್ಯೋತಿಷಿ ಕೇಳಿ ಕದ್ದವನು ಜೈಲಿಗೆ!

Team Udayavani, Oct 12, 2017, 1:22 PM IST

prison3-640×360.jpg

ಬೆಂಗಳೂರು: ನಕಲಿ ಜ್ಯೋತಿಷಿಯ ಸಲಹೆ ಮೇರೆಗೆ, ತಾನು ಕೆಲಸ ಮಾಡುತ್ತಿದ್ದ ಕಂಪೆನಿಯಲ್ಲೇ ಲಕ್ಷಾಂತರ ರೂ. ಮೌಲ್ಯದ ಎಲೆಕ್ಟ್ರಾನಿಕ್‌ ವಸ್ತುಗಳನ್ನು ಕಳವು ಮಾಡಿ ಮಾರಾಟ ಮಾಡಿದ 5 ಆರೋಪಿ ಗಳನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ.

ಕೆ.ಎಸ್‌.ಗಾರ್ಡ್‌ನ್‌ ನಿವಾಸಿ ದಾಮೋದರ್‌ (42), ಈತನ ಭಾಮೈದ ಹಾಗೂ ಗುಟ್ಟೇಪಾಳ್ಯದ ರಾಮ್‌ದಾಸ್‌ (38), ಸಹದ್ಯೋಗಿ, ಕಂಪೆನಿಯ ವಾಹನ ಚಾಲಕ ಜಯನಗರ ನಿವಾಸಿ ಸರವಣ (40), ಸೀನು (34) ಹಾಗೂ ನಕಲಿ ಜ್ಯೋತಿಷಿ ಕೃಷ್ಣರಾಜು (58) ಬಂಧಿತರು. ಮತ್ತೂಬ್ಬ ಆರೋಪಿ ರಾಜೇಂದ್ರನಿಗಾಗಿ ಹುಡುಕಾಟ ನಡೆಯುತ್ತಿದೆ. ಈ ಮೂಲಕ 49.93 ಲಕ್ಷ ರೂ. ಮೌಲ್ಯದ 671 ಮಾನಿಟರ್‌ ಮತ್ತು 10.49 ಲಕ್ಷ ನಗದು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

ಹೊಸೂರು ಮುಖ್ಯರಸ್ತೆಯಲ್ಲಿರುವ ಸೂಪರ್‌ ಟ್ರಾನ್‌ ಎಲೆಕ್ಟ್ರಾನಿಕ್ಸ್‌ ಪ್ರ„ವಟ್‌ ಲಿಮಿಟೆಡ್‌ನ‌ಲ್ಲಿ ಕಳೆದ ಏಳು ವರ್ಷಗಳಿಂದ ಇಲ್ಲಿನ ಸ್ಟೋರ್‌ ಉಸ್ತು ವಾರಿಯಾಗಿ ಕೆಲಸ ಮಾಡುವ ದಾಮೋದರ್‌, ತನ್ನ ಕಷ್ಟಗಳ ಪರಿಹಾರಕ್ಕಾಗಿ ನಕಲಿ ಜ್ಯೋತಿಷಿ ಕೃಷ್ಣರಾಜ್‌ ಬಳಿ ಹೋಗಿದ್ದಾನೆ. ಈತ ಬಹುಬೇಗ ಹಣ ಮಾಡ ಬೇಕಾದರೆ ಕಳ್ಳತನ ಮಾಡು, ಅದು ಯಾರಿಗೂ ತಿಳಿಯುವುದಿಲ್ಲ. ಬಂದ ಹಣದಲ್ಲಿ ನನಗೂ ಸ್ವಲ್ಪ ಕೊಡು ಎಂದು ಭವಿಷ್ಯವಾಣಿ ನುಡಿಯುತ್ತಿದೆ ಎಂದು ಹೇಳಿದ್ದಾನೆ. ಇದನ್ನು ನಂಬಿದ ದಾಮೋದರ್‌ ಸಹದ್ಯೋಗಿ ಮತ್ತು ಸಂಬಂಧಿ ಜತೆ ಸೇರಿ ಕೃತ್ಯವೆಸಗಿ ದ್ದಾನೆ ಎಂದು ಹೆಚ್ಚುವರಿ ಪೊಲೀಸ್‌ ಆಯುಕ್ತರಾದ ಮಾಲಿನಿ ಕೃಷ್ಣಮೂರ್ತಿ ತಿಳಿಸಿದರು. 

ಜ್ಯೋತಿಷಿ ಮಾತು ಕೇಳಿ ಕೆಟ್ಟ: ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದ ದಾಮೋದರ್‌ ಸ್ಥಳೀಯರೊಬ್ಬರ ಸಲಹೆ ಮೇರೆಗೆ ಆಗಾಗ ಮಲ್ಲಿಗೆ ಆಸ್ಪತ್ರೆ ಬಳಿ ಇರುವ ಅಶ್ವತ್ಥ ಕಟ್ಟೆಯ ಬಳಿ ಜ್ಯೋತಿಷಿ ಹೇಳುತ್ತಿದ್ದ ಕೃಷ್ಣರಾಜ್‌ ಬಳಿ ಹೋಗಿದ್ದು, ತನ್ನ ಸಮಸ್ಯೆಗೆ ಪರಿಹಾರ ನೀಡುವಂತೆ ಮನವಿ ಮಾಡಿಕೊಂಡಿದ್ದಾನೆ. ಈತನ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದ ಕೃಷ್ಣರಾಜು, ತನ್ನ ಬಳಿ ಬರುತ್ತಿದ್ದ ರಾಜೇಂದ್ರ ಎಂಬಾತನನ್ನು ದಾಮೋದರ್‌ ಗೆ ಪರಿಚಯಿಸಿಕೊಂಡಿದ್ದಾನೆ. ಆಗ ಜ್ಯೋತಿಷಿ ಕೃಷ್ಣರಾಜು, “ಸದ್ಯ ಆಷಾಡ ಮಾಸ ಇದ್ದು, ಇದು ಕಳೆದ ಬಳಿಕ ಶ್ರಾವಣದಲ್ಲಿ ಒಳ್ಳೆ ಭವಿಷ್ಯವಿದೆ. ನಾನು ಹೇಳಿದ್ದಂತೆ ಕೇಳಿದರೆ ನಿನ್ನ ಕಷ್ಟಗಳನ್ನು ಪರಿಹಾರ ಮಾಡುತ್ತೇನೆ ಎಂದು ಸುಳ್ಳು ಹೇಳಿದ್ದಾನೆ. ಇದನ್ನು ನಂಬಿದ ದಾಮೋದರ್‌ ಆಗಸ್ಟ್‌ನಲ್ಲಿ ಮತ್ತೆ ಜ್ಯೋತಿಷಿ ಬಳಿ ಹೋಗಿದ್ದಾನೆ.

ಎಸ್‌.ಪಿ.ರಸ್ತೆಯಲ್ಲಿ ಮಾರಾಟ: ನಕಲಿ ಜ್ಯೋತಿಷಿ ಕೃಷ್ಣರಾಜು, ದಾಮೋದರ್‌ ಮತ್ತು ರಾಜೇಂದ್ರ ಮೂರು ಸೇರಿ ತಮಗೆ ಪರಿಚಯವಿದ್ದ ಕಂಪ್ಯೂಟರ್‌ ಮತತು ಮಾನಿಟರ್‌ಗಳನ್ನು ಮಾರಾಟ ಮಾಡುವ ಅರವಿಂದ್‌ ಎಂಬಾತನನ್ನು ಸಂಪರ್ಕಿಸಿದ್ದಾರೆ.

ನಂತರ ಈತನ ಮೂಲಕ ಎಸ್‌.ಪಿ.ರಸ್ತೆಯಲ್ಲಿ ವಿವಿಧ ಕಂಪ್ಯೂಟರ್‌ ಮಾರಾಟಗಾರರಿಗೆ ಮಾನಿಟರ್‌ಗಳನ್ನು ಮಾರಾಟ ಮಾಡಿದ್ದಾರೆ. ಆರೋಪಿಗಳ ಬಂಧನದ ಬಳಿಕ 12 ಮಂದಿ ಕಂಪ್ಯೂಟರ್‌ ಮಾರಾಟಗಾರರಿಂದ 671 ಮಾನಿಟರ್‌ಗಳು ಮತ್ತು ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು. ನಿಂಬೆಹಣ್ಣು ಕೊಟ್ಟಕಳ್ಳ ಸ್ವಾಮೀಜಿ ಈ ನಡುವೆ ರಾಜೇಂದ್ರ ಮತ್ತು ಕೃಷ್ಣರಾಜು ಇಬ್ಬರು ಸೇರಿ ದಾಮೋದರ್‌ಗೆ ನಿನ್ನ ಕಂಪೆನಿಗೆ ಬರುವ ಮಾನಿಟರ್‌ಗಳನ್ನು ಕಳವು ಮಾಡಿ ಮಾರಿದರೆ ಹಣಗಳಿಸಬಹುದು ಎಂದು ಎರಡು ನಿಂಬೆಹಣ್ಣು ಮಂತ್ರಿಸಿ ಕೊಟ್ಟಿದ್ದಾನೆ. ಬಳಿಕ ತನ್ನ ಭಾಮೈದ ಹಾಗೂ ಇತರೆ ಸಹದ್ಯೋಗಿಗಳಿಗೆ ಜ್ಯೋತಿಷಿಯಿಂದ ಮತ್ತೂಮ್ಮೆ ಭವಿಷ್ಯ ಹೇಳಿಸಿದ್ದಾನೆ.

ಅದರಂತೆ ಎಲ್ಲ ಆರೋಪಿಗಳು ಆ.3 ಮತ್ತು 11 ರಂದು ತಮಿಳುನಾಡಿನಿಂದ ಬಂದ ಒಂದು ಸಾವಿರ ಮಾನಿಟರ್‌ಗಳನ್ನು ದಾಮೋದರ್‌ ಸೂಚನೆಯಂತೆ ವಾಹನ ಚಾಲಕ ಶರವಣ ರಾಜೇಂದ್ರನ ಮನೆಗೆ ಕಳುಹಿಸಿದನು. ಬಳಿಕ ದಾಮೋದರ್‌ ಸೂಪರ್‌ ಟ್ರಾನ್ಸ್‌ ಎಲೆಕ್ಟ್ರಾನಿಕ್‌ ಕಂಪೆನಿಗಳಿಗೆ 1000 ಮಾನಿಟರ್‌ಗಳು ಬಂದಿವೆ ಎಂದು ವೋಚರ್‌ಗೆ ಸಹಿ ಮಾಡಿ ಬ್ಲೂ ಡಾಟ್‌ ವೇರ್‌ ಹೌಸ್‌ಗೆ ವೋಚರ್‌ ಅನ್ನು ಕಳುಹಿಸಿಕೊಟ್ಟಿದ್ದ ಎಂದು ಅವರು ತಿಳಿಸಿದರು.

ಟಾಪ್ ನ್ಯೂಸ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

11-srrest

Bengaluru: ಅತಿಕ್ರಮಿಸಿ ಏರ್‌ಪೋರ್ಟ್‌ನಲ್ಲಿ ವಿಡಿಯೋ: ಯುಟ್ಯೂಬರ್‌ ಬಂಧನ

10-bengaluru’

Bengaluru: ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ವೀಕ್ಷಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್‌ ಸೆರೆ

9-bng

Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ

ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್

ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.