

Team Udayavani, May 2, 2019, 2:59 AM IST
ಬೆಂಗಳೂರು: ರಾಜ್ಯದ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಾವಕಾಶ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಕನ್ನಡಿಗರ ವಿಜಯ ಪಡೆ ಸಂಘಟನೆ ಕಾರ್ಯಕರ್ತರು ಬುಧವಾರ ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಸಂಘಟನೆ ಸಂಸ್ಥಾಪಕ ಅಧ್ಯಕ್ಷೆ ಡಾ.ಪದ್ಮ ಪ್ರಕಾಶ್, ರಾಜ್ಯದಲ್ಲಿರುವ ಸಾವಿರಾರು ಖಾಸಗಿ ಕಂಪನಿಗಳು ಹೊರರಾಜ್ಯಗಳ ಉದ್ಯೋಗಿಗಳಿಗೆ ಆದ್ಯತೆ ನೀಡಲಾಗುತ್ತಿದೆ. ಆದರೆ, ಕಂಪನಿಗಳು ರಾಜ್ಯದ ಸೌಲಭ್ಯ ಪಡೆದು ಹೊರರಾಜ್ಯದ ಉದ್ಯೋಗಿಗಳಿಗೆ ಮಣೆ ಹಾಕುತ್ತಿದ್ದು, ಸ್ಥಳೀಯರು ಕೆಳದರ್ಜೆಯ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ಇದು ಶೋಚನಿಯ. ಹೀಗಾಗಿ ಕಂಪನಿಗಳ ಉನ್ನತ ಹುದ್ದೆಗಳು ಸೇರಿ ಶೇ.80ರಷ್ಟು ಉದ್ಯೋವನನು ಸ್ಥಳೀಯ ಕನ್ನಡಿಗರಿಗೆ ನೀಡಬೇಕು. ಕಾರ್ಮಿಕ ದಿನಾಚರಣೆ ದಿನವೂ ರಜೆ ನೀಡದ ಕಂಪನಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮತ್ತೂಂದೆಡೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳುತ್ತಿದ್ದಾರೆ. ಸಾಲ ಮನ್ನಾ ಮಾಡುವ ಬದಲು ರೈತರ ವಿದ್ಯಾವಂತ ಮಕ್ಕಳಿಗೆ ಖಾಸಗಿ ಕಂಪನಿಗಳಲ್ಲಿ ಉದ್ಯೋಗಾವಕಾಶ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದರು. ಸಂಘಟನೆಯ ಪದಾಧಿಕಾರಿಗಳಾದ ಆರ್.ಸುರೇಶ್, ಕೆ.ಸುರೇಶ್, ಡಾ.ಕರುಣಾಕರನ್ ಇತರರು ಇದ್ದರು.
Ad
Saroja Devi Funeral: ಹುಟ್ಟೂರಿನ ಮಣ್ಣಿನಲ್ಲಿ ‘ಅಭಿನಯ ಸರಸ್ವತಿ’ ಬಿ.ಸರೋಜಾದೇವಿ ಲೀನ
ಕಲಾವಿದನಿಗೆ ನಿಂದನೆ: ಕನ್ನಡ, ಸಂಸ್ಕೃತಿ ಇಲಾಖೆ ನಿರ್ದೇಶಕಿ ವಿರುದ್ಧ ಪ್ರಕರಣ
Arrested: ಮಸಾಜ್ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ: ಮಹಿಳೆ ಸೆರೆ, ನಾಲ್ವರ ರಕ್ಷಣೆ
Bengaluru: ದಾರಿ ಬಿಡದಿದ್ದಕ್ಕೆ ಸವಾರನ ಮೇಲೆ ಹಲ್ಲೆ
Tragic: ಪುತ್ರಿಯ ಆತ್ಮಹತ್ಯೆ ಕಂಡು ತಾಯಿಯೂ ಆತ್ಮಹ*ತ್ಯೆ
You seem to have an Ad Blocker on.
To continue reading, please turn it off or whitelist Udayavani.