
ಬೆಂಗಳೂರಿನಲ್ಲಿ ಭೂಕಂಪನ ಅನುಭವ: ಯಾರೂ ಭಯಪಡಬೇಡಿ ಎಂದ ಸಚಿವ ಆರ್.ಅಶೋಕ್
Team Udayavani, Nov 26, 2021, 4:49 PM IST

ಬೆಂಗಳೂರು: ನಗರದ ಹಲವೆಡೆ ಶುಕ್ರವಾರ ಬೆಳಗ್ಗೆ ಭೂಮಿ ಕಂಪಿಸಿದ ಅನುಭವವಾಗಿರುವುದ್ದು, ಈ ಬಗ್ಗೆ ಯಾರೂ ಭಯ ಪಡುವ ಅಗತ್ಯವಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಾದ ಹೆಮ್ಮಿಗೆಪುರ, ಕಗ್ಗಲೀಪುರ, ಕೆಂಗೇರಿ, ಆರ್. ಆರ್. ನಗರ ಮುಂತಾದ ಕಡೆಗಳಲ್ಲಿ ಇಂದು ಶಬ್ದ ಹಾಗೂ ಸಣ್ಣ ಪ್ರಮಾಣದ ಕಂಪನ ಕಂಡುಬಂದಿದೆ.
ಇದನ್ನೂ ಓದಿ:ಮಗ ಕಾಲೇಜಿಗೆ ಹೋದ ವೇಳೆ ಸೊಸೆ ಮೇಲೆ ಅತ್ಯಾಚಾರ ಎಸಗಿದ ಮಾವ: ಕೊಲೆ ಬೆದರಿಕೆ
ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ತಜ್ಞರಿಂದ ವರದಿ ಪಡೆದಿದ್ದು, ಇದು ಭೂಕಂಪದ ಯಾವುದೇ ಮುನ್ಸೂಚನೆ ಅಲ್ಲ ಎಂದು ತಿಳಿಸಿದ್ದಾರೆ. ನಾನು ಸಹ ಅಧಿಕಾರಿಗಳು ಹಾಗೂ ತಜ್ಞರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಯಾರೂ ಆತಂಕಕ್ಕೆ ಒಳಗಾಗಬೇಡಿ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ
ಟಾಪ್ ನ್ಯೂಸ್
