1,344 ರೌಡಿಶೀಟರ್‌ ಮನೆಗಳ ಮೇಲೆ ದಾಳಿ

Team Udayavani, Jun 9, 2023, 3:23 PM IST

1,344 ರೌಡಿಶೀಟರ್‌ ಮನೆಗಳ ಮೇಲೆ ದಾಳಿ

ಬೆಂಗಳೂರು: ನೂತನ ಪೊಲೀಸ್‌ ಆಯಕ್ತ ಬಿ.ದಯಾನಂದ ಅವರ ಸೂಚನೆ ಮೇರೆಗೆ ಗುರುವಾರ ನಗರದ ಎಂಟು ವಿಭಾಗದ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸರು ಏಕಕಾಲದಲ್ಲಿ ಸುಮಾರು 1344 ರೌಡಿಶೀಟರ್‌ ಗಳ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ.

ಈ ವೇಳೆ 9.1 ಕೆ.ಜಿ. ಗಾಂಜಾ, ಮಾರಕಾಸ್ತ್ರಗಳು, 16 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಪಶ್ಚಿಮ ವಿಭಾಗದಲ್ಲಿ 177, ದಕ್ಷಿಣ ವಿಭಾಗದಲ್ಲಿ 175, ಉತ್ತರ ವಿಭಾಗದಲ್ಲಿ 254, ಕೇಂದ್ರ ವಿಭಾಗ 90, ಪೂರ್ವ 207, ಆಗ್ನೇಯ ವಿಭಾಗ 160, ಈಶಾನ್ಯ ವಿಭಾಗದಲ್ಲಿ 156, ವೈಟ್‌ ಫೀಲ್ಡ್ ವಿಭಾಗದಲ್ಲಿ 125 ರೌಡಿಗಳು ಸೇರಿ ಒಟ್ಟು 1344 ರೌಡಿಗಳ ಮನೆಗಳ ಮೇಲೆ ಮುಂಜಾನೆ 5 ಗಂಟೆಯಿಂದ ಬೆಳಗ್ಗೆ 10 ಗಂಟೆವರೆಗೂ ದಾಳಿ ನಡೆಸಲಾಗಿದೆ. ‌

ಈ ವೇಳೆ ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಆರೋಪದ ಮೇಲೆ ಎರಡು ಕಡೆ ಶಸ್ತ್ರಾಸ್ತ್ರ ಕಾಯ್ದೆ ಅಡಿ ಪ್ರಕರಣ ಹಾಗೂ ಎನ್‌ ಡಿಪಿಎಸ್‌ ಕಾಯ್ದೆ ಅಡಿ 3 ಪ್ರಕರಣಗಳು ದಾಖಲಿಸಲಾಗಿದೆ. ಅಲ್ಲದೆ, ಇದೇ ವೇಳೆ‌ ವಿಚಾರಣಾ ಪ್ರಕರಣಗಳಲ್ಲಿ ನ್ಯಾಯಾಲಯ ಗಳಿಂದ ಹೊರಡಿಸಲಾಗಿದ್ದ ರೌಡಿಗಳ ವಿರುದ್ಧದ ಜಾಮೀನು ರಹಿತ ವಾರಂಟ್‌ ಜಾರಿಯಾಗಿದ್ದರೂ ತಲೆಮರೆಸಿಕೊಂಡಿದ್ದ 46 ರೌಡಿಗಳನ್ನು ವಶಕ್ಕೆ ಪಡೆದು ನ್ಯಾಯಾಲಯಗಳಿಗೆ ಹಾಜರು ಪಡಿಸಲಾಗಿದೆ ಎಂದು ಪೊಲೀಸರು ಹೇಳಿದರು. ‌

ಹಿನ್ನೆಲೆ ಸಂಗ್ರಹ: ರೌಡಿಗಳನ್ನು ಠಾಣೆಗಳಿಗೆ ಕರೆದೊಯ್ದು ಪ್ರಸ್ತುತ ಮಾಡುತ್ತಿರುವ ಕೆಲಸ, ಮೊಬೈಲ್ ನಂಬರ್‌ ಸೇರಿ ಇತರೆ ಮಾಹಿತಿ ಗಳನ್ನು ಪಡೆದುಕೊಂಡು, ಯಾವುದೇ ರೀತಿಯ ರೌಡಿ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ, ಕಾನೂನು ಬಾಹಿರ ಕೆಲಸಗಳಲ್ಲಿ ಹಾಗೂ ಅಪರಾಧ ಕೃತ್ಯಗಳಲ್ಲಿ ತೊಡಗಿಕೊಳ್ಳದಂತೆ ಎಚ್ಚರಿಕೆ ನೀಡಿ, ಮುಚ್ಚಳಿಕೆ ಪತ್ರ ಬರೆಸಿಕೊಂಡು ಕಳುಹಿಸಲಾಗಿದೆ. ಇತ್ತೀಚೆಗೆ ನೂತನ ಪೊಲೀಸ್‌ ಆಯುಕ್ತ ಬಿ. ದಯಾನಂದ, ಅಪರಾಧ ಹಿನ್ನೆಲೆಯುಳ್ಳವರು ಹಾಗೂ ರೌಡಿಗಳ ಮೇಲೆ ನಿಗಾ ಇರಿಸುವಂತೆ ಮತ್ತು ಅಪರಾಧ ಪ್ರಕರಣಗಳಲ್ಲಿ ಜಾಮೀನು ರಹಿತ ವಾರೆಂಟ್‌ ಇರುವವರನ್ನು ಪತ್ತೆ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ರೌಡಿಶೀಟರ್‌ ಗಳ ಮೇಲೆ ದಾಳಿ ನಡೆಸಲಾಗಿದೆ.

ಮಾರಕಾಸ್ತ್ರ, ಗಾಂಜಾ ಪತ್ತೆ : ದಾಳಿ ವೇಳೆ ಕಾಟನ್‌ಪೇಟೆ ರೌಡಿ ಕುಮರೇಶ್‌ ಅಲಿಯಾಸ್‌ ಮಾವತ್ತಿ ಬಳಿ ಕಳ್ಳತನದ ಬೈಕ್‌ ಮತ್ತು ಮಾರಕಾಸ್ತ್ರಗಳು ಸಿಕ್ಕಿದೆ. ಬಸವೇಶ್ವರ ನಗರದ ಸಣ್ಣೆಗೊರವನಹಳ್ಳಿಯ ರೌಡಿ ಸಂದೀಪ್‌ ಅಲಿಯಾಸ್‌ ಧೋಬಿ ಬಳಿ 500 ಗ್ರಾಂ ಗಾಂಜಾ ಪತ್ತೆಯಾಗಿದೆ. ಮಾಗಡಿ ರಸ್ತೆ ಪೊಲೀಸ್‌ ಠಾಣಾ ವ್ಯಾಪ್ತಿಯ ದರ್ಶನ್‌ ಅಲಿಯಾಸ್‌ ಮುರಡಿ ಬಂಧಿಸಲಾಗಿದೆ. ಈತನ ವಿರುದ್ಧ ನ್ಯಾಯಾಲಯ ದಿಂದ ವಾರೆಂಟ್‌ ಜಾರಿಯಾಗಿತ್ತು. ಕಾಮಾಕ್ಷಿ ಪಾಳ್ಯ ಠಾಣಾ ವ್ಯಾಪ್ತಿಯ ವಿಷ್ಣು ಅಲಿಯಾಸ್‌ ಕೆಂದಾ, ಲಕ್ಷ್ಮಣ್‌ ಅಲಿಯಾಸ್‌ ಲಕ್ಕು ವಿರುದ್ದವು ವಾರೆಂಟ್‌ ಜಾರಿಯಾಗಿತ್ತು. ಇನ್ನು ಉತ್ತರ ವಿಭಾಗದಲ್ಲಿ 257 ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಈ ಪೈಕಿ 183 ಮಂದಿ ಮನೆಯಲ್ಲಿದ್ದು, ಇತರೆ 74 ರೌಡಿಗಳು ಇರಲಿಲ್ಲ. ಎರಡು ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಟಾಪ್ ನ್ಯೂಸ್

7-puttur

Puttur: ನೀರಿನಲ್ಲಿ ಮುಳುಗಿ ಪುತ್ತೂರಿನ ಯುವಕ ಕೇರಳದಲ್ಲಿ ಸಾವು

army

Kupwara ; ಸೇನೆ, ಪೊಲೀಸರ ಕಾರ್ಯಾಚರಣೆ: ಒಳನುಸುಳುತ್ತಿದ್ದ ಉಗ್ರರಿಬ್ಬರ ಹತ್ಯೆ

Viral Video: ಆಡಿ ಕಾರಿನಲ್ಲಿ ಬಂದು ರಸ್ತೆ ಬದಿ ತರಕಾರಿ ಮಾರುವ ಕೇರಳದ ರೈತ…

Viral Video: ಆಡಿ ಕಾರಿನಲ್ಲಿ ಬಂದು ರಸ್ತೆ ಬದಿ ತರಕಾರಿ ಮಾರುವ ಕೇರಳದ ರೈತ…

World Cup 23; ಭಾರತಕ್ಕೆ ಬರಲಿದ್ದಾರೆ ಅಫ್ಘಾನ್ ನ ಮಿಸ್ಟ್ರಿ ಹುಡುಗಿ; ಯಾರೀ ವಾಜ್ಮಾ ಅಯೂಬಿ

World Cup 23; ಭಾರತಕ್ಕೆ ಬರಲಿದ್ದಾರೆ ಅಫ್ಘಾನ್ ನ ಮಿಸ್ಟ್ರಿ ಹುಡುಗಿ; ಯಾರೀ ವಾಜ್ಮಾ ಅಯೂಬಿ

5-vitla

Vitla: ಬೈಕ್ ಸೇತುವೆಗೆ ಢಿಕ್ಕಿ; 40 ಅಡಿ ಆಳದ ನದಿಗೆ ಬಿದ್ದ ಸವಾರ

Udupi; 34 ಲಕ್ಷ ರೂ ದುರ್ಬಳಕೆ: ಬೆಳ್ಳೆ ಪಿಡಿಒ ಸೇವೆಯಿಂದ ವಜಾ

Udupi; 34 ಲಕ್ಷ ರೂ ದುರ್ಬಳಕೆ: ಬೆಳ್ಳೆ ಪಿಡಿಒ ಸೇವೆಯಿಂದ ವಜಾ

ಯತ್ನಾಳ

Vijayapura; ಡಿಸಿಎಂ ಸ್ಥಾನಕ್ಕೆ ಶಾಮನೂರು ಬೇಡಿಕೆ ಸೂಕ್ತ: ಶಾಸಕ ಯತ್ನಾಳ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-bangalore

Theft: ಶೂ ಬಾಕ್‌ನಲ್ಲಿದ್ದ ಮನೆ ಕೀ ಕದ್ದು ಆಭರಣ ದೋಚಿದ್ದ ಮಹಿಳೆ ಸೆರೆ

9-bangalore

Crime: ವ್ಯಕ್ತಿ ಹತ್ಯೆಗೈದಿದ್ದ ನಾಲ್ವರು ಆರೋಪಿಗಳ ಬಂಧನ

8-bangalore

Crime: ಹಣಕಾಸಿನ ವಿಚಾರಕ್ಕೆ ಸಹೋದ್ಯೋಗಿ ಕೊಲೆ ಮಾಡಿದ್ದ ಆರೋಪಿ ಬಂಧನ

7-bangalore

Bangalore: ಹೋಟೆಲ್‌ ಧ್ವಂಸ ಮಾಡಿದವರ ಸೆರೆ

6-bangalore

Bangalore: ಟ್ರಾಫಿಕ್‌ ಜಾಮ್‌ಗೆ ಸಿಲಿಕಾನ್‌ ಸಿಟಿ ಹೈರಾಣ!

MUST WATCH

udayavani youtube

ಕುದುಕುಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

udayavani youtube

ಕ್ಷಮೆ ಕೇಳಿದ ಶಿವಣ್ಣ

udayavani youtube

ಅಕ್ವಾಟಿಕ್ಸ್ ಗ್ಯಾಲರಿ ನೋಡಿ ಕಣ್ತುಂಬಿಕೊಂಡ ಪ್ರಧಾನಿ ಮೋದಿ

udayavani youtube

ಬೆಂಗಳೂರಿನಲ್ಲಿ ನಡೆಯಿತು ತುಳುನಾಡ ಸಂಸ್ಕೃತಿ ಬಿಂಬಿಸುವ ಅಷ್ಟಮಿದ ಐಸಿರ

udayavani youtube

ಕಾಡೊಳಗೆ ಕಳೆದು ಹೋಗಿದ್ದ ಹುಡುಗ 8 ದಿನದಲ್ಲಿ ಪ್ರತ್ಯಕ್ಷ

ಹೊಸ ಸೇರ್ಪಡೆ

7-puttur

Puttur: ನೀರಿನಲ್ಲಿ ಮುಳುಗಿ ಪುತ್ತೂರಿನ ಯುವಕ ಕೇರಳದಲ್ಲಿ ಸಾವು

army

Kupwara ; ಸೇನೆ, ಪೊಲೀಸರ ಕಾರ್ಯಾಚರಣೆ: ಒಳನುಸುಳುತ್ತಿದ್ದ ಉಗ್ರರಿಬ್ಬರ ಹತ್ಯೆ

Viral Video: ಆಡಿ ಕಾರಿನಲ್ಲಿ ಬಂದು ರಸ್ತೆ ಬದಿ ತರಕಾರಿ ಮಾರುವ ಕೇರಳದ ರೈತ…

Viral Video: ಆಡಿ ಕಾರಿನಲ್ಲಿ ಬಂದು ರಸ್ತೆ ಬದಿ ತರಕಾರಿ ಮಾರುವ ಕೇರಳದ ರೈತ…

Sandalwood; ಮನಮುಟ್ಟಿದ ಖುಷಿಯಲ್ಲಿ ‘ಆರಾರಿರಾರೋ’

Sandalwood; ಮನಮುಟ್ಟಿದ ಖುಷಿಯಲ್ಲಿ ‘ಆರಾರಿರಾರೋ’

World Cup 23; ಭಾರತಕ್ಕೆ ಬರಲಿದ್ದಾರೆ ಅಫ್ಘಾನ್ ನ ಮಿಸ್ಟ್ರಿ ಹುಡುಗಿ; ಯಾರೀ ವಾಜ್ಮಾ ಅಯೂಬಿ

World Cup 23; ಭಾರತಕ್ಕೆ ಬರಲಿದ್ದಾರೆ ಅಫ್ಘಾನ್ ನ ಮಿಸ್ಟ್ರಿ ಹುಡುಗಿ; ಯಾರೀ ವಾಜ್ಮಾ ಅಯೂಬಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.