
ವಾಕ್ ಸ್ಥಾನದಲ್ಲಿ ಕುಜ ಕಾಣಿಸಿದಾಗ ಮಾಧ್ಯಮಗಳ ಕೆಂಗಣ್ಣಿಗೆ ಗುರಿಯಾಗುತ್ತೇವೆ : ರಮೇಶ್ ಕುಮಾರ್
Team Udayavani, Mar 30, 2022, 8:12 PM IST

ಬೆಂಗಳೂರು : ” ಮಾನ್ಯ ಅಧ್ಯಕ್ಷರೆ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ನನಗೆ ವಾಕ್ ಸ್ಥಾನದಲ್ಲಿ ಕುಜ ದೋಷ ಕಾಣಿಸಿಕೊಂಡಿತಂತೆ. ಹೀಗಾಗಿ ನಾನು ಮಾಧ್ಯಮಗಳ ಕೆಂಗಣ್ಣಿಗೆ ಗುರಿಯಾದೆ. ಈಗ ಸಿದ್ದರಾಮಯ್ಯ ಅವರಿಗೆ ಕುಜದೋಷ ಕಾಡುತ್ತಿರಬೇಕು” ಎಂದು ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಮಾಧ್ಯಮ ಹಾಗೂ ರಾಜಕಾರಣಿಗಳ ಸಂಬಂಧ ವನ್ನು ಬಿಡಿಸಿಟ್ಟಿದ್ದಾರೆ.
ಬೆಳಗಾವಿಯಲ್ಲಿ ನಾನು ನೀಡಿದ ಹೇಳಿಕೆ ಬಳಿಕ ಆದ ಬೆಳವಣಿಗೆ ಎಲ್ಲರಿಗೂ ಗೊತ್ತು. ಇದಾದ ಬಳಿಕ ನಾನು ನಿಮ್ಮ ಊರಿನ ಸಮೀಪದ ಗೋಕರ್ಣಕ್ಕೆ ಹೋಗಿ ಜ್ಯೋತಿಷಿಯೊಬ್ಬರನ್ನು ಭೇಟಿಯಾಗಿ ಚರ್ಚೆ ನಡೆಸಿದಾಗ ಅವರು ” ನಿಮಗೆ ವಾಕ್ ಸ್ಥಾನದಲ್ಲಿ ಕುಜದೋಷ ಕಾಣಿಸಿಕೊಂಡಿದೆ ಎಂದರು” ಎಂದು ಮಾಧ್ಯಮಗಳ ಕಾರ್ಯ ವೈಖರಿಯನ್ನು ಪರೋಕ್ಷವಾಗಿ ಟೀಕಿಸಿದರು.
ಚುನಾವಣಾ ವ್ಯವಸ್ಥೆ ಸುಧಾರಣೆಯಾಗಬೇಕಿದ್ದರೆ ಪ್ರಜಾಪ್ರಭುತ್ವದ ನಾಲ್ಕು ಅಂಗಗಳೂ ಸರಿಯಾಗಿರಬೇಕು. ಆದರೆ ಕೆಲವೊಮ್ಮೆ ಮಾಧ್ಯಮಗಳು ಬೆತ್ತಲೆ ಓಡಾಡುವವರನ್ನು ಬಿಟ್ಟು ಕೌಪೀನದಲ್ಲಿ ಮಾನಮುಚ್ಚಿಕೊಂಡವರ ಬಟ್ಟೆಯನ್ನೇ ಕಿತ್ತು ಬಿಡುತ್ತವೆ. ಅಲ್ಪಸ್ವಲ್ಪ ಮರ್ಯಾದೆ ಉಳಿಸಿಕೊಂಡವರ ಬಗ್ಗೆ ಕರುಣೆ ಇಟ್ಟುಕೊಳ್ಳಿ ಎಂದು ಮನವಿ ಮಾಡಿದರು.
ಇದನ್ನೂ ಓದಿ : ಜನರಿಗೆ ಇವಿಎಂ ಗಳ ಮೇಲೆ ಭರವಸೆ ಕಡಿಮೆಯಾಗುತ್ತಿದೆ : ಸಿದ್ದರಾಮಯ್ಯ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚುನಾವಣಾ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

ಅಭ್ಯರ್ಥಿಗಳು ತಮ್ಮ ಅಪರಾಧದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಬೇಕು; ಪವನ್ ಕುಮಾರ್

ಮತ ಎಣಿಕೆಗೆ ಎರಡು ದಿನ ಬೇಕೆ ?! ;ಏನು ಕಾಮೆಂಟ್ಸ್ ಗಳು?! ; ಕಿಡಿ ಕಾರಿದ ಉಪೇಂದ್ರ

ಸೇಡಂ: ತೆಲಂಗಾಣ ಮೂಲದ ಕಾರಿನಲ್ಲಿ ದಾಖಲೆ ಇಲ್ಲದ 35 ಲಕ್ಷ ಹಣ ಪತ್ತೆ

ಕಲಬುರಗಿ: ಶೇ. 50 ರಷ್ಟು ಮತಗಟ್ಟೆಗಳಿಗೆ ಸಿಸಿ ಕ್ಯಾಮರಾ: ಡಿಸಿ ಗುರುಕರ್
MUST WATCH
ಹೊಸ ಸೇರ್ಪಡೆ

ದೆಹಲಿ-ಎನ್‌ಸಿಆರ್‌ನಲ್ಲಿ ಗುಡುಗು ಸಹಿತ ಮಳೆ; 9 ವಿಮಾನಗಳು ಬೇರೆಡೆಗೆ

ಜಿಲ್ಲೆಯಲ್ಲಿ 1,239 ರೌಡಿಶೀಟರ್ ಗಳು: ವಿಜಯಪುರ ಡಿಸಿ ಡಾ.ವಿ.ಬಿ.ದಾನಮ್ಮನವರ

ಚುನಾವಣಾ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

ಅಭ್ಯರ್ಥಿಗಳು ಅಪರಾಧದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಬೇಕು: ಬಳ್ಳಾರಿ ಡಿಸಿ ಪವನ್ ಕುಮಾರ್

ಅಭ್ಯರ್ಥಿಗಳು ತಮ್ಮ ಅಪರಾಧದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಬೇಕು; ಪವನ್ ಕುಮಾರ್