ಹಾಲು ಉತ್ಪಾದಕರ ನೆರವಿಗೆ ಧಾವಿಸಿ
Team Udayavani, Jun 5, 2021, 2:40 PM IST
ಬೆಂಗಳೂರು: ರಾಜ್ಯದ ಹಾಲು ಉತ್ಪಾದಕ ರೈತರ ನೆರವಿಗೆಸರ್ಕಾರ ಧಾವಿಸಬೇಕು ಎಂದು ರೈತ ಮುಖಂಡಬಡಗಲಪುರ ನಾಗೇಂದ್ರ ಒತ್ತಾಯಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು ಮುಂಗಾರು ಹಿನ್ನೆಲೆಯಲ್ಲಿಹಸಿವಿಗೆ ಮೇವು ಅಧಿಕವಾಗಿ ದೊರೆಯುತ್ತಿದ್ದು ಹಾಲಿನಹೆಚ್ಚಳ ಆಗಿದೆ. ಆ ಹಿನ್ನಲೆಯಲ್ಲಿ ಸರ್ಕಾರ ಶಾಲಾಮಕ್ಕಳಿಗೆ ಹಾಲು ಪುಡಿಯನ್ನು ಮನೆಗೆ ತಲುಪಿಸುವ ಕೆಲಸಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಈ ಹಿಂದೆ ಶಾಲಾ ಮಕ್ಕಳಿಗೆ ಸರ್ಕಾರ ಕೆನೆಭರಿತ ಹಾಲು ಪೂರೈಕೆಮಾಡುತ್ತಿತ್ತು. ಆದರೆ ಕೋವಿಡ್ ಹಿನ್ನಲೆಯಲ್ಲಿ ಶಾಲೆಗಳುನಡೆಯುತ್ತಿಲ್ಲ. ಹಾಗಾಗಿ ಹಾಲು ಪೂರೈಕೆ ಅನ್ನು ಕೂಡಸರ್ಕಾರ ಸ್ಥಗಿತಗೊಳಿಸಿದ್ದು ರೈತರಿಗೂ ತೊಂದರೆ ಆಗಿದೆಎಂದು ಹೇಳಿದ್ದಾರೆ.ಸರ್ಕಾರ ಕೂಡಲೇ ಕಷ್ಟದಲ್ಲಿರುವ ರೈತರ ನೆರವಿಗೆ ಬರಬೇಕು.ಶಾಲಾಮಕ್ಕಳಿಗೆ ಮನೆ ಮನೆಗೆ ಪ್ಯಾಕೆಟ್‌ಮೂಲಕ ಹಾಲಿನ ಪೂರೈಕೆ ಮಾಡಬೇಕು.ಈ ಸಂಬಂಧಈಗಾಗಲೇ ಕೆಎಂಎಫ್ ಕೂಡ ಪ್ರಸ್ತಾವನೆಯನ್ನುಸಲ್ಲಿಸಿದೆ ಎಂದು ತಿಳಿಸಿದ್ದಾರೆ.
ಬೆಂಬಲ ಬೆಲೆ ನೀಡಿ: ಸಂಕಷ್ಟದಲ್ಲಿ ಇರುವ ರೈತರ ಹಿತಕಾಯಲು ಸರ್ಕಾರ ಬಡ್ಡಿ ರಹಿತ ಸಾಲ ಯೋಜನೆಜಾರಿಗೆ ತರಬೇಕು.ಕಫ್ìಯೂ ಹಿನ್ನಲೆಯಲ್ಲಿಬೆಳೆನಷ್ಟವಾಗಿದ್ದು ರೈತರಿಗೆ ಬೆಳೆನಷ್ಟ ಪರಿಹಾರನೀಡಬೇಕು ಎಂದು ಆಗ್ರಹಿಸಿದ್ದಾರೆ.