ಸಂತೋಷ್ ಲಾಡ್ಗೆ ಸಾವಿರ ರೂ.ದಂಡ
Team Udayavani, Oct 2, 2018, 6:15 AM IST
ಬೆಂಗಳೂರು: ಲೋಕಾಯುಕ್ತಕ್ಕೆ ಸಲ್ಲಿಸಿದ್ದ ಆಸ್ತಿ ಮತ್ತು ಋಣಭಾರ ಪ್ರಮಾಣದಲ್ಲಿ ಸುಳ್ಳು ಮಾಹಿತಿ ನೀಡಿದ್ದ ಆರೋಪ ಪ್ರಕರಣದಲ್ಲಿ ಮಾಜಿ ಸಚಿವ ಸಂತೋಷ್ ಲಾಡ್ಗೆ ಒಂದು ಸಾವಿರ ರೂ. ದಂಡ ವಿಧಿಸಿ ಜನಪ್ರತಿನಿಧಿಗಳ ಸಂಸದರು ಮತ್ತು ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಶೇಷ ನ್ಯಾಯಾಲಯ ಆದೇಶ ನೀಡಿದೆ.
ಈ ಹಿಂದೆ ಸಂಡೂರು ಕ್ಷೇತ್ರದ ಶಾಸಕರಾಗಿದ್ದ ಸಂತೋಷ್ ಲಾಡ್ 2006-07ನೇ ಸಾಲಿನ ಆಸ್ತಿ ಮತ್ತು ಋಣಭಾರ ಪ್ರಮಾಣಪತ್ರ ಸಲ್ಲಿಸುವ ವೇಳೆ ಲೋಕಾಯುಕ್ತಕ್ಕೆ ಸುಳ್ಳು ಮಾಹಿತಿ ನೀಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಲಯ, ಸಂತೋಷ್ ಲಾಡ್ಗೆ ಸಾವಿರ ರೂ. ದಂಡ, ಅದನ್ನು ಪಾವತಿಸಲು ವಿಫಲವಾದರೆ 15 ದಿನಗಳ ಸಾಧಾರಣ ಕಾರಾಗೃಹ ಶಿಕ್ಷೆ ವಿಧಿಸಿ ಸೆ.28ರಂದು ಆದೇಶ ನೀಡಿದೆ.