ಶಿವಾಜಿ ಇತಿಹಾಸ ವಿಕೃತಗೊಳಿಸುವ ಹುನ್ನಾರ

Team Udayavani, Jun 19, 2019, 3:04 AM IST

ಬೆಂಗಳೂರು: ಶಿವಾಜಿ ಮಹಾರಾಜರ ಇತಿಹಾಸವನ್ನು ವಿಕೃತಗೊಳಿಸುವ ಉದ್ದೇಶದಿಂದಲೇ ಅವರನ್ನು “ಮರಾಠ ಕಿಂಗ್‌’ ಎಂದು ಬಿಂಬಿಸುವ ಪ್ರವೃತ್ತಿ ದೇಶದಲ್ಲಿ ನಡೆದಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಕಳವಳ ವ್ಯಕ್ತಪಡಿಸಿದರು.

ನಗರದ ಬಿ.ಪಿ.ವಾಡಿಯಾ ರಸ್ತೆಯ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಸಮೃದ್ಧ ಸಾಹಿತ್ಯ ಸಂಸ್ಥೆ ಹೊರ ತಂದಿರುವ “ಶಿವಾಜಿ ಮತ್ತು ಸುರಾಜ್ಯ’ ಅನುವಾದಿ ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.

ಶಿವಾಜಿ ಮಹಾರಾಜರು ಎಂದು ಕೂಡ ತಾನು ಮರಾಠ ರಾಜ, ಕೊಂಕಣ ರಾಜ ಅಥವಾ ಮಹಾರಾಷ್ಟ್ರದ ರಾಜ ಎಂದು ಹೇಳಿಕೊಂಡಿಲ್ಲ. ಹಿಂದೂ ಸ್ವರಾಜ್ಯ, ಹಿಂದೂ ದೇಶದ ರಾಜ್ಯ ಎಂದು ಹೇಳಿಕೊಂಡಿದ್ದರು. ಆದರೆ, ಶಿವಾಜಿಯನ್ನು ಮರಾಠ ಕಿಂಗ್‌ ಎಂದು ಬಿಂಬಿಸುವ ಮೂಲಕ ನಮ್ಮ ಇತಿಹಾಸವನ್ನು ವಿಕೃತ, ಸಂಕುಚಿತಗೊಳಿಸುವ, ನಮ್ಮ ಮಹಾಪುರುಷರ ಸಾಧನೆಯನ್ನು ಕುಗ್ಗಿಸುವ ಪ್ರಯತ್ನವನ್ನು ಕೆಲವು ಇತಿಹಾಸಕಾರರು ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಷ್ಟ್ರೀಯತೆಯ ಪ್ರಭಾವನ್ನು ಕುಗ್ಗಿಸುವ ದುಷ್ಟ ಪ್ರಯತ್ನದಿಂದಾಗಿ ಶಿವಾಜಿ ಮಹಾರಾಜರ ಬಗ್ಗೆಯೂ ತಪ್ಪು ಕಲ್ಪನೆಯನ್ನು ಮೂಡಿಸಿದ್ದಾರೆ. ಆದರೆ, ವಿವೇಕಾನಂದರು, ಲೋಕಮಾನ್ಯ ತಿಲಕರು, ರವೀಂದ್ರನಾಥ ಠ್ಯಾಗೂರ್‌ ಮೊದಲಾದವರು ಶಿವಾಜಿಯ ಉತ್ಸವ ಮಾಡಿದ್ದಾರೆ. ತಮಿಳುನಾಡಿನಲ್ಲಿ ಶಿವಾಜಿ ಚಲನಚಿತ್ರದಿಂದ ನಟನ ಹೆಸರೇ ಶಿವಾಜಿ ಗಣೇಶನ್‌ ಎಂದಾಯಿತು. ಹೀಗೆ ಈ ದೇಶದಲ್ಲಿ ಶಿವಾಜಿ ಮಾಹಾರಾಜರ ಬಗ್ಗೆ ಅಪಾರವಾದ ಪ್ರೀತಿ, ಗೌರವ, ಸಮ್ಮಾನ ಇಂದಿಗೂ ಇದೆ ಎಂದರು.

ದೇಶದ ಅನೇಕ ಮಹಾಪುರುಷರಂತೆ ಶಿವಾಜಿಯ ಬಗ್ಗೆಯೂ ದಂತಕಥೆಗಳು ಹುಟ್ಟಿಕೊಂಡಿವೆ. ಅದರಲ್ಲಿ ಕೆಲವು ಸತ್ಯ, ಇನ್ನು ಕೆಲವು ಮಿಥ್ಯ ಇರಬಹುದು. ಓರ್ವ ಆದರ್ಶ, ಲೋಕೋನ್ಮುಖ, ಧರ್ಮ ರಕ್ಷಕ, ರಾಷ್ಟ್ರ ನಿರ್ಮಾಣಕ, ಆಡಳಿತ ಸುಧಾರಕನ ಆಡಳಿತ ವ್ಯವಸ್ಥೆ ಹೇಗಿತ್ತು ಮತ್ತು ಅದು ಇಂದಿನ ಸಮಾಜಕ್ಕೆ ಹೇಗೆ ಮಾರ್ಗದರ್ಶನವಾಗಲಿದೆ ಎಂಬುದನ್ನು ಈ ಕೃತಿಯಲ್ಲಿ ತಿಳಿಸಲಾಗಿದೆ ಎಂದು ಹೇಳಿದರು.

ಶಿವಾಜಿಯು ಯುದ್ಧ ಮಾಡಿದ್ದಕ್ಕಿಂತ ಹೆಚ್ಚಾಗಿ ಸ್ವರಾಜ್ಯಕ್ಕೆ ಬೇಕಾದ ಸೈನಿಕರನ್ನು ಆಡಳಿತ ವ್ಯವಸ್ಥೆ ಮೂಲಕ ರೂಪಿಸಿದ್ದ. ಸಮಾಜಕ್ಕೆ ಬೇಕಾದ ಜನರನ್ನು ನಿರ್ಮಿಸಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಅನೇಕ ಕ್ರಮ ತೆಗೆದುಕೊಂಡಿದ್ದರು. ಅತ್ಯಾಚಾರಿಗಳಿಗೂ ಶಿಕ್ಷೆ ನೀಡಿದ್ದರು. ಸೈನಿಕರನ್ನು ಸೇವಕರಂತೆ ಕಾಣದೆ, ಸ್ನೇಹಿತರಂತೆ ನೋಡಿಕೊಳ್ಳುತ್ತಿದ್ದರು. ಹಿಂದು ಧರ್ಮಕ್ಕೆ ಮತಾಂತರಗೊಂಡವರೊಂದಿಗೆ ಸ್ನೇಹ, ಸಂಬಂಧವನ್ನು ಬೆಳೆಸಿದ್ದರು. ಹೀಗಾಗಿ ಅನೇಕ ರೀತಿಯಲ್ಲಿ ಶಿವಾಜಿ ಮಹಾರಾಜರು ದೇಶಕ್ಕೆ ಪ್ರೇರಣೆ ಎಂದು ಬಣ್ಣಿಸಿದರು.

ಸಂಸ್ಕೃತ ವಿದ್ವಾಂಸರಾದ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್‌ ಮಾತನಾಡಿ, ಶಿವಾಜಿಯ ಆಡಳಿತದ ಹಲವು ಮುಖಗಳನ್ನು ಈ ಕೃತಿಯಲ್ಲಿ ಅತ್ಯಂತ ಸುಂದರವಾಗಿ ತಿಳಿಸಿಕೊಡಲಾಗಿದೆ. ಶಿವಾಜಿಯ ಆಡಳಿತ ವ್ಯವಸ್ಥೆ, ಆಧುನಿಕ ಭಾರತದ ರಾಜ್ಯ ಮತ್ತು ರಾಷ್ಟ್ರದ ಪರಿಕಲ್ಪನೆ ಹಾಗೂ ರಾಜನೀತಿಗೆ ಬೇಕಿರುವ ಹಲವು ಅಂಶಗಳು ಇದರಲ್ಲಿದೆ. ದೇಶಕ್ಕೇ ಮಾದರಿಯಾಗಬಲ್ಲ ಜಲನೀತಿ, ವಿದೇಶಾಂಗ ನೀತಿ, ಮಂತ್ರಿ ಪರಿಷತ್‌ ಹಾಗೂ ನಾಯಕತ್ವ ಗುಣವನ್ನು ಶಿವಾಜಿ ನೀಡಿದ್ದರು.

ಶಿವಾಜಿ ಹಾಕಿಕೊಟ್ಟ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಆಡಳಿತ ವ್ಯವಸ್ಥೆ ಹಾಗೂ ಪರಿಸರ ಅಧ್ಯಯನ ಇಂದಿನ ಭಾರತಕ್ಕೆ ಹೆಚ್ಚು ಉಪಯುಕ್ತವಾಗಲಿದೆ ಎಂದು ವಿವರಿಸಿದರು. ಕೃತಿಯ ಅನುವಾದಕರಾದ ಮಹಾಬಲ ಸೀತಾಳಬಾವಿ ಹಾಗೂ ಸಮೃದ್ಧಿ ಪ್ರಕಾಶನದ ಹರ್ಷ ಮೊದಲಾದವರು ಇದ್ದರು. ನಿವೃತ್ತ ಕೊಲೊನಿಯಲ್‌ ವಿಜಯ್‌ ಕುಮಾರ್‌ ಅವರನ್ನು ಸನ್ಮಾನಿಸಲಾಯಿತು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಹೊಸದಿಲ್ಲಿ: ಐಎನ್‌ಎಕ್ಸ್‌ ಪ್ರಕರಣದಲ್ಲಿ ಮಾಜಿ ಸಚಿವ ಪಿ. ಚಿದಂಬರಂಗೆ ಜಾಮೀನು ಕೊಡಲೇಬಾರದು ಎಂದು ಸಿಬಿಐ ದಿಲ್ಲಿ ಹೈಕೋರ್ಟ್‌ ನಲ್ಲಿ ಒತ್ತಾಯಿಸಿದೆ. ಇದೊಂದು...

  • ಉಡುಪಿ: ಶ್ರೀ ಕೃಷ್ಣಾಷ್ಣಮಿ ಪ್ರಯುಕ್ತ "ಉದಯವಾಣಿ'ಯು ನಗರದ ಗೀತಾಂಜಲಿ ಸಿಲ್ಕ್ಸ್ ನ ಸಹಯೋಗದಲ್ಲಿ ಏರ್ಪಡಿಸಿದ್ದ ಯಶೋದಾ ಕೃಷ್ಣ ಫೋಟೋ ಸ್ಪರ್ಧೆಯ ಬಹುಮಾನ ವಿತರಣೆ...

  • ಹೊಸದಿಲ್ಲಿ: ವಿಚಾರಣೆಗೆ ಬಾಕಿ ಇರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಇದೇ ಮೊದಲ ಬಾರಿಗೆ ಜಾಮೀನು ಮತ್ತು ನಿರೀಕ್ಷಣಾ ಜಾಮೀನು ಅರ್ಜಿಗಳ...

  • ಕೋಲ್ಕತಾ: ಪಶ್ಚಿಮ ಬಂಗಾಲದ ಜಾಧವ್‌ಪುರ ವಿವಿಯಲ್ಲಿ ವಿದ್ಯಾರ್ಥಿಗಳು ಕೇಂದ್ರ ಸಚಿವ ಬಾಬುಲ್‌ ಸುಪ್ರಿಯೋ ಮೇಲೆ ಹಲ್ಲೆ ನಡೆಸಿದ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ....

  • ಹ್ಯೂಸ್ಟನ್‌: ಅಮೆರಿಕದ ಹ್ಯೂಸ್ಟನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯ ಬೃಹತ್‌ ಕಾರ್ಯಕ್ರಮ ಹೌಡಿ ಮೋದಿ ತಯಾರಿಗೆ ಭಾರಿ ಮಳೆ ಅಡ್ಡಿ ಯಾಗಿದೆ. ಈ ಭಾಗದಲ್ಲಿ ಬಿರು ಗಾಳಿ...