ಬಗೆಹರಿಯದ ನೆಟ್‌ ಸಮಸ್ಯೆ: ಪಾತಾಳಕ್ಕಿಳಿದ ಇಂಟರ್‌ನೆಟ್‌ ವೇಗ!


Team Udayavani, Dec 10, 2020, 12:34 PM IST

ಬಗೆಹರಿಯದ ನೆಟ್‌ ಸಮಸ್ಯೆ: ಪಾತಾಳಕ್ಕಿಳಿದ ಇಂಟರ್‌ನೆಟ್‌ ವೇಗ!

ಬೆಂಗಳೂರು: ಕೋವಿಡ್ ಬಂದ ನಂತರದಲ್ಲಿ ಇಂಟರ್‌ನೆಟ್‌ ಬೇಡಿಕೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಆದರೆ, ನಿರೀಕ್ಷಿತ ವೇಗದಲ್ಲಿ ಸೌಲಭ್ಯ ಸಿಗುತ್ತಿಲ್ಲ. ಟೆಲಿಕಾಂ ಕಂಪನಿಗಳು 10 ಎಂಬಿಪಿಎಸ್‌ ವೇಗವಿದೆ ಎಂದು ಹೇಳುತ್ತಿವೆ. ಆದರೆ ವಾಸ್ತವವಾಗಿ ಸಿಗುತ್ತಿದೆಯೇ ಎಂದರೆ “ಬಳಕೆದಾರರ ಪ್ರಕಾರ ಇಲ್ಲ’. ಸದ್ಯ ಸಿಲಿಕಾನ್‌ ಸಿಟಿಯಲ್ಲಿ ಹಳ್ಳಿಗಳ ವೇಗ ದಲ್ಲಿಯೂ ಇಂಟರ್‌ನೆಟ್‌ ಸಿಗುತ್ತಿಲ್ಲ. ಇದರಿಂದ ವರ್ಕ್‌ಫ್ರಂ ಹೋಮ್‌ನಲ್ಲಿರುವವರಿಗೆ ಒತ್ತಡ ಹೆಚ್ಚಾಗುತ್ತಿದೆ.

ಕೊರೊನಾ ಹಿನ್ನೆಲೆ ಬಹುತೇಕ ಐಟಿ ಕಂಪನಿಗಳು ಸೇರಿದಂತೆ ಅರ್ಧಕ್ಕರ್ಧ ಖಾಸಗಿ ವಲಯ ವರ್ಕ್‌ ಫ್ರಂ ಹೋಂ ಮೊರೆ ಹೋಗಿದೆ. ಮತ್ತೂಂದೆಡೆ ಆನ್‌ಲೈನ್‌ ತರಗತಿಗಳು ನಡೆಯುತ್ತಿವೆ. ಇದರಿಂದ ನಗರದ ವಸತಿ ಪ್ರದೇಶಗಳಲ್ಲಿ ಇಂಟರ್‌ನೆಟ್‌ ಬಳಕೆದಾರರ ಪ್ರಮಾಣ ಗಣನೀಯ ಏರಿಕೆಯಾಗಿದೆ.

ಬ್ರಾಡ್‌ ಬ್ಯಾಂಡ್‌ ಸಂಪರ್ಕಗಳು ಕೂಡಾ ಕಳೆದ ಏಳು ತಿಂಗಳಲ್ಲಿ ದುಪ್ಪಟ್ಟಾಗಿವೆ. ಈ ರೀತಿ ಒಂದು ಇಂಟರ್‌ನೆಟ್‌ ಟವರ್‌ ವ್ಯಾಪ್ತಿಯಲ್ಲಿ ಬಳಕೆದಾರರು ಹೆಚ್ಚಳವಾದ ಪರಿಣಾಮ ಇಂಟರ್‌ನೆಟ್‌ ವೇಗದ ಮೇಲೆ ಪರಿಣಾಮ ಬೀರಿದೆ. ಮಲ್ಲೇಶ್ವರ, ವಿಜಯ ನಗರ, ರಾಜಾಜಿ ನಗರದಂತಹ ಪ್ರಮುಖ ಬಡಾವಣೆಗಳಲ್ಲಿಯೆ ವೇಗ ತಗ್ಗಿದೆ.

ಎಂಬಿಪಿಎಸ್‌ನಿಂದ ಕೆಬಿಪಿಎಸ್‌ಗೆ ಇಳಿಕೆ

ಕೆಲವೆಡೆ ಮೊಬೈಲ್‌ ಇಂಟರ್‌ನೆಟ್‌ ಮೆಗಾಬೈಟ್‌ ಪರ್‌ ಸೆಕೆಂಡ್‌ನಿಂದ (ಎಂಬಿಪಿಎಸ್‌) ಕಿಲೋ ಬೈಟ್‌ ಪರ್‌ ಸೆಕೆಂಡ್‌ಗೆ (ಕೆಬಿಪಿಎಸ್‌) ಇಳಿಕೆಯಾಗಿದೆ. ಕಂಪನಿಗಳು 10 ಎಂಬಿಪಿಎಸ್‌ ವೇಗದಲ್ಲಿ ಮೊಬೈಲ್‌ ಇಂಟರ್‌ನೆಟ್‌ ನೀಡುತ್ತೇವೆ ಎಂದು ಭರವಸೆ ನೀಡುತ್ತವೆ. ಆದರೆ, ಐಟಿ ಕಂಪನಿಗಳು ನೀಡುವ ಮಾಹಿತಿ ಪ್ರಕಾರ ನಗರದಲ್ಲಿ ಬಹುತೇಕ ಎಲ್ಲಾ ಕಂಪನಿಗಳ ಮೊಬೈಲ್‌ ಇಂಟರ್‌ನೆಟ್‌ ಗರಿಷ್ಠ 2 ಎಂಬಿಪಿಎಸ್‌ ಇದೆ. ಇದರಿಂದ ಡೌನ್‌ ಲೋಡ್‌, ಅಪ್‌ಲೋಡ್‌ ಸಾಕಷ್ಟು ತಡವಾಗುತ್ತದೆ. ವಿಡಿಯೋ ಕಾನ್ಫರೆನ್ಸ್‌ ಸಾಧ್ಯವಾಗದೆ ಗ್ರಾಹಕರು ಪರದಾಟ ನಡೆಸುತ್ತಿದ್ದಾರೆ. ಇನ್ನು ವೇಗ ಹೆಚ್ಚಿಸಿಕೊಳ್ಳಲು ವಿವಿಧ ಕಂಪನಿ ನೆಟ್‌ವರ್ಕ್‌ ಬದಲಾಯಿಸಿದರೂ ಸಮಸ್ಯೆ ಮಾತ್ರ ಸಂಪೂರ್ಣ ಪರಿಹಾರವಾಗುತ್ತಿಲ

ಕೇಬಲ್‌ ಅಳವಡಿಕೆಗೆ ಅನುಮತಿ ಯಾಕೆ ಲಭ್ಯವಿಲ್ಲ?

ರಸ್ತೆಯನ್ನು ನಿರ್ದಿಷ್ಟ ಆಳದಲ್ಲಿ ಅಗೆದು ಇಂಟರ್‌ನೆಟ್‌ ಕೇಬಲ್‌ಗ‌ಳನ್ನು ಅಳವಡಿಸಲಾಗುತ್ತದೆ. ಕಾಮಗಾರಿ ನಂತರ ರಸ್ತೆ ಗುಂಡಿಗಳು ಹಾಗೆ ಉಳಿಯುತ್ತವೆ. ನಗರದಲ್ಲಿ ರಸ್ತೆ ಗುಂಡಿ ಹೆಚ್ಚಳಕ್ಕೆ ಟೆಲಿಕಾಂ ಕಂಪನಿ ಕಾಮಗಾರಿಯೂ ಕಾರಣ ಎಂದು ಹೇಳಲಾಗುತ್ತಿದೆ. ಇದೇಕಾರಣಕ್ಕೆ ಕೇಬಲ್‌ ಅಳಡಿಸುವ ಟೆಲಿಕಾಂ ಕಂಪನಿಗಳಿಗೆ ಬಿಬಿಎಂಪಿ ಅನುಮತಿ ನೀಡುತ್ತಿಲ್ಲ.

ಇಸ್‌ಆಪ್‌ ಡುಯಿಂಗ್‌ ಬಿಸಿನೆಸ್‌ ಮಾದರಿ ಅಳವಡಿಸಿ

ಸದ್ಯ ಇಂಟರ್‌ನೆಟ್‌ ಮೂಲಸೌಕರ್ಯವಾಗಿ ಬದಲಾಗುತ್ತಿದೆ. ದೇಶದಲ್ಲಿಯೇ ಮುಂಬೈ ಹೊರತು ಪಡಿಸಿದರೆ ಬೆಂಗಳೂರಿನಲ್ಲಿ ಟೆಲಿಕಾಂ ಮಾರುಕಟ್ಟೆ ಹೆಚ್ಚಿದೆ. ಟೆಲಿಕಾಂ ಕಂಪನಿಯೊಂದು ಪ್ರತಿ ತಿಂಗಳು 200 ಕಿ.ಮೀ. ನಷ್ಟು ಕೇಬಲ್‌ಗ‌ಳನ್ನು ವಿಸ್ತರಿಸುವ ಅಗತ್ಯವಿದೆ. ಆದರೆ, ನಗರದಲ್ಲಿ ಒಂದು ವರ್ಷಕ್ಕೆ ಗರಿಷ್ಠ 150 ಕಿ.ಮೀ.ಕೇಬಲ್‌ ವಿಸ್ತರಿಸಲು ಅನುಮತಿ ಲಭ್ಯವಾಗುತ್ತಿಲ್ಲ. ಕಾನೂನಿನ ಪ್ರಕಾರ ಟೆಲಿಕಾಂ ಮೂಲಸೌಕರ್ಯ ಅಳವಡಿಕೆಗೆ ಅನುಮತಿ ನೀಡಬೇಕು. ಇತರೆ ರಾಜ್ಯಗಳಂತೆ ರಾಜ್ಯದಲ್ಲಿ ಟೆಲಿಕಾಂ ಪಾಲಿಸಿ ಜಾರಿಗೆ ತರಬೇಕು. ಉದ್ಯಮದಲ್ಲಿ ತಂತ್ರಜ್ಞಾನ ಹೆಚ್ಚಿಸಿ, ಸೇವೆ ಬಲಪಡಿಸಲು ಇಸ್‌ ಆಫ್ ಡುಯಿಂಗ್‌ ಬಿಸಿನೆಸ್‌ ಮಾದರಿಯನ್ನು ಅಳವಡಿಸಬೇಕು ಎಂದು ಟೆಲಿಕಾಂ ಪ್ರಾಧಿಕಾರ ಸಿಬ್ಬಂದಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಟೆಲಿಕಾಂ ಕಂಪನಿಗಳು ಹೇಳ್ಳೋದೇನು?

ಸಾಮಾನ್ಯ ದಿನಗಳಲ್ಲಿ 7,000 ಟೆರಾಬೈಟ್‌ (ಟಿಬಿ) ಇದ್ದ ಇಂಟರ್‌ನೆಟ್‌ ಬಳಿಕೆ ಕೊರೊನಾ ನಂತರ ನಿತ್ಯ 10,000 ಟಿಬಿಗೆ ಹೆಚ್ಚಳವಾಗಿದೆ. ಬಳಕೆ ದಾರರು ಹೆಚ್ಚಳವಾದಂತೆ ವೇಗಕಡಿಮೆಯಾಗುತ್ತದೆ. ವೇಗ ಹೆಚ್ಚಳಕ್ಕೆ ಆ ಪ್ರದೇಶದಲ್ಲಿ ಹೆಚ್ಚುವರಿ ಟವರ್‌ ಮತ್ತುಕೇಬರ್‌, ಬಲಿಷ್ಠ ಕೇಬಲ್‌ಗ‌ಳನ್ನು ಅಳವಡಿಸ ಬೇಕಿರುತ್ತದೆ. ಆದರೆ, ನಗರದಲ್ಲಿ ಬರೋಬ್ಬರಿ ಒಂದು ವರ್ಷದಿಂದ ಇಂಟರ್‌ನೆಟ್‌ ಕೇಬಲ್‌ ಅಳವಡಿಸಲು ಪೂರ್ಣ ಪ್ರಮಾಣದಲ್ಲಿ ಬಿಬಿಎಂಪಿ ಅನುಮತಿ ನೀಡಿಲ್ಲ. ಹೀಗಾಗಿ, ಇಂಟರ್‌ನೆಟ್‌ ವೇಗದಲ್ಲಿ ಸಮಸ್ಯೆಯಾಗುತ್ತಿದೆ. ಅನುಮತಿ ದೊರೆತ ಕೂಡಲೇ ಕಾಮಗಾರಿ ನಡೆಸಿ ನೆಟ್‌ವರ್ಕ್‌ ಬಲಪಡಿಸಲಾಗುತ್ತದೆ ಎಂದು ಪ್ರತಿಷ್ಠಿತ ಟೆಲಿಕಾಂ ಕಂಪನಿ ಅಧಿಕಾರಿಗಳು ಹೇಳುತ್ತಾರೆ.

ಗ್ರಾಹಕರಿಗೆ ಪರಿಸ್ಥಿತಿ ವಿವರಣೆ

ಗ್ರಾಹಕರು ಇಂಟರ್‌ನೆಟ್‌ ವೇಗದ ಕುರಿತು ಕಂಪನಿಗಳಿಗೆ ಕರೆ ಮಾಡಿ ದೂರು ನೀಡುತ್ತಿದ್ದಾರೆ. ಆ ವೇಳೆ ಗ್ರಾಹಕ ಪ್ರತಿನಿಧಿಗಳು ಅಥವಾ ಮೇಲಧಿಕಾರಿಗಳು “ಸದ್ಯ ನೀವಿರುವ ಪ್ರದೇಶದಲ್ಲಿ ಹಳೇ ಅಥವಾ ಕಡಿಮೆ ಸಾಮರ್ಥಯದ ಕೇಬಲ್‌ಗ‌ಳಿವೆ. ಹೊಸ ಕೇಬಲ್‌ ಅಳವಡಿಸಲು ಬಿಬಿಎಂಪಿ ಅಥವಾ ಸರ್ಕಾರ ಅನುಮತಿ ನೀಡುತ್ತಿಲ್ಲ. ಅನುಮತಿ ನೀಡಿದ ಕೂಡಲೇ ಕಾಮಗಾರಿ ನಡೆಸಿ ವೇಗ ಹೆಚ್ಚಿಸುವ ಪ್ರಯತ್ನ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ.

ಇದನ್ನೂ ಓದಿ:“ಎಲ್ಲಿದ್ದರು ಇವರೆಲ್ಲಾ”? ರೈತ ನಾಯಕರ ಮುಂದೆ ಸಾಲು ಸಾಲು ಪ್ರಶ್ನೆಯಿಟ್ಟ ಕುಮಾರಸ್ವಾಮಿ

ಕಳೆದ ಆರು ತಿಂಗಳಿಂದ ಮೊಬೈಲ್‌ ಇಂಟರ್‌ನೆಟ್‌ ವೇಗವು ಕೆಬಿಪಿಎಸ್‌ಗೆ ಇಳಿಕೆಯಾಗಿದೆ. ಇದರಿಂದ ಕಚೇರಿ ವಿಡಿಯೋ ಸಭೆಗಳಲ್ಲಿ ಭಾಗವಹಿಸಲು, ತ್ವರಿತ ಡೌನ್‌ ಲೋಡ್‌ಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಟೆಲಿಕಾಂ ಕಂಪನಿಗಳನ್ನು ಬದಲಿಸಿದರು ಸಮಸ್ಯೆ ಪರಿಹಾರವಾಗಿಲ್ಲ.

ಹರೀಶ್‌, ಐ.ಟಿ.ಉದ್ಯೋಗಿ, ಮೂಡಲಪಾಳ್ಯ ನಿವಾಸಿ

ಸಮಸ್ಯೆಕುರಿತು ಟೆಲಿಕಾಂ ಕಂಪನಿಗೆ ಕರೆ ಮಾಡಿದರೆ ನಾವು ವಾಸವಿರುವ ಪ್ರದೇಶದಲ್ಲಿ 2002ರಲ್ಲಿ ಅಳವಡಿಸಿದ ಕೇಬಲ್‌ಗ‌ಳೇ ಇಂದಿಗೂ ಇದ್ದು, ಗರಿಷ್ಠ ಎರಡು ಎಂಬಿಪಿಎಸ್‌ ಮಾತ್ರ ಲಭ್ಯವಿದೆ. ಸದ್ಯ ಬಳಕೆದಾರರು ಹೆಚ್ಚಿದ್ದು, ಸಾಮರ್ಥ್ಯ ಹೆಚ್ಚಿಸಬೇಕು. ಆದರೆ, ಕೇಬಲ್‌ ಅಳವಡಿಸಲು ಸರ್ಕಾರ ಅನುಮತಿ ನೀಡಿಲ್ಲ ಎಂದು ಕಾರಣ ಹೇಳುತ್ತಾರೆ.

ಸಂಜೀವ್‌, ಜೆ.ಪಿ.ನಗರದ ನಿವಾಸಿ

 

ಜಯಪ್ರಕಾಶ್‌ ಬಿರಾದಾರ್‌

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.