ದೊಡ್ಡಜಾಲ, ಬೆಟ್ಟಹಲಸೂರಿನಲ್ಲಿ ರೈಲು ನಿಲುಗಡೆಗೆ ಚಿಂತನೆ

Team Udayavani, Dec 11, 2022, 12:35 PM IST

TDY-4

ಬೆಂಗಳೂರು: ನಗರದಿಂದ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಡಿ) ಹಾಲ್ಟ್ ಸ್ಟೇಷನ್‌ ನಡುವೆ ಕಾರ್ಯಾಚರಣೆ ಮಾಡುವ ರೈಲುಗಳ ವೇಗ ಹೆಚ್ಚಿಸಲು ಉದ್ದೇಶಿಸಿರುವ ನೈಋತ್ಯ ರೈಲ್ವೆ ಬೆಂಗಳೂರು ವಿಭಾಗ, ಪ್ರಯಾಣಿಕರ ಅನು ಕೂಲಕ್ಕಾಗಿ ಈ ಮಾರ್ಗದಲ್ಲಿ ಬರುವ ದೊಡ್ಡಜಾಲ ಮತ್ತು ಬೆಟ್ಟಹಲಸೂರಿ ನಲ್ಲಿ ನಿಲುಗಡೆಗೆ ಚಿಂತನೆ ನಡೆಸಿದೆ.

ಪ್ರಸ್ತುತ ಈ ಮಾರ್ಗದಲ್ಲಿ ಕಾರ್ಯಾಚರಣೆ ಮಾಡುವ ರೈಲುಗಳ ವೇಗ ಗಂಟೆಗೆ 80- 90ಕಿ.ಮೀ. ಇದೆ. ಮುಂಬ ರುವ ದಿನಗಳಲ್ಲಿ ಗಂಟೆಗೆ 100- 110 ಕಿ.ಮೀ.ಗೆ ಹೆಚ್ಚಿಸಲಾಗುವುದು. ಇದರಿಂದ ನಿಗದಿತ ತಾಣವನ್ನುತುಸು ಬೇಗ ತಲುಪಲು ಅನುಕೂಲ ಆಗಲಿದೆ.ಈ ಮೂಲಕ ಪ್ರಯಾಣಿಕ ರಿಗೆ ನಿಖರ ಹಾಗೂ ಮತ್ತಷ್ಟು ಉತ್ತಮ ಸೇವೆ ಕಲ್ಪಿಸಲು ಉದ್ದೇಶಿಸಲಾಗಿದೆ.

ಈ ನಿಟ್ಟಿನಲ್ಲಿ ಈಗಾಗಲೇ ಚಿಕ್ಕಬಳ್ಳಾಪುರ-ಯಲಹಂಕ ನಡುವೆ ರೈಲ್ವೆ ಹಳಿಗಳ ನವೀಕರಿಸುವ ಕಾರ್ಯ ನಡೆದಿದ್ದು, ದೇವನ ಹಳ್ಳಿ-ಯಲಹಂಕ ನಡುವಿನ ಸುಮಾರು ಎರಡೂವರೆ ಕಿ.ಮೀ. ಕಾಮಗಾರಿ ಬಾಕಿ ಇದೆ. ಇಲ್ಲಿ ಸವೆದಿರುವ ಕೀಪರ್‌ ರೈಲು ಪ್ಯಾನೆಲ್‌ಗ‌ಳ ಬದಲಾವಣೆ, ಬಲ್ಲಾಸ್ಟ್‌  (ballast) ಕಲ್ಲಿನ ಕಡಿಗಳ ನಿಲುಭಾರ)ಗಳನ್ನು ಹಾಕುವುದು ಸೇರಿದಂತೆ ವಿವಿಧ ಕೆಲಸಗಳು ಪ್ರಗತಿಯಲ್ಲಿವೆ. ಇದು ಪೂರ್ಣ ಗೊಂಡ ನಂತರ ಮಾರ್ಗದಲ್ಲಿ ಸಂಚರಿಸುವ ರೈಲುಗಳ ವೇಗಮಿತಿ ಕನಿಷ್ಠ ಗಂಟೆಗೆ 20 ಕಿ.ಮೀ. ಹೆಚ್ಚಳ ಆಗಲಿದೆ ಎಂದು ನೈಋತ್ಯ ರೈಲ್ವೆ ಬೆಂಗಳೂರು ವಿಭಾಗೀಯ ಅಧಿಕಾರಿ ಗಳು ಮಾಹಿತಿ ನೀಡಿದ್ದಾರೆ.

ಮುಂಬರುವ ದಿನಗಳಲ್ಲಿ ಅಸ್ತಿತ್ವದಲ್ಲಿರುವ ರೈಲು ಸೇವೆ ಗಳ ಪೋ›ತ್ಸಾಹದ ಆಧಾರದ ಮೇಲೆ ಆವರ್ತನದ ಹೆಚ್ಚಳ ಮತ್ತು ವಿಮಾನ ನಿಲ್ದಾಣಕ್ಕೆ ರೈಲು ಸೇವೆಗಳ ವಿಸ್ತರಣೆ ಬಗ್ಗೆಯೂಪರಿಶೀಲಿಸಲಾಗುವುದು. ಇನ್ನು ಇತರ ಸಾರಿಗೆ ವಿಧಾನಗಳಿಗೆ ಹೋಲಿಸಿದರೆ ರೈಲು ಪ್ರಯಾಣ ಗಣನೀಯ ವಾಗಿ ಅಗ್ಗವಾಗಿದ್ದು, ಟಿಕೆಟ್‌ ದರವು ಕೇವಲ 30 ರೂ. ಆಗಿದೆ.

ಬರೀ ಸಾವಿರ ರೂ.ಗೆ ತಿಂಗಳಿಡೀ ಕೆಲಸ? :

ಕೆಐಎಡಿ ಹಾಲ್ಟ್ ಸ್ಟೇಷನ್‌ನಲ್ಲಿ ರೈಲುಗಳ ನಿರ್ವಹಣೆ, ಟಿಕೆಟ್‌ ವಿತರಣೆ, ಬಂದು-ಹೋಗುವ ರೈಲುಗಳ ಸಮಯ ದಾಖಲು ಮತ್ತಿತರ ಸೇವೆಗಳಿಗಾಗಿಯೇ ಸ್ಥಳೀಯ ಖಾಸಗಿ ವ್ಯಕ್ತಿಯೊಬ್ಬರನ್ನು ನೈಋತ್ಯ ರೈಲ್ವೆ ನಿಯೋಜಿಸಿದೆ. ನಿತ್ಯ ಸುಮಾರು ಹತ್ತು ತಾಸು ಕಾರ್ಯನಿರ್ವಹಿಸುವ ಅವರಿಗೆ ಮಾಸಿಕ ಬರೀ 1,000ರಿಂದ 1,500 ರೂ. ಸಂಭಾವನೆ ನೀಡುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಬೆಳಿಗ್ಗೆ 6ರಿಂದ ರಾತ್ರಿ ಸುಮಾರು 8ರವರೆಗೆ ಕಾರ್ಯನಿರ್ವಹಿಸುವ ಅಲ್ಲಿನ ನೌಕರ, ದೇವನಹಳ್ಳಿ ನಿಲ್ದಾಣದಿಂದ ಟಿಕೆಟ್‌ ತಂದು ವಿತರಿಸುತ್ತಾರೆ. ಪ್ರತಿ ರೈಲು ಎಷ್ಟು ಗಂಟೆಗೆ ಬಂತು ಮತ್ತು ಹೋಯಿತು ಎಂಬುದರ ದಾಖಲು ಮಾಡುವುದು ಒಳಗೊಂಡಂತೆ ಅಲ್ಲಿನ ಸಂಪೂರ್ಣ ನಿರ್ವಹಣೆ ಹೊಣೆ ಆ ನೌಕರದ್ದಾಗಿದೆ. ಆದರೆ, ಈ ಕೆಲಸಕ್ಕೆ ನೀಡುತ್ತಿರುವ ಸಂಭಾವನೆ ತುಂಬಾ ಕಡಿಮೆ.

“ಹಾಲ್ಟ್ ಸ್ಟೇಷನ್‌ ಸೌಂದರೀಕರಣಕ್ಕೇ ರೈಲ್ವೆ ಇಲಾಖೆಯು ಕೋಟ್ಯಂತರ ರೂಪಾಯಿ ಸುರಿಯುತ್ತದೆ. ಅದನ್ನು ಕಾಯಲು ಇರುವ ಒಬ್ಬ ನೌಕರನಿಗೆಮಾಸಿಕ ಬರೀ 1,000- 1,500 ರೂ. ನೀಡುತ್ತಿದೆ. ಇದಕ್ಕಾಗಿ ಹತ್ತು ತಾಸು ಕೆಲಸಮಾಡಬೇಕು. ಆ ಹಣದಲ್ಲಿ ಕುಟುಂಬ ನಿರ್ವಹಣೆ ಸಾಧ್ಯವಿಲ್ಲ. ಆದ್ದರಿಂದ ಸಂಭಾವನೆ ಹೆಚ್ಚಿಸಬೇಕು’ ಎಂದು ಸಿಟಿಜನ್‌ ಫಾರ್‌ ಸಿಟಿಜಿನ್‌ (ಸಿ4ಸಿ) ಸಂಸ್ಥಾಪಕಮತ್ತು ಸಂಚಾಲಕ ರಾಜಕುಮಾರ್‌ ದುಗರ್‌ ಒತ್ತಾಯಿಸುತ್ತಾರೆ.

8 ಜೋಡಿ ರೈಲು ಸೇವೆ:

ಪ್ರಸ್ತುತ ಕೆಐಎಡಿ ಹಾಲ್ಟ್ ಸ್ಟೇಷನ್‌ಗೆ ನಿತ್ಯ ಎಂಟು ಜೋಡಿ ಮೆಮು/ ಡೆಮು ರೈಲುಗಳು ನಿಲುಗಡೆ ಆಗುತ್ತವೆ. ದೇವನಹಳ್ಳಿ- ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ (ಕೆಎಸ್‌ಆರ್‌), ದೇವನಹಳ್ಳಿ- ಯಲಹಂಕ, ಯಲಹಂಕ- ಕೆಐಎಡಿ, ದೇವನಹಳ್ಳಿ- ಕಂಟೋನ್ಮೆಂಟ್‌, ಕೆಎಸ್‌ಆರ್‌- ಕೋಲಾರ ನಡುವಿನ ರೈಲುಗಳು ಇವಾಗಿವೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ಟಾಪ್ ನ್ಯೂಸ್

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

4

ವಿಚ್ಛೇದನ ನೀಡದಿದ್ದರೆ ತಲೆಯನ್ನು ಕಡಿದು ಕುಕ್ಕರ್‌ನಲ್ಲಿ ಬೇಯಿಸುವೆ ಎಂದ ಪತಿ ವಿರುದ್ಧ FIR

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.