ಮಣಿಪಾಲ್ ಆಸ್ಪತ್ರೆಯಲ್ಲಿ ಸ್ಪುಟ್ನಿಕ್ ವಿ ಚಾಲನೆ
Team Udayavani, Jun 7, 2021, 5:17 PM IST
ಬೆಂಗಳೂರು: ಮಣಿಪಾಲ್ ಆಸ್ಪತ್ರೆಗಳಸಮೂಹವು ಸ್ಪುಟ್ನಿಕ್ -ವಿ ಲಸಿಕೆವಿತರಣೆಗೆ ಡಾ. ರೆಡ್ಡೀಸ್ಲ್ಯಾಬೊರೇಟರೀಸ್ ಜತೆಗೆ ಒಪ್ಪಂದ ಮಾಡಿಕೊಂಡಿದ್ದು, ಜೂನ್ ಮೂರನೇವಾರದ ಬಳಿಕ ಸಾರ್ವಜನಿಕರಿಗೆ ಈ ಲಸಿಕೆ ಲಭ್ಯವಾಗಲಿದೆ.
ಭಾನುವಾರಆಸ್ಪತ್ರೆಯಲ್ಲಿಸಾಂಕೇತಿಕವಾಗಿಸ್ಪುಟ್ನಿಕ್-ವಿ ಲಸಿಕೆವಿತರಣೆಗೆ ಚಾಲನೆನೀಡಲಾಯಿತು.ಸದ್ಯ ವಿಮಾನಯಾನದ ಸಿಬ್ಬಂದಿಗೆನೀಡಲಾಗುತ್ತಿದೆ. ಜೂನ್ ಮೂರನೇವಾರದ ಬಳಿಕ ಸಾರ್ವಜನಿಕರಿಗೆ ಈಲಸಿಕೆ ವಿತರಣೆ ಮಾಡುವುದಾಗಿ ಆಸ್ಪತ್ರೆವೈದ್ಯರು ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿಈಗಾಗಲೇ ಕೋವಿಶೀಲ್ಡ್ ಹಾಗೂಕೋವ್ಯಾಕ್ಸಿನ್ ಲಸಿಕೆ ವಿತರಿಸಲಾಗುತ್ತಿದೆ.
ಲಸಿಕೆ ವಿತರಣಾ ಅಭಿಯಾನಕ್ಕೆ ವೇಗ ನೀಡುವಸಂಬಂಧ ಸ್ಪುಟ್ನಿಕ್ ವಿ ಲಸಿಕೆಯನ್ನೂಖರೀದಿಸಲಾಗಿದೆ. ಈ ಮೂಲಕಹೆಚ್ಚಿನ ಜನರಿಗೆ ಲಸಿಕೆ ಒದಗಿಸುವಗುರಿಯನ್ನು ಹೊಂದಿದ್ದೇವೆ ಎಂದುಮಣಿಪಾಲ್ ಹೆಲ್ತ್ ಎಂಟರ್ಪ್ರೈಸಸ್ಪ್ರೈ.ಲಿ.ನ ಮುಖ್ಯಕಾರ್ಯನಿರ್ವಾಹಕರ ಅಧಿಕಾರಿಕಾರ್ತಿಕ್ ರಾಜಗೋಪಾಲ್ ತಿಳಿಸಿದ್ದಾರೆ.