ವರ್ಗಾವಣೆ ದಂಧೆಯಲ್ಲಿ ಸರ್ಕಾರ ನಿರತವಾಗಿದೆ: ಬಿಎಸ್‌ವೈ ಆರೋಪ

Team Udayavani, Aug 5, 2018, 6:15 AM IST

bsy-bjp-govt.jpg

ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತಿದ್ದು ಸಮ್ಮಿಶ್ರ ಸರ್ಕಾರ ವರ್ಗಾವಣೆ ದಂಧೆಯಲ್ಲಿ ನಿರತವಾಗಿದೆ ಎಂದು ಪ್ರತಿಪಕ್ಷ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಆರೋಪಿಸಿದ್ದಾರೆ.

ರಾಜ್ಯ ಬಿಜೆಪಿ ಕಚೇರಿಯಲ್ಲಿ ನಗರ ಜಿಲ್ಲೆ ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಸಂಪೂರ್ಣ ಸ್ಥಗಿತವಾಗಿದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸುವವರಿಲ್ಲದಂತಾಗಿದೆ ಎಂದು ದೂರಿದರು.

ಉತ್ತರ ಕರ್ನಾಟಕ ಪ್ರತ್ಯೇಕತೆ ವಿಚಾರದಲ್ಲಿ ಹೋರಾಟ ನಡೆಸುತ್ತಿದ್ದವರನ್ನು ನಾನು ಹೋಗಿ ಮಾತನಾಡಿಸಿದೆ. ಆದರೆ, ಅದಕ್ಕೆ ಬೇರೆ ಅರ್ಥ ಕಲ್ಪಿಸಲಾಯಿತು. ಬಿಜೆಪಿ ಎಂದಿಗೂ ಅಖಂಡ ಕರ್ನಾಟಕದ ಪರ ಇದೆ ಎಂದು ಹೇಳಿದರು.

ಉತ್ತರ ಕರ್ನಾಟಕ ಬಗ್ಗೆ ಹೇಳಿಕೆ ನೀಡುವ ಮೂಲಕ ಎಚ್‌.ಡಿ. ಕುಮಾರಸ್ವಾಮಿಯವರು ಮಾಡಿದ ತಪ್ಪಿಗೆ ಕಿವಿ ಹಿಂಡಿ ಬುದ್ದಿ ಹೇಳುವ ಬದಲಿಗೆ ನನ್ನ ವಿರುದ್ಧ ಟೀಕೆ ಮಾಡಿದ ದೇವೇಗೌಡರಿಗೆ ಮೂರು ಪ್ರಶ್ನೆ ಹಾಕಿದ್ದೇನೆ. ಅದಕ್ಕೆ ಉತ್ತರ ನೀಡಲಿ ಎಂದು ತಿಳಿಸಿದರು.

ಅಕ್ರಮ ಬಾಂಗ್ಲಾ ವಲಸಿಗರ ಕುರಿತು ಮಮತಾ ಬ್ಯಾನರ್ಜಿಗೆ ಬೆಂಬಲ ಸೂಚಿಸುವ ಮೂಲಕ ದೇವೇಗೌಡರು ದೇಶದ್ರೋಹಿಗಳಿಗೆ ರಕ್ಷಣೆ ನೀಡಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಹೋರಾಟಕ್ಕಿಂತ ನಮ್ಮ ಕಾರಣಕ್ಕಾಗಿಯೇ ಹಿನ್ನಡೆ ಅನುಭವಿಸಬೇಕಾಯಿತು. ಆದರೂ ಸಮರ್ಥ ಪ್ರತಿಪಕ್ಷವಾಗಿ ಕೆಲಸ ಮಾಡೋಣ ಎಂದು ಹೇಳಿದರು.

ಸಮ್ಮಿಶ್ರ ಸರ್ಕಾರ ರಚಿಸಿಕೊಂಡಿರುವ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ  ಅಪವಿತ್ರ ಮೈತ್ರಿ ಸರ್ಕಾರದ ವಿರುದ್ಧ ಹೋರಾಟ ರೂಪಿಸಬೇಕು. ಲೋಕಸಭೆಯಲ್ಲಿ ಬೆಂಗಳೂರಿನ ನಾಲ್ಕೂ ಸೀಟು ಗೆಲ್ಲುವ ಕಡೆ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.

ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಮಾತನಾಡಿ, ನೈಸ್‌ ರಸ್ತೆ ವಿರುದ್ಧ ಹೋರಾಟ ಮಾಡುತ್ತಿದ್ದವರು  ಇದೀಗ ಅದೇ ರಸ್ತೆಯಲ್ಲಿ ಭೋಜನಕೂಟ ಏರ್ಪಡಿಸುತ್ತಾರೆ ಎಂದು ಲೇವಡಿ ಮಾಡಿದರು.

ಮುಖ್ಯಮಂತ್ರಿಯವರು ಕಣ್ಣೀರು ಹಾಕುತ್ತಾರೆ. ಕಣ್ಣೀರಿಗೂ ಮಿತಿ ಇದೆ. ಕಚೀìಫಿನ ಒಳಗೇನಿತ್ತೋ ಗೊತ್ತಿಲ್ಲ, ಸಿಎಂ ಆಪ್ತ ಜಮೀರ್‌ ಅವರೇ ಹೇಳಬೇಕು ಎಂದು ವ್ಯಂಗ್ಯವಾಡಿದ ಅವರು, ಸಿದ್ದರಾಮಯ್ಯ ಸರ್ಕಾರದಲ್ಲಿ ಒಬ್ಬರೇ ಲೂಟಿ ಹೊಡೆಯುತ್ತಿದ್ದರು, ಈಗ ಇಬ್ಬರು ಲೂಟಿ ಹೊಡೆಯುತ್ತಿ¨ªಾರೆ ಎಂದು ಆರೋಪಿಸಿದರು.

ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳು ಸಣ್ಣ ಸುದ್ದಿಗೆ ಮಸಾಲೆ ಬೆರೆಸಿ ಪ್ರಸಾರ ಮಾಡುತ್ತವೆ. ನಮ್ಮ ವಿಚಾರಗಳನ್ನು ತಿಳಿಸಲು ಕಾರ್ಯಕರ್ತರೇ ಮಾಧ್ಯಮ ಎಂದು ಅವರು ಹೇಳಿದರು.

ಸಂಸದ ಪಿ.ಸಿ. ಮೋಹನ್‌, ವಿಧಾನಪರಿಷತ್‌ ಸದಸ್ಯರಾದ ಎನ್‌. ರವಿಕುಮಾರ್‌, ಅ. ದೇವೇಗೌಡ, ಶಾಸಕರಾದ ಎಸ್‌.ಆರ್‌. ವಿಶ್ವನಾಥ್‌, ಎ. ರಘು, ಪೂರ್ಣಿಮಾ ಶ್ರೀನಿವಾಸ್‌, ನಗರ ಜಿಲ್ಲಾ ಅಧ್ಯಕ್ಷ ಮುನಿರಾಜು ಉಪಸ್ಥಿತರಿದ್ದರು.

ಬಿಎಸ್‌ವೈ ಕ್ಲಾಸ್‌
ನಗರ ಕಾರ್ಯಕಾರಿಣಿಯಲ್ಲಿ ನಗರದ ಪಾಲಿಕೆ ಸದಸ್ಯರು ಹಾಗೂ ಶಾಸಕರಿಗೆ ಕ್ಲಾಸ್‌ ತೆಗೆದಕೊಂಡ ಯಡಿಯೂರಪ್ಪ, ಸ್ವಂತ ಬೆಳವಣಿಗೆ ಬಿಟ್ಟು ಪಕ್ಷ ಸಂಘಟನೆ ಬಲವರ್ಧನೆಗೆ ನಿಮ್ಮ ಕೊಡುಗೆ ಏನು ಎಂದು ಪ್ರಶ್ನಿಸಿದರು. ಬಿಬಿಎಂಪಿ ಸದಸ್ಯರು ಹಾಗೂ ಶಾಸಕರು ಎಷ್ಟು ದುಡಿದಿದ್ದಾರೆ ಎಂದು ಪ್ರಶ್ನಿಸಿದ ಅವರು, ಪಾಲಿಕೆ ಸದಸ್ಯರಾಗಿ  ತಮ್ಮ ಅಭಿವೃದ್ಧಿಯನ್ನು ಮಾತ್ರ ಮಾಡಿಕೊಂಡವರು ಎಷ್ಟೇ ಶ್ರೀಮಂತರಾಗಿರಲಿ, ಬಲಾಡ್ಯರಾಗಿರಲಿ ಯಾವುದೇ ಕಾರಣಕ್ಕೆ ಮುಂದಿನ ಚುನಾವಣೆಯಲ್ಲಿ ಟಿಕೆಟ್‌ ನೀಡುವುದಿಲ್ಲ ಎಂದು ಎಚ್ಚರಿಸಿದರು.

ಟಾಪ್ ನ್ಯೂಸ್

amitTelangana Polls; ತೆಲಂಗಾಣ ಚುನಾವಣೆಗೆ ಬಿಜೆಪಿ ಜತೆ ಟಿಡಿಪಿ ಮೈತ್ರಿ?

Telangana Polls; ತೆಲಂಗಾಣ ಚುನಾವಣೆಗೆ ಬಿಜೆಪಿ ಜತೆ ಟಿಡಿಪಿ ಮೈತ್ರಿ?

TDY-2

CSK Forever: ಮದುವೆ ಕಾರ್ಡ್‌ನಲ್ಲಿ ಧೋನಿ ಫೋಟೋ ಪ್ರಿಂಟ್‌ ಮಾಡಿಸಿದ  ಅಭಿಮಾನಿ

ಹೊಸ ಇನ್ನಿಂಗ್ಸ್‌ ಆರಂಭಿಸಿದ ರುತುರಾಜ್: ಕ್ರಿಕೆಟ್ ಆಟಗಾರ್ತಿಯನ್ನೇ ವರಿಸಿದ CSK ಪ್ಲೇಯರ್

ಹೊಸ ಇನ್ನಿಂಗ್ಸ್‌ ಆರಂಭಿಸಿದ ರುತುರಾಜ್: ಕ್ರಿಕೆಟ್ ಆಟಗಾರ್ತಿಯನ್ನೇ ವರಿಸಿದ CSK ಪ್ಲೇಯರ್

Chikkamagaluru: ಕಾಂಗ್ರೆಸ್ ಶಾಸಕರ ಅಭಿನಂದನಾ ಸಮಾರಂಭದಲ್ಲಿ ಗಲಾಟೆ, ಯುವಕನ ಕೊಲೆ

Chikkamagaluru: ಕಾಂಗ್ರೆಸ್ ಶಾಸಕರ ಅಭಿನಂದನಾ ಸಮಾರಂಭದಲ್ಲಿ ಗಲಾಟೆ, ಯುವಕನ ಕೊಲೆ

ಮಂಗಳೂರು: ಹಳೆಯ “ನೈತಿಕ ಪೊಲೀಸ್‌ಗಿರಿ’ ಆರೋಪಿಗಳಿಂದ ಮುಚ್ಚಳಿಕೆ

ಮಂಗಳೂರು: ಹಳೆಯ “ನೈತಿಕ ಪೊಲೀಸ್‌ಗಿರಿ’ ಆರೋಪಿಗಳಿಂದ ಮುಚ್ಚಳಿಕೆ

ಮಣಿಪಾಲ: ರ್‍ಯಾಂಕಿಂಗ್‌ನಲ್ಲಿ ಮಾಹೆಗೆ ವಿಶ್ವದಲ್ಲಿ 4ನೇ ಸ್ಥಾನ

ಮಣಿಪಾಲ: ರ್‍ಯಾಂಕಿಂಗ್‌ನಲ್ಲಿ ಮಾಹೆಗೆ ವಿಶ್ವದಲ್ಲಿ 4ನೇ ಸ್ಥಾನ

M B PATILL

BJPಯ ಎಲ್ಲ ಹಗರಣಗಳ ತನಿಖೆ: M.B. ಪಾಟೀಲ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

M B PATILL

BJPಯ ಎಲ್ಲ ಹಗರಣಗಳ ತನಿಖೆ: M.B. ಪಾಟೀಲ್‌

k j george

Congress Guarantee: 2.14 ಕೋಟಿ ಗ್ರಾಹಕರಿಗೂ 200 ಯೂ. ಉಚಿತ ವಿದ್ಯುತ್‌-ಕೆ.ಜೆ. ಜಾರ್ಜ್‌

ರೈಲುಗಳ ರದ್ದು: ಹಿಂಪಾವತಿಗೆ ನಿಲ್ದಾಣಗಳಲ್ಲಿ ನೂಕುನುಗ್ಗಲು

ತಪ್ಪು ಮಾಹಿತಿಗೆ ದಂಡ ಗ್ಯಾರಂಟಿ! ಯುವನಿಧಿ ಯೋಜನೆಯ ಮಾರ್ಗಸೂಚಿ ಬಿಡುಗಡೆ

ತಪ್ಪು ಮಾಹಿತಿಗೆ ದಂಡ ಗ್ಯಾರಂಟಿ! ಯುವನಿಧಿ ಯೋಜನೆಯ ಮಾರ್ಗಸೂಚಿ ಬಿಡುಗಡೆ

ರಾಜ್ಯದಲ್ಲಿ ಉಷ್ಣಾಂಶ 3 ಡಿ.ಸೆ. ಹೆಚ್ಚಳ ಸಾಧ್ಯತೆ!

ರಾಜ್ಯದಲ್ಲಿ ಉಷ್ಣಾಂಶ 3 ಡಿ.ಸೆ. ಹೆಚ್ಚಳ ಸಾಧ್ಯತೆ!

MUST WATCH

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

ಹೊಸ ಸೇರ್ಪಡೆ