ಅಪಾಯಕಾರಿ ವಿದ್ಯುತ್ ವೈರ್ ತೆರವು
ಉದಯವಾಣಿ ಫಲಶೃತಿ
Team Udayavani, Jul 17, 2019, 3:03 AM IST
ಬೆಂಗಳೂರು: ನಂದಿನಿ ಲೇಔಟ್‌ನ ಸೆಂಟ್ರಲ್ ಪಾರ್ಕ್‌ನಲ್ಲಿದ್ದ ಅಪಾಯಕಾರಿ ವಿದ್ಯುತ್ ತಂತಿಗಳನ್ನು ಬೆಸ್ಕಾಂ ತೆರವುಗೊಳಿಸಿದೆ. “ಪಾರ್ಕ್ ಅಭಿವೃದ್ಧಿ ಕಾಮಗಾರಿ ಕೆಲಸ ನಡೆಯುತ್ತಿದ್ದು, ಪಾರ್ಕ್‌ನಲ್ಲಿ ಅಳವಡಿಸಲಾಗಿರುವ ವಿದ್ಯುತ್ ಬಲ್ಪ್ ಮತ್ತು ಬೋರ್‌ವೆಲ್ ಮೀಟರ್‌ಗಳಿಗಾಗಿ ರಸ್ತೆಯ ಮೇಲೆ ಹಾದು ಹೋಗುವಂತೆ ವಿದ್ಯುತ್ ಸಂಪರ್ಕವನ್ನು ಪಡೆದುಕೊಂಡಿದ್ದರು.
ಈಗ ವಿದ್ಯುತ್ ತಂತ್ರಿಗಳನ್ನು ತೆರವುಗೊಳಿಸಲಾಗಿದ್ದು, ಬಿಬಿಎಂಪಿ ಸಹಾಯಕ ಎಂಜಿನಿಯರಿಗೆ ಮಾಹಿತಿ ನೀಡಲಾಗಿದೆ. ಪಾರ್ಕಿನಲ್ಲಿ ನಡೆದಾಡುವ ಜನರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಎಚ್ಚರಿಕೆ ವಹಿಸಲಾಗಿದೆ’ ಎಂದು ಬೆಸ್ಕಾಂ ಮುಖ್ಯ ಎಂಜಿನಿಯರ್ ಎಚ್.ಎಂ ಶಿವಪ್ರಕಾಶ್ ತಿಳಿಸಿದ್ದಾರೆ.
“ಉದಯವಾಣಿ’ ವರದಿ ಪ್ರಕಟಿಸಿತ್ತು: ನಂದಿನಿ ಲೇಔಟ್ ಸೆಂಟ್ರಲ್ ಪಾರ್ಕ್ ಮತ್ತು ಮಹಾಲಕ್ಷ್ಮೀ ಲೇಔಟ್‌ನ ವಿವಿಧೆಡೆ ವಿದ್ಯುತ್ ತಿಂತಿಗಳು ಅತಿ ಕಡಿಮೆ ಅಂತರದಲ್ಲಿ ಇರುವ ಬಗ್ಗೆ ಉದಯವಾಣಿ ಜುಲೈ.14ರಂದು “ಮಳೆ ಬಂದರೆ ಭಯ ಬೀಳುವ ಜನ’ ಎನ್ನುವ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕೊರಟಗೆರೆ: ಅನಿಲ್ಕುಮಾರ್ ಸ್ಪರ್ಧಿಸದಂತೆ 2 ವರ್ಷ ನಿರ್ಬಂಧಕ್ಕೆ ಆಪ್ ಆಗ್ರಹ
ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಆಗದಿರಲಿ; ನೀತಿ ಆಯೋಗದ ಸಭೆಯಲ್ಲಿ ಸಿಎಂಗಳ ಆಗ್ರಹ
ಕೇಂದ್ರ ಸಂಪುಟಕ್ಕೆ ಸೇರುವುದಿಲ್ಲ: ಜೆಡಿಯು ಅಧ್ಯಕ್ಷ ರಾಜೀವ್ ರಂಜನ್ ಸಿಂಗ್
ಕಾಮೋತ್ತೇಜನ ಔಷಧಕ್ಕಾಗಿ ಅಕ್ರಮ ಸಾಗಾಟ: 295 ಆಮೆಗಳ ಸಹಿತ ಓರ್ವನ ಬಂಧನ
ರಾಜ್ಯದಲ್ಲಿಂದು 1,837 ಕೋವಿಡ್ ಸೋಂಕು: ನಾಲ್ವರು ಸಾವು