
ಐಐಎಸ್‌ಸಿಯಲ್ಲಿ ನಿರಂತರವಾಗಿ ಕದಿಯುತ್ತಿದ್ದ ಕಳ್ಳನ ಬಂಧನ
Team Udayavani, Jun 9, 2023, 3:36 PM IST

ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ) ವಿದ್ಯಾರ್ಥಿಯ ಗುರುತಿನ ಚೀಟಿ ಬಳಸಿಕೊಂಡು ನಿರಂತರವಾಗಿ ಕಳವು ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಆರೋಪಿಯನ್ನು ಸಂಸ್ಥೆಯ ಭದ್ರತಾ ಸಿಬ್ಬಂದಿ ಸಹಾಯದಿಂದ ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಜಿಯಾವುಲ್ಲಾ ಮಲ್ಲಿಕ್ (34) ಬಂಧಿತ. ಆರೋಪಿ ಯಶವಂತಪುರದಲ್ಲಿ ವಾಸವಾಗಿದ್ದು, ಕೆಲ ತಿಂಗಳ ಹಿಂದೆ ಭಾರತೀಯ ವಿಜ್ಞಾನ ಸಂಸ್ಥೆ ಸಮೀಪ ಸಿಕ್ಕ ವಿದ್ಯಾರ್ಥಿಯೊಬ್ಬನ ಗುರುತಿನ ಚೀಟಿ ಬಳಸಿಕೊಂಡು ಕ್ಯಾಂಪಸ್‌ಗೆ ಹೋಗುತ್ತಿದ್ದ. ಬಳಿಕ ಬಾಲಕರ ವಸತಿ ನಿಲಯದಲ್ಲಿ ಸುಮಾರು ಒಂದೂವರೆ ತಿಂಗಳಿಂದ 2 ಕ್ಯಾಮೆರಾಗಳು, ಲ್ಯಾಪ್‌ಟಾಪ್, ಮೊಬೈಲ್, 200 ವಿದೇಶಿ ಕರೆನ್ಸಿ, ನಗದು ಕಳವು ಮಾಡಲಾಗಿತ್ತು. ಈ ಸಂಬಂಧ ನಾಲ್ಕು ಪ್ರತ್ಯೇಕ ಪ್ರಕರಣಗಳು ದಾಖಲಾಗಿತ್ತು. ಆದರೆ, ಆರೋಪಿ ಪತ್ತೆಯಾಗಿರಲಿಲ್ಲ. ಈ ಮಧ್ಯೆ ಕೆಲ ದಿನಗಳ ಹಿಂದೆ ಭದ್ರತಾ ಸಿಬ್ಬಂದಿ ಅನುಮಾನದ ಮೇರೆಗೆ ಆರೋಪಿಯ ಗುರುತಿನ ಚೀಟಿ ಪಡೆದುಕೊಂಡು ಪರಿಶೀಲಿಸಿದಾಗ ಆರೋಪಿಯ ಕಳ್ಳಾಟ ಬಯಲಾಗಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿ ಆರೋಪಿಯನ್ನು ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

News Click: ‘ನ್ಯೂಸ್‌ಕ್ಲಿಕ್’ ಸಂಪಾದಕ ಪ್ರಬೀರ್ ಪುರ್ಕಾಯಸ್ಥ 7 ದಿನ ಪೊಲೀಸ್ ಕಸ್ಟಡಿಗೆ

Gayatri Joshi: ನಟಿ ಗಾಯತ್ರಿ ಜೋಶಿ ಕಾರು ಅಪಘಾತ; ಮತ್ತೊಂದು ಕಾರಿನಲ್ಲಿದ್ದ ದಂಪತಿ ಮೃತ್ಯು

Road Rail Vehicles: ಹಳಿಯಲ್ಲಿ ಸಿಲುಕಿದ ರೋಡ್ ಕಂ ರೈಲು

Crime News: ಮೊಬೈಲ್ ಫ್ಲ್ಯಾಶ್ ಮಾಡಿಕೊಡದಕ್ಕೆ ಹಲ್ಲೆ; ಮಹಿಳೆ ಸೇರಿ ಮೂವರ ಸೆರೆ

Cloudburst: ಸಿಕ್ಕಿಂನಲ್ಲಿ ಮೇಘಸ್ಫೋಟ: ಕೊಚ್ಚಿ ಹೋದ ಸೇತುವೆ, 23 ಸೇನಾ ಸಿಬ್ಬಂದಿ ನಾಪತ್ತೆ