ಮನೆ ಸದಸ್ಯರೆಲ್ಲರ ಪ್ರಜ್ಞೆ ತಪ್ಪಿಸಿ ಆಭರಣ ದೋಚಿದ ಕಳ್ಳ ಸ್ವಾಮಿ

Team Udayavani, Nov 23, 2017, 11:51 AM IST

ಆನೇಕಲ್‌: ಮೂರ್ಛೆ ರೋಗ ಮತ್ತು ಇನ್ನಿತರ ಕಾಯಿಲೆಗಳಿಗೆ ಔಷಧ ನೀಡುವುದಾಗಿ ಹೇಳಿದ ಕಳ್ಳ ಸ್ವಾಮಿ, ಸುಮಾರು 5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾದ ಘಟನೆ ಸೂರ್ಯನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ಕಿತ್ತಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕಿತ್ತಗಾನಹಳ್ಳಿ ಗ್ರಾಮದ ಲಕ್ಷ್ಮೀದೇವಿ ಎಂಬುವವರ ಮನೆಗೆ ಬಂದ ಇಬ್ಬರು ಮಹಿಳೆಯರು, ಮೂರ್ಛೆ ರೋಗ ಇನ್ನಿತರ
ಕಾಯಿಲೆಗಳಿಗೆ ಔಷಧ ನೀಡುವುದಾಗಿ ಹೇಳಿ ಹೋಗಿದ್ದಾರೆ. ನಂತರ ಸ್ವಾಮೀಜಿ ವೇಶದಲ್ಲಿ ಬಂದ ಮತ್ತೂಬ್ಬ ವ್ಯಕ್ತಿ, ಮೂರ್ಛೆ ರೋಗಕ್ಕೆ ಔಷಧ ನೀಡುತ್ತೇನೆ ಮತ್ತು ಮಾಟ ಮಂತ್ರಗಳಿಗೆ ವಿಶೇಷ ಪೂಜೆ ಮಾಡುತ್ತೇನೆ ಎಂದು ಹೇಳಿದ್ದಾನೆ. ಅದರಂಥೆ ಮನೆಯವರು ಪೂಜೆಗೆ ಅವಕಾಶ ನೀಡಿದ್ದು, ಪೂಜೆ ಆರಂಭಿಸಿದ ಕಳ್ಳ ಸ್ವಾಮಿ, ಮನೆಯ
ಸದಸ್ಯರ ಪ್ರಜ್ಞೆ ತಪ್ಪಿಸಿ ಸುಮಾರು 5 ಲಕ್ಷ ರೂ. ಮೌಲ್ಯದ ಚಿನ್ನದ ಆಭರಣಗಳು ಮತ್ತು 15 ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದಾನೆ ಎಂದು ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಸೂರ್ಯ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ