ಇನ್ನೂ ನಿಲ್ಲದ ಹಗ್ಗ ಜಗ್ಗಾಟ

Team Udayavani, Oct 20, 2017, 6:00 AM IST

vidhana-soudha-750.jpg

ಬೆಂಗಳೂರು: ವಿಧಾನಸೌಧದ ವಜ್ರಮಹೋತ್ಸವ ಕಾರ್ಯಕ್ರಮ ಸಂಬಂಧ ವಿಧಾನ ಮಂಡಲ ಸಚಿವಾಲಯ ಮತ್ತು ಸರ್ಕಾ ರದ ನಡುವಿನ ಹಗ್ಗ ಜಗ್ಗಾಟ ಇನ್ನೂ ನಿಂತ ಹಾಗಿಲ್ಲ. ಒಂದೇ ದಿನ ವಿಶೇಷ ಅಧಿವೇಶನ ನಡೆಸಲು ಸರ್ಕಾರ “ಸೂಚಿಸಿ ರುವ’ ಬೆನ್ನಲ್ಲೇ ಅವತ್ತೇ ಸಂಜೆ ಸಂಪುಟ ಸಭೆಯನ್ನು ಕರೆದಿದೆ. ಈ ಮೂಲಕ ವಿಶೇಷ ಅಧಿವೇಶನಕ್ಕೂ ತಮಗೂ ಯಾವುದೇ ಸಂಬಂಧ ಇಲ್ಲದಂತೆ ವರ್ತಿಸುತ್ತಿರುವುದು ಮತ್ತೂಂದು ಚರ್ಚೆಗೆ ಗ್ರಾಸವಾಗಿದೆ.

ಅಕ್ಟೋಬರ್‌ 25 ರಂದು ಒಂದು ದಿನದ ವಿಶೇಷ ಅಧಿವೇಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ ಇರುವ ಪಟ್ಟಿಯನ್ನು ವಿಧಾನ ಸಭೆ ಕಾರ್ಯದರ್ಶಿ ಎಸ್‌. ಮೂರ್ತಿ ಅಧಿಕೃತ ಆದೇಶ ಹೊರಡಿಸಿದ್ದಾರೆ. ಆ ಪ್ರಕಾರ ಬೆಳಿಗ್ಗೆ 11 ಗಂಟೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ ಅವರಿಂದ  ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಸಂಜೆ 3ರಿಂದ 5ರವರೆಗೆ ಗಿರೀಶ್‌ ಕಾಸರವಳ್ಳಿ, ಟಿ.ಎನ್‌.ಸೀತಾರಾಮ್‌ ಹಾಗೂ ಮಾಸ್ಟರ್‌ ಕಿಶನ್‌ ನಿರ್ದೇಶನದ ಸಾಕ್ಷ್ಯಚಿತ್ರಗಳ ಪ್ರದರ್ಶನ ನಡೆಯಲಿದೆ. ಆದರೆ, ಸರ್ಕಾರ ಮಾತ್ರ ಅಂದೇ ಮಧ್ಯಾಹ್ನ 4 ಗಂಟೆಗೆ ಸಚಿವ ಸಂಪುಟ ಸಭೆ ಇಟ್ಟುಕೊಂಡಿದ್ದು, ರಾಷ್ಟ್ರಪತಿಗಳು ತೆರಳಿದ ನಂತರ ಯಾವುದೇ ಸಚಿವರು ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಅಕ್ಟೋಬರ್‌ 21 ರಂದು ನಿಗದಿಯಾಗಿದ್ದ ಸಂಪುಟ ಸಭೆಯನ್ನು ಅಕ್ಟೋಬರ್‌ 25ರ ಮಧ್ಯಾಹ್ನ 4 ಗಂಟೆಗೆ ಮುಂದೂಡಿರುವುದು ಸರ್ಕಾರ ವಜ್ರಮಹೋತ್ಸವದ ವಿವಾದದಿಂದ ದೂರ ಉಳಿಯಲು ನಡೆಸಿರುವ ಪ್ರಯತ್ನ ಎನ್ನಲಾಗುತ್ತಿದೆ.

ದುಂದುವೆಚ್ಚ ಮಾಡಿ ನಿರ್ಮಾಣ ಮಾಡಿರುವ ಸಾಕ್ಷ್ಯಚಿತ್ರಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಬಗ್ಗೆ ಈಗಾಗಲೇ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾರ್ಯಕ್ರಮಗಳನ್ನು ವೀಕ್ಷಿಸುವ ಮೂಲಕ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರ ನೀಡುವ ಗೊಡವೆಯಿಂದ ತಪ್ಪಿಸಿಕೊಳ್ಳಲು ಸರ್ಕಾರ ಕ್ಯಾಬಿನೆಟ್‌ ಸಭೆ ಕರೆಯುವ ಮೂಲಕ ಜಾಣತನದ ಹೆಜ್ಜೆ ಇಡುತ್ತಿದೆ.

ಇನ್ನೂ ಸಿದ್ಧವಾಗದ ಆಹ್ವಾನ ಪತ್ರಿಕೆ
ವಿಧಾನಸೌಧದ ವಜ್ರಮಹೋತ್ಸವ ಕಾರ್ಯಕ್ರಮ ಅದ್ಧೂರಿತನ ಹಿನ್ನೆಲೆಯಲ್ಲಿ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದರೂ, ಅಧಿಕೃತ ಕಾರ್ಯಕ್ರಮಕ್ಕೆ ಶಾಸಕರು ಹಾಗೂ ಗಣ್ಯರಿಗೆ ನೀಡಬೇಕಾದ ಆಹ್ವಾನ ಪತ್ರಿಕೆ ಇನ್ನೂ ಸಿದ್ಧಗೊಂಡಿಲ್ಲ. ವಜ್ರಮಹೋತ್ಸವ ಕಾರ್ಯಕ್ರಮ ಕೇವಲ ಐದು ದಿನ ಉಳಿದಿದ್ದು, ವಿಧಾನ ಮಂಡಲದ ಎರಡೂ ಸದನಗಳ ಮುಖ್ಯಸ್ಥರು ಅಧಿಕೃತ ಆಹ್ವಾನ ಪತ್ರಿಕೆಗೆ ತಲೆ ಕೆಡಿಸಿಕೊಂಡಿಲ್ಲ. ಹೀಗಾಗಿ ಯಾವ ಶಾಸಕರು ಮತ್ತು ಗಣ್ಯರಿಗೆ ಇನ್ನೂ ಆಹ್ವಾನ ತಲುಪಿಲ್ಲ ಎಂದು ತಿಳಿದು ಬಂದಿದೆ.

ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಸಂಬಂಧಿಸಿದ ಪ್ರಕ್ರಿಯೆಯಲ್ಲಿ  ನಾನು ಭಾಗಿಯಾಗಿಲ್ಲ, 10 ಕೋಟಿ ರೂಪಾಯಿ ವೆಚ್ಚದಲ್ಲಿ ವಿಶೇಷ ಅಧಿವೇಶನ, ಸಾಕ್ಷ್ಯಚಿತ್ರದ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿ ಎಲ್ಲಾ ಕಾರ್ಯಕ್ರಮ ಪೂರ್ಣಗೊಳಿಸುವಂತೆ ಸೂಚಿಸಿದ್ದೇನೆ. ಈಗಾಗಲೇ ನಿಗದಿಪಡಿಸಿದ ಬಜೆಟ್‌ನಲ್ಲೇ ವಜ್ರಮಹೋತ್ಸವಕ್ಕೆ ಸಂಬಂಧಿಸಿದ ಸಮಾರಂಭ ಪೂರ್ಣಗೊಳಿಸಬೇಕು.
– ಸಿದ್ಧರಾಮಯ್ಯ, ಮುಖ್ಯಮಂತ್ರಿ

ವಿಧಾನಸೌಧ ವಜ್ರ ಮಹೋತ್ಸವ ಸಾಕ್ಷ್ಯಚಿತ್ರ “ಬಜೆಟ್‌’ ಕಡಿತ
ಬೆಂಗಳೂರು:
ವಿಧಾನಸೌಧ ವಜ್ರ ಮಹೋತ್ಸವದ ವೆಚ್ಚ ವಿವಾದದ ಸ್ವರೂಪ ಪಡೆದು 26.87 ಕೋಟಿ ರೂ. ಅಂದಾಜು ಪ್ರಸ್ತಾವನೆ 10 ಕೋಟಿ ರೂ.ಗೆ ಇಳಿಕೆಯಾಗಿರುವುದರಿಂದ ಇದೀಗ ಸಾಕ್ಷ್ಯಚಿತ್ರಗಳ “ಬಜೆಟ್‌’ಗೂ ಕತ್ತರಿ ಬಿದ್ದಿದೆ.

ನಟ ಮಾಸ್ಟರ್‌ ಕಿಶನ್‌, ನಿರ್ದೇಶಕರಾದ ಗಿರೀಶ್‌ ಕಾಸರವಳ್ಳಿ, ಟಿ.ಎನ್‌.ಸೀತಾರಾಂ ಅವರ ನಿರ್ದೇಶನದ ಸಾಕ್ಷ್ಯಚಿತ್ರಗಳ ವೆಚ್ಚವನ್ನೂ ಕಡಿತಗೊಳಿಸಲಾಗಿದ್ದು, 40 ಲಕ್ಷ ರೂ. ಒಳಗೆ ಮಾಡಿಕೊಡುವಂತೆ ಸೂಚಿಸಲಾಗಿದೆ.

ಮಾಸ್ಟರ್‌ ಕಿಶನ್‌ ನಿರ್ದೇಶನದಲ್ಲಿ  “ವರ್ಚುÂಯೆಲ್‌ ರಿಯಾಲಿಟಿ’ ತಂತ್ರಜ್ಞಾನದಡಿ “ವಿಧಾನಸೌಧ 3ಡಿ ವಚ್ಯುìಯೆಲ್‌ ರಿಯಾಲಿಟಿ’ ಪ್ರದರ್ಶನದ ವೆಚ್ಚ 1.4 ಕೋಟಿ ರೂ.ಗೆ ಬದಲಾಗಿ 40 ಲಕ್ಷ ರೂ.ಗಳ ಒಳಗೆ ಮಾಡಿಕೊಡಲು ಸೂಚಿಸಲಾಗಿದೆ.

ಅದೇ ರೀತಿ  ಗಿರೀಶ್‌ ಕಾಸರವಳ್ಳಿ ನಿರ್ದೇಶನದ “ವಿಧಾನಸೌಧ ಕಟ್ಟಡ ನಿರ್ಮಾಣ’ ಕುರಿತ ಸಾಕ್ಷ್ಯಚಿತ್ರ 1.2 ಕೋಟಿ ರೂ. ಬದಲಾಗಿ 40 ಲಕ್ಷ ರೂ., ಟಿ.ಎನ್‌.ಸೀತಾರಾಂ ನಿರ್ದೇಶನದ “ಕರ್ನಾಟಕ ವಿಧಾನಮಂಡಲ ನಡೆದು ಬಂದ ಹಾದಿ’ ಕುರಿತ ಸಾಕ್ಷ್ಯಚಿತ್ರ 1.58 ಕೋಟಿ ರೂ. ಬದಲಾಗಿ 50 ಲಕ್ಷಕ್ಕೆ ಇಳಿಸಲಾಗಿದೆ. ಒಟ್ಟಾರೆ ಶೇ.60 ರಷ್ಟು ವೆಚ್ಚ ಕಡಿಮೆಗೊಳಿಸಲಾಗಿದೆ.

ಜತೆಗೆ ಎರಡು ದಿನಗಳ ಕಾರ್ಯಕ್ರಮ ಒಂದೇ ದಿನಕ್ಕೆ ಸೀಮಿತಗೊಳಿಸಿರುವುದರಿಂದ ಅ.25 ರಂದೇ ಸಾಕ್ಷ್ಯಚಿತ್ರಗಳ ಪ್ರದರ್ಶನ, ನಾಡು-ನುಡಿ, ಕಲೆ-ಸಂಸ್ಕೃತಿ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನಡೆಯಲಿದೆ. ಮೂರು ಸಾಕ್ಷ್ಯಚಿತ್ರಗಳ ಜತೆಗೆ ವಾರ್ತಾ ಇಲಾಖೆ  ವಜ್ರಮಹೋತ್ಸವ ಕುರಿತ 70 ಸೆಕೆಂಡ್‌ಗಳ ಕಿರುಚಿತ್ರ ಸಹ ನಿರ್ಮಿಸಿದೆ.

“ವಿಧಾನಸೌಧ 3ಡಿ ವಚ್ಯುìಯೆಲ್‌ ರಿಯಾಲಿಟಿ’ ಪ್ರದರ್ಶನ ನಮಗೆ ವಹಿಸಲಾಗಿತ್ತು. ಮೊದಲಿಗೆ ಅದರ ವೆಚ್ಚ 1.4 ಕೋಟಿ ರೂ. ಅಂದಾಜು ಮಾಡಲಾಗಿತ್ತು. ಇದೀಗ 40 ಲಕ್ಷ ರೂ.ಗೆ ಇಳಿಸಲಾಗಿದೆ. ಆದರೂ ಗುಣಮಟ್ಟದಲ್ಲಿ ಯಾವುದೇ ಕೊರತೆ ಇಲ್ಲದಂತೆ ಆದಷ್ಟು  ಉತ್ತಮವಾಗಿ ಸಾಕ್ಷ್ಯಚಿತ್ರ ಸಿದ್ಧಪಡಿಸಲಾಗುತ್ತಿದೆ. ನನಗೆ ಹಣಕ್ಕಿಂತ ಐತಿಹಾಸಿಕ ಸಮಾರಂಭಕ್ಕೆ ಸಾಕ್ಷ್ಯಚಿತ್ರ ನಿರ್ಮಿಸುವ ಅವಕಾಶ ಸಿಕ್ಕಿರುವುದು ಮುಖ್ಯ.
-ಮಾಸ್ಟರ್‌ ಕಿಶನ್‌, ನಟ, ನಿರ್ದೇಶಕ

ಟಾಪ್ ನ್ಯೂಸ್

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

ಬಿಜೆಪಿ-ಜೆಡಿಎಸ್‌ ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

BJP-JDS ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

BCCI

T20 World Cup: ಇಂದು ಭಾರತ ತಂಡ ಪ್ರಕಟ?

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqqwqwqeqwe

Kodava Hockey: ಚೇಂದಂಡಕ್ಕೆ 3ನೇ ಪ್ರಶಸ್ತಿ

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

1-wwwewqe

IPL; ವಿಲ್‌ ಜಾಕ್ಸ್‌ ಭಾರೀ ಸಂಚಲನ: ಆರೇ ನಿಮಿಷದಲ್ಲಿ ಅರ್ಧ ಶತಕ!

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

ಬಿಜೆಪಿ-ಜೆಡಿಎಸ್‌ ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

BJP-JDS ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.