ಟ್ಯಾಪ್‌ಮಿಯಿಂದ ವರ್ಚುವಲ್‌ ಎಕ್ಸಿಕ್ಯೂಟೀವ್‌ ಶಿಕ್ಷಣ


Team Udayavani, Aug 22, 2018, 12:22 PM IST

tapmi.jpg

ಬೆಂಗಳೂರು: ದೇಶದ ಪ್ರಮುಖ ಬ್ಯುಸಿನೆಸ್‌ ಸ್ಕೂಲ್‌ ಟಿ.ಎ. ಪೈ ಮ್ಯಾನೇಜ್‌ಮೆಂಟ್‌ ಇನ್‌ಸ್ಟಿಟ್ಯೂಟ್‌ (ಟಿಎಪಿಎಂಐ- ಟ್ಯಾಪ್‌ಮಿ) ತನ್ನ ಬೃಹತ್‌ ನೂತನ ಉಪಕ್ರಮ ಟ್ಯಾಪ್‌ಮಿ ವರ್ಚುವಲ್‌ ಎಕ್ಸಿಕ್ಯೂಟೀವ್‌ ಲರ್ನಿಂಗ್‌ ಕಾರ್ಯಕ್ರಮವನ್ನು  ನೇರವಾಗಿ 27ಕ್ಕೂ ಹೆಚ್ಚಿನ ನಗರಗಳಲ್ಲಿ ಆರಂಭಿಸಲಿದೆ.

ಟ್ಯಾಪ್‌ಮಿ ವರ್ಚುವಲ್‌ ಉಪಕ್ರಮದ ಮೊದಲ ಪ್ರಮುಖ ಕಾರ್ಯಕ್ರಮವನ್ನು ಬ್ಯಾಂಕಿಂಗ್‌, ವಿಮೆ ಮತ್ತು ಹಣಕಾಸು ಮಾರುಕಟ್ಟೆಗಳಲ್ಲಿ (ಬಿಐಎಫ್‌ಎಂ) ಸ್ನಾತಕೋತ್ತರ ಪದವಿ ಸರ್ಟಿಫಿಕೇಟ್‌ ಕಾರ್ಯಕ್ರಮವನ್ನಾಗಿ ಸಾದರಪಡಿಸಲಾಗುತ್ತಿದ್ದು, ಉದ್ಯೋಗಸ್ಥ ಕಾರ್ಯನಿರ್ವಾಹಕರಿಗೆ ನೂತನ ಕಲಿಕೆಯ ಅವಕಾಶವನ್ನು ಸೃಷ್ಟಿಸುತ್ತಿದೆ.

ಟ್ಯಾಪ್‌ಮಿ ನಿರ್ದೇಶಕ ಡಾ. ಮಧು ವೀರರಾಘವನ್‌ ಅವರು ಮಾತನಾಡಿ, ಟ್ಯಾಪ್‌ಮಿ ವರ್ಚುವಲ್‌ ಕಾರ್ಯಕ್ರಮ ತಮ್ಮ ವೃತ್ತಿಜೀವನದಲ್ಲಿ ಕ್ಷಿಪ್ರಗತಿಯಲ್ಲಿ ಬೆಳೆಯುವ ಆಸಕ್ತಿ ಹೊಂದಿರುವ ಕಾರ್ಪೊರೇಟ್‌ ಕಾರ್ಯನಿರ್ವಾಹಕರನ್ನು ಗುರಿಯಾಗಿಟ್ಟುಕೊಂಡಿದೆ.

ಈ ಕಲಿಕೆ ಮತ್ತು ಅನ್ವಯದ ಮಾದರಿಯನ್ನು ಜೀವನದುದ್ದಕ್ಕೂ ಕಲಿಕೆಗಾಗಿ ನೈಜ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಟ್ಯಾಪ್‌ಮಿ ವರ್ಚುವಲ್‌ ನಿಜಕ್ಕೂ ಭವಿಷ್ಯದ ತರಗತಿಯಾಗಿದ್ದು ತಾವು ಎಲ್ಲಿರುವರೋ ಅಲ್ಲಿಯೇ ಗುಣಮಟ್ಟದ ಶಿಕ್ಷಣದ ಅಗತ್ಯ ಹೊಂದಿರುವ ಜನತೆಯನ್ನು ತಲುಪುತ್ತಿದೆ ಎಂದರು.

ಟ್ಯಾಪ್‌ಮಿ ಕ್ಯಾಂಪಸ್‌ನಲ್ಲಿ ಸ್ಟುಡಿಯೋ ಮೂಲಸೌಕರ್ಯವನ್ನು ಸೃಷ್ಟಿಸಿದ್ದು, ಅಗತ್ಯವಿರುವ ಕಡೆಗಳಿಗೆ ಇಲ್ಲಿಂದ ಕಾರ್ಯಕ್ರಮವನ್ನು ವಿತರಿಸಲಾಗುತ್ತಿದೆ. ವಿಸಿ ಈಗ ಟ್ಯಾಪ್‌ಮಿ ತಂತ್ರಜ್ಞಾನ ಪಾಲುದಾರನಾಗಿದ್ದು ತನ್ನ ವಿಡಿಯೋ ಕಾನ್ಫರೆನ್ಸಿಂಗ್‌ ವೇದಿಕೆ ಅಳವಡಿಸಿ ದೇಶದ ಎಲ್ಲೆಡೆ ಇರುವ ತರಗತಿಗಳಲ್ಲಿನ ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಸ್ಥಾಪಿಸುತ್ತದೆ.

ಬ್ಯಾಂಕಿಂಗ್‌ ಮತ್ತು ಹಣಕಾಸು ಸೇವೆಗಳ ಕಾರ್ಯಕ್ರಮದ ಮುಖ್ಯಸ್ಥ ಡಾ. ಮೀರಾ ಎಲ್‌.ಬಿ. ಅರಾನ್ಹ ಅವರು ಮಾತನಾಡಿ, ವಿಮೆ, ಕ್ರೆಡಿಟ್‌ ಕಾರ್ಡ್‌, ಡಿಜಿಟಲ್‌ ಹಣ ಪಾವತಿ ಹಾಗೂ ಷೇರು ಮಾರುಕಟ್ಟೆಯಲ್ಲಿ ಚಿಲ್ಲರೆ ಹೂಡಿಕೆಗಳು ಭಾರತದಲ್ಲಿ ಕನಿಷ್ಠ ಪ್ರಮಾಣದಲ್ಲಿ ಜನರನ್ನು ತಲುಪಿದೆ. ಆದರೆ, ಹೆಚ್ಚುತ್ತಿರುವ ಜಾಗೃತಿ ಮತ್ತು ಈ ವ್ಯವಹಾರಗಳಿಗೆ ಅನುಕೂಲ ಮಾಡಿಕೊಡುತ್ತಿರುವ ವ್ಯವಸ್ಥೆಗಳೊಂದಿಗೆ ಸಂಪೂರ್ಣ ಬಿಎಫ್‌ಎಸ್‌ಐ ಕ್ಷೇತ್ರ ಗುಣಾತ್ಮಕ ಪರಿವರ್ತನೆ ಹಾಗೂ ಪ್ರಮಾಣದಲ್ಲಿ ಬೆಳವಣಿಗೆಗೆ ಸಜ್ಜಾಗಿದೆ ಎಂದಿದ್ದಾರೆ.

ಈ ಸಂದರ್ಭದಲ್ಲಿ ಟ್ಯಾಪ್‌ಮಿ ವರ್ಚುವಲ್‌ ಎಕ್ಸಿಕ್ಯೂಟೀವ್‌ ಲರ್ನಿಂಗ್‌ ಚೇರನ್‌ ಪ್ರೊಫೆಸರ್‌ ಸೂರ್ಯ ಮಾತನಾಡಿ, 11 ತಿಂಗಳ ಈ ಕಾರ್ಯಕ್ರಮ ವರ್ಚುವಲ್‌ ಸಿಂಕ್ರೋನಸ್‌ ಮಾದರಿ, ಕ್ಯಾಂಪಸ್‌ ವಿಭಾಗ, ಪ್ರಾಜೆಕ್ಟ್ ವರ್ಕ್‌ ಹಾಗೂ ಆಫ್‌-ಕ್ಲಾಸ್‌ರೂಮ್‌ ಎಂಗೇಜ್‌ಮೆಂಟ್‌ಗಳ ಮಿಶ್ರಣದ ಮೂಲಕ ವಿತರಿಸಲಾಗುತ್ತಿದೆ.

ಕ್ಯಾಂಪಸ್‌ ವಿಭಾಗದಲ್ಲಿ ಭಾಗವಹಿಸುವವರಿಗೆ ಹಣಕಾಸು ಪ್ರಯೋಗಾಲಯದಲ್ಲಿ ಬ್ಲೂಮ್‌ಬೆರ್ಗ್‌ ಮತ್ತು ರಾಯrರ್ ಟರ್ಮಿನಲ್‌ ಮುಖಾಂತರ ಅನ್ವಯಿತ ಮಾರುಕಟ್ಟೆ ಚಿಂತನೆಗಳಲ್ಲಿ ನೇರವಾಗಿ ಭಾಗವಹಿಸಿ ಕಲಿಯುವ ಅವಕಾಶವನ್ನು ಪೂರೈಸಲಿದೆ. ಟ್ಯಾಪ್‌ಮಿ ಲರ್ನಿಂಗ್‌ ಆ್ಯಂಡ್‌ ಎಂಗೇಜ್‌ಮೆಂಟ್‌ ಪ್ಲಾಟ್‌ಫಾರಂ (ಲೀಪ್‌) ಮತ್ತು ಲರ್ನಿಂಗ್‌ ಟ್ಯಾಪ್‌ನಲ್ಲಿ ಭಾಗವಹಿಸಿದವರ ಕಲಿಕೆಗೆ ಪೂರಕವಾಗಲಿದೆ.

ಈ ಕಾರ್ಯಕ್ರಮ ನ.11, 2018ಕ್ಕೆ ಆರಂಭವಾಗಲಿದ್ದು, ಈ ಕೋರ್ಸ್‌ ಶುಲ್ಕ 4.0 ಲಕ್ಷ ರೂ.ಗಳಾಗಲಿವೆ. ಅರ್ಜಿ ಸಲ್ಲಿಸುವವರು ಕನಿಷ್ಟ ನಾಲ್ಕು ವರ್ಷ ಉದ್ಯಮದ ಅನುಭವ ಹಾಗೂ ಪದವಿ ಪೂರ್ಣಗೊಳಿಸಿದ ನಂತರ ಪ್ರತಿಷ್ಠಿತ ಕಂಪನಿಗಳಲ್ಲಿ ಅನುಭವ ಹೊಂದಿರುವ ಅಗತ್ಯವಿರುತ್ತದೆ ಎಂದರು.

ಟಾಪ್ ನ್ಯೂಸ್

Farmer

Reveled; ಮೃತಪಟ್ಟಿರುವ ರೈತರ ಹೆಸರಿನಲ್ಲೇ ಪಹಣಿ !

Exam

NEET ಮಹಾರಾಷ್ಟ್ರದಲ್ಲೂ ಅಕ್ರಮ ಬಹಿರಂಗ

HDK (3)

Mining; ನನ್ನ ಮೇಲೆ ಸಿಟ್ಟು ; ದೇವದಾರಿಗೆ ತಡೆ : ಕೇಂದ್ರ ಸಚಿವ ಕುಮಾರಸ್ವಾಮಿ

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Rain ಕರಾವಳಿ: ಜೂ.26ರ ವರೆಗೆ ಬಿರುಸಿನ ಮಳೆ ಸಾಧ್ಯತೆ

Rain ಕರಾವಳಿ: ಜೂ.26ರ ವರೆಗೆ ಬಿರುಸಿನ ಮಳೆ ಸಾಧ್ಯತೆ

ಕರಾವಳಿಯ ಪ್ರಮುಖ ದೇಗುಲಗಳಲ್ಲಿ ಭಕ್ತಸಂದಣಿ

ಕರಾವಳಿಯ ಪ್ರಮುಖ ದೇಗುಲಗಳಲ್ಲಿ ಭಕ್ತಸಂದಣಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

High Court: ಕುದುರೆ ರೇಸ್‌ಗೆ ಹೈಕೋರ್ಟ್‌ ತಡೆ

High Court: ಕುದುರೆ ರೇಸ್‌ಗೆ ಹೈಕೋರ್ಟ್‌ ತಡೆ

Driving license: ಡ್ರೈವಿಂಗ್‌ ಲೈಸೆನ್‌ ನೀಡಲು ಮುಂದೆ ಬಂದ ಖಾಸಗಿ ಕೇಂದ್ರ

Driving license: ಡ್ರೈವಿಂಗ್‌ ಲೈಸೆನ್‌ ನೀಡಲು ಮುಂದೆ ಬಂದ ಖಾಸಗಿ ಕೇಂದ್ರ

Kaithota

Bengaluru: ಬುದ್ಧಿಮಾಂದ್ಯರಿಗೆ ಇಕೋ ಥೆರಪಿ, ಕೈತೋಟ ತರಬೇತಿ

Suburban rail: ಉಪನಗರ ರೈಲು ಮಾರ್ಗಕ್ಕೆ 2800 ಕೋಟಿ ವಿದೇಶಿ ಸಾಲ

Suburban rail: ಉಪನಗರ ರೈಲು ಮಾರ್ಗಕ್ಕೆ 2800 ಕೋಟಿ ವಿದೇಶಿ ಸಾಲ

Water-Pipe

Bengaluru: ಜುಲೈಗೆ ಕಾವೇರಿ 5ನೇ ಹಂತದ ನೀರು ಪೂರೈಕೆ

MUST WATCH

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

udayavani youtube

ಮುಳ್ಳಯ್ಯನಗಿರಿ,ದತ್ತಪೀಠ, ಸೀತಾಳಯ್ಯನಗಿರಿಯಲ್ಲಿ ಜನಜಾತ್ರೆ; ಖಾಕಿ ಹೈ ಅಲರ್ಟ್

udayavani youtube

ಕಡುಬು ಸೇವೆಗೆ ಒಲಿಯುವ ಮುಂಡ್ರಪಾಡಿ ಈಶ

udayavani youtube

ಅಣ್ಣಾವ್ರ ಅಪರೂಪದ ವಿಡಿಯೋ | ಯೋಗ ದಿನ | ಡಾ. ರಾಜ್ ಕುಮಾರ್

ಹೊಸ ಸೇರ್ಪಡೆ

Farmer

Reveled; ಮೃತಪಟ್ಟಿರುವ ರೈತರ ಹೆಸರಿನಲ್ಲೇ ಪಹಣಿ !

Exam

NEET ಮಹಾರಾಷ್ಟ್ರದಲ್ಲೂ ಅಕ್ರಮ ಬಹಿರಂಗ

HDK (3)

Mining; ನನ್ನ ಮೇಲೆ ಸಿಟ್ಟು ; ದೇವದಾರಿಗೆ ತಡೆ : ಕೇಂದ್ರ ಸಚಿವ ಕುಮಾರಸ್ವಾಮಿ

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.