Udayavni Special

ಸಸ್ಯಕಾಶಿಯಲ್ಲಿ ವಿವೇಕ ಸ್ಮರಣೆ


Team Udayavani, Jan 15, 2020, 3:10 AM IST

sasyakashi

ಬೆಂಗಳೂರು: ಸಸ್ಯಕಾಶಿ ಲಾಲ್‌ಬಾಗ್‌ ಯುವಜನತೆಯ ಆದರ್ಶ ವಿವೇಕಾನಂದರಿಗೆ ಪುಪ್ಪ ನಮನ ಸಲ್ಲಿಸಲು ಸಜ್ಜಾಗುತ್ತಿದ್ದು, ಉದ್ಯಾನದೆಲ್ಲೆಡೆ ವಿವೇಕ ಸ್ಮರಣೆ ನಡೆಯಲಿದೆ. ವಿವೇಕಾನಂದರ 157ನೇ ಜನ್ಮ ದಿನದ ಹಿನ್ನೆಲೆ ಜ.17 ರಿಂದ 26ರವರೆಗೆ ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ಗಣರಾಜ್ಯೋತ್ಸವ ಫ‌ಲಪುಷ್ಪ ಪ್ರದರ್ಶನದಲ್ಲಿ ವಿವೇಕಾನಂದರ ಜೀವನವನ್ನು ಹೂವುಗಳಿಂದ ಅನಾವರಣಗೊಳಿಸಲಾಗುತ್ತಿದೆ.

ಲಕ್ಷಾಂತರ ಹೂವುಗಳನ್ನು ಬಳಿಸಿ ವಿವೇಕಾನಂದರ 16 ಅಡಿ ಎತ್ತರದ ಪ್ರತಿಮೆ, ಚಿಕಾಗೋ ವಿವೇಕಾ ನಂದ ಸ್ಮಾರಕ, ಬೇಲೂರು ವಿವೇಕಾನಂದರ ಮಠ, ಕನ್ಯಾಕುಮಾರಿ ವಿವೇಕಾನಂದ ಸ್ಮಾರಕ ಸೇರಿ ದಂತೆ ವಿವಿಧ ಪ್ರತಿಕೃತಿಗಳನ್ನು ನಿರ್ಮಿಸ ಲಾಗುತ್ತಿದ್ದು, ಇವುಗಳ ಜತೆಗೆ ವಿವೇಕಾನಂದ ಸಂದೇಶ , ಸಾಧನೆಗಳ ಕಾರ್ಯಕ್ರಮ ನಡೆಯಲಿದೆ.

ಫ‌ಲಪುಷ್ಪ ಪ್ರದರ್ಶನದ ಹಿನ್ನೆಲೆ ಲಾಲ್‌ಬಾಗ್‌ನ ತೋಟಗಾರಿಕೆ ಮಾಹಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ತೋಟ ಗಾರಿಕೆ ಇಲಾಖೆಯ ನಿರ್ದೇಶಕ ಡಾ.ಬಿ.ವೆಂಕ ಟೇಶ್‌ ಮಾತನಾಡಿ, ಮೈಸೂರು ಉದ್ಯಾನಕಲಾ ಸಂಘ ಹಾಗೂ ತೋಟಗಾರಿಕೆ ಇಲಾಖೆ ಜಂಟಿ ಯಾಗಿ 210 ಫ‌ಲಪುಷ್ಟ ಪ್ರದರ್ಶನಗಳನ್ನು ಯಶಸ್ವಿಯಾಗಿ ನಡೆಸಿದೆ. ಈ ಬಾರಿ ಹೂವಿನ ಕಲಾಕೃತಿಗಳ ಮೂಲಕ ವಿವೇಕಾನಂದರ ಸಾಧನೆ ಹಾಗೂ ಕೊಡುಗೆಗಳನ್ನು ಇಂದಿನ ಜನರಿಗೆ ತಿಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಜ.17( ಶುಕ್ರವಾರ) ರಂದು ಮಧ್ಯಾಹ್ನ 12ಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪ್ರದರ್ಶನವನ್ನು ಉದ್ಘಾಟನೆ ಮಾಡಲಿದ್ದಾರೆ. ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಹರ್ಷಾನಂದ, ಸಚಿವ ವಿ.ಸೋಮಣ್ಣ ಸೇರಿದಂತೆ ಶಾಸಕರು, ಸಂಸದರು, ವಿಧಾನಪರಿಷತ್ತು ಸದಸ್ಯರು, ಮೇಯರ್‌ ಹಾಗೂ ಬಿಬಿಎಂಪಿ ಸದಸ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

98ಕ್ಕೂ ಹೆಚ್ಚು ಬಗೆಯ ವೈವಿಧ್ಯಮಯ ಹೂವುಗಳನ್ನು ಬಳಸಲಾಗುತ್ತಿದ್ದು, ಈ ಬಾರಿ ವಿಶೇಷವಾಗಿ 10 ದೇಶಗಳಿಂದ ಹೂವುಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಗಾಜಿನ ಮನೆಯ ಪ್ರವೇಶಿಸುತ್ತಿದ್ದಂತೆ ಧ್ಯಾನಸ್ಥ ವಿವೇಕಾನಂದ ಪ್ರತಿಮೆ ಇರಲಿದೆ. ಒಳಭಾಗದಲ್ಲಿ 16 ಅಡಿ ಎತ್ತರದ ಕನ್ಯಾಕುಮಾರಿಯಲ್ಲಿರುವ ಸ್ವಾಮಿ ವಿವೇಕಾನಂದ ಪ್ರತಿಮೆ ಮಾದರಿಯನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.

ಕನ್ಯಾಕುಮಾರಿ ಸ್ವಾಮಿ ವಿವೇಕಾನಂದ ಸ್ಮಾರಕ: ಗಾಜಿನ ಮನೆಯ ಹೃದಯ ಭಾಗದಲ್ಲಿ ಸ್ವಾಮಿ ವಿವೇಕಾನಂದರು ಕನ್ಯಾಕುಮಾರಿಗೆ ಭೇಟಿ ಕೊಟ್ಟ ದೇವಸ್ಥಾನ, ಕಡಲ ತುದಿಯಲ್ಲಿ ನಿಂತು ಭವ್ಯ ಭಾರತವನ್ನು ಕಂಡ ಪರಿ, ಸದ್ಯ ಅಲ್ಲಿರುವ ವಿವೇಕಾನಂದ ಶಿಲೆಯ ಮಾದರಿಯನ್ನು 1.6 ಲಕ್ಷ ಹೂವುಗಳನ್ನು ಬಳಸಿ ನಿರ್ಮಿಸಲಾಗುತ್ತಿದೆ. ಈ ಮಾದರಿಯು 80×40ಅಡಿ ಅಳತೆ ಇದ್ದು,

16ಅಡಿಯ ಪ್ರತಿಮೆ ಹಾಗೂ 21ಅಡಿ ಉದ್ದ, 17ಅಡಿ ಎತ್ತರ, 8ಅಡಿ ಅಗಲದ ದೇವಸ್ಥಾನ ಮಾದರಿ ಇಲ್ಲಿರಲಿದೆ. 75 ಸಾವಿರ ಕೆಂಪು, ಬಿಳಿ, ಹಳದಿ ಗುಲಾಬಿ ಹೂವುಗಳು, 75 ಸಾವಿರ ಸೇವಂತಿಗೆ, 3 ಸಾವಿರ ವಿವಿಧ ಜಾತಿಯ ಎಲೆ ಗಳು, 2 ಸಾವಿರ ವಿಶೇಷ ಹೂವುಗಳನ್ನು ಬಳಸಿ ಐವರು ಕಲಾವಿದರು 40 ಮಂದಿ ಸಹಾಯಕರ ತಂಡವು ಈ ಮಾದರಿಯನ್ನು ನಿರ್ಮಿಸುತ್ತಿದೆ.

ಬೇಲೂರು ಮಠ ದೇಗುಲ- ಚಿಕಾಗೊ ಸ್ಮಾರಕ: ಪಶ್ಚಿಮ ಬಂಗಾಳದಲ್ಲಿರುವ ಬೇಲೂರು ಮಠದ ವಿವೇಕಾನಂದ ದೇವಸ್ಥಾನ ಮಾದರಿಯನ್ನು 6 ಅಡಿ ಉದ್ದ, 3 ಅಡಿ ಅಗಲದಲ್ಲಿ ನಿರ್ಮಿಸ ಲಾಗುತ್ತಿದೆ. ಈ ದೇವಾಲಯದ ಮಾದರಿ ಮೇಲೆ ಓಂ ಅಕ್ಷರವು ಅರಳಲಿದೆ. ಜತೆಗೆ ವಿವೇಕಾ ನಂದರನ್ನು ವಿಶ್ವಕ್ಕೆ ಪರಿಚಯಿಸಿದ ಚಿಕಾಗೊ ನಗರದಲ್ಲಿರುವ ಚಿಕಾಗೋ ಉದ್ಯಾ ನದ ಸ್ಮಾರಕ ಮಾದರಿಯಲ್ಲಿಯೇ ಹೂವಿನ ಮಂಟಪ ನಿರ್ಮಿಸಲಾಗುತ್ತಿದೆ. ಸ್ಮಾರಕ ಮಾ¨ ‌ರಿಗೆ 1.5 ಲಕ್ಷ ಹೂವುಗಳನ್ನು ಬಳಸಲಾಗುತ್ತಿದೆ.

ವರ್ಟಿಕಲ್‌ ಗಾರ್ಡ್‌ನ್‌: ಗಾಜಿನ ಮನೆ ಬಲಭಾಗದಲ್ಲಿ ವರ್ಟಿಕಲ್‌ ಗಾರ್ಡ್‌ನ್‌ ಮೂಲಕ ವಿವೇಕಾನಂದರು ಬೆಂಗಳೂರಿಗೆ ಭೇಟಿ ನೀಡಿದ್ದ ನೆನಪನ್ನು ಕಟ್ಟಿಕೊಡಲಾಗುತ್ತಿದೆ. 13×13 ಅಡಿ ಸುತ್ತಳತೆ, 11 ಅಡಿ ಎತ್ತರದ ಈ ಗಾರ್ಡ್‌ನ್‌ ಅನ್ನು ಸಿದ್ಧಪಡಿಸಲಾಗುತ್ತಿದೆ. ಇನ್ನು ಗಾಜಿನ ಮನೆ ಸುತ್ತ ಹೂವಿನ ಪಿರಮಿಡ್ಡುಗಳು ಹಾಗೂ ಕಲಾವಿದರ ಕೈಚಳಕದಲ್ಲಿ ಮೂಡಿ ಬಂದಿರುವ ಸ್ವಾಮಿ ವಿವೇಕಾನಂದರ ಉಬ್ಬು ಶಿಲ್ಪಗಳು ಇರಲಿವೆ. ಇವುಗಳ ಜತೆಗೆ ವಿವಿಧ ವಿನ್ಯಾಸದ ಪರಿಸರ ಸ್ನೇಹಿ, ವರ್ಟಿಕಲ್‌ ಮಾದರಿ ಪ್ರದರ್ಶನ, ಎಚ್‌ಎಎಲ್‌, ಬಿಡಿಎ, ಬಿಬಿಎಂಪಿ ಸೇರಿದಂತೆ ವಿವಿಧ ಸಂಸ್ಥೆಗಳು ಬೆಳೆಸಿರುವ ಹೂವುಗಳ ಪ್ರದರ್ಶನ ಇರಲಿದೆ.

1.6 ಕೋಟಿ ರೂ. ವೆಚ್ಚ, 6 ಲಕ್ಷ ಹೂ ಬಳಕೆ: ಜ.17ರಿಂದ 26ರವೆರೆಗೆ 10 ದಿನಗಳ ಕಾಲ ಪ್ರದರ್ಶನ ನಡೆಯಲಿದ್ದು, ತಾಜಾತನ ಹಾಗೂ ಆಕರ್ಷಣೆ ಕಾಯ್ದುಕೊಳ್ಳಲು ಎರಡು ಬಾರಿ ಹೂಗಳನ್ನು ಬದಲಿಸಬೇಕಾಗುತ್ತದೆ. ಪ್ರದರ್ಶ ನಕ್ಕೆ ಆರು ಲಕ್ಷ ಹೂವುಗಳನ್ನು ಬಳಸುತ್ತಿದ್ದು, ಒಟ್ಟಾರೆ 1.6 ಕೋಟಿ ರೂ. ವೆಚ್ಚದಲ್ಲಿ ಸ್ವಾತಂತ್ರೊತ್ಸವ ಫಲಪುಷ್ಪ ಪ್ರದರ್ಶನ ನಡೆಯಲಿದೆ ಎಂದು ಲಾಲ್‌ಬಾಗ್‌ ಸಸ್ಯತೋಟ ಉಪ ನಿರ್ದೇಶಕ ಎಂ.ಆರ್‌.ಚಂದ್ರಶೇಖರ್‌ ತಿಳಿಸಿದರು.

ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್‌ ಮಾತನಾಡಿ, ಈ ಬಾರಿ ಪ್ರದರ್ಶನಕ್ಕೆಆರು ಲಕ್ಷಕ್ಕೂ ಅಧಿಕ ಮಂದಿ ಸೇರುವ ನಿರೀಕ್ಷೆ ಇದೆ. ಒಂದು ಅಗ್ನಿ ಶಾಮಕ ದಳ, ಪ್ಯಾರಾ ಮೆಡಿಕಲ್‌ಫೋರ್ಸ್‌ ಒಳಗೊಂಡು 5 ಆ್ಯಂಬುಲೆನ್ಸ್‌, 37 ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಕ್ಲೋಕ್‌ ರೂಂ ಸೌಲಭ್ಯವಿದೆ, ಲಾಲ್‌ಬಾಗ್‌ನಲ್ಲಿಯೇ ಪೊಲೀಸ್‌ ಔಟ್‌ಪೋಸ್ಟ್‌ ತೆರೆಯಲಾಗುತ್ತಿದೆ. 400ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿಯ ಭದ್ರತೆಯಿರಲಿದೆ ಎಂದರು.

ವಾಹನ ನಿಲುಗಡೆ: ಪ್ರದರ್ಶನದ ವೇಳೆ ಲಾಲ್‌ಬಾಗ್‌ನಲ್ಲಿ ವಾಹನ ಪ್ರವೇಶ, ನಿಲುಗಡೆ ನಿಷೇಧಿಸಲಾಗಿದೆ. ಪ್ರದರ್ಶನಕ್ಕೆ ಆಗಮಿಸುವ ಸಾರ್ವಜನಿಕರು ಮತ್ತು ಪ್ರವಾಸಿಗರು ವಾಹನಗಳನ್ನು ಶಾಂತಿನಗರ ಬಸ್‌ನಿಲ್ದಾಣದಲ್ಲಿರುವ ಬಹುಮಹಡಿ ವಾಹನ ನಿಲ್ದಾಣ, ಜೆ.ಸಿ.ರಸ್ತೆ ಮಯೂರ ಹೋಟೆಲ್‌ ಬಳಿಯ ನಿಲುಗಡೆ ಮಾಡಬಹು ದಾಗಿದೆ. ಜತೆಗೆ ಅಲ್‌-ಅಮೀನ್‌ ಕಾಲೇಜು ಮೈದಾನದಲ್ಲಿ ದ್ವಿಚಕ್ರವಾಹನಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.

ಶಾಲಾ ಮಕ್ಕಳಿಗೆ ಉಚಿತ ಪ್ರವೇಶ: ಶಾಲಾ ಮಕ್ಕಳಿಗೆ ಫ‌ಲ ಪುಷ್ಪ ಪ್ರದರ್ಶನವನ್ನು ಉಚಿತವಾಗಿ ವೀಕ್ಷಿಸಲು ತೋಟಗಾರಿಕೆ ಇಲಾಖೆ ಅನುಕೂಲ ಕಲ್ಪಿಸಿ ಕೊಟ್ಟಿದೆ. ಜ,18, 20, 21, 22, 23, 24 ರಂದು ಖಾಸಗಿ ಮತ್ತು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಆಯಾ ಶಾಲೆಯ ಗುರುತಿನ ಚೀಟಿಯೊಂದಿಗೆ ಆಗಮಿಸಿ ವೀಕ್ಷಣೆ ಮಾಡಬಹುದಾಗಿದೆ.

ಟಿಕೆಟ್‌ ದರ ಎಷ್ಟು?: ವಯಸ್ಕರಿಗೆ 70 ರೂ. ಹಾಗೂ ಮಕ್ಕಳಿಗೆ 20 ರೂ. ಉದ್ಯಾನದ ಎಲ್ಲಾ ಪ್ರವೇಶ ದ್ವಾರಗಳಲ್ಲಿ ಟಿಕೆಟ್‌ ಲಭ್ಯ.

ಸಮಯ: ಬೆಳಗ್ಗೆ 9 ರಿಂದ 6.30.

ಇತರೆ ವಿಶೇಷತೆಗಳು
-10 ದೇಶಗಳ ಹೂವುಗಳ ಸೇರಿದಂತೆ 2 ಸಾವಿರ ವಿಶೇಷ ಹೂವುಗಳ ಬಳಕೆ

-ವಾರ್ತಾ ಇಲಾಖೆಯಿಂದ ವಿವೇಕಾ ನಂದ ಕುರಿತ ಐತಿಹಾಸಿಕ ಛಾಯಾ ಚಿತ್ರ ಹಾಗೂ ಸಾಕ್ಯಾಚಿತ್ರ ಪ್ರದರ್ಶನ

-ಬ್ಯಾಂಡ್‌ ಸ್ಟಾಂಡ್‌ ಬಳಿ ವಿವೇಕಾ ನಂದರ ನೀತಿ ಕಥೆ ದೃಶ್ಯ ಪ್ರಾತ್ಯಕ್ಷಿಕೆ.

-ಉದ್ಘಾಟನೆ ದಿನ 1008 ಮಕ್ಕಳಿಂದ ವಿವೇಕಾನಂದ ವೇಷಭೂಷಣೆ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ನಗರ ಆಸ್ತಿ ತೆರಿಗೆ ಸಲ್ಲಿಕೆಗೆ ಜುಲೈ 31ರವರೆಗೂ ಅವಕಾಶ

ನಗರ ಆಸ್ತಿ ತೆರಿಗೆ ಸಲ್ಲಿಕೆಗೆ ಜುಲೈ 31ರವರೆಗೂ ಅವಕಾಶ

ಕಾಂಗ್ರೆಸ್ ಮನಸ್ಥಿತಿ ದಾಸ್ಯದ್ದು: ಎಸ್.ಆರ್. ವಿಶ್ವನಾಥ್ ಲೇವಡಿ

ಕಾಂಗ್ರೆಸ್ ಮನಸ್ಥಿತಿ ದಾಸ್ಯದ್ದು: ಎಸ್.ಆರ್. ವಿಶ್ವನಾಥ್ ಲೇವಡಿ

ಎಲ್ಲಾ ಯೋಜನೆಗಳಿಗೆ ನೆಹರೂ, ಗಾಂಧಿ ಹೆಸರನ್ನೇ ಇಡೋಕಾಗುತ್ತಾ?: ಸಚಿವ ಅಶೋಕ್ ತಿರುಗೇಟು

ಎಲ್ಲಾ ಯೋಜನೆಗಳಿಗೆ ನೆಹರೂ, ಗಾಂಧಿ ಹೆಸರನ್ನೇ ಇಡೋಕಾಗುತ್ತಾ?: ಸಚಿವ ಅಶೋಕ್ ತಿರುಗೇಟು

ಸಂಬಳ ಇಲ್ಲ, ಕೆಲಸವೂ ಇಲ್ಲ…ಈಗ ಕಾರು ಮಾರಾಟ ಅನಿವಾರ್ಯ: ನಟ ಮಾನಸ್ ಶಾ!

ಸಂಬಳ ಇಲ್ಲ, ಕೆಲಸವೂ ಇಲ್ಲ…ಈಗ ಕಾರು ಮಾರಾಟ ಅನಿವಾರ್ಯ: ನಟ ಮಾನಸ್ ಶಾ!

ಹಾವೇರಿ ಜಿಲ್ಲೆಯಲ್ಲಿ ಮತ್ತೆ ನಾಲ್ವರಿಗೆ ಕೋವಿಡ್-19 ಸೋಂಕು ಪತ್ತೆ

ಹಾವೇರಿ ಜಿಲ್ಲೆ: 2 ವರ್ಷದ ಮಗು ಸೇರಿದಂತೆ ನಾಲ್ವರಿಗೆ ಕೋವಿಡ್-19 ಸೋಂಕು ಪತ್ತೆ

ಶುಂಠಿಯ ಸವಿರುಚಿ

ರುಚಿಕರವಾದ ಅಡುಗೆ…ಶುಂಠಿ ತಂಬುಳಿ, ಶುಂಠಿ ಬರ್ಫಿ ಮಾಡೋದು ಹೇಗೆ?

ದಾನಿಗಳ ನೆರವಿನಿಂದ ಯುವಕರ ಶ್ರಮದಾನದಿಂದ ನಿರ್ಮಾಣವಾಯಿತು ಮಹಿಳೆಗೆ ಮನೆ

ದಾನಿಗಳ ನೆರವಿನಿಂದ ಯುವಕರ ಶ್ರಮದಾನದಿಂದ ನಿರ್ಮಾಣವಾಯಿತು ಮಹಿಳೆಗೆ ಮನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಂಗ್ರೆಸ್ ಮನಸ್ಥಿತಿ ದಾಸ್ಯದ್ದು: ಎಸ್.ಆರ್. ವಿಶ್ವನಾಥ್ ಲೇವಡಿ

ಕಾಂಗ್ರೆಸ್ ಮನಸ್ಥಿತಿ ದಾಸ್ಯದ್ದು: ಎಸ್.ಆರ್. ವಿಶ್ವನಾಥ್ ಲೇವಡಿ

ಎಲ್ಲಾ ಯೋಜನೆಗಳಿಗೆ ನೆಹರೂ, ಗಾಂಧಿ ಹೆಸರನ್ನೇ ಇಡೋಕಾಗುತ್ತಾ?: ಸಚಿವ ಅಶೋಕ್ ತಿರುಗೇಟು

ಎಲ್ಲಾ ಯೋಜನೆಗಳಿಗೆ ನೆಹರೂ, ಗಾಂಧಿ ಹೆಸರನ್ನೇ ಇಡೋಕಾಗುತ್ತಾ?: ಸಚಿವ ಅಶೋಕ್ ತಿರುಗೇಟು

commmis bbmp

ಮೇಲ್ಸೇತುವೆಗೆ ಸಾವರ್ಕರ್‌ ಹೆಸರು, ಆಕ್ಷೇಪ: ವಾಕ್ಸಮರ

bud bidabedi

ನಮ್ಮೂರಿಗೆ ಸದ್ಯಕ್ಕೆ ಬಸ್‌ ಬಿಡಬೇಡಿ!

sparhe

ಮೀನಿಗೆ ಗಾಳ ಹಾಕುವ ಸ್ಪರ್ಧೆ ಆರಂಭಿಸಲು ಸಿದ್ಧತೆ!

MUST WATCH

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

udayavani youtube

Karnataka : A Farmer who quits Private Job & became Successful in Agriculture

ಹೊಸ ಸೇರ್ಪಡೆ

ಧ್ಯಾನ್‌ ಚಂದ್‌ ಭಾರತೀಯ ಹಾಕಿಯ ಪಿತಾಮಹ ; ಬಲ್ಬೀರ್ ಸಿಂಗ್‌ ಭಾರತೀಯ ಹಾಕಿಯ ಅಂಕಲ್‌

ಧ್ಯಾನ್‌ ಚಂದ್‌ ಭಾರತೀಯ ಹಾಕಿಯ ಪಿತಾಮಹ ; ಬಲ್ಬೀರ್ ಸಿಂಗ್‌ ಭಾರತೀಯ ಹಾಕಿಯ ಅಂಕಲ್‌

ಮುರಳಿ ಅಕಾಡೆಮಿಯಲ್ಲಿ ಮಾಯಾಂಕ್ ಅಗರ್ವಾಲ್‌ ಅಭ್ಯಾಸ

ಮುರಳಿ ಅಕಾಡೆಮಿಯಲ್ಲಿ ಮಾಯಾಂಕ್ ಅಗರ್ವಾಲ್‌ ಅಭ್ಯಾಸ

ಮೇಜರ್‌ ಸುಮನ್‌ಗೆ ಯುಎನ್‌ ಪ್ರಶಸ್ತಿ

ಮೇಜರ್‌ ಸುಮನ್‌ಗೆ ಯುಎನ್‌ ಪ್ರಶಸ್ತಿ

ಮಹಾರಾಷ್ಟ್ರಕ್ಕೂ ಬಂತು ಪಾಕ್‌ನ  ಮಿಡತೆ!

ಮಹಾರಾಷ್ಟ್ರಕ್ಕೂ ಬಂತು ಪಾಕ್‌ನ  ಮಿಡತೆ!

ಕಾಡಿನಲ್ಲಿ ಇನ್ನೂ ಭಯಾನಕ ವೈರಸ್‌ಗಳುಂಟು: ಝೆಂಗ್ಲಿ

ಕಾಡಿನಲ್ಲಿ ಇನ್ನೂ ಭಯಾನಕ ವೈರಸ್‌ಗಳುಂಟು: ಝೆಂಗ್ಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.