
ಬೂದಿಗೆರೆ ಕೆರೆಯಲ್ಲಿನ್ನು 24ಗಂಟೆಯೂ ನೀರು
Team Udayavani, Dec 2, 2021, 12:54 PM IST

ವಿಜಯಪುರ: ಇನ್ನು ಮುಂದೆ ಬೂದಿಗೆರೆ ಕೆರೆ 24 ಗಂಟೆಯೂ ತುಂಬಿರುವಂತೆ ಮುಂದಿನ ದಿನಗಳಲ್ಲಿ ನೀರು ಹರಿಯುತ್ತದೆ ಎಂದು ಮಾಜಿ ಸಂಸದ ವೀರಪ್ಪಮೊಯ್ಲಿ ಹೇಳಿದರು.
ವಿಜಯಪುರ ಸಮೀಪದ ಬೂದಿಗೆರೆ ಕೆರೆ ತುಂಬಿದ್ದು, ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿ, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಬೆಂಗಳೂರು ತ್ಯಾಜ್ಯ ನೀರನ್ನು ಕೆರೆಗಳಿಗೆ ತುಂಬಿಸುವ ಯೋಜನೆ ಜಾರಿಗೆ ತಂದಿದ್ದು, ಈ ಭಾಗದ ಕೆರೆಗಳಿಗೆ ನೀರು ತುಂಬಿದ್ದರಿಂದ ಮಳೆಗಾಲದಲ್ಲಿ ಮಳೆ ನೀರು ಹಾಗೂ ಎಚ್.ಎನ್. ವ್ಯಾಲಿ ನೀರಿನಿಂದ ಬೂದಿಗೆರೆ ಕೆರೆ ಸದಾ ತುಂಬಿರುತ್ತದೆ.
ಮುಂದಿನ ದಿನಗಳಲ್ಲಿ ಎತ್ತಿನಹೊಳೆ ನೀರು ಚಿಕ್ಕಬಳ್ಳಾಪುರ ಜಿಲ್ಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ನೀರು ಹರಿಯುತ್ತವೆ. ಈಗಾಗಲೇ ಸಕಲೇಶಪುರ, ಹಾಸನವರೆಗೂ ನೀರು ಬರುತ್ತಿದೆ. ಕೊರಟೆಗೆರೆ ಹತ್ತಿರ ಡ್ಯಾಂ ನಿರ್ಮಾಣವಾಗ ಬೇಕು. ಇದು ಇನ್ನೂ ಇತ್ಯರ್ಥವಾಗಿಲ್ಲ. ಎತ್ತಿನಹೊಳೆ ನೀರು ಬಂದರೆ ಕುಡಿವ ನೀರಿಗೆ ಅನುಕೂಲವಾಗುತ್ತದೆ ಎಂದರು.
ಇದನ್ನೂ ಓದಿ;- ನಿಸರ್ಗ ಚಿಕಿತ್ಸೆ ದುಬಾರಿ ಅಲ್ಲವೇ ಅಲ್ಲ.. ನಿಸರ್ಗ ಚಿಕಿತ್ಸೆ ಪಾರ್ಲರ್ ವೆಚ್ಚಕ್ಕಿಂತ ಕಡಿಮೆ
ಮಾಜಿ ಸಚಿವ ಕೃಷ್ಣಬೈರೇಗೌಡ ಮಾತನಾಡಿ, ಬೆಂಗಳೂರು ತ್ಯಾಜ್ಯ ನೀರು ತಮಿಳುನಾಡಿಗೆ ಹರಿದು ಹೋಗುತ್ತಿತ್ತು. ಈ ನೀರನ್ನು ಸಂಸ್ಕರಣೆ ಮಾಡಿ ಎರಡು ಭಾಗಗಳಾಗಿ ವಿಂಗಡಿಸಿ ಚಿಕ್ಕಬಳ್ಳಾಪುರ ಕಡೆಗೆ ಎಚ್. ಎನ್. ವ್ಯಾಲಿ ಹಾಗೂ ಕೋಲಾರ ಕಡೆಗೆ ಕೆಸಿ ವ್ಯಾಲಿ ನೀರನ್ನು ಬಿಡುಗಡೆ ಮಾಡಲಾಯಿತು. ಎಚ್. ಎನ್. ವ್ಯಾಲಿ ನೀರನ್ನು ಬಿಡುಗಡೆ ಕಾಮಗಾರಿ ಪ್ರಾರಂಭಕ್ಕೆ ದೇವನಹಳ್ಳಿಯಲ್ಲಿ ಭೂಮಿ ಪೂಜೆ ಮಾಡಿಸಿ ನೀರು ಬಿಡುವಂತೆ ಆಗಿದೆ.
ಈಗಲೂ ಎಚ್. ಎನ್. ವ್ಯಾಲಿ ನೀರಿನಿಂದ ಕೆರೆಗಳು ತುಂಬಿದ್ದು, ಮಳೆ ನೀರಿನಿಂದ ಬೂದಿಗೆರೆ ಕೆರೆ ತುಂಬಿದೆ. ಇದರಿಂದ ರೈತರಿಗೆ ಸಂತಸ ಉಂಟಾಗಿದೆ. ಅಂತರ್ಜಲ ಹೆಚ್ಚುತ್ತದೆ. ಬೆಟ್ಟಕೋಟೆ, ಹಾಗೂ ವೆಂಕಟಗಿರಿಕೋಟೆ ಕೆರೆ ತುಂಬಿರುವುದರಿಂದ ದಂಡಿಗಾನಹಳ್ಳಿ ಕೆರೆ ತುಂಬಿ ವಿಜಯಪುರ ಕೆರೆಗೆ ನೀರು ಹರಿಯುತ್ತದೆ. ತಾಲೂಕಿನಲ್ಲಿ ಎಲ್ಲಾ ಕೆರೆಗಳು ತುಂಬುತ್ತವೆ.
ಇದು ನಮ್ಮ ಕಾಂಗ್ರೆಸ್ ಸರ್ಕಾರ ಇದ್ದಾಗ ಯೋಜನೆ ಜಾರಿಗೆ ಮಾಡಿದ್ದು, ಬಿಜೆಪಿ ಜೆಡಿಎಸ್ ಇದನ್ನು ವಿರೋಧಿಸಿದ್ದು, ಈಗ ಕೆರೆ ತುಂಬಿದಾಗ ವಿರೋಧ ಮಾಡಿದ ಪಕ್ಷಗಳ ಶಾಸಕರೇ ಬಾಗಿನ ಅರ್ಪಿಸುತ್ತಿದ್ದಾರೆ. ನೀರಿನ ಸಮಸ್ಯೆ ಬಗೆಹರಿದರೆ ರೈತರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.
ಮಾಜಿ ಸಂಸದ ಸಿ.ನಾರಾಯಣಸ್ವಾಮಿ, ಮಾಜಿ ಶಾಸಕರುಗಳಾದ ವೆಂಕಟಸ್ವಾಮಿ, ಮುನಿನರಸಿಂಹಯ್ಯ, ಜಿಪಂ ಮಾಜಿ ಅಧ್ಯಕ್ಷ ಬಿ.ರಾಜಣ್ಣ, ಜಿಪಂ ಮಾಜಿ ಉಪಾಧ್ಯಕ್ಷೆ ಅನಂತಕುಮಾರಿ ಚಿನ್ನಪ್ಪ, ಮಾಜಿ ಸದಸ್ಯರಾದ ಲಕ್ಷ್ಮೀ ನಾರಾಯಣ್, ಕೆ. ಸಿ. ಮಂಜುನಾಥ್, ಗ್ರಾಪಂ ಅಧ್ಯಕ್ಷೆ ಗೀತಾ ಆನಂದ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ ಶ್ರೀನಿವಾಸ್, ತಾಪಂ ಮಾಜಿ ಅಧ್ಯಕ್ಷೆ ಭಾರತಿ ಲಕ್ಷ್ಮಣಗೌಡ, ಗ್ರಾಪಂ ಮಾಜಿ ಅಧ್ಯಕ್ಷರಾದ ಶ್ರೀನಿವಾಸಗೌಡ, ಲಕ್ಷ್ಮಣಮೂರ್ತಿ, ಗ್ರಾಪಂ ಉಪಾಧ್ಯಕ್ಷ ಗಜೇಂದ್ರ, ಸದಸ್ಯರಾದ ರೂಪಾ ಶ್ರೀನಿವಾಸ್, ಅರುಂಧತಿ ಅಪ್ಪಯ್ಯ, ಶ್ರೀನಿವಾಸ್, ಮಂಜುನಾಥ್, ಚೌಡಪ್ಪ, ಗೌರಮ್ಮ, ಜಿಲ್ಲಾ ಎಸ್ಸಿ ಘಟಕದ ಕಾಂಗ್ರೆಸ್ ಅಧ್ಯಕ್ಷ ಲೋಕೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ಉಪಾಧ್ಯಕ್ಷ ದ್ಯಾವರಹಳ್ಳಿ ಶಾಂತ ಕುಮಾರ್, ಕಾರ್ಯದರ್ಶಿ ಎಸ್.ಪಿ. ಮುನಿರಾಜ್, ಚೌಡಪ್ಪನಹಳ್ಳಿ ಎಂಪಿಸಿಎಸ್ ಅಧ್ಯಕ್ಷ ಮುರಳಿ ಇತರರು ಹಾಜರಿದ್ದರು
ಟಾಪ್ ನ್ಯೂಸ್
