ಮಹಿಳಾ ದಿನಾಚರಣೆ ವಿಶೇಷ: ಜನ ಸೇವೆ ಜೊತೆ ಕೃಷಿಯಲ್ಲೂ ಸಾಧನೆ

ತರಕಾರಿ, ಹೂ ಬೆಳೆದ ವೀಣಾ ರವಿಕುಮಾರ್‌ , ಅತ್ಯುತ್ತಮ ಕೃಷಿ ಪ್ರಶಸ್ತಿ ಪಡೆದು ಮಾದರಿ

Team Udayavani, Mar 8, 2022, 2:46 PM IST

ಜನ ಸೇವೆ ಜೊತೆ ಕೃಷಿಯಲ್ಲೂ ಸಾಧನೆ

ದೇವನಹಳ್ಳಿ: ಸಮಾಜದಲ್ಲಿ ಮಹಿಳೆ ಅಬಲೆಯಲ್ಲ ಸಬಲೆ. ಪುರುಷರಂತೆ ಎಲ್ಲಾ ಕ್ಷೇತ್ರದಲ್ಲೂ ಪ್ರಗತಿ ಸಾಧಿಸುತ್ತಿದ್ದಾಳೆ. ಆ ಸಾಲಿನಲ್ಲಿ ಕೊಯಿರ ಗ್ರಾಪಂ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ವೀಣಾ ರವಿಕುಮಾರ್‌ ಕೂಡ ಸೇರುತ್ತಾರೆ.

ಕೊಯಿರ ಹೊಸೂರು ಗ್ರಾಪಂ ಕ್ಷೇತ್ರದಿಂದ ಆಯ್ಕೆ ಆದ ವೀಣಾ ರವಿಕುಮಾರ್‌ ಎಸ್ಸೆಸ್ಸೆಲ್ಸಿಓದಿದ್ದು, ಜನ ಸೇವೆ ಜೊತೆಗೆ ಕೃಷಿಚಟುವಟಿಕೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಶುಂಠಿ, ಮಾರಿಗೋಲ್ಡ್‌ ಮತ್ತು ಐಶ್ವರ್ಯ ತಳಿಯ ಹೂ, ಕ್ಯಾಪ್ಸಿಕಂ, ರೇಷ್ಮೆ,ತೊಗರಿ ಹೀಗೆ ವಿವಿಧ ಬೆಳೆಬೆಳೆಯುವ ಮೂಲಕ ಕೃಷಿಹಾಗೂ ತೋಟಗಾರಿಕೆ ಇಲಾಖೆ ಯಿಂದ ಅತ್ಯುತ್ತಮ ಕೃಷಿಪ್ರಶಸ್ತಿ ಪಡೆದು ಇತರರಿಗೆ ಮಾದರಿಯಾಗಿದ್ದಾರೆ. ಪ್ರಸ್ತುತ ಶುಂಠಿ ಬೆಳೆ ಎರಡು ಎಕರೆ, ರೇಷ್ಮೆ ಎರಡು ಎಕರೆ, ಒಂದುಎಕರೆಯ ಪಾಲಿಹೌಸ್‌ನಲ್ಲಿ ಮಾರಿಗೋಲ್ಡ್‌ ಮತ್ತು ಐಶ್ವರ್ಯ ತಳಿಯ ಹೂ ಬೆಳೆಯುತ್ತಿದ್ದಾರೆ. ಒಂದು ಬೆಳೆ ಆದನಂತರ ಮತ್ತೂಂದು ಬೆಳೆ ಬೆಳೆಯುವ ಮೂಲಕ ಕೃಷಿ ಚಟುವಟಿಕೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.

ಕೊಟ್ಟಿಗೆ ಗೊಬ್ಬರ ಬಳಕೆ: ರಾಸಾಯನಿಕ ಬಳಸದೇ ಸಾವಯವ ಗೊಬ್ಬರವನ್ನು ಉಪಯೋಗಿಸಿಕೊಂಡು ಬೆಳೆ ಬೆಳೆದು ಪ್ರಗತಿಪರ ಕೃಷಿಕರಾಗಿದ್ದಾರೆ.ಜಾನುವಾರು, ಕುರಿ ಗೊಬ್ಬರ ಬಳಸಿ ಉತ್ತಮಇಳುವರಿ ಪಡೆಯುತ್ತಿದ್ದಾರೆ. ಬೆಳಗ್ಗೆ 7ರಿಂದ 10ಗಂಟೆಯವರೆಗೆ ತೋಟದಲ್ಲಿಕಳೆ ತೆಗೆಯು ವುದು, ನೀರು ಕಟ್ಟುವುದು, ಇತರೆ ಕೆಲಸವನ್ನು ಕೂಲಿಗಾರರ ಜೊತೆ ಮಾಡುತ್ತಿದ್ದಾರೆ. ಇವರಿಗೆ ಪತಿ ರವಿಕುಮಾರ್‌ ಸಾಥ್‌ ನೀಡುತ್ತಿದ್ದಾರೆ

ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ: ಈ ವೇಳೆ ತಮ್ಮ ಸಾಧನೆ ಬಗ್ಗೆ ವಿವರಿಸಿದವೀಣಾರವಿಕುಮಾರ್‌, ಮಹಿಳೆಯರು ನಾಲ್ಕುಗೋಡೆಗೆ ಸೀಮಿತವಾಗದೆ, ಪುರುಷಪ್ರಧಾನಕ್ಷೇತ್ರದಲ್ಲಿ ಕೃಷಿ, ತೋಟಗಾರಿಕೆ ಬೆಳೆ ಬೆಳೆದುಮತ್ತೂಬ್ಬರಿಗೆ ಮಾದರಿ ಆಗಬೇಕು. ಆಗಿನಕಾಲದಲ್ಲಿ ನಮ್ಮ ಹಿರಿಯರು ತೋಟ, ಕೃಷಿಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದರಿಂದ ಆರೋಗ್ಯವಂತರಾಗಿ ನೂರಾರು ವರ್ಷ ಬಾಳುತ್ತಿದ್ದರು ಎಂದು ಹೇಳಿದರು.

ಕುಟುಂಬಸ್ಥರು ಸಹಕರಿಸಲಿ: ಹಿರಿಯರ ಮಾರ್ಗದರ್ಶನದಲ್ಲಿ ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಯನ್ನು ಕಳೆದ ನಾಲ್ಕೈದುವರ್ಷಗಳಿಂದ ಮಾಡಿಕೊಂಡು ಬಂದಿದ್ದೇವೆ. ಕೃಷಿಮತ್ತು ತೋಟಗಾರಿಕೆ ಮಾಡಲು ನಮ್ಮ ಪತಿರವಿಕುಮಾರ್‌, ಮಕ್ಕಳು ಸಹಕಾರ ನೀಡುತ್ತಿದ್ದಾರೆ.ಕಾಲಕಾಲಕ್ಕೆ ಯಾವ ಬೆಳೆ ಹಾಕಬೇಕೆಂದು ಕೃಷಿಮತ್ತು ತೋಟಗಾರಿಕೆ ಅಧಿಕಾರಿಗಳಿಂದ ಮಾಹಿತಿ ಪಡೆದು ಬೆಳೆ ಬೆಳೆಯಲಾಗುತ್ತಿದೆ.

ಎಲ್ಲಾ ಮಹಿಳೆಯರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಕೃಷಿ ಮತ್ತು ತೋಟಗಾರಿಕೆ, ರೇಷ್ಮೆ ಅಧಿಕಾರಿಗಳು ಗ್ರಾಮೀಣ ಪ್ರದೇಶದಮಹಿಳೆಯರಿಗೆ ಸರ್ಕಾರದ ಸೌಲಭ್ಯಗಳು,ಹೆಚ್ಚಿನ ಸಮಗ್ರ ಮಾಹಿತಿಯನ್ನು ನೀಡಬೇಕು ಎಂದು ಹೇಳಿದರು.

-ಎಸ್‌.ಮಹೇಶ್‌

ಟಾಪ್ ನ್ಯೂಸ್

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

10

Electricity problem: ಬೇಸಿಗೆ ಬೆನ್ನಲ್ಲೇ ಕಾಡುತ್ತಿದೆ ವಿದ್ಯುತ್‌ ಸಮಸ್ಯೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.