ಮಾರಕ ಪ್ಲಾಸ್ಟಿಕ್‌ ವಿರುದ್ಧ ಹೋರಾಟ


Team Udayavani, Jun 5, 2023, 3:33 PM IST

tdy-11

ದೊಡ್ಡಬಳ್ಳಾಪುರ: ಜೂನ್‌ 5 ವಿಶ್ವ ಪರಿಸರ ದಿನಾಚರಣೆ. ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್‌ ಮಾಲಿನ್ಯ ನಿಯಂತ್ರಣದ ಪರಿಹಾರ ಗಳ ಮೇಲೆ ಕೇಂದ್ರೀಕರಿ ಸುವ ದೃಷ್ಟಿಯಿಂದ ಪ್ಲಾಸ್ಟಿಕ್‌ ಮಾಲಿನ್ಯ ಸೋಲಿಸಿ ಈ ಬಾರಿಯ ಧ್ಯೇಯವಾಕ್ಯವಾಗಿದೆ.ಒಂದೆಡೆ ಕೈಗಾರಿಕೆಗಳ ತ್ಯಾಜ್ಯಗಳಿಂದ ಉಂಟಾಗುತ್ತಿರುವ ಮಾಲಿನ್ಯ ಒಂದೆಡೆಯಾದರೆ, ನಗರ ಪ್ರದೇಶಗಳಲ್ಲಿ ಪ್ಲಾಸ್ಟಿಕ್‌ನಿಂದಾಗುತ್ತಿರುವ ಮಾಲಿನ್ಯ ಗಂಭೀರ ವಿಚಾರವಾಗಿದೆ.

ಕೈಗಾರೀಕರಣದ ವರ ಹಾಗೂ ಶಾಪ: ದೊಡ್ಡ ಬಳ್ಳಾಪುರ ತಾಲೂಕಿನಲ್ಲಿ 80ರ ದಶಕದಲ್ಲಿ ಆರಂಭ ವಾದ ಕೈಗಾರಿಕಾ ಪ್ರದೇಶ ದಲ್ಲಿ ಕೈಗಾರಿಕೆಗಳಿಂದಾಗಿ ಸಹಸ್ರಾರು ಉದ್ಯೋಗಗಳು ಸೃಷ್ಟಿಯಾಗಿವೆ. ಆದರೆ ಇದು ಶಾಪವಾಗಿಯೂ ಪರಿಣಮಿಸಿದೆ. ಕಸಬಾ ಹೋಬಳಿ ಬಾಶೆಟ್ಟಿಹಳ್ಳಿ ಗ್ರಾಮದ ವ್ಯಾಪ್ತಿ ಯಲ್ಲಿ ಪ್ರಥಮ ಹಂತದಲ್ಲಿ ಕೆಐಡಿಬಿ ಭೂ ಸ್ವಾಧೀನ ಮಾಡಿ ಕೊಂಡಿತು. ನಂತರ ಇಲ್ಲಿನ ಸುತ್ತಮುತ್ತಲ ಗ್ರಾಮ ಗಳಲ್ಲಿ 4 ಹಂತಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಡೆದು ನೂರಾರು ಕೈಗಾರಿಕೆಗಳು ಸ್ಥಾಪನೆಯಾಗಿವೆ. 90ರ ದಶಕದಲ್ಲಿಯೇ ಇಲ್ಲಿನ ಶ್ರೀಷ್ಮ ಕೆಮಿ ಕಲ್ಸ್‌ ಕಾರ್ಖಾನೆಯಿಂದ ಉಂಟಾಗಿದ್ದ ಪರಿಸರ ಮಾಲಿನ್ಯ ದಿಂದಾಗಿ ಕೈಗಾರಿಕೆಗಳಿಂದಾಗುವ ಮಾಲಿನ್ಯದ ಬಿಸಿ ತಟ್ಟಿತು. ಕಾರ್ಖಾನೆ ಸ್ಥಗಿತ ಗೊಳಿಸುವಂತೆ ನಡೆದ ಹಲ ವಾರು ಹೋರಾಟಗಳಾಗಿ ಕಂಪನಿ ಬಾಗಿಲು ಮುಚ್ಚಿತು.

ನಂತರದ ವರ್ಷಗಳಲ್ಲಿ ಕೈಗಾರಿ ಕೆಗಳ ತ್ಯಾಜ್ಯ ನೀರು ಬಾಶೆಟ್ಟಿಹಳ್ಳಿ ,ವೀರಾಪುರ ,ಚಿಕ್ಕತುಮ ಕೂರು ಸೇರಿದಂತೆ ಸುತ್ತಮುತ್ತಲ ಗ್ರಾಮದ ಕೆರೆಗಳಿಗೆ ಹರಿಸಲಾಗುತ್ತಿದೆ ಎಂದು ಗ್ರಾಮಸ್ಥರು ಪ್ರತಿಭಟನೆ ಗಳನ್ನು ಇಂದಿಗೂ ನಡೆಸುತ್ತಿದ್ದಾರೆ. ಕಾರ್ಖಾನೆಗಳಲ್ಲಿನ ತ್ಯಾಜ್ಯ ಗಳನ್ನು ನಿಷ್ಟ್ರಿಯವಾಗಿರುವ ಕೊಳವೆ ಬಾವಿ ಗಳಿಗೆ ಹರಿಸಿರುವ ನಿದರ್ಶನಗಳಿವೆ. ಪ್ರಸ್ತುತ ಅರ್ಕಾ ವತಿ ನದಿ ಪಾತ್ರದ ಕರೆಗಳ ಸಂರಕ್ಷಣಾ ವೇದಿಕೆಯಿಂದ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ತ್ಯಾಜ್ಯ ನೀರು ಹಾಗೂ ನಗರಸಭೆಯ ಒಳಚರಂಡಿ ನೀರು ಕೆರೆಗೆ ಹರಿದು ಮಲಿನವಾಗುತ್ತಿದೆ ಎಂದು ಹೋರಾ ಟಗಳು ನಡೆಯುತ್ತಿದ್ದು, ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಲು ಗ್ರಾಮಸ್ಥರು ಸಿದ್ಧತೆ ನಡೆಸಿದ್ದರು. ವೀರಾಪುರ ಹಾಗೂ ಚಿಕ್ಕತುಮಕೂರು ಕೆರೆಗಳಲ್ಲಿ ಕಲುಷಿತ ನೀರಿನಿಂದ ಮೀನುಗಳು ಸಾವನ್ನಪ್ಪುವ ಸಂಗತಿ ಸಾಮಾನ್ಯವಾಗಿದೆ.

ಕೈಗಾರಿಕೆಗಳ ಕಲುಷಿತ ನೀರಿನಿಂದಿನ ಇಲ್ಲಿನ ಅಂತರ್ಜಲ ಮಲಿನವಾಗಿದೆ. ಈ ಹಿಂದೆ ಇಲ್ಲಿನ ನೀರಿನ ಮಾದರಿಗಳನ್ನು ಪ್ರಯೋಗಾಲಕ್ಕೆ ಕಳುಹಿಸಿರುವ ವರದಿಗಳಲ್ಲಿ ನೀರಿನಲ್ಲಿ ರಾಸಾಯನಿಕ ಅಂಶಗಳಿರುವುದು ದೃಢವಾಗಿದೆ. ಈ ದಿಸೆ ಯಲ್ಲಿ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳ ಬೇಕಿದೆ ಎನ್ನುತ್ತಾರೆ ಅರ್ಕಾವತಿ ನದಿ ಪಾತ್ರದ ಕರೆಗಳ ಸಂರಕ್ಷಣಾ ವೇದಿಕೆಯ ಮುಖಂಡ ವಸಂತ್‌ ಕುಮಾರ್‌.

ನಗರದ ಜೀವನಾಡಿಯಾದ ನಾಗರಕೆರೆಯಲ್ಲಿ ಒಳಚರಂಡಿಯ ತ್ಯಾಜ್ಯ ನೀರು ಹರಿದು ಕೆರೆ ಮಲಿನ ವಾಗುತ್ತಿದ್ದರೂ ಸಂಬಂಧಪಟ್ಟವರು ಗಮನ ಹರಿ ಸುತ್ತಿಲ್ಲ. ಇಲ್ಲಿನ ಒಳಚರಂಡಿ ಚೇಂಬರ್‌ಗಳನ್ನು ಕೂಡಲೇ ಸ್ಥಳಾಂತರಗೊಳಿಸಬೇಕಿದೆ ಎನ್ನುತ್ತಾರೆ ಪರಿಸರ ಪ್ರೇಮಿ ದೇವರಾಜ್‌.

ಪರಿಸರ ಮಾಲಿನ್ಯ : ದೊಡ್ಡಬಳ್ಳಾಪುರ ತಾಲೂಕಿನಲ್ಲಿ 3.5 ಲಕ್ಷಕ್ಕೂ ಮೀರಿದ ಜನಸಂಖ್ಯೆಯಿದೆ. ಕೈಗಾರಿಕೆ ಗಳಿಂದ ಆಗುವ ಮಾಲಿನ್ಯದಿಂದ ಅಂತರ್ಜಲ ಕಲು ಷಿತವಾಗುತ್ತಿದೆ. ನಗರದಲ್ಲಿ ಮೂಲ ಸೌಕರ್ಯ ಗಳಿಲ್ಲದೇ ಬಡಾವಣೆಗಳು ಮಿತಿಮೀರಿ ಬೆಳೆಯುತ್ತಿವೆ. ನಗರ ದಲ್ಲಿ ಸಹಸ್ರಾರು ವಾಹನ ಗಳಿಂದಾಗಿ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ವಾಯು ಮಾಲಿನ್ಯ, ಎಲ್ಲೆಂದರಲ್ಲಿ ಕಸ ಹಾಕುವುದು, ಗಿಡ ಮರಗಳಿಗೆ ಕೊಡಲಿ ಹಾಕುವುದು ಅವ್ಯಾಹತವಾಗಿ ನಡೆಯುತ್ತಿದೆ. ತಾಲೂಕಿನ ಚಿಗರೇನಹಳ್ಳಿಯಲ್ಲಿನ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕಕ್ಕೆ ಬಿಬಿಎಂಪಿ ವ್ಯಾಪ್ತಿಯಿಂದ ಕಸ ತಂದು ಸುರಿಯುತ್ತಿರುವುದು ಇಲ್ಲಿನ ಸುತ್ತಮುತ್ತಲ ಪರಿಸರಕ್ಕೆ ಹಾನಿಯಾಗುತಿದ್ದು , ಘಟಕವನ್ನು ಸ್ಥಗಿತಗೊಳಿಸಬೇಕು ಎನ್ನುವ ಕೂಗುಗಳು ಕೇಳಿ ಬರುತ್ತಿವೆ. ಎತ್ತಿನ ಹೊಳೆ ಯೋಜನೆಗಾಗಿ ನಿರ್ಮಿ ಸುತ್ತಿರುವ ಬೈರಗೊಂಡ್ಲು ಜಲಾಶಕ್ಕೆ ಎಂಎಸ್‌ಜಿಪಿ ಯಿಂದ ಹೊರ ಬರುವ ತ್ಯಾಜ್ಯ ನೀರು ಸೇರುವ ಅಪಾಯವಿದೆ.

ಇನ್ನು ಇಲ್ಲಿನ ಕಸ ರಾಶಿಯಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯದ ಪಾತ್ರ ಹೆಚ್ಚಾಗಿದೆ. ಈ ಹಿಂದೆ ಟೆರ್ರಾಫರ್ಮಾ ಘಟಕದಲ್ಲಿಯೂ ಸಹ ಕಸದ ರಾಶಿಗೆ ಬೆಂಕಿ ಬಿದ್ದು , ಸುತ್ತಮುತ್ತಲಿನ ಪ್ರದೇಶದಲ್ಲಿ ಮಾಲಿನ್ಯ ಉಂಟಾಗಿ ದ್ದನ್ನು ಸ್ಮರಿಸಬಹುದು.

ಮಾಲಿನ್ಯದಲ್ಲಿ ಪ್ಲಾಸ್ಟಿಕ್‌ ಪಾತ್ರ:  ಸುಪ್ರೀಂ ಕೋರ್ಟ್‌ ಆದೇಶದಂತೆ ಘನತ್ಯಾಜ್ಯ ವಸ್ತುಗಳ ನಿಯಮ 2000 ದನ್ವಯ ಸ್ಥಳೀಯ ಸಂಸ್ಥೆಗಳ ಆಡಳಿತಗಳು ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಬೇಕು. ನಗರದಲ್ಲಿ ಒಂದು ದಿನಕ್ಕೆ 35 ಟನ್‌ ಕಸ ಉತ್ಪತ್ತಿಯಾಗುತ್ತಿದೆ. ಇದರಲ್ಲಿ ಮನೆಗಳಿಂದ ಉತ್ಪತ್ತಿಯಾಗುವ ಕಸದ ಪ್ರಮಾಣ ದಿನಕ್ಕೆ 20 ಟನ್‌. ಬೇರ್ಪಡಿಸಿ ಸಂಗ್ರಹಿಸಿದ ಕಸವನ್ನು ನಗರದ ಹೊರವಲಯ ದಲ್ಲಿರುವ ವಡ್ಡರಪಾಳ್ಯದ ಸಮೀಪದ ನಗರಸಭೆ ತ್ಯಾಜ್ಯ ವಿಲೇವಾರಿ ಹಾಗೂ ಸಂಗ್ರಹಣಾ ಪ್ರದೇಶಕ್ಕೆ ವಿಲೇವಾರಿ ಮಾಡಲಾಗುತ್ತಿದೆ.

ಹಲವು ಪ್ರದೇಶಗಳಲ್ಲಿ ಕಸ ಸಂಗ್ರಹಣೆ ವಾಹನಕ್ಕೆ ನೀಡದೇ, ಬೀದಿ ಬದಿ ಅಥವಾ ಖಾಲಿ ನಿವೇಶನ ದಲ್ಲಿ ಸುರಿಯಲಾಗುತ್ತಿದ್ದು, ಇದನ್ನು ನಿಯಂತ್ರಿಸು ವಲ್ಲಿ ನಗರಸಭೆ ವಿಫಲವಾಗುತ್ತಿದೆ. ಕಸದಿಂದ ಸಮೀಪದ ಮನೆಗಳಲ್ಲಿನ ನಾಗರಿಕರಿಗೆ ತೊಂದರೆ ಯಾಗುತ್ತಿದೆ ಜೊತೆಗೆ ಇಲ್ಲಿನ ಕಸ ರಸ್ತೆಗೆ ಹರಡಿ ಜಾನುವಾರುಗಳು ಸಹ ಕಸ ತಿನ್ನುತ್ತಿರುತ್ತವೆ ಎನ್ನುವುದು ಸ್ಥಳೀಯ ನಾಗರಿಕರ ದೂರು.

ಪ್ಲಾಸ್ಟಿಕ್‌ ವಿರುದ್ಧ ಸಮರ: ಈ ಬಾರಿಯ ಪರಿಸರ ದಿನಾಚರಣೆಯ ಧ್ಯೇಯ ವಾಕ್ಯ ಪ್ಲಾಸ್ಟಿಕ್‌ ವಿರುದ್ದ ಸಮರವಾಗಿದೆ. ನಗರದಲ್ಲಿ ಪರಿಸರಕ್ಕೆ ಮಾರಕವಾಗಿರುವ ಏಕ ಬಳಕೆಯ ಪ್ಲಾಸ್ಟಿಕ್‌ ಬಳಕೆ ಹಾಗೂ ಮಾರಾಟವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಆದರೆ ನಗರ ಸೇರಿದಂತೆ ಗ್ರಾಮೀಣ ಪ್ರದೇಶ ಗಳಲ್ಲಿಯೂ ಸಹ ಪ್ಲಾಸ್ಟಿಕ್‌ ಬಳಕೆ ಕಡಿಮೆಯಾಗಿಲ್ಲ. ನಗರಸಭೆಯಿಂದ ಅಂಗಡಿಗಳ ಮೇಲೆ ದಾಳಿ ನಡೆಸಿ, ನಿಷೇಧಿತ ಪ್ಲಾಸ್ಟಿಕ್‌ ವಶಪಡಿಸಿ ಕೊಂಡು, ದಂಡ ವಿಧಿಸಲಾಗುತ್ತಿದ್ದರೂ ಇದನ್ನು ನಿಯಂತ್ರಣ ಮಾಡಲು ಸಾಧ್ಯವಾಗುತ್ತಿಲ್ಲ. ಈಗ ಸರ್ಕಾರದ ಕಟ್ಟುನಿಟ್ಟಿನ ನಿಷೇಧವಿರುವುದರಿಂದ ನಗರಸಭೆ ಹೆಚ್ಚಿನ ಗಮನ ಹರಿಸಬೇಕಿದೆ. ಬೀದಿ ಬದಿಗಳಲ್ಲಿ ಕಸ ಹಾಕುವವರಿಗೆ ದಂಡ ವಿಧಿಸ ಬೇಕಿದೆ ಎನ್ನುತ್ತಾರೆ ಪರಿಸರಾಸಕ್ತರು.

– ಡಿ. ಶ್ರೀಕಾಂತ

ಟಾಪ್ ನ್ಯೂಸ್

Mangaluru ಪೊಲೀಸ್‌ ಹೆಡ್‌ಕಾನ್‌ಸ್ಟೆಬಲ್‌ ಕುಸಿದು ಸಾವು

Mangaluru ಪೊಲೀಸ್‌ ಹೆಡ್‌ಕಾನ್‌ಸ್ಟೆಬಲ್‌ ಕುಸಿದು ಸಾವು

Mangaluru ವಯೋವೃದ್ಧ ಸಹೋದರಿಯರು ಆತ್ಮಹತ್ಯೆ

Mangaluru ವಯೋವೃದ್ಧ ಸಹೋದರಿಯರು ಆತ್ಮಹತ್ಯೆ

arrestMangaluru ಗಾಂಜಾ ಸೇವನೆ: ಇಬ್ಬರ ಬಂಧನ

Mangaluru ಗಾಂಜಾ ಸೇವನೆ: ಇಬ್ಬರ ಬಂಧನ

POliceTheft case: ಯಡ್ತಾಡಿ; ಮನೆಯಲ್ಲಿ ಕಳವು: ಪ್ರಕರಣ ದಾಖಲು

Theft case: ಯಡ್ತಾಡಿ; ಮನೆಯಲ್ಲಿ ಕಳವು: ಪ್ರಕರಣ ದಾಖಲು

Kapu ಮಜೂರು: ಸೋಲಾರ್‌ ದಾರಿ ದೀಪದ ಬ್ಯಾಟರಿ ಕಳವು

Kapu ಮಜೂರು: ಸೋಲಾರ್‌ ದಾರಿ ದೀಪದ ಬ್ಯಾಟರಿ ಕಳವು

Manipal ವೇಶ್ಯಾವಾಟಿಕೆ: ಇಬ್ಬರ ಬಂಧನ; ಓರ್ವ ಪರಾರಿ

Manipal ವೇಶ್ಯಾವಾಟಿಕೆ: ಇಬ್ಬರ ಬಂಧನ; ಓರ್ವ ಪರಾರಿ

Kundapura ಕೊಲೆ ಪ್ರಕರಣ: ಮುಂದುವರಿದ ತನಿಖೆ

Kundapura ಕೊಲೆ ಪ್ರಕರಣ: ಮುಂದುವರಿದ ತನಿಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gandhi Jayanti: ದೊಡ್ಡಬಳ್ಳಾಪುರದಲ್ಲಿ ಗಾಂಧೀಜಿ ಭೇಟಿಯ ನೆನಪು

Gandhi Jayanti: ದೊಡ್ಡಬಳ್ಳಾಪುರದಲ್ಲಿ ಗಾಂಧೀಜಿ ಭೇಟಿಯ ನೆನಪು

tdy-9

Urea shortage: ಯೂರಿಯಾ ಕೊರತೆ: ಸಾಲುಗಟಿ ನಿಂತ ರೈತರು

tdy-7

Vaccination campaign: ಜಿಲ್ಲೆಯಲ್ಲಿ ಲಸಿಕಾ ಅಭಿಯಾನ

Sevanthi Crop: ಬೆಳೆಗಾರರ ಬದುಕನ್ನು ಘಮ್ಮೆನ್ನಿಸದ ಸೇವಂತಿ

Sevanthi Crop: ಬೆಳೆಗಾರರ ಬದುಕನ್ನು ಘಮ್ಮೆನ್ನಿಸದ ಸೇವಂತಿ

Bannerghatta Park: ಬನೇರುಘಟ್ಟದಲ್ಲಿ ಕಿತ್ತಾಡಿಕೊಂಡು 15 ಜಿಂಕೆ ಸಾವನ್ನಪ್ಪಿರುವ ಶಂಕೆ

Bannerghatta Park: ಬನೇರುಘಟ್ಟದಲ್ಲಿ ಕಿತ್ತಾಡಿಕೊಂಡು 15 ಜಿಂಕೆ ಸಾವನ್ನಪ್ಪಿರುವ ಶಂಕೆ

MUST WATCH

udayavani youtube

ಮತ್ತೆ ಸುದ್ದಿಯಲ್ಲಿದ್ದಾರೆ ರಶ್ಮಿ ಸಾಮಂತ್ ಏನಿದು

udayavani youtube

ಉಡುಪಿಯ ಕೃಷ್ಣಮಠದ ರಾಜಾಂಗಣದಲ್ಲೊಂದು ಹೋಟೆಲ್ ಬಿಸಿ ಬಿಸಿ ಇಡ್ಲಿ ಚಟ್ನಿಗೆ ಬಾರಿ ಫೇಮಸ್

udayavani youtube

ಸಾಗರದಾಳದಲ್ಲಿ ಕಣ್ಮರೆಯಾಗಿದ್ದ 8 ನೇ ಖಂಡ ಪತ್ತೆ

udayavani youtube

ಕುದುಕುಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

udayavani youtube

ಕ್ಷಮೆ ಕೇಳಿದ ಶಿವಣ್ಣ

ಹೊಸ ಸೇರ್ಪಡೆ

Mangaluru ಪೊಲೀಸ್‌ ಹೆಡ್‌ಕಾನ್‌ಸ್ಟೆಬಲ್‌ ಕುಸಿದು ಸಾವು

Mangaluru ಪೊಲೀಸ್‌ ಹೆಡ್‌ಕಾನ್‌ಸ್ಟೆಬಲ್‌ ಕುಸಿದು ಸಾವು

Mangaluru ವಯೋವೃದ್ಧ ಸಹೋದರಿಯರು ಆತ್ಮಹತ್ಯೆ

Mangaluru ವಯೋವೃದ್ಧ ಸಹೋದರಿಯರು ಆತ್ಮಹತ್ಯೆ

arrestMangaluru ಗಾಂಜಾ ಸೇವನೆ: ಇಬ್ಬರ ಬಂಧನ

Mangaluru ಗಾಂಜಾ ಸೇವನೆ: ಇಬ್ಬರ ಬಂಧನ

SIDDARAMAYYA 1

Politics: ನಾನು ಜಾತಿ ನಂಬಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

census

Karnataka: ಜಾತಿ ಗಣತಿ ವರದಿ ಬಿಡುಗಡೆಗೆ ರಾಜ್ಯದಲ್ಲೂ ಹೆಚ್ಚಿದ ಕೂಗು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.