ಕಸ ವಿರುದ್ಧದ ಹೋರಾಟ ಮುಖಂಡರ ಬಂಧನಕ್ಕೆ ಆಕ್ರೋಶ


Team Udayavani, Dec 6, 2021, 1:06 PM IST

ಕಸ ವಿರುದ್ಧದ ಹೋರಾಟ ಮುಖಂಡರ ಬಂಧನಕ್ಕೆ ಆಕ್ರೋಶ

ದೊಡ್ಡಬಳ್ಳಾಪುರ: ತಾಲೂಕಿನ ಚಿಗರೇನಹಳ್ಳಿಯಲ್ಲಿನ ಬಿಬಿಎಂಪಿ ಕಸ ವಿಲೇವಾರಿಯ ಎಂಎಸ್‌ಜಿಪಿ ಘಟಕ ವನ್ನು ಮುಚ್ಚುವಂತೆ ನಡೆಸುತ್ತಿರುವ ಹೋರಾಟ ಭಾನುವಾರ ವೂ ಮುಂದುವರಿಯು ಲಕ್ಷಣವಿದ್ದ ಹಿನ್ನೆಲೆ, ಮತ್ತೆ ಧರಣಿ ಪ್ರಾರಂಭಿಸದಂತೆ ಪೊಲೀಸರು ಹಲವಾರು ರೀತಿಯ ಕಸರತ್ತು ನಡೆಸಿ ಸ್ಥಳೀಯ ಮುಖಂಡ ರನ್ನು ಬಂಧಿಸಿ, ಸಂಜೆ ವೇಳೆಗೆ ಬಿಡುಗಡೆ ಮಾಡಿದ ಘಟನೆ ನಡೆದಿದೆ.

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಧರಣಿ ನೇತೃತ್ವವಹಿಸಿರುವ ನವಬೆಂಗಳೂರು ಹೋರಾಟ ಸಮಿತಿ ಗೌರವ ಅಧ್ಯಕ್ಷ ಕೆ.ವಿ.ಸತ್ಯಪ್ರಕಾಶ್‌ ಮಾತನಾಡಿ, ಬಿಬಿಎಂಪಿ ಕಸ ಇಲ್ಲಿಗೆ ಬರದಂತೆ 10 ದಿನಗಳಿಂದ ಶಾಂತಿಯುತ ಧರಣಿ ನಡೆಸುತ್ತಿದ್ದವರನ್ನು ಪೊಲೀಸರು ಬಲಪ್ರಯೋಗ ನಡೆಸುವ ಮೂಲಕಶನಿವಾರ ಬಂಧಿಸಿರುವುದು ತೀವ್ರ ಖಂಡನೀಯ. ಆದರೂ, ನಾವು ಕೋವಿಡ್‌ನಿಯಮದಂತೆ ಹೆಚ್ಚು ಜನ ಸೇರದೇಭಾನುವಾರ ಕಸ ವಿಲೇವಾರಿ ಘಟಕದರಸ್ತೆಯುದ್ದಕ್ಕು ವಿವಿಧೆಡೆಗಳಲ್ಲಿ ಐದಾರು ಜನರು ಮಾತ್ರ ಕುಳಿತು ಧರಣಿ ನಡೆಸಲಾಗಿದೆ.

ಧರಣಿ ನಿರತ ರೈತರಲ್ಲಿ ಭಯವನ್ನು ಉಂಟು ಮಾಡಲು ಪೊಲೀಸರು ಹಲವು ಜನರನ್ನು ಬಂಧಿಸಿ ಪೊಲೀಸ್‌ ಠಾಣೆಗೆ ಕರೆದುಕೊಂಡು ಬಂದು ಪಿಟ್ಟಿ ಕೇಸ್‌ ದಾಖಲಿಸಿ ಬಿಡುಗಡೆ ಮಾಡಿದ್ದಾರೆ. ಕಸ ಇಲ್ಲಿಗೆ ಬರುವುದು ನಿಲ್ಲುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದರು.

ಜಂಟಿ ಆಯುಕ್ತರನ್ನು ಅಮಾನತು ಮಾಡಿ: ಶಾಂತಿಯುತವಾಗಿ ಧರಣಿ

ನಡೆಸುತ್ತಿದ್ದ ರೈತರ ಮೇಲೆ ಹಲ್ಲೆ ನಡೆಸಿ ಹಲ್ಲು ಬೀಳುವಂತೆ ಮಾಡಿರುವ ಡಿವೈಎಸ್ಪಿ ನಾಗರಾಜ್‌ ಅವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕು. ಬಿಬಿಎಂಪಿ ಜಂಟಿ ಆಯಕ್ತ ಸರ್ಫೆಜ್‌ ಖಾನ್‌ ಅವರ ಧರಣಿ ನಿರತರೊಂದಿಗೆ ಅನಾಗರಿಕ ರೀತಿಯಲ್ಲಿ ನಡೆದುಕೊಂಡಿದ್ದಾರೆ. ಸೂಕ್ತ ರೀತಿಯಲ್ಲಿ ಕಸ ನಿರ್ವಹಣೆ ಮಾಡುವಿಲ್ಲ ವಿಫಲ ವಾಗಿರುವ ಜಂಟಿ ಆಯುಕ್ತರನ್ನು ಅಮಾನತು ಮಾಡ ಬೇಕು. ಎಂಎಸ್‌ಜಿಪಿ ಕಸ ವಿಲೇವಾರಿ ಘಟಕದಲ್ಲಿನ ಎಲ್ಲಾ ಅವ್ಯವಸ್ಥೆಗೂ ಬಿಬಿಎಂಪಿ ಜಂಟಿ ಆಯು ಕ್ತರೇ ನೇರ ಹೊಣೆಗಾರರಾಗಿದ್ದಾರೆ ಎಂದರು.

ಶಾಸಕರು ಬಿಡಿಸಿಲ್ಲ: ಧರಣಿಯಲ್ಲಿ ಭಾಗವಹಿಸಿದ್ದವರನ್ನು ಶನಿವಾರಪೊಲೀಸರು ಬಂಧಿಸಿದಾಗ ಶಾಸಕರು ನಮ್ಮನ್ನು ಬಿಡಿಸಿಲ್ಲ. 10 ದಿನ ಧರಣಿಕುಳಿತಿತ್ತಿದ್ರು ಒಮ್ಮೆಯು ಭೇಟಿ ಮಾಡದ ಶಾಸಕರು ಬಂಧಿತರನ್ನು ಬಿಡಿಸಿದ್ದು ನಾನೆ,ಧರಣಿಗೆ ನಮ್ಮ ಬೆಂಬಲ ಇದೆ ಎಂದು ಹೇಳಿರುವುದಕ್ಕೆ ಅರ್ಥವಿಲ್ಲ ಎಂದರು.

ಕಸ ತಂದು ರಾಶಿ ಹಾಕುವ ಮೂಲಕ ಜನರ ಆರೋಗ್ಯ.ಇಲ್ಲಿನ ಪರಿಸರವನ್ನುಹಾಳು ಮಾಡುತ್ತಿರುವ ಬಿಬಿಎಂಪಿ ಈ ಭಾಗದ ಗ್ರಾಮಗಳ ಅಭಿವೃದ್ಧಿಗೆಅನುದಾನ ನೀಡಿತ್ತು. ಈ ಅನುದಾನಬಳಕೆಯಲ್ಲೂ ಅವ್ಯವಹಾರ ನಡೆದಿದೆ. ನಮಗೆ ಅನುದಾನವು ಬೇಡ, ಬಿಬಿಎಂಪಿ ಕಸ ಇಲ್ಲಿಗೆ ಬರುವುದೇ ಬೇಕಿಲ್ಲ ಎಂದರು.

ಬಂಧನ ಬಿಡುಗಡೆ: ಧರಣಿಯ ಮುಂದಾಳತ್ವವಹಿಸಿದ್ದ ಭಕ್ತರಹಳ್ಳಿ ಗ್ರಾಪಂಅಧ್ಯಕ್ಷ ಸಿದ್ದಲಿಂಗಪ್ಪ, ಸದಸ್ಯ ಗಂಗಹನುಮಯ್ಯ, ರೈತ ರಂಗಪ್ಪ ಅವರನ್ನುಬೆಳಿಗ್ಗೆಯೇ ಬಂಧಿಸಿ ನಗರದ ಪೊಲೀಸ್‌ ಠಾಣೆಯಲ್ಲಿಟ್ಟಿದ್ದರು. ಬಂಧಿತರನ್ನು ಬಿಡಿಸಿಕೊಳ್ಳಲು ಬಂದ ಕೆ.ವಿ. ಸತ್ಯಪ್ರಕಾಶ್‌, ಜಿ.ಎನ್‌. ಪ್ರದೀಪ್‌ ಅವರನ್ನು ಸಂಜೆ ಬಂಧಿಸಿ ದೊಡ್ಡಬೆಳವಂಗಲ ಪೊಲೀಸ್‌ ಠಾಣೆಗೆ ಕರೆದೊಯ್ದು ಪಿಟ್ಟಿ ಕೇಸ್‌ ದಾಖಲಿಸುವ ಮೂಲಕ ಬಿಡುಗಡೆ ಮಾಡಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ:

ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ.ನಾಗರಾಜ್‌ ಅವರನ್ನು ಭೇಟಿಮಾಡಿ ಇಲ್ಲಿನ ವಾಸ್ತವ ಸ್ಥಿತಿಯನ್ನು ಸಿಎಂಗೆ ಮನವರಿಕೆ ಮಾಡಿ ಕೊಡಲಾಗುವುದು ಎಂದು ಮುಖಂಡರು ತಿಳಿಸಿದ್ದಾರೆ.

ಟಾಪ್ ನ್ಯೂಸ್

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

10

Electricity problem: ಬೇಸಿಗೆ ಬೆನ್ನಲ್ಲೇ ಕಾಡುತ್ತಿದೆ ವಿದ್ಯುತ್‌ ಸಮಸ್ಯೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.