Udayavni Special

ಜಿಲ್ಲೆಯಲ್ಲಿ ವೇಗ ಪಡೆದ ಕೋವಿಡ್ ಕಿಚ್ಚು

ಜಿಲ್ಲೆಯಲ್ಲಿ ಕೋವಿಡ್ ಭಯವಿದ್ದರೂ ನಿಯಮ ಪಾಲನೆ ಇಲ್ಲ ,ನಿತ್ಯ ಸೋಂಕಿತರು-ಸಾವಿನ ಸಂಖ್ಯೆ ಹೆಚ್ಚಳ

Team Udayavani, Sep 24, 2020, 1:49 PM IST

ಜಿಲ್ಲೆಯಲ್ಲಿ ವೇಗ ಪಡೆದ ಕೋವಿಡ್ ಕಿಚ್ಚು

ದೇವನಹಳ್ಳಿ: ಲಾಕ್‌ಡೌನ್‌ ತೆರವಾದ ಮೇಲೆ ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು ಮಾಸ್ಕ್ ಇಲ್ಲದೆ ಜನತೆ ನಿರ್ಲಕ್ಷ್ಯ ವಹಿಸಿರುವುದೇ ಸೋಂಕು ಹೆಚ್ಚಳಕ್ಕೆ ಕಾರಣವಾಗಿದೆ. ಪ್ರಾರಂಭದಲ್ಲಿ ಅನುಸರಿಸಿದ ನಿಯಮಗಳನ್ನು ಜನ ಗಾಳಿಗೆ ತೂರುತ್ತಿದ್ದಾರೆ. ಸರ್ಕಾರದಿಂದ ವ್ಯಾಪಕ ಜಾಗೃತಿ ಪ್ರಚಾರ, ಅರಿವು ಮೂಡಿಸಿದರೂ ಪ್ರಯೋಜನಕ್ಕೆ ಬಾರದಂತಾಗಿದೆ. ಕೋವಿಡ್ ಸಾಮಾನ್ಯ ಕಾಯಿಲೆ ಅಲ್ಲದಿದ್ದರೂ ಇದೀಗ ಸಾಮಾನ್ಯ ಕಾಯಿಲೆಯಂತೆ ಆಗಿದೆ. ಕಡ್ಡಾಯ ಮಾಸ್ಕ್ ಬಳಕೆ, ನಿಯಮಗಳ ಪಾಲನೆ ಮಾಡದಿದ್ದರಿಂದ ಸೋಂಕಿತರು ದಿನೇ ದಿನೆ ಹೆಚ್ಚಾಗುತ್ತಿದ್ದಾರೆ.

ದೇವನಹಳ್ಳಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲೆಯ ಆರ್‌ಟಿಪಿಸಿಆರ್‌ ಪ್ರಯೋಗಾಲಯವಾಗಿರುವುದರಿಂದ ಬೆಂಗಳೂರಿಗೆ ಕೋವಿಡ್ ಪರೀಕ್ಷೆ ಮಾದರಿ ಕಳುಹಿಸಬೇಕಾಗಿತ್ತು. ಇದೀಗ 4 ತಾಲೂಕುಗಳ ಕೋವಿಡ್ ಮಾದರಿಗಳನ್ನು ದೇವನಹಳ್ಳಿಯಲ್ಲಿಯೇ ಪರೀಕ್ಷೆ ಮಾಡಲಾಗುತ್ತಿದೆ.

ಎಲ್ಲೆಲ್ಲಿ ಚಿಕಿತ್ಸೆ?: 4 ತಾಲೂಕುಗಳಲ್ಲಿ ದೇವನಹಳ್ಳಿ ತಾಲೂಕಿನಲ್ಲಿ 60 ಆಕ್ಸಿಜನ್‌ ಹಾಸಿಗೆ, 8 ವೆಂಟಿಲೇಟರ್‌, ದೊಡ್ಡಬಳ್ಳಾಪುರ60 ಆಕ್ಸಿಜನ್‌ ಹಾಸಿಗೆ,4 ವೆಂಟಿಲೇಟರ್‌, ಹೊಸಕೋಟೆ 30 ಆಕ್ಸಿಜನ್‌,4ವೆಂಟಿಲೇಟರ್‌, ನೆಲಮಂಗಲ 30 ಹಾಸಿಕೆ,4 ವೆಂಟಿಲೇಟರ್‌ ಹೊಂದಿದೆ. ಎಂವಿಜೆ ಹೊಸಕೋಟೆ, ದೇವನಹಳ್ಳಿ ಆಕಾಶ್‌ ಆಸ್ಪತ್ರೆ, ನೆಲಮಂಗಲ ಸಿದ್ದಾರ್ಥ ಆಸ್ಪತ್ರೆಗಳಲ್ಲಿ ಕೋವಿಡ್‌ ಪರೀಕ್ಷೆ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ವೈದ್ಯರ ಕೊರತೆ ಎದ್ದುಕಾಣುತ್ತಿದೆ. ಇರುವ ವೈದ್ಯರನ್ನೇ ಬಳಸಿ ಚಿಕಿತ್ಸೆ ನೀಡಲಾಗುತ್ತಿದೆ. ದಿನದಿಂದ ದಿನಕ್ಕೆ ಸಾವಿನ ಪ್ರಕರಣಗಳು ಹೆಚಳವಾಗುತ್ತಿದೆ. ಈವರೆಗೆ ಸುಮಾರು 7905 ಪ್ರಕರಣ ದೃಢಪಟ್ಟಿದ್ದು, ಅದರಲ್ಲಿ 685 ಪ್ರಕರಣ ಬೇರೆ ಜಿಲ್ಲೆ ಹಾಗೂ ಬೇರೆ ರಾಜ್ಯದವರದ್ದಾಗಿದೆ. ಉಳಿದ 7220 ಪ್ರಕರಣ ಜಿಲ್ಲೆಯದ್ದಾಗಿವೆ. ಈ 7905 ಪ್ರಕರಣಗಳಲ್ಲಿ 5996ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 1837 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 77ಮಂದಿ ಸಾವನ್ನಪ್ಪಿದ್ದಾರೆ.

ನಿಯಮ ಪಾಲನೆ ಇಲ್ಲ: ಜಿಲ್ಲೆಯ ಯಾವುದೇ ಆಸ್ಪತ್ರೆಯ ‌ಲ್ಲಿ ಹಾಸಿಗೆ ಕೊರತೆ ಇಲ್ಲ. ಬರುವ ಎಲ್ಲಾ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈಗ ಪ್ರತಿಯೊಬ್ಬರಲ್ಲಿಯೂ ಕೋವಿಡ್ ಭಯ ಇದ್ದೆ ಇದೆ. ಆದರೂ, ಸರ್ಕಾರದ ನಿಯಮಗಳನ್ನು ಪಾಲಿಸ್ತುಲ್ಲ.

ಜ್ವರ,ಕೆಮ್ಮು ಬಂದರೆ ಪರೀಕ್ಷಿಸಿ :  ಕೋವಿಡ್ ಸೋಂಕಿತರಿಗೆ ಅನುಕೂಲ ಕಲ್ಪಿಸಲು ಆಮ್ಲಜನಕಯುಕ್ತ ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಸೋಂಕಿರುವ ರೋಗಿಗಳಲ್ಲಿ ಕೋವಿಡ್ ವೈರಾಣು ಶ್ವಾಸಕೋಶಕ್ಕೆ ಹಾನಿಯುಂಟು ಮಾಡುವುದರಿಂದ ಹಾಗೂ ದೇಹದಲ್ಲಿ ಆಮ್ಲಜನಕ ಸರಬರಾಜು ಕಡಿಮೆ ಮಾಡುವುದರಿಂದ ಕೃತಕ ಆಮ್ಲಜನಕ ಅನಿವಾರ್ಯ. ಸಾರ್ವಜನಿಕರು ಜ್ವರ,ಕೆಮ್ಮು, ನೆಗಡಿಯಂತಹ ಕಾಯಿಲೆ ಕಾಣಿಸಿಕೊಂಡರೆ, ಸ್ವಯಂ ಔಷಧಿ ತೆಗೆದುಕೊಳ್ಳದೇ, ಸರ್ಕಾರಿ ಫೀವರ್‌ ಕ್ಲಿನಿಕ್‌ಗಳಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಜಿಲ್ಲೆಯಲ್ಲಿ ಹೋಂ ಐಸೋಲೇಷನ್‌ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮಂಜುಳಾದೇವಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕೋವಿಡ್ ವ್ಯಾಪಕವಾಗಿ ಹರಡುತ್ತಿದ್ದು ಮುಂಜಾಗೃತಾಕ್ರಮ ಕೈಗೊಳ್ಳಬೇಕು. ಸೋಂಕು ರೋಗ ಲಕ್ಷಣಗಳಿದ್ದರೆ, ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳಬೇಕು. ಆರೋಗ್ಯದ ಬಗ್ಗೆಯಾರೂ ನಿರ್ಲಕ್ಷ್ಯ ವಹಿಸಬಾರದು. ಪಿ.ಎನ್‌.ರವೀಂದ್ರ, ಜಿಲ್ಲಾಧಿಕಾರಿ

ಕೋವಿಡ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ ಜನ ತಮ್ಮ ಪ್ರಾಣ ರಕ್ಷಣೆಯನ್ನು ತಾವೇಮಾಡಿಕೊಳ್ಳಬೇಕಿದೆ. ಜನ ಮುಂಜಾಗೃತಕ್ರಮ ಕೈಗೊಂಡರೆ, ಕೋವಿಡ್ ತೊಲಗಿಸಬಹುದು. ನಾರಾಯಣಸ್ವಾಮಿ, ದೇವನಹಳ್ಳಿ ನಾಗರಿಕ

 

ಎಸ್‌.ಮಹೇಶ್‌

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

whatsapp-call

ವಾಟ್ಸಾಪ್ ಕಾಲ್ ಗಳನ್ನು ರೆಕಾರ್ಡ್ ಮಾಡುವುದು ಹೇಗೆ? ಇಲ್ಲಿದೆ ಟಿಪ್ಸ್

ಲೆಜೆಂಡ್ ಆಲ್ ರೌಂಡರ್ ಕಪಿಲ್ ದೇವ್ ಗುಣಮುಖ: ಆಸ್ಪತ್ರೆಯಿಂದ ಬಿಡುಗಡೆ

ಲೆಜೆಂಡ್ ಆಲ್ ರೌಂಡರ್ ಕಪಿಲ್ ದೇವ್ ಗುಣಮುಖ: ಆಸ್ಪತ್ರೆಯಿಂದ ಬಿಡುಗಡೆ

ಆಸೀಸ್‌ ಪ್ರವಾಸಕ್ಕೆ ಭಾರತೀಯ ಕ್ರಿಕೆಟಿಗರ ಪತ್ನಿಯರಿಗೆ ತೆರಳಲು ಅವಕಾಶವಿಲ್ಲ!

ಆಸೀಸ್‌ ಪ್ರವಾಸಕ್ಕೆ ಭಾರತೀಯ ಕ್ರಿಕೆಟಿಗರ ಪತ್ನಿಯರಿಗೆ ತೆರಳಲು ಅವಕಾಶವಿಲ್ಲ!

ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸಿದ್ದರಾಮಯ್ಯ ಪ್ರವಾಸ: ಸಂತೃಸ್ಥರ ಜೊತೆ ಮಾತುಕತೆ

ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸಿದ್ದರಾಮಯ್ಯ ಪ್ರವಾಸ: ಸಂತೃಸ್ಥರ ಜೊತೆ ಮಾತುಕತೆ

000.

ಆರ್ ಸಿಬಿ vs ಚೆನ್ನೈ ಕಾದಾಟ : ಟಾಸ್ ಗೆದ್ದ ಕೊಹ್ಲಿ ಪಡೆ ಬ್ಯಾಟಿಂಗ್ ಆಯ್ಕೆ

ಕಿರಿಯ ಆಟಗಾರರಿಗೆ ಜೆರ್ಸಿ ವಿತರಿಸುತ್ತಿರುವ ಧೋನಿ; ಐಪಿಎಲ್‌ ವಿದಾಯ ಸೂಚನೆಯೇ?

ಕಿರಿಯ ಆಟಗಾರರಿಗೆ ಜೆರ್ಸಿ ವಿತರಿಸುತ್ತಿರುವ ಧೋನಿ; ಐಪಿಎಲ್‌ ವಿದಾಯ ಸೂಚನೆಯೇ?

bihar

ಬಿಹಾರ: ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಯನ್ನು ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿಗಳು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

br-tdy-1

ಕೃಷಿಯಲ್ಲಿ ತಂತ್ರಜ್ಞಾನದ ಅರಿವು ಅಗತ್ಯ

br-tdy-1

ಬೆಲೆ ಏರಿಕೆಗೆ ಗ್ರಾಹಕರು ಕಂಗಾಲು

ದಾಸ್ತಾನು ಖಾಲಿ: ಪಡಿತರಕ್ಕೆ ತಪ್ಪದ ಅಲೆದಾಟ

ದಾಸ್ತಾನು ಖಾಲಿ: ಪಡಿತರಕ್ಕೆ ತಪ್ಪದ ಅಲೆದಾಟ

br-tdy-1

ನಿರಂತರ ಮಳೆಗೆ ನೆಲಕಚ್ಚಿದ ರಾಗಿ ಬೆಳೆ

br–tdy-2

ಈರುಳ್ಳಿ ಬೆಲೆ ಗ್ರಾಹಕರಿಗೆ ಬರೆ

MUST WATCH

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

udayavani youtube

Story behind Vijayadashami celebration | ವಿಜಯದಶಮಿ ಆಚರಣೆಯ ಹಿಂದಿನ ಕಥೆ | Udayavani

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!

udayavani youtube

The Sharada statue embodied in the artist’s finesse | Navaratri Specialಹೊಸ ಸೇರ್ಪಡೆ

MANDYA-TDY-1

ಹದಗೆಟ್ಟ ರಸ್ತೆ : ವಾಹನ ಸವಾರರ ಪರದಾಟ

mysuru-tdy-1

ತಂಬಾಕು ದರ ದಿಢೀರ್‌ ಕುಸಿತ ಖಂಡಿಸಿ ರೈತರ ಪ್ರತಿಭಟನೆ

whatsapp-call

ವಾಟ್ಸಾಪ್ ಕಾಲ್ ಗಳನ್ನು ರೆಕಾರ್ಡ್ ಮಾಡುವುದು ಹೇಗೆ? ಇಲ್ಲಿದೆ ಟಿಪ್ಸ್

rn-tdy-1

ಧಾರಾಕಾರ ಮಳೆಗೆ ಮಂಚನಬೆಲೆ ಜಲಾಶಯ ಭರ್ತಿ

c-tdy-1

ಕಿತ್ತೂರು ಚೆನ್ನಮ್ಮ ಮಹಿಳೆಯರಿಗೆ ಆದರ್ಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.