Udayavni Special

ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಯಾವಾಗ?

ಜಾರಿಯಾಗದ ಶಾಶ್ವತ ನೀರಾವರಿ ಯೋಜನೆಗಳು

Team Udayavani, Mar 22, 2021, 12:16 PM IST

ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಯಾವಾಗ?

ದೊಡ್ಡಬಳ್ಳಾಪುರ: ಮಾ.22 ವಿಶ್ವ ಜಲ ದಿನ. ಕೋವಿಡ್ 2ನೇ ಅಲೆ ಆತಂಕದ ನಡುವೆ ಮತ್ತೆ ಬೇಸಿಗೆ ಆರಂಭವಾಗಿದೆ. ನೀರಿನ ಸಮಸ್ಯೆ ಕಾಡತೊಡಗಿದೆ. ಮಳೆ ನೀರು ಕೊಯ್ಲು ಕಡ್ಡಾಯ, ಶಾಶ್ವತ ನೀರಾವರಿ ಯೋಜನೆಗಳಿಗೆ ಹೆಚ್ಚು ಒತ್ತು ನೀಡುವ ಕೂಗು ಕೇಳಿಬರುತ್ತಿದೆ.

ನಗರದ ನೀರಿನ ಸ್ಥಿತಿಗತಿ: ದೊಡ್ಡಬಳ್ಳಾಪುರ ತಾಲೂಕಿನಲ್ಲಿ ವಾರ್ಷಿಕ ಸರಾಸರಿ 800 ಮಿ.ಮೀಮಳೆಯಾಗುತ್ತದೆ. ನಗರಸಭೆಯಲ್ಲಿ ಒಟ್ಟು 31 ವಾರ್ಡ್ಗಳಿದ್ದು, ಹಾಲಿ ಅಂದಾಜು 1.05 ಲಕ್ಷ ಜನಸಂಖ್ಯೆಗೆತಲಾ 135 ಲೀಟರ್‌ ಪ್ರಮಾಣದಂತೆ ದೊಡ್ಡಬಳ್ಳಾಪುರನಗರಕ್ಕೆ 14.17 ಎಂಎಲ್‌ಡಿ (ಒಂದು ದಿನಕ್ಕೆ ದಶಲಕ್ಷಲೀ.) ಅವಶ್ಯಕತೆ ಇದೆ. ಪ್ರಸ್ತುತ ತಲಾ 68 ಎಲ್‌ಪಿಸಿಡಿಪ್ರಮಾಣದ ರೀತಿ 7.17 ಎಂಎಲ್‌ಡಿ(ಕೊಳವೆಬಾವಿಗಳಿಂದ 5.17, ಜಕ್ಕಲಮಡಗು ಜಲಾಶಯದಿಂದ 2.00 ಎಂಎಲ್‌ಡಿ) ನೀರುಸರಬರಾಜು ಮಾಡಲಾಗುತ್ತಿದೆ. ಇನ್ನೂ 7 ಎಂಎಲ್‌ಡಿನೀರು ಕೊರತೆ ಇದೆ. ನಗರದಲ್ಲಿ ಸರಾಸರಿ 5 ರಿಂದ 6 ದಿನಕೊಮ್ಮೆ ಕುಡಿವ ನೀರು ಸರಬರಾಜುಮಾಡಲಾಗುತ್ತಿದೆ. ಕಳೆದ ಸಾಲಿಗೆ ಹೋಲಿಸಿದರೆ ಈಬಾರಿ ಕೊಳವೆಬಾವಿಗಳಿಂದ ನೀರು ಸರಬರಾಜು 2ಎಂಎಲ್‌ಡಿ ಕಡಿಮೆ ಆಗಿದೆ.

43 ಬೋರ್ವೆಲ್‌ ಬತ್ತಿವೆ.: ದೊಡ್ಡಬಳ್ಳಾಪುರ ನಗರ ವ್ಯಾಪ್ತಿಯಲ್ಲಿ 134 ಕೊಳವೆ ಬಾವಿಗಳಿದ್ದು, ಇದರಲ್ಲಿ 91 ಮಾತ್ರ ಕಾರ್ಯನಿರ್ವಹಿಸುತ್ತಿವೆ. 43 ಬತ್ತಿವೆ. ಜಕ್ಕಲಮಡಗು ಜಲಾಶಯದಿಂದ ದೊಡ್ಡಬಳ್ಳಾಪುರನಗರಕ್ಕೆ ಪ್ರತಿದಿನ 2 ಎಂಎಲ್‌ಡಿ ಕುಡಿಯುವ ನೀರುಪೂರೈಕೆ ಮಾಡಿಕೊಳ್ಳಲಾಗುತ್ತಿದೆ. ಜಲಾಶಯದಲ್ಲಿ ಪ್ರಸ್ತುತ 42.65 ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಪ್ರಸ್ತುತ ಪ್ರತಿ ದಿನ 2 ಎಂಎಲ್‌ಡಿಯಂತೆ ಸರಬರಾಜು ಮಾಡಿಕೊಳ್ಳುತ್ತಿದೆ. ಅದರಂತೆ, ಗರಿಷ್ಠ 11 ತಿಂಗಳು ಕಾಲ ಸರಬರಾಜು ಮಾಡಬಹುದಾಗಿದೆ.

ಕಾರ್ಯಗತ ಆಗದ ನೀರಾವರಿ ಯೋಜನೆ : ಎರಡು ವರ್ಷಗಳ ಹಿಂದೆ ನಗರಸಭೆ ವ್ಯಾಪ್ತಿ, ಕೈಗಾರಿಕಾ ಪ್ರದೇಶಗಳಲ್ಲಿ ಮಳೆ ನೀರು ಕಡ್ಡಾಯಗೊಳಿಸಲು ಅಂದಿನ ಜಿಲ್ಲಾಧಿಕಾರಿ ಕರೀಗೌಡ ಆದೇಶ ನೀಡಿದ್ದರು. ಆರಂಭದಲ್ಲಿ ಇದು ಕಾರ್ಯಗತವಾಯಿತಾದರೂ ಇನ್ನೂ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ವಿಯಾಗಿಲ್ಲ. ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಕಡ್ಡಾಯ ಕಾನೂನು ಜಾರಿಯಾಗಬೇಕಿದೆ.

ಸದ್ಯಕ್ಕೆ ಜಕ್ಕಲಮಡುಗುವಿನಿಂದ ನಗರಕ್ಕೆ ನೀರು ಪೂರೈಕೆ ಆಗುತ್ತಿರುವುದರಿಂದ ಪರಿಸ್ಥಿತಿ ತಿಳಿಯಾಗಿದೆ.ನಗರದಲ್ಲಿ ನೀರು ಸರಬರಾಜಿಗೆ ಮೀಟರ್‌ಗಳನ್ನು ಅಳವಡಿಸುವ ಕಾರ್ಯ ಆರಂಭವಾಗಿ 3 ವರ್ಷ ಕಳೆದರೂ ಇನ್ನೂ ಕಾರ್ಯಗತವಾಗಿಲ್ಲ.

ಎತ್ತಿನಹೊಳೆ ಯೋಜನೆಗಾಗಿ ನಿರ್ಮಿಸಲಾಗುತ್ತಿರುವ ಬೈರಗೊಂಡ್ಲು ಜಲಾಶಯದ ವಿವಾದ ಇನ್ನೂ ಬಗೆಹರಿದಿಲ್ಲ. ಈ ನ ಡುವೆ ನೆಲ ಮಂಗಲ, ದೊಡ್ಡ ಬಳ್ಳಾ ಪುರ ತಾಲೂಕುಗಳಿಗೆ ವೃಷ ಭಾವತಿ, ನಾಯಂಡರಹಳ್ಳಿಯಿಂದ ಶುದ್ಧೀಕರಿಸಿದ ನೀರು ಹರಿಸುವ ಯೋಜನೆ ರೂಪಿಸಲಾಗಿದೆ. ಈ ಯೋ ಜನೆ ಎಷ್ಟರ ಮಟ್ಟಿಗೆ ಜಾ ರಿಯಾಗಬೇಕಿದೆ ಎನ್ನುವುದನ್ನು ನೋಡ ಬೇಕಿದೆ.

ಕೆರೆ-ಕುಂಟೆಗಳಲ್ಲಿ ನೀರಿಲ್ಲ  :

ಗ್ರಾಮಾಂತರ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಕಾಡುತ್ತಿದೆ. ತಾಲೂಕಿನ ಒಂದೆರಡು ಕೆರೆಗಳನ್ನು ಹೊರತು ಪಡಿಸಿದರೆ ಉಳಿದ ಯಾವುದೇ

ಕೆರೆ,ಕುಂಟೆಗಳಿಗೂ ನೀರು ಬಂದಿಲ್ಲ. ನಗರದ ನಾಗರಕೆರೆಯಲ್ಲಿ ಮಲಿನ ನೀರು ಶೇಖರವಾಗಿದೆ. ಪ್ರತಿ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಸೂಕ್ತ ನಿರ್ವಹಣೆ ಇಲ್ಲದೇ ಹಲವಾರು ಘಟಕಗಳು ಮುಚ್ಚಿವೆ. ಈ ಬಾರಿಯ ಮಳೆಗಾಲದಲ್ಲಿ ಬೆಟ್ಟದ ಸಾಲಿನಲ್ಲಿಬರುವ ಇದರಿಂದಾಗಿ ಅಂತರ್ಜಲದ ಮಟ್ಟ ತೀವ್ರವಾಗಿ ಕುಸಿತ ಕಂಡಿದ್ದು ಪ್ರತಿ ದಿನವೂ ಕೊಳವೆ ಬಾವಿಗಳು ಬತ್ತಿ ಹೋಗುತ್ತಲೇ ಇವೆ.

112 ಗ್ರಾಮಗಳಲ್ಲಿ ನೀರಿನ ಸಮಸ್ಯೆ :

ದೊಡ್ಡಬಳ್ಳಾಪುರ ತಾಲೂಕಿನ 112 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಜಿಲ್ಲೆಯ 4 ತಾಲೂಕಿನ ಶಾಸಕರ ಟಾಸ್ಕ್ಪೋರ್ಸ್‌ ಸಭೆ ನಡೆಸಿಜಿಲ್ಲಾ ಪಂಚಾಯಿತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.30.75 ಕೋಟಿ ರೂ.ನ ಕ್ರಿಯ ಯೋಜನೆ ರೂಪಿಸಲಾಗಿದೆ. ತಾಲೂಕಿಗೆ 6 ಕೋಟಿ ರೂ. ಬೇಕಿದೆ.ಆದರೆ, ಕ್ರಿಯಾ ಯೋಜನೆಗೆ 2 ತಿಂಗಳು ಕಳೆದಿದ್ದರೂ ಯಾವುದೇ ಪ್ರಕ್ರಿಯೆ ನಡೆದಿಲ್ಲ. ತಾಲೂಕಿಗೆಬಿಡುಗಡೆ ಆಗಿರುವ ಹಣ 15 ಹಳ್ಳಿಗಳಿಗೆ ಮಾತ್ರಸಾಲುತ್ತದೆ. ಸರ್ಕಾರದ ಗಮನಕ್ಕೆ ತರಲಾಗಿದೆ ಎನ್ನುತ್ತಾರೆ ಶಾಸಕ ಟಿ.ವೆಂಕಟರಮಣಯ್ಯ.

ಪ್ರಸ್ತುತ ಪರಿಸ್ಥಿತಿಯಲ್ಲಿ ಯಾವುದೇ ಟ್ಯಾಂಕರ್‌ಗಳಿಂದ ನೀರು ಸರಬರಾಜು ಮಾಡುತ್ತಿಲ್ಲ,ನೀರಿನ ಸಮಸ್ಯೆ ಬರಬಹುದಂತಹ ವಾರ್ಡ್‌ಗಳ ಪ್ರದೇಶಗಳಲ್ಲಿ 2020-21ನೇ ಸಾಲಿನನಗರಸಭಾ ನಿ ಯಡಿಯಲ್ಲಿ 20 ಕೊಳವೆಬಾವಿ ಹೊಸದಾಗಿ ಕೊರೆಯಲು ಕ್ರಮಕೈಗೊಳ್ಳಲಾಗುತ್ತಿದೆ, ಖಾಸಗಿ ಕೊಳವೆಬಾವಿಗಳನ್ನು ಗುರುತಿಸಲಾಗಿದೆ. ಜಿಲ್ಲಾಧಿ ಕಾರಿಗಳಆದೇಶದಂತೆ ಅವಶ್ಯಕತೆ ಇದ್ದಲ್ಲಿ ನಗರಸಭೆಯ ವಶಕ್ಕೆ ಪಡೆದು ನೀರು ಸರಬರಾಜು ಮಾಡಲುಕ್ರಮ ಕೈಗೊಳ್ಳಲಾಗುವುದು. -ಸಿ.ಎಂ.ಚಂದ್ರಶೇಖರ್‌, ನೀರು ಸರಬರಾಜು ವಿಭಾಗದ ಕಿರಿಯ ಅಭಿಯಂತರ

 

– ಡಿ.ಶ್ರೀಕಾಂತ್‌

ಟಾಪ್ ನ್ಯೂಸ್

k s eshwarappa

ಕುತೂಹಲ ಮೂಡಿಸಿದ ಈಶ್ವರಪ್ಪ ಸುದ್ದಿಗೋಷ್ಠಿ:ಶೆಟ್ಟರ್ ರೀತಿಯಲ್ಲೇ ನಿರ್ಧಾರ ಮಾಡ್ತಾರಾ BJPನಾಯಕ

ninna sanihake

ಪ್ರೇಕ್ಷಕರ ಸನಿಹಕೆ ಬರೋಕೆ ರೆಡಿ: ಆಗಸ್ಟ್‌ 1ಕ್ಕೆ ಟ್ರೇಲರ್‌, ಆ. 20ಕ್ಕೆ ಸಿನಿಮಾ ರಿಲೀಸ್

ಭಾರತ:ಕಳೆದ 24ಗಂಟೆಗಳಲ್ಲಿ 43,509 ಕೋವಿಡ್ ಪ್ರಕರಣ ಪತ್ತೆ,ಸಕ್ರಿಯ ಪ್ರಕರಣ 4ಲಕ್ಷಕ್ಕೆ ಏರಿಕೆ

ಭಾರತ:ಕಳೆದ 24ಗಂಟೆಗಳಲ್ಲಿ 43,509 ಕೋವಿಡ್ ಪ್ರಕರಣ ಪತ್ತೆ,ಸಕ್ರಿಯ ಪ್ರಕರಣ 4ಲಕ್ಷಕ್ಕೆ ಏರಿಕೆ

ಹಾಕಿಯಲ್ಲಿ ಅರ್ಜೆಂಟೀನಾ ಸೋಲಿನ ರುಚಿ ತೋರಿಸಿದ ಭಾರತ ತಂಡ ಕ್ವಾರ್ಟರ್ ಫೈನಲ್ ಗೆ ಲಗ್ಗೆ

ಹಾಕಿಯಲ್ಲಿ ಅರ್ಜೆಂಟೀನಾ ಸೋಲಿನ ರುಚಿ ತೋರಿಸಿದ ಭಾರತ ತಂಡ ಕ್ವಾರ್ಟರ್ ಫೈನಲ್ ಗೆ ಲಗ್ಗೆ

ಬ್ಯಾಕ್‌ ಟು ಬ್ಯಾಕ್‌ ಧನಂಜಯ್‌ ಸಿನ್ಮಾ! ಈ ವರ್ಷ ಎಂಟಕ್ಕೂ ಹೆಚ್ಚು ಚಿತ್ರ ಬಿಡುಗಡೆ ಸಾಧ್ಯತೆ

ಬ್ಯಾಕ್‌ ಟು ಬ್ಯಾಕ್‌ ಧನಂಜಯ್‌ ಸಿನ್ಮಾ! ಈ ವರ್ಷ ಎಂಟಕ್ಕೂ ಹೆಚ್ಚು ಚಿತ್ರ ಬಿಡುಗಡೆ ಸಾಧ್ಯತೆ

ಹೂಡಿಕೆದಾರರಿಗೆ ವಿಮಾ ರಕ್ಷಣೆ; 90 ದಿನದಲ್ಲಿ ಠೇವಣಿದಾರರಿಗೆ ಹಣ ವಾಪಸ್‌ ನಿಶ್ಚಿತ

ಹೂಡಿಕೆದಾರರಿಗೆ ವಿಮಾ ರಕ್ಷಣೆ; 90 ದಿನದಲ್ಲಿ ಠೇವಣಿದಾರರಿಗೆ ಹಣ ವಾಪಸ್‌ ನಿಶ್ಚಿತ

ಸಂಬಳ, ಪಿಂಚಣಿ, ಇಎಂಐ ಪಾವತಿ ನಿಯಮಗಳಲ್ಲಿ ಬದಲಾವಣೆ 

ಸಂಬಳ, ಪಿಂಚಣಿ, ಇಎಂಐ ಪಾವತಿ ನಿಯಮಗಳಲ್ಲಿ ಬದಲಾವಣೆ ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bangalore news

ಶಾಲೆ ಮಕ್ಕಳಿಗೆ ಅಭಿನಂದನೆ ಸಲ್ಲಿಕೆ

——-

ಸಿಎಂ ಸ್ಥಾನದಿಂದ ಬಿಎಸ್‌ವೈ ಕೆಳಗಿಳಿಸಿದರೆ ಬಿಜೆಪಿಗೆ ತಕ್ಕಪಾಠ

Vaccine deprivation

ಗ್ರಾಮೀಣದಲ್ಲಿ  ಲಸಿಕೆ  ಅಭಾವ

Waste Disposal

ಕಾರೆ ಬಳಿ ತ್ಯಾಜ್ಯ ವಿಲೇವಾರಿ: ಕ್ರಮಕ್ಕೆ ಒತ್ತಾಯ

bangalore rural news

ಹುಲುಕುಡಿ ಗಿರಿ ಪ್ರದಕ್ಷಿಣೆ ಸಂಪನ್ನ

MUST WATCH

udayavani youtube

ಉದುರಿದ ಹೂಗಳಲ್ಲಿ ಅಕ್ಷರ ,123 ಬರಿಸುತ್ತಿದ್ದೆ!

udayavani youtube

ಶುಭಾಶಯಗಳು ಮಾಮ : ಬಸವರಾಜ್ ಬೊಮ್ಮಾಯಿಗೆ ಕಿಚ್ಚ ಸುದೀಪ್ ಹಾರೈಕೆ

udayavani youtube

ಹಳ್ಳಿಯ ಹೋಟೆಲ್ ಉದ್ಯಮದಲ್ಲಿ ತೃಪ್ತಿ ಕಂಡುಕೊಂಡ IT ಉದ್ಯೋಗಿಗಳು!

udayavani youtube

ಸಿಎಂ ಪಟ್ಟ ಅಲಂಕರಿಸಿದ ಬೊಮ್ಮಾಯಿ: ಕುಟುಂಬ ಸದಸ್ಯರಿಂದ ಸಂಭ್ರಮ

udayavani youtube

ಧೈರ್ಯದಿಂದ ಕೋವಿಡ್ ಲಸಿಕೆ ಪಡೆಯಿರಿ : ಗರ್ಭಿಣಿಯರಿಗೆ ನಟಿ ಚೈತ್ರಾ ರೈ ಸಲಹೆ

ಹೊಸ ಸೇರ್ಪಡೆ

k s eshwarappa

ಕುತೂಹಲ ಮೂಡಿಸಿದ ಈಶ್ವರಪ್ಪ ಸುದ್ದಿಗೋಷ್ಠಿ:ಶೆಟ್ಟರ್ ರೀತಿಯಲ್ಲೇ ನಿರ್ಧಾರ ಮಾಡ್ತಾರಾ BJPನಾಯಕ

ಶ್ರೀ ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ(ರಿ) ಕಾಪು; ಟೆಂಡರ್ ಆಹ್ವಾನ

ಜಾಹೀರಾತು: ಶ್ರೀ ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ(ರಿ) ಕಾಪು; ಟೆಂಡರ್ ಆಹ್ವಾನ

ninna sanihake

ಪ್ರೇಕ್ಷಕರ ಸನಿಹಕೆ ಬರೋಕೆ ರೆಡಿ: ಆಗಸ್ಟ್‌ 1ಕ್ಕೆ ಟ್ರೇಲರ್‌, ಆ. 20ಕ್ಕೆ ಸಿನಿಮಾ ರಿಲೀಸ್

ಭಾರತ:ಕಳೆದ 24ಗಂಟೆಗಳಲ್ಲಿ 43,509 ಕೋವಿಡ್ ಪ್ರಕರಣ ಪತ್ತೆ,ಸಕ್ರಿಯ ಪ್ರಕರಣ 4ಲಕ್ಷಕ್ಕೆ ಏರಿಕೆ

ಭಾರತ:ಕಳೆದ 24ಗಂಟೆಗಳಲ್ಲಿ 43,509 ಕೋವಿಡ್ ಪ್ರಕರಣ ಪತ್ತೆ,ಸಕ್ರಿಯ ಪ್ರಕರಣ 4ಲಕ್ಷಕ್ಕೆ ಏರಿಕೆ

ಹಾಕಿಯಲ್ಲಿ ಅರ್ಜೆಂಟೀನಾ ಸೋಲಿನ ರುಚಿ ತೋರಿಸಿದ ಭಾರತ ತಂಡ ಕ್ವಾರ್ಟರ್ ಫೈನಲ್ ಗೆ ಲಗ್ಗೆ

ಹಾಕಿಯಲ್ಲಿ ಅರ್ಜೆಂಟೀನಾ ಸೋಲಿನ ರುಚಿ ತೋರಿಸಿದ ಭಾರತ ತಂಡ ಕ್ವಾರ್ಟರ್ ಫೈನಲ್ ಗೆ ಲಗ್ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.