ಉಪನೋಂದಣಾಧಿಕಾರಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ

ಲೋಕಾಯುಕ್ತರನ್ನು ಯಾಮಾರಿಸಿದರು ಎಂದು ಕಚೇರಿಗೆ ಬಂದಿದ್ದ ಸಾರ್ವಜನಿಕರು ಆರೋಪಿಸಿದ್ದಾರೆ.

Team Udayavani, Nov 4, 2022, 12:16 PM IST

ಉಪನೋಂದಣಾಧಿಕಾರಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ

ನೆಲಮಂಗಲ: ನಗರದ ಉಪನೋಂದಣಾಧಿಕಾರಿ ಕಚೇರಿಯ ಮೇಲೆ ಲೋಕಾಯುಕ್ತ ಡಿವೈಎಸ್‌ಪಿ ವೆಂಕಟೇಶ್‌ ಸೇರಿದಂತೆ ಇಬ್ಬರು ಡಿವೈಎಸ್‌ ಪಿ ನೇತೃತ್ವದಲ್ಲಿ ದಾಳಿ ನಡೆದಿದ್ದು, ಮಹತ್ವದ ದಾಖಲಾತಿಗಳನ್ನು ರಾತ್ರಿ 10ರವರೆಗೂ ಪರಿಶೀಲನೆ ನಡೆಸಿದ್ದಾರೆ.

ನಗರದ ಉಪನೋಂದಣಾಧಿಕಾರಿ ಕಚೇರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಲಂಚ ಹಾಗೂ ವಿವಿಧ ಪ್ರಕರಣಗಳ ಬಗ್ಗೆ ದೂರುಗಳ ಆರೋಪದ ಹಿನ್ನೆಲೆ, ಲೋಕಾಯುಕ್ತರು ದಾಳಿ ಮಾಡಿದ್ದಾರೆ ಎನ್ನಲಾಗಿದ್ದು, ಸಂಜೆ 5.30ಸುಮಾರಿಗೆ ಕಚೇರಿ ಪ್ರವೇಶಿಸಿದ ಅಧಿಕಾರಿಗಳು ಕಚೇರಿ ಬಾಗಿಲು ಮುಚ್ಚಿ ಪರಿಶೀಲನೆ ಆರಂಭಿಸಿದ್ದಾರೆ. ಕೆಲಸಕ್ಕೆ ಬಂದ ಸಾರ್ವಜನಿಕರನ್ನು ಪರಿಶೀಲನೆ ಮಾಡಿ ಹೊರಗೆ ಬಿಟ್ಟಿದ್ದು, ಸಿಬ್ಬಂದಿ ಹಾಗೂ ಅಧಿಕಾರಿಗಳು ಹೊರಗೆ ಹೋಗದಂತೆ ಲಾಕ್‌ ಮಾಡಿದ್ದಾರೆ.

ನಾಲ್ಕು ವಾಹನದಲ್ಲಿ ಬಂದ ಅಧಿಕಾರಿಗಳು: ನೆಲಮಂಗಲ ಉಪನೋಂದಣಾಧಿಕಾರಿಗಳ ಕಚೇರಿಗೆ ಇಬ್ಬರು ಡಿವೈಎಸ್‌ಪಿ ನೇತೃತ್ವದಲ್ಲಿ 10ಕ್ಕೂ ಹೆಚ್ಚು ಲೋಕಾಯುಕ್ತ ಅಧಿಕಾರಿಗಳು ನಾಲ್ಕು ವಾಹನಗಳಲ್ಲಿ ಆಗಮಿಸಿ ಕಚೇರಿ ಮೇಲೆ ದಾಳಿ ಮಾಡಿದ್ದು, ಸಬ್‌ರಿಜಿಸ್ಟರ್‌ ಅಂಬಿಕಾ ಪಟೇಲ್‌, ಸತೀಶ್‌ ಹಾಗೂ ಸಿಬ್ಬಂದಿ ವಿಚಾರಣೆ ಮಾಡಿದ್ದಾರೆ.

ಲೋಕಾಯುಕ್ತರಿಗೆ ಯಾಮಾರಿಸಿದರು?: ಕೆಲವು ಮಧ್ಯವರ್ತಿಗಳು ಸಂಜೆ ಆದ ಕಾರಣ ಲೋಕಾಯುಕ್ತರು ಬರುವುದಿಲ್ಲ ಎಂದು ಕಚೇರಿಗೆ ಆಗಮಿಸಿ ವ್ಯವಹಾರ ಮಾಡುತ್ತಿದ್ದು, ಲೋಕಾಯುಕ್ತರು ದಾಳಿ ಮಾಡಿದಾಗ ನಾವು ಸಾಕ್ಷಿದಾರರು, ರಿಜಿಸ್ಟರ್‌ಗೆ ಬಂದ ಜನರು ಎಂದು ಹೇಳಿ ತಪ್ಪಿಸಿ ಕೊಂಡು ಹೊರಗೆ ಹೋಗಿದ್ದು, ಲೋಕಾಯುಕ್ತರನ್ನು ಯಾಮಾರಿಸಿದರು ಎಂದು ಕಚೇರಿಗೆ ಬಂದಿದ್ದ ಸಾರ್ವಜನಿಕರು ಆರೋಪಿಸಿದ್ದಾರೆ.

ಹಣ ವಶಕ್ಕೆ?: ಲೋಕಾಯುಕ್ತ ಅಧಿಕಾರಿಗಳು ಕಚೇರಿ ಪ್ರವೇಶ ಮಾಡಿದಾಗ ರಿಜಿಸ್ಟರ್‌ ಮಾಡಿಸಲು ಬಂದಿದ್ದ ವ್ಯಕ್ತಿಯ ಬಳಿ 40 ಸಾವಿರ ಹಣ ಸಿಕ್ಕಿದ್ದು ವಿಚಾರಣೆ ಮಾಡಿ ಬಿಟ್ಟಿದ್ದಾರೆ ಎನ್ನಲಾಗಿದೆ. ಇದೇ ಸಮಯದಲ್ಲಿ ಕೆಲವು ಸಿಬ್ಬಂದಿ ಬಳಿ 200ರಿಂದ 2 ಸಾವಿರ ಹಣ ಸಿಕ್ಕಿದೆ ಎನ್ನಲಾಗಿದ್ದು, ಕೆಲವು ದಾಖಲಾತಿ ವಶಕ್ಕೆ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಕಚೇರಿ ಮೂಲಗಳಿಂದ ಲಭ್ಯವಾದರೆ, ಹೆಚ್ಚಿನ ಮಾಹಿತಿ ಲೋಕಾಯುಕ್ತರ ಮಾಹಿತಿಯಿಂದ ಹೊರಬರಬೇಕಿದೆ.

ಮೊದಲೇ ಮಾಹಿತಿ ಸೋರಿಕೆ
ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡುತ್ತಾರೆ ಎಂಬ ಗುಸುಗುಸು ಮಾತು ಬೆಳಗ್ಗೆಯಿಂದಲೇ ಕಚೇರಿಯಲ್ಲಿ ಕೇಳಿ ಬಂದಿದ್ದು, ಸಿಬ್ಬಂದಿಗಳಿಗೆ ಅಧಿಕಾರಿಗಳು ಅಲರ್ಟ್‌ ಆಗಿರುವಂತೆ ಎಚ್ಚರಿಕೆ ನೀಡಿದ್ದರು ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಲೋಕಾಯುಕ್ತರಿಗೆ ಮಹತ್ವದ ದಾಖಲಾತಿ ಸಿಕ್ಕಿರುವುದು ಅನುಮಾನ ಎಂದು ಹೇಳಲಾಗುತ್ತಿದ್ದು, ಲೋಕಾಯುಕ್ತದ ತಂಡ ಅಧಿಕಾರಿಗಳು ಅಥವಾ ಯಾವುದೋ ಮಾಹಿತಿ ಮೂಲದಿಂದ ಸಬ್‌ ರಿಜಿಸ್ಟರ್‌ ಬೆಳಗ್ಗೆಯೇ ಮಾಹಿತಿ ಪಡೆದುಕೊಂಡು ಎಚ್ಚರವಾಗಿದ್ದರು ಎಂಬ ಅನುಮಾನ ಜನರಲ್ಲಿ ವ್ಯಕ್ತವಾಗಿದೆ.

ಟಾಪ್ ನ್ಯೂಸ್

1-ddsa-aSAs

ಜೆಡಿಎಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಗುಬ್ಬಿ ಶ್ರೀನಿವಾಸ್

Mumbai to London;ಯೋಗೇಶ್ ಎಂಬ ಅಲೆಮಾರಿ! 100 ದಿನಗಳ ಬೈಕ್ ಪ್ರಯಾಣ…24 ದೇಶಗಳಿಗೆ ಭೇಟಿ…

Mumbai to London;ಯೋಗೇಶ್ ಎಂಬ ಅಲೆಮಾರಿ! 100 ದಿನಗಳ ಬೈಕ್ ಪ್ರಯಾಣ…24 ದೇಶಗಳಿಗೆ ಭೇಟಿ…

joshi

ಧಮಕಿ ಹಾಕುವುದು- ಹೊಡೆಯುವುದು ಡಿಕೆಶಿ- ಸಿದ್ದರಾಮಯ್ಯ ಸಂಸ್ಕೃತಿ: ಪ್ರಹ್ಲಾದ ಜೋಶಿ

1-fdsad-ad

ನಿರೀಕ್ಷಣಾ ಜಾಮೀನು: ಮಾಡಾಳ್ ವಿರೂಪಾಕ್ಷಪ್ಪಗೆ ಸುಪ್ರೀಂ ನೋಟಿಸ್ ಜಾರಿ

ಹೊಸ ರೂಪದಲ್ಲಿ ಐಪಿಎಲ್ ನ ಭಾಗವಾಗಲಿದ್ದಾರೆ ಸ್ಟೀವ್ ಸ್ಮಿತ್

ಹೊಸ ರೂಪದಲ್ಲಿ ಐಪಿಎಲ್ ನ ಭಾಗವಾಗಲಿದ್ದಾರೆ ಸ್ಟೀವ್ ಸ್ಮಿತ್

NIA (2)

ಪ್ರವೀಣ್ ನೆಟ್ಟಾರು ಕೇಸ್ : ಸುಳ್ಯ ಪಿಎಫ್‌ಐ ಕಚೇರಿಯನ್ನು ಜಪ್ತಿ ಮಾಡಿದ ಎನ್‌ಐಎ

4-shivamogga

ಒಳ ಮೀಸಲಾತಿ ಬೇಗುದಿ ; ಯಡಿಯೂರಪ್ಪ ಮನೆಗೆ ಕಲ್ಲು ತೂರಾಟ, ಪ್ರತಿಭಟನೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

TDY-8

ವಿಶ್ವ ರಂಗಭೂಮಿ ದಿನಾಚರಣೆ: ನಶಿಸುತ್ತಿರುವ ರಂಗಕಲೆಗೆ ಪ್ರೋತ್ಸಾಹ ಅಗತ್ಯ

tdy-12

ನೆಲಮಂಗಲ ಪೊಲೀಸರ ಭರ್ಜರಿ ಬೇಟೆ

tdy-14

53 ಲಕ್ಷದ ಪುರಸಭೆ ಉಳಿತಾಯ ಬಜೆಟ್‌

tdy-8

ಆನ್‌ಲೈನ್‌ನಲ್ಲಿ ಮೋಸ ಹೋಗುತ್ತಿರುವವರಲ್ಲಿ ಶಿಕ್ಷಿತರೇ ಹೆಚ್ಚು

tdy-11

ಘಾಟಿಯಲ್ಲಿ ಸಾಮೂಹಿಕ ವಿವಾಹ

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

1-ddsa-aSAs

ಜೆಡಿಎಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಗುಬ್ಬಿ ಶ್ರೀನಿವಾಸ್

Mumbai to London;ಯೋಗೇಶ್ ಎಂಬ ಅಲೆಮಾರಿ! 100 ದಿನಗಳ ಬೈಕ್ ಪ್ರಯಾಣ…24 ದೇಶಗಳಿಗೆ ಭೇಟಿ…

Mumbai to London;ಯೋಗೇಶ್ ಎಂಬ ಅಲೆಮಾರಿ! 100 ದಿನಗಳ ಬೈಕ್ ಪ್ರಯಾಣ…24 ದೇಶಗಳಿಗೆ ಭೇಟಿ…

1-weqewqew

ಮಂಗಳೂರಿನಲ್ಲಿ ಗಾಂಜಾ ಜಾಲ; ಪೆಡ್ಲರ್ ಸಹಿತ ನಾಲ್ವರ ಬಂಧನ

joshi

ಧಮಕಿ ಹಾಕುವುದು- ಹೊಡೆಯುವುದು ಡಿಕೆಶಿ- ಸಿದ್ದರಾಮಯ್ಯ ಸಂಸ್ಕೃತಿ: ಪ್ರಹ್ಲಾದ ಜೋಶಿ

tdy-19

ಗುಬ್ಬಿ, ತುಮಕೂರು ನಗರ, ಗ್ರಾಮಾಂತರ ಕ್ಷೇತ್ರ ಕಗ್ಗಂಟು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.