Udayavni Special

ರಾಷ್ಟ್ರೀಯ ಹೆದ್ದಾರಿ 75ರ ಸಮಸ್ಯೆ ಇತ್ಯರ್ಥಕ್ಕೆ ಸಭೆ


Team Udayavani, Nov 2, 2020, 12:51 PM IST

ರಾಷ್ಟ್ರೀಯ ಹೆದ್ದಾರಿ 75ರ ಸಮಸ್ಯೆ ಇತ್ಯರ್ಥಕ್ಕೆ ಸಭೆ

ಅನಗೊಂಡನಹಳ್ಳಿ: ನಗರದ ಮಧ್ಯೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಸಮಸ್ಯೆಗಳು ಹೆಚ್ಚಾಗಿದ್ದು, ವಾಹನ ಸವಾರರಿಗೆ ಹಾಗೂ ರಸ್ತೆ ಬದಿ ಪಾದಚಾರಿಗಳಿಗೆ ಸಮಸ್ಯೆಯಾಗುತ್ತಿರುವುದರ ಬಗ್ಗೆ ಲ್ಯಾಂಕೊ ಸುಂಕ ವಸೂಲಾತಿ ಕೇಂದ್ರದ ಅಧಿಕಾರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆಗಳನ್ನು ಶೀಘ್ರ ಬಗೆಹರಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಶಾಸಕ ಶರತ್‌ ಬಚ್ಚೇಗೌಡ ತಿಳಿಸಿದರು.

ನಗರದ ಪಕ್ಷದ ಕಚೇರಿಯಲ್ಲಿ ಪತ್ರಕರ್ತರಿಗೆ ಮಾಹಿತಿ ನೀಡಿದ ಶಾಸಕರು, ಕಳೆದ 7 ವರ್ಷಗಳ ಹಿಂದೆ ಈ ರಸ್ತೆ ಅಭಿವೃದ್ಧಿಗೊಂಡು ಸುಂಕ ವಸೂಲಾತಿ ಕೇಂದ್ರ ತೆರೆದು ಸಂಚಾರಿಗಳಿಂದ ಸುಂಕ ವಸೂಲಿ ಮಾಡಲಾಗುತ್ತಿತ್ತು. ಆದರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ದೀಪದ ಸಮಸ್ಯೆ ಇತ್ತು.

ದೀಪ ಅಳವಡಿಸುವ ಕೆಲಸ: ರಸ್ತೆ ಪಕ್ಕದ ಸಂಚಾರಿಗಳಿಗೆ ರಾತ್ರಿ ವೇಳೆ ಕತ್ತಲೆಯಲ್ಲಿ ಓಡಾಡುವ ಸಮಸ್ಯೆ, ಮೋರಿ ನಿರ್ಮಾಣ ಹಾಗೂ ಸ್ಕೈವಾಕರ್‌ ನಿರ್ಮಾಣ ಹೀಗೆ ಹಲವಾರು ಕಾಮಗಾರಿಗಳು ಸಂಪೂರ್ಣ ನನೆಗುದಿಗೆ ಬಿದ್ದಿತ್ತು. ಈ ವೇಳೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾಜೆಕ್ಟ್ ಎಂಜಿನಿಯರ್‌ ಸೋಮಶೇಖರ್‌ರೊಂದಿಗೆ ಮಾತನಾಡಿ ನಗರ ಪ್ರದೇಶದಲ್ಲಿ ಹೆಚ್ಚು ಜನ ಸಂಚಾರವಿರುವ ಕೋರ್ಟ್‌ ವೃತ್ತದಿಂದ ಅಂಬೇಡ್ಕರ್‌ ಕಾಲೋನಿ ವರೆಗೆ ಹೆದ್ದಾರಿ ಪಕ್ಕದಲ್ಲಿ ದೀಪ ಅಳವಡಿಸುವ ಕೆಲಸ ಮಾಡಲಾಗಿದೆ.

ಶೀಘ್ರ ಪಾದಚಾರಿಗಳ ಸಮಸ್ಯೆಗೆ ಮುಕ್ತಿ: ರಾಜ್ಯ ಹೆದ್ದಾರಿ 207 ಸೂಲಿಬೆಲೆ ರಸ್ತೆ ಅಕ್ಕ ಪಕ್ಕ ಚರಂಡಿ ಕಾಮಗಾರಿಗೆ ಈಗಾಗಲೇ ಟೆಂಡರ್‌ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಕಾಮಗಾರಿ ಶುರು ಆಗಲಿದೆ. ಜತೆಗೆ ಹೆದ್ದಾರಿಯಲ್ಲಿ ವಾಹನ ಸಂಚಾರ ಹೆಚ್ಚಾಗಿರುವ ಕಾರಣ ರಸ್ತೆ ದಾಟುವವರಿಗೆ ಸಮಸ್ಯೆಯಾಗುತ್ತಿದ್ದು, ಹೆದ್ದಾರಿಯ ಮೂರು ಜಾಗಗಳಾದ ನಗರದ ಕೋರ್ಟ್‌ ವೃತ್ತದ ಬಳಿ, ಎಂವಿಜೆ ಆಸ್ಪತ್ರೆ ಹಾಗೂ ಚಿಕ್ಕನಹಳ್ಳಿ ಗೇಟ್‌ ಬಳಿ ಸ್ಕೈವಾಕರ್‌ ನಿರ್ಮಾಣಕ್ಕೆ ಕ್ರಮ ಕೈಗೊಂಡಿದ್ದು ಆದಷ್ಟು ಬೇಗ ಪಾದಚಾರಿಗಳ ಸಮಸ್ಯೆ ಬಗೆಹರಿಯಲಿದೆ ಎಂದು ಶಾಸಕರು ತಿಳಿಸಿದರು.

ಕಾಮಗಾರಿ ವೇಗಕ್ಕೆ ಸೂಚನೆ: ಈ ಬಗ್ಗೆ ಸಂಸದರಾದ ಬಿ.ಎನ್‌.ಬಚ್ಚೇಗೌಡ ಅವರು ಕೇಂದ್ರ ಸಚಿವ ನಿತಿನ್‌ ಗಡ್ಕರಿಯೊಂದಿಗೆ ಮಾತನಾಡಿ ರಾಷ್ಟ್ರೀಯ ಹೆದ್ದಾರಿ 75 ರ ಅಭಿವೃದ್ಧಿಗೆ ಮನವಿ ಮಾಡಿದ್ದು, ಉತ್ತಮ ರೀತಿಯಲ್ಲಿ ಸ್ಪಂದಿಸಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಸಂಬಂಧ ವೇಗವಾಗಿ ಕಾಮಗಾರಿಗಳನ್ನು ನಡೆಸಲು ಅನುವು ಆಗುವಂತೆ ಕೇಂದ್ರ ಮಂತ್ರಿಗಳು ಸೂಚಿಸಿದ್ದಾರೆ ಎಂದರು.

ಲ್ಯಾಂಕೊ ಸುಂಕ ವಸೂಲಾತಿ ಕೇಂದ್ರದ ಪ್ರಧಾನ ವ್ಯವಸ್ತಾಪಕ ವೆಂಕಟ್‌ ರಾಮ್‌ ಮಾತನಾಡಿ, ಸ್ಥಳೀಯ ಶಾಸಕರಾದ ಶರತ್‌ ಬಚ್ಚೇಗೌಡ ಅವರು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ, ಅಧಿಕಾರಿಗಳು ಸೂಕ್ತ ಸಮಯದಲ್ಲಿ ಕಾಮಗಾರಿಗೆ ಅನುಮೋದನೆ ನೀಡುವಂತೆ ಎಚ್ಚರ ವಹಿಸುತ್ತಿರುವುದರಿಂದ ಕಾಮಗಾರಿಗಳು ವೇಗವಾಗಿ ನಡೆಯುತ್ತಿದೆ ಎಂದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮುಂಬೈಗೆ ಸಿಎಂ ಯೋಗಿ 2 ದಿನದ ಭೇಟಿ, ಅಕ್ಷಯ್ ಜತೆ ಡಿನ್ನರ್; ಫಿಲ್ಮ್ ಸಿಟಿ ಬಗ್ಗೆ ಚರ್ಚೆ

ಮುಂಬೈಗೆ ಸಿಎಂ ಯೋಗಿ 2 ದಿನದ ಭೇಟಿ, ಅಕ್ಷಯ್ ಜತೆ ಡಿನ್ನರ್; ಫಿಲ್ಮ್ ಸಿಟಿ ಬಗ್ಗೆ ಚರ್ಚೆ

ಏಡ್ಸ್‌ ರೋಗ ನಿಯಂತ್ರಣದಲ್ಲಿ ರಾಜ್ಯಕ್ಕೆ ಉಡುಪಿ ಜಿಲ್ಲೆ ಪ್ರಥಮ: ಜಿಲ್ಲಾಧಿಕಾರಿ

ಏಡ್ಸ್‌ ರೋಗ ನಿಯಂತ್ರಣದಲ್ಲಿ ರಾಜ್ಯಕ್ಕೆ ಉಡುಪಿ ಜಿಲ್ಲೆ ಪ್ರಥಮ: ಜಿಲ್ಲಾಧಿಕಾರಿ

ಭಾರತದ ರೈತರ ಪ್ರತಿಭಟನೆಗೆ ಕೆನಡಾ ಪ್ರಧಾನಿ ಬೆಂಬಲ! ಆಂತರಿಕ ವಿಚಾರ ನಿಮಗ್ಯಾಕೆ ; ಭಾರತ

ದೇಶದ ರೈತರ ಪ್ರತಿಭಟನೆಗೆ ಬೆಂಬಲ ನೀಡಿದ ಕೆನಡಾ ಪ್ರಧಾನಿ ಜಸ್ಟಿನ್ ಗೆ ಭಾರತ ಹೇಳಿದ್ದೇನು?

ಏಡ್ಸ್‌ ರೋಗಿಗಳಿಗೆ ವಾರ್ಷಿಕ ಐದು ಲಕ್ಷ ವೆಚ್ಚದಲ್ಲಿ ಉಚಿತ ಔಷಧಿ: ಡಾ.ಕೆ.ಸುಧಾಕರ್‌

ಏಡ್ಸ್‌ ರೋಗಿಗಳಿಗೆ ವಾರ್ಷಿಕ ಐದು ಲಕ್ಷ ವೆಚ್ಚದಲ್ಲಿ ಉಚಿತ ಔಷಧಿ: ಡಾ.ಕೆ.ಸುಧಾಕರ್‌

ತೆಲಂಗಾಣ ಕೋಟೆಗೆ ಬಿಜೆಪಿ ಲಗ್ಗೆ ಇಟ್ಟಿದ್ದು ಹೇಗೆ? ದಿಢೀರ್‌ ಬೆಳವಣಿಗೆಗೆ ಕಾರಣವೇನು

ತೆಲಂಗಾಣ ಕೋಟೆಗೆ ಬಿಜೆಪಿ ಲಗ್ಗೆ ಇಟ್ಟಿದ್ದು ಹೇಗೆ? ದಿಢೀರ್‌ ಬೆಳವಣಿಗೆಗೆ ಕಾರಣವೇನು…

ಮಾರುವೇಷದಲ್ಲಿ ಬಂದು ವಿಜಯಪುರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವೆ: ವಾಟಾಳ್ ನಾಗರಾಜ್

ಮಾರುವೇಷದಲ್ಲಿ ಬಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವೆ: ವಾಟಾಳ್ ನಾಗರಾಜ್ ಆಕ್ರೋಶ

pushpa

ಭಾರತ್ ಮಾತಾಕಿ ಜೈ ಎನ್ನುತ್ತಲೇ ಬಿಜೆಪಿಯವರಿಂದ ಮಹಿಳೆಯರ ಮೇಲೆ ದೌರ್ಜನ್ಯ: ಪುಷ್ಪಾ ಅಮರನಾಥ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೆಂಗಳೂರು ಗ್ರಾಮಾಂತರ ಜಿಲ್ಲೆ : 2007ರಿಂದ ಈವರೆಗೆ 3,628 ಎಚ್‌ಐವಿ ಪ್ರಕರಣ

ಬೆಂಗಳೂರು ಗ್ರಾಮಾಂತರ ಜಿಲ್ಲೆ : 2007ರಿಂದ ಈವರೆಗೆ 3,628 ಎಚ್‌ಐವಿ ಪ್ರಕರಣ

ನಿವಾರ್‌ನಿಂದ ನೆಲಕಚ್ಚಿದ ರಾಗಿ ಬೆಳೆ

ನಿವಾರ್‌ನಿಂದ ನೆಲಕಚ್ಚಿದ ರಾಗಿ ಬೆಳೆ

2024ಕ್ಕೆ ಎತ್ತಿನಹೊಳೆ ಯೋಜನೆ ಪೂರ್ಣ: ಸಂಸದ

2024ಕ್ಕೆ ಎತ್ತಿನಹೊಳೆ ಯೋಜನೆ ಪೂರ್ಣ: ಸಂಸದ

ಶೀತಲ ಸರಪಳಿ ಘಟಕ

ಶೀತಲ ಸರಪಳಿ ಘಟಕ

ಗ್ರಾಮೀಣ ಜನರಿಗೆ ಪಿಕಾರ್ಡ್‌ ಬ್ಯಾಂಕ್‌ನಿಂದ ಸಾಲ

ಗ್ರಾಮೀಣ ಜನರಿಗೆ ಪಿಕಾರ್ಡ್‌ ಬ್ಯಾಂಕ್‌ನಿಂದ ಸಾಲ

MUST WATCH

udayavani youtube

ಮಂಗಳೂರು: ಮೀನುಗಾರಿಕೆಗೆ ತೆರಳಿದ್ದ ದೋಣಿ ದುರಂತ – ಇಬ್ಬರ ಮೃತದೇಹ ಪತ್ತೆ

udayavani youtube

ಮಂಗಳೂರು: ಮೀನುಗಾರಿಕೆಗೆ ತೆರಳಿ ವಾಪಾಸಾಗುವ ವೇಳೆ ಮಗುಚಿಬಿದ್ದ ಬೋಟ್: 6 ಮಂದಿ ನಾಪತ್ತೆ

udayavani youtube

ರೋಗ ನಿರ್ಮೂಲನೆಯಲ್ಲಿ ಆಯುರ್ವೇದ ವೈದ್ಯ ಪದ್ಧತಿಯ ಮಹತ್ವವೇನು?

udayavani youtube

Success story of a couple In Agriculture | Integrated Farming | Udayavani

udayavani youtube

ಮೂರೂವರೆ ಸಾವಿರದಷ್ಟು ವಿವಿಧ ಪತ್ರಿಕೆಗಳನ್ನು ಸಂಗ್ರಹಿಸಿರುವ ಎಕ್ಕಾರು ಉಮೇಶ ರಾಯರು

ಹೊಸ ಸೇರ್ಪಡೆ

ಕುಡಿವ ನೀರಿನ ಸಮಸ್ಯೆ ಪರಿಹರಿಸಿ

ಕುಡಿವ ನೀರಿನ ಸಮಸ್ಯೆ ಪರಿಹರಿಸಿ

ಅಡಕೆ ಟಾಸ್ಕ್ಫೋರ್ಸ್‌ಗೆ 10 ಕೋಟಿ ರೂ. ಬಿಡುಗಡೆ

ಅಡಕೆ ಟಾಸ್ಕ್ಫೋರ್ಸ್‌ಗೆ 10 ಕೋಟಿ ರೂ. ಬಿಡುಗಡೆ

200 ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆ  ನಿರ್ಮಾಣ: ಚಂದ್ರಪ್ಪ

200 ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ: ಚಂದ್ರಪ್ಪ

ತಂಬಾಕು ನಿಷೇಧ ನಾಮಫಲಕ ಕಡ್ಡಾಯ

ತಂಬಾಕು ನಿಷೇಧ ನಾಮಫಲಕ ಕಡ್ಡಾಯ

ಮುಂಬೈಗೆ ಸಿಎಂ ಯೋಗಿ 2 ದಿನದ ಭೇಟಿ, ಅಕ್ಷಯ್ ಜತೆ ಡಿನ್ನರ್; ಫಿಲ್ಮ್ ಸಿಟಿ ಬಗ್ಗೆ ಚರ್ಚೆ

ಮುಂಬೈಗೆ ಸಿಎಂ ಯೋಗಿ 2 ದಿನದ ಭೇಟಿ, ಅಕ್ಷಯ್ ಜತೆ ಡಿನ್ನರ್; ಫಿಲ್ಮ್ ಸಿಟಿ ಬಗ್ಗೆ ಚರ್ಚೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.