
ಚಾಲಕರ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ
Team Udayavani, Jan 31, 2023, 10:18 AM IST

ಆನೇಕಲ್: ರಷ್ಯಾ ಮತ್ತು ಉಕ್ರೇನ್ ದೇಶಗಳ ನಡುವಿನ ಯುದ್ಧದಲ್ಲಿ ಮೃತಪಟ್ಟವರ ಸಂಖ್ಯೆಗಿಂತದೇಶದಲ್ಲಿ ರಸ್ತೆ ಅಪಘಾತಗಳಿಂದ ಮೃತ ಪಟ್ಟವರಸಂಖ್ಯೆ ಹೆಚ್ಚಿರುವುದು ಆತಂಕಕಾರಿ ವಿಚಾರ ಎಂದು ಕೇಂದ್ರ ವಲಯದ ಆರಕ್ಷಕ ಮಹಾನಿರೀಕ್ಷಕ ( ಐಜಿಪಿ) ಡಾ.ಬಿ.ಆರ್.ರವಿಕಾಂತೇಗೌಡ ಹೇಳಿದರು.
ತಾಲೂಕಿನ ಬನ್ನೇರುಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯ ಎಎಂಸಿ ವಿದ್ಯಾಸಂಸ್ಥೆಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ನಡೆದ 34ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಸಮಾರೋಪದಲ್ಲಿ ಮಾತನಾಡಿದರು.
ಭಾರತದ ರಸ್ತೆಗಳಲ್ಲಿ ಸಂಭವಿಸುತ್ತಿರುವ ಅಪಘಾತಗಳಿಗೆ ವಾಹನ ಚಾಲಕರ ನಿರ್ಲಕ್ಷ್ಯವೇಕಾರಣ. ರಸ್ತೆ ಸುರಕ್ಷೆ ಜೀವನದ ಸುರಕ್ಷೆ ಎಂಬ ಮಾತಿದೆ ಅದನ್ನು ನಾವು ಪಾಲಿಸಬೇಕು ಎಂದು ಹೇಳಿದರು.
ನಿಯಮ ಪಾಲಿಸಿ: ಆಟೋ ಚಾಲಕರು ಖಾಕಿ ಬಟ್ಟೆ ತೊಡುವುದರಿಂದ ಪೊಲೀಸ್ ಇಲಾಖೆಗೆ ಅವರ ಬಗ್ಗೆ ಕಾಳಜಿ ಇದೆ. ಶೇ.90 ರಷ್ಟು ಆಟೋ ಚಾಲಕರು ತುಂಬಾ ಒಳ್ಳೆಯವರಿದ್ದಾರೆ. ಕೇವಲ ಶೇ.10ರಷ್ಟುಆಟೋ ಚಾಲಕರಿಂದ ಇಡೀ ಆಟೋ ಸಮುದಾಯಕ್ಕೆ ಕಳಂಕ ಬರುತ್ತದೆ. ಒಳ್ಳೆ ಚಾಲಕರ ಬಗ್ಗೆ ಗೌರವ ಇದೆ.ಹೀಗಾಗಿ ಆಟೋ ಚಾಲಕರಲ್ಲಿ ಮನವಿ ಮಾಡುವುದುಎಂದರೆ ಎಷ್ಟೇ ಒತ್ತಡ ಇದ್ದರೂ ರಸ್ತೆ ಸುರಕ್ಷತೆನಿಯಮಗಳನ್ನು ಪಾಲನೆ ಮಾಡಬೇಕು ಎಂದು ಹೇಳಿದರು.
ಆಟೋ ಚಾಲಕರೂ ಪೊಲೀಸರಂತೆ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಸಾರ್ವಜನಿಕರೊಂದಿಗೆಇನ್ನಷ್ಟು ಉತ್ತಮ ನಡವಳಿಕೆ ತೋರುವುದರ ಜತೆಗೆಸುರಕ್ಷತೆ ಪಾಲಿಸಿ ನಿಮ್ಮ ಕುಟುಂಬಕ್ಕೆ ಆಧಾರವಾಗಿರಿ ಎಂದು ತಿಳಿಸಿದರು.
ಆಧಾರ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನಬಾಳದಂಡಿ ಮಾತನಾಡಿ, ಆಟೋ ಸೇವೆ ಸಮಾಜಕ್ಕೆಅತ್ಯವಶ್ಯಕತೆ ಇದೆ. ಆಟೋ ಚಾಲಕರ ಮೇಲೆ ಒಂದುಇಡೀ ಕುಟುಂಬ ಅವಲಂಭಿತವಾಗಿರುತ್ತದೆ. ಹಾಗಾಗಿಆಟೋ ಚಾಲಕರು ತಮ್ಮ ಚಾಲನೆಯಲ್ಲಿ ರಸ್ತೆನಿಯಮಗಳನ್ನು ಪಾಲಿಸಿ ನಿಮ್ಮ ಕುಟುಂಬಗಳಜೀವನಕ್ಕೆ ಆಧಾರವಾಗಿ ಇರಬೇಕು ಎಂದು ತಿಳಿಸಿದರು.
ನಿಮ್ಮ ದುಡಿಮೆ ಅವಧಿಯಲ್ಲಿ ಇಲ್ಲಿ ಕರೆಸಿ ನಿಮಗೆ ಒಂದಷ್ಟು ಮಾಹಿತಿ ನೀಡುತ್ತಿದ್ದೇವೆ ಎಂದರೆ ರಸ್ತೆ ಸುರಕ್ಷತೆ ವಿಚಾರ ಎಷ್ಟು ಮುಖ್ಯ ಎಂಬುದು ತಿಳಿಯಬೇಕಿದೆ ಎಂದರು.
ಈ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧೀಕ್ಷಕರಾದ ಎಂ.ಎಲ್. ಪುರುಷೋತ್ತಮ್ , ಉಪ ಪೊಲೀಸ್ ಅಧೀಕ್ಷಕ ಲಕ್ಷ್ಮೀನಾರಾಯಣ, ಎಎಂಸಿ ಕಾಲೇಜಿನ ಪ್ರಾಂಶುಪಾಲರಾದ ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.
ನೋವಿನ ಸಂಗತಿ :
ಬೆಂಗಳೂರು ನಗರ ಮತ್ತು ಗ್ರಾಮಾಂತರದಲ್ಲಿ ಮನೆಯಿಂದ ಹೊರ ಬರುವ ಜನರಲ್ಲಿ ಪ್ರತಿ ದಿನ 4ಜನ ಅಪಘಾತಗಳಿಂದ ಮೃತ ಪಡುತ್ತಿದ್ದಾರೆ.ಇದಕ್ಕೆ ಅಂಕಿ ಅಂಶಗಳು ಸಾಕ್ಷಿಯಾಗಿರುವುದುನೋವಿನ ಸಂಗತಿ. ರಸ್ತೆ ಸುರಕ್ಷೆ ಒಂದುಕುಟುಂಬದ ರಕ್ಷೆ ಎಂಬುದನ್ನು ಎಲ್ಲಾ ಚಾಲಕರುಮನಗಾಣಲು ಸಪ್ತಾಹ ಆಯೋಜಿಸಲಾಗಿದೆಎಂದು ಕೇಂದ್ರ ವಲಯದ ಆರಕ್ಷಕ ಮಹಾನಿರೀಕ್ಷಕ ( ಐಜಿಪಿ) ಡಾ.ಬಿ.ಆರ್. ರವಿಕಾಂತೇಗೌಡ ತಿಳಿಸಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿ ಆಯ್ಕೆ: ನಳಿನ್ ಕುಮಾರ್ ಕಟೀಲ್

ಇಬ್ಬರು ಶಾಸಕರ ರಾಜೀನಾಮೆ? ಶಿರಸಿಯತ್ತ ಎಲ್ಲರ ಚಿತ್ತ!

ಮುಂಬೈ-ಚೆನ್ನೈ ಅಲ್ಲ, ಐಪಿಎಲ್ ವಿಜೇತರ ಬಗ್ಗೆ ಭವಿಷ್ಯ ನುಡಿದ ಮೈಕಲ್ ವಾನ್

ಹುಣಸೂರು: ಮೊದಲ ವರ್ಷಧಾರೆಗೆ ನೂರಾರು ಎಕರೆ ಬಾಳೆ ಬೆಳೆ ನಾಶ, ಲಕ್ಷಾಂತರ ರೂ. ನಷ್ಟ

ಗುಜರಾತ್ ನಲ್ಲಿ ಪ್ರಧಾನಿ ಮೋದಿ ವಿರುದ್ಧ ಪೋಸ್ಟರ್ ಅಭಿಯಾನ; 8 ಮಂದಿ ಬಂಧನ: ವರದಿ